55 ವರ್ಷಗಳ ಹಿಂದೆಯೇ ಪತ್ತೆಯಾಗಿತ್ತು ಕೊರೋನಾ ವೈರಸ್‍..!

55 ವರ್ಷಗಳ ಹಿಂದೆಯೇ ಪತ್ತೆಯಾಗಿತ್ತು ಕೊರೋನಾ ವೈರಸ್‍..!

ಮಹಾಮಾರಿ ಕೋವಿಡ್‍-19 ಸೋಂಕಿಗೆ ಸಂಪೂರ್ಣ ಜಗತ್ತೇ ತಲ್ಲಣಿಸಿ ಹೋಗಿದೆ. ಮಾರಣಾಂತಿಕ ವೈರಸ್‍ ನಿಂದ ಲೆಕ್ಕವಿಲ್ಲದಷ್ಟು ಮಂದಿ ಮೃತಪಟ್ಟಿದ್ದಾರೆ. ಲಕ್ಷಾಂತರ ಮಂದಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅಲ್ಲೆಲ್ಲೋ ದೂರದ ಚೀನಾದಲ್ಲಿ ಕಣ್ಣಿಗೆ ಕಾಣದ ವೈರಸ್ ಇದೆಯಂತೆ ಎಂದಾಗ ಎಲ್ಲರೂ ಇದೂ ಒಂದು ಮಾತನಾಡುವ ವಿಷಯಾನ ಎಂದು ಹಂಗಿಸಿದ್ದರು. ಕಣ್ಣಿಗೆ ಕಾಣದ ಒಂದು ಸಣ್ಣ ಕ್ರಿಮಿ ನಮ್ಮನ್ನು ಏನುತಾನೇ ಮಾಡೀತು ಎಂದು ಹೀಗಳೆಯುತ್ತಿದ್ದರು. ಈಗ ಜನರುಕೊರೋನಾ ಎಂದರೆ ಅರ್ಧರಾತ್ರಿಯಲ್ಲೇ ಬೆಚ್ಚಿಬೀಳುವಂತಾಗಿದೆ.corona virussource and pic credit: https://indianexpress.com

ಕಣ್ಣಿಗೆ ಕಾಣದ ಒಂದು ಪುಟ್ಟ ವೈರಸ್ ಮನುಷ್ಯನ ಆವಿಷ್ಕಾರ, ವಿಜ್ಞಾನ-ತಂತ್ರಜ್ಞಾನ, ಮಂಗಳ-ಅಂಗಳ ಎಲ್ಲವನ್ನೂ ಮೀರಿ ಬೃಹದಾಕಾರವಾಗಿ ಬೆಳೆದುಬಿಟ್ಟಿದೆ. ವಿಶ್ವದ ಎಲ್ಲಾ ಬಲಿಷ್ಠ ರಾಷ್ಟ್ರಗಳ ನಾಯಕರ ಅಹಂಕಾರ, ದೌಲತ್ತು, ರಕ್ತ ರಾಜಕಾರಣ, ಗಡಿಗಳೆಂಬ ಗುದ್ದಾಟ, ಶತ್ರುತ್ವ ಇದೆಲ್ಲವನ್ನೂ ಗಣನೆಗೆ ತೆಗೆದುಕೊಳ್ಳದೆ ಕೊರೋನಾ ವೈರಸ್ ಜಯಿಸುತ್ತಿದೆ. ಇಡೀ ವಿಶ್ವವನ್ನು ನೂರಾರು ಬಾರಿ ನಾಶ ಮಾಡಬಹುದಾದಷ್ಟು ಬಾಂಬ್, ಬಂಕರ್ ಗಳನ್ನು ಶೇಖರಿಸಿ ಇಟ್ಟುಕೊಂಡಿರುವ ಎಲ್ಲಾ ದೇಶಗಳನ್ನೂ ಕಣ್ಣಿಗೆ ಕಾಣದ ಒಂದು ವೈರಸ್ ಹೈರಾಣಾಗಿಸಿದೆ. 

corona virussource and pic credit: https://www.financialexpress.com

ಕಳೆದ ವರ್ಷದಿಂದ ಜನರು ಕೋವಿಡ್‍-19, ಕೊರೋನಾ ವೈರಸ್, ಸ್ಯಾನಿಟೈಸರ್, ಆಕ್ಸಿಜನ್, ಲಾಕ್ ಡೌನ್, ಕರ್ಫ್ಯೂ, ಶಬ್ದಗಳನ್ನು ಬಳಸಿದಷ್ಟೂ ಹಿಂದೆಂದೂ ಬಳಸಿರಲಿಕ್ಕಿಲ್ಲ. ಆದರೆ ನಿಮಗೆ ಗೊತ್ತಾ, ನಾವು ಕೆಲವೇ ವರ್ಷಗಳಿಂದ ಕೇಳುತ್ತಿರುವ ಈ ವೈರಸ್ 55 ವರ್ಷಗಳ ಹಿಂದೆಯೇ ಇತ್ತು.

 

ಕೊರೋನಾ ವೈರಸ್ ಪತ್ತೆ ಮಾಡಿದಜೂನ್ ಅಲ್ಮೆಡಾ

ಹೌದುಬರೋಬ್ಬರಿ 55 ವರ್ಷಗಳ ಹಿಂದೆಯೇ ಕೊರೋನಾ ವೈರಸ್ ಎಂಬ ವೈರಾಣು ಇದೆ ಎಂಬುದನ್ನು ಕಂಡುಹಿಡಿಯಲಾಗಿತ್ತುವೈರಾಣು ತಜ್ಞೆ ಜೂನ್ ಅಲ್ಮೆಡಾ ಎಂಬವರು ಇದನ್ನು ಸಂಶೋಧನೆಯಿಂದ ಕಂಡುಕೊಂಡಿದ್ದರು.

june almedasource and pic credit: https://www.bbc.com

ಮೊದಲ ಬಾರಿಗೆ ಎಲೆಕ್ಟ್ರಾನ್ ಸೂಕ್ಷ್ದರ್ಶಕ ಬಳಸಿ ಮಾನವನ ಶ್ವಾಸಕೋಶದಲ್ಲಿ ಸೇರಿಕೊಂಡು ಜೀವಕ್ಕೆ ಹಾನಿಮಾಡುವ ವೈರಸ್ ಗಳನ್ನು ಜಗತ್ತಿಗೆ ಪರಿಚಯಿಸಿದರುಸ್ಕಾಟ್ಲೆಂಡಿನಲ್ಲಿ ಜನಿಸಿದ ಅಲ್ಮೆಡಾರ ತಂದೆ ಬಸ್ ಡ್ರೈವರ್ ಆಗಿದ್ದರು ಹಾಗೂ ತಾಯಿ ಅಂಗಡಿಯೊಂದರಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಹತ್ತು ವರ್ಷದವರಿದ್ದಾಗ ಇವರ ವರ್ಷದ ಸಹೋದರ ಡಿಪ್ತಿರಿಯಾ ರೋಗಕ್ಕೆ ತುತ್ತಾಗಿ ಮೃತಪಟ್ಟದ್ದು ಜೀವವಿಜ್ಞಾನದ ಬಗ್ಗೆ ಇವರಿಗೆ ಹೆಚ್ಚು ಆಸಕ್ತಿ ಮೂಡಿಸಲು ಕಾರಣವಾಯಿತು.

june almedasource and pic credit: https://www.pri.org  

ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಅಲ್ಮೆಡಾ ಕೇವಲ 16 ವರ್ಷಕ್ಕೆ ಶಾಲೆ ಬಿಡಬೇಕಾಗಿ ಬಂತು. ಆದರೂ ಪಟ್ಟು ಬಿಡದೆ ಲ್ಯಾಬ್ ಟೆಕ್ನಿಶೀಯನ್ ಕೋರ್ಸ್ ಮಾಡಿ ಲ್ಯಾಬ್ ನಿರ್ವಾಹಕಿಯಾಗಿ ಕಾರ್ಯ ನಿರ್ವಹಿಸಿದರು. ಪೋಷಕರೊಂದಿಗೆ ಲಂಡನ್ ಗೆ ಹೋಗಬೇಕಾಗಿ ಬಂದ ಕಾರಣಅಲ್ಲಿಯೇ ವಿವಾಹವಾಯಿತು, ಪತಿಯೊಂದಿಗೆ ಕೆನಡಾಗೆ ಹೋಗಬೇಕಾಗಿ ಬಂತು, ಮಗುವಿಗೆ ಕೇವಲ 7 ವರ್ಷವಿದ್ದಾಗ ಮತ್ತೆ ಪತಿಯೊಂದಿಗೆ ಲಂಡನ್ ಗೆ ಬಂದರು. ಅದೇ ಸಂಧರ್ಭದಲ್ಲಿ St Thomas' Hospital ನಲ್ಲಿ ಪ್ರೊಫೆಸರ್ ವಾಟರ್ ಸನ್ ರವರೊಂದಿಗೆ ಎಲೆಕ್ಟ್ರಾನ್ ಮೈಕ್ರೋಸ್ಕೋಪಿಸ್ಟ್ ಆಗಿ ಕಾರ್ಯ ನಿರ್ವಹಿಸುವ ಅವಕಾಶ ಸಿಕ್ಕಿತು.

ಅದೇ ಸಮಯಕ್ಕೆ ಪತಿ ಮತ್ತೆ ಕೆನಡಾಗೆ ಹೊರಟು ನಿಂತಾಗ ಹೋಗಲೊಪ್ಪದ ಅಲ್ಮೆಡಾರವರಿಗೆ ಪತಿಯಿಂದ ವಿಚ್ಛೇದನ ಸಿಕ್ಕಿತು. ಮಗುವನ್ನು ಅಲ್ಮೆಡಾರ ಪೋಷಕರು ನೋಡಿಕೊಂಡ ಪರಿಣಾಮ ಸಂಶೋಧನೆಗಳಲ್ಲಿ ಹೆಚ್ಚು ಕಾಲ ತೊಡಗಿಸಿಕೊಳ್ಳಲು ಸಹಾಯವಾಯಿತು1963-65ರ ನಡುವೆ ಅಮೇರಿಕಾ ಮತ್ತು ಯೂರೋಪಿನಲ್ಲಿ ಸಾಂಕ್ರಾಮಿಕವಾಗಿ ಹುಟ್ಟುವ ಮಕ್ಕಳಲ್ಲಿ ಅಂಧತ್ವಕ್ಕೆ ಕಾರಣವಾಗಿದ್ದ ರುಬೆಲ್ಲಾ ವೈರಸ್ ನ ಲಕ್ಷಣಗಳನ್ನು ಗುರುತಿಸಿದ ಅಲ್ಮೆಡಾ ವೈದ್ಯಲೋಕಕ್ಕೆ ದೊಡ್ಡ ಕೊಡುಗೆ ನೀಡಿದರು.

first virussource and pic credit:https://www.bbc.com

ಅಲ್ಮೆಡಾ ಪಾಂಡಿತ್ಯಕ್ಕೆ ಬೆರಗಾಗಿದ್ದ ಸಾಲಿಸ್ ಬರಿಯ Health Common Cold Research Unit ನ ಮುಖ್ಯಸ್ಥರಾದ David Tyrrell ರವರು 15-17 ವಯಸ್ಸಿನ ಶಾಲಾ ಮಕ್ಕಳನ್ನು ಬಾಧಿಸುತ್ತಿದ್ದ ಗಂಟಲು ನೋವು ಮತ್ತು ನೆಗಡಿಯ ಮಾದರಿಗಳನ್ನು ಇವರಿಗೆ ನೀಡಿ B814 ಮತ್ತೊಂದು ವೈರಸ್ ಪತ್ತೆಯಾಗಲು ಕಾರಣವಾದರು. ಈ ವೈರಸ್ಸಿಗೆ ಅಂದು ಇವರ ತಂಡ ಕೊರೋನ ವೈರಸ್ ಎಂಬ ಹೆಸರು ನೀಡಿ ಲೇಖನ ಪ್ರಕಟಿಸಿತು. ಅಂದು ಆ ಹೆಸರಿಗೆ ಅಷ್ಟು ಪ್ರಸಿದ್ದಿ ಸಿಗದಿದ್ದರೂ ಇಂದು ಇಡೀ ವಿಶ್ವಕ್ಕೆ ಕೊರೋನ ವೈರಸ್ ಹೆಸರು ಪರಿಚಿತವಾಗಿದೆ.

corona virussource and pic credit:google.com

Central Public Health Laboratory ಎಂಬ ಸಂಸ್ಥೆಯನ್ನು ಅಲ್ಮೆಡಾ ಸ್ಥಾಪಿಸಿ ಶ್ವಾಸಕೋಶದಲ್ಲಿ ಸೇರುವ ವೈರಸ್ ಗಳ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಸುತ್ತಿದ್ದರು. ಹಲವಾರು ಕಿರಿಯ ಸಂಶೋಧನಾರ್ಥಿಗಳಿಗೆ ಸಲಹೆ-ಸಹಕಾರ ನೀಡಿದರು, 2007ರಲ್ಲಿ ಹೃದಯಾಘಾತಕ್ಕೆ ತುತ್ತಾಗಿ ನಿಧನರಾದರು.ಬಹುಶಃ ಇವರ ಸಂಶೋಧನೆಗೆ ಅಂದು ಸರ್ಕಾರಗಳು ಹೆಚ್ಚಿನ ಪ್ರೋತ್ಸಾಹ ನೀಡಿದ್ದರೆ ಔಷಧಿಯೂ ಪತ್ತೆಯಾಗಬಹುದಾದ ಸಾಧ್ಯತೆಗಳು ಇದ್ದವೇನೋ.ಆದರೆ, ಪ್ರತಿಭಾವಂತ ಸಂಶೋಧಕರನ್ನು ಹಿಂದಿನಿಂದಲೂ ನಿರ್ಲಕ್ಷಿಸುತ್ತಾ ಬಂದಿರುವುದಕ್ಕೆ ಇಂದು ಜಗತ್ತು ಬೆಲೆ ತೆರುತ್ತಿದೆ.

 

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author