6 ಬಾರಿ ಮುಸ್ಲಿಮರಿಂದ ದಾಳಿಗೊಳಗಾದ್ರೂ ಎದ್ದುನಿಂತ ಸೋಮನಾಥ ಜೋರ್ತಿಲಿಂಗ ದೇವಾಲಯ

12 ಜ್ಯೋರ್ತಿಲಿಂಗಗಳ ಪೈಕಿ ಮೊದಲ ಜ್ಯೋರ್ತಿಲಿಂಗವಿದು 

Somnath Jyotirlinga Temple

ಸ್ನೇಹಿತ್ರೆ, ನಿಮಗೆಲ್ಲಾ ಗೊತ್ತೇ ಇದೆ. ಭಾರತದ ಬಹುತೇಕ ಎಲ್ಲ ಪುರಾತನ ದೇವಾಲಯಗಳ ಮೇಲೆ  ಮುಸ್ಲಿಂ ರಾಜರಿಂದ, ಫ್ರೆಂಚ್, ಪೋರ್ಚುಗೀಸ್, ಬ್ರಿಟೀಷರಿಂದ ದಾಳಿಯಾಗಿದೆ... ನಮ್ಮ ಇತಿಹಾಸವನ್ನು ಅಳಿಸಲು ಎಷ್ಟೇ ಪ್ರಯತ್ನ ಮಾಡಿದ್ರೂ ಸಾಧ್ಯವಾಗಿಲ್ಲ... ಎಷ್ಟು ಬಾರಿ ದಾಳಿ ನಡೆಸಿದ್ರೂ, ಯಾರು ಏನೇ ಲೂಟಿ ಮಾಡಿ, ಧ್ವಂಸ ಮಾಡಿದ್ರೂ ಹಿಂದುಗಳ ಪವಿತ್ರ ಸ್ಥಳಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ. ನಮ್ಮ ಪೂರ್ವಜರು ಮಾಡಿದ ತಪ್ಪಸ್ಸು, ಅವರ ಶ್ರಮ, ಹೋರಾಟ, ಶ್ರದ್ಧೆ, ಭಕ್ತಿಯಿಂದಾಗಿ ಇಂದು ನಮ್ಮ ಮುಂದೆ ಸಾವಿರಾರು ಪುಣ್ಯಕ್ಷೇತ್ರಗಳು ಉಳಿದುಕೊಂಡಿವೆ.... 

Somnath Jyotirlinga Temple History in Kannada

 

12 ಜೋರ್ತಿಲಿಂಗಗಳ ಪೈಕಿ ಮೊದಲನೇ ಜೋರ್ತಿಲಿಂಗವಾದ ಸೋಮನಾಥ ದೇವಾಲಯದ ಬಗ್ಗೆ, ಅದರ ಇತಿಹಾಸದ ಬಗ್ಗೆ ನಿಮಗೆ ಹೇಳ್ತೀವಿ... 

6 ಬಾರಿ ಮುಸ್ಲಿಂ ದೊರೆಗಳಿಂದ ದಾಳಿಗೆ ಒಳಗಾದರೂ, ಮತ್ತೆ ಮತ್ತೆ ಜೀರ್ಣೋದ್ಧಾರ ಕಂಡು ಇಂದು ಕೋಟ್ಯಂತರ ಭಕ್ತರಿಗೆ ದರ್ಶನ ನೀಡ್ತಿರೋ ಸೋಮನಾಥ ದೇವಾಲಯದ ಇತಿಹಾಸ ಅತ್ಯಂತ ರೋಚಕವಾಗಿದೆ.. ಇಲ್ಲಿನ ಕಥೆಗಳನ್ನು ಪ್ರತಿಯೊಬ್ಬ ಹಿಂದೂವು ತಿಳ್ಕೊಳೇ ಬೇಕು.. 

ಸೋಮನಾಥ ದೇವಸ್ಥಾನ ಗುಜರಾತ್‍ನ ಜುನಾಗಡ್ ಜಿಲ್ಲೆಯ ಪ್ರಭಾಸದಲ್ಲಿದೆ...ಇದನ್ನು ಪ್ರಭಾಸ ತೀರ್ಥ ಅಂತಲೂ ಕರೀತಾರೆ... ಇದು ಬಹಳ ಶ್ರೀಮಂತವಾದ ದೇವಾಲಯ.. ಈಗಿರೋದು ಹೊಸದಾಗಿ ನಿರ್ಮಿಸಿದ ಅಥವಾ ಜೀರ್ಣೋದ್ಧಾರವಾದ ದೇವಾಲಯ.. ಹಿಂದೆ ಈ ದೇವಾಲಯವದ ಕಂಬಗಳ ಮೇಲೆ ಮುತ್ತುರತ್ನಗಳನ್ನ ಕೂರಿಸಿದ್ದರಂತೆ... ಇಡೀ ಮಂದಿರ ಬೆಳ್ಳಿ, ಬಂಗಾರದಿಂದ ಶೋಭಿಸುತ್ತಿತ್ತಂತೆ... ಬಂಗಾರದ ಕಳಸ ಇತ್ತಂತೆ ಅಂತೆಲ್ಲಾ ಹೇಳ್ತಾರೆ... ಈ ಕ್ಷೇತ್ರವೂ ಕಪಿಲಾ, ಹಿರಣ್ ಹಾಗೂ ಗುಪ್ತಗಾಮಿನಿಯಾಗಿರುವ ಸರಸ್ವತಿ ನದಿಯ ಸಂಗಮದ ಬಳಿ ಇರೋದ್ರಿಂದ ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರ ಸ್ಥಳ... 

Somnath Jyotirlinga Temple History in Kannada

 

ಈ ಸ್ಥಳ ಹಾಗೂ ದೇವಸ್ಥಾನದ ಇತಿಹಾಸ ಬಹಳ ದೊಡ್ಡದು... 

ದ್ವಾಪರಯುಗದಲ್ಲಿ ಶ್ರೀ ಕೃಷ್ಣನು ಮಥುರಾವನ್ನು ಬಿಟ್ಟು ದ್ವಾರಕೆಗೆ ಬಂದು ನೆಲೆಸಿದನು. ದ್ವಾರಕೆ ಮುಳುಗಿದ ಬಳಿಕ ಪಕ್ಕದ ಪ್ರಭಾಸ ಕ್ಷೇತ್ರಕ್ಕೆ ಬಂದನು ಎಂದು ಹೇಳುತ್ತಾರೆ... ಚಂದ್ರನು ತನಗೆ ದೊರೆತ ಶಾಪದಿಂದಾಗಿ ತನ್ನ ತೇಜಸ್ಸನ್ನು ಕಳೆದುಕೊಂಡಿದ್ದಾಗ ಈ ಕ್ಷೇತ್ರದ ಬಳಿ ಇರುವ ಸಮುದ್ರದಲ್ಲಿ ಸ್ನಾನ ಮಾಡಿದ ಬಳಿಕ ಮತ್ತೆ ಕಂಗೊಳಿಸಿದನು. ಅದರಿಂದಾಗಿ ಈ ಕ್ಷೇತ್ರಕ್ಕೆ ಸೋಮನಾಥ ಎನ್ನುವ ಹೆಸರು ಬಂದಿದೆ ಅಂತಲೂ ಹೇಳಲಾಗುತ್ತೆ... 

Somnath Jyotirlinga Temple History in Kannada

 

ಈ ದೇವಸ್ಥಾನವನ್ನು ಇಂತದ್ದೇ ವರ್ಷ ಕಟ್ಟಿದ್ರೂ ಅನ್ನೋದಕ್ಕೆ ದಾಖಲೆ ಇಲ್ಲ. ಯಾಕೆಂದ್ರ ಇದು ಅಷ್ಟೊಂದು ಪುರಾತನ ದೇವಾಲಯ.. 

ಆದರೆ ಕ್ರಿ.ಶ. 649ರಲ್ಲಿ ಯಾದವ ದೊರೆ ವಲ್ಲಬಿಯು ಮೊದಲ ಬಾರಿ ಈ ದೇವಾಲಯದ ಜೀರ್ಣೋದ್ಧಾರ ಮಾಡಿದನು ಎನ್ನಲಾಗಿದೆ... ಸಿಂಧ್‍ನ ಅರಬ್ ದೊರೆ ಗುಜರಾತ್ ಹಾಗೂ ರಾಜಸ್ಥಾನದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಸೋಮನಾಥ ದೇವಾಲಯವನ್ನು ಕೆಡವಿದ ಎನ್ನಲಾಗಿದೆ... ಆ ಬಳಿಕ ಪ್ರತಿಹಾರ ಗುರ್ಜರ ರಾಜ, 2ನೇ ನಾಗಭಟ ಕ್ರಿ.ಶ. 815ರಲ್ಲಿ ಬೃಹತ್ ಕೆಂಪು  ಮರಳುಗಲ್ಲಿನಿಂದ ದೇವಾಲಯ ನಿರ್ಮಿಸಿದನು...

Somnath Jyotirlinga Temple History in Kannada

ಕ್ರಿ.ಶ 1024ಲ್ಲಿ ಘಜನಿ ಮೊಹಮದ್ ಭಾರತದ ಮೇಲೆ ನಡೆಸಿದ 16ನೇ ದಂಡಯಾತ್ರೆ ವೇಳೆ, ಸೋಮನಾಥ ದೇವಾಲಯದ ಮೇಲೆ ದಾಳಿ ನಡೆಸಿ, ದೇವಾಲಯದಲ್ಲಿದ್ದ ಅಪಾರ ಪ್ರಮಾಣದಲ್ಲಿ ನಗದು-ನಾಣ್ಯಗಳನ್ನು ಕೊಳ್ಳೆ ಹೊಡೆದನು ಎಂದು ಕೆಲ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಇದೇ ಸಮಯದಲ್ಲಿ ದೇವಾಲಯವನ್ನು ರಕ್ಷಿಸಲು ಹೋರಾಡಿದ 50000 ಮಂದಿಯನ್ನು ಹತ್ಯೆಗೈದನೂ ಅಂತಲೂ ಹೇಳಲಾಗಿದೆ.. ಆದರೆ ಇದಕ್ಕೆ ನಿಖರವಾದ ದಾಖಲೆಗಳಿಲ್ಲ ಅಂತಾರೆ ಇತಿಹಾಸ ತಜ್ಞರು.. ಮೊಹಮದ್ ಘಜಿನಿಯಿಂದ ದಾಳಿಗೊಳಗಾದ ದೇವಾಲಯವನ್ನು, ದೊರೆ ಕಮಲ್ ಪಾಲನು ಜೀರ್ಣೋದ್ಧಾರ ಮಾಡಿದ ಅಂತಲೂ, ಬಳಿಕ 1296ರಲ್ಲಿ ಅಲ್ಲಾವುದ್ದಿನ್ ಖಿಲ್ಜಿಯೂ ಕೆಡವಿದನು ಅಂತಲೂ ಇತಿಹಾಸ ಪುಟಗಳಲ್ಲಿ ದಾಖಲಾಗಿದೆ... ಖಿಲ್ಜಿಯೂ ತಾನು ದಾಳಿ ಮಾಡಿದ ಕಡೆಗಳಿಂದ ಅನೇಕ ವಿಗ್ರಹಗಳನ್ನು ವಶಪಡಿಸಿಕೊಂಡು ಅವುಗಳನ್ನು ದೆಹಲಿಗೆ ಕೊಂಡೊಯ್ಯವಾಗ ಜಲೊರ್‍ನ ದೊರೆ ಕನ್ಹದಾದೇವನು ಸೋಮನಾಥ ಲಿಂಗವನ್ನು ಬಿಡಿಸಿಕೊಂಡು ತಂದನು. ಜೊತೆಗೆ ವಶದಲ್ಲಿದ್ದ ಹಿಂದೂಗಳನ್ನೂ ಸ್ವತಂತ್ರಗೊಳಿಸಿದನು ಎಂದು ಕೆಲವು ಗ್ರಂಥಗಳಲ್ಲಿ ದಾಖಲಾಗಿದೆ.. 

ಖಿಲ್ಜಿಯಿಂದ ನಾಶವಾದ ದೇವಾಲಯವನ್ನು ಸೌರಾಷ್ಟ್ರ ದೊರೆ ಮಹಿಪಾಲನು 1308ರಲ್ಲಿ ಪುನಹ ನಿರ್ಮಿಸಿದನು. ಅವನ ಮಗ ಖೆಂಗರ 1331ರಿಂದ 1351ರ ನಡುವಿನಲ್ಲಿ ಶಿವ ಲಿಂಗವನ್ನು ಮತ್ತೆ ಸ್ಥಾಪನೆ ಮಾಡಿದನು ಎನ್ನಲಾಗಿದೆ. ಗುಜರಾತ್‍ನ ಮುಸ್ಲಿಮರು ಹಜ್ ಯಾತ್ರೆಗೆ ತೆರಳುವಾಗ, ಸೋಮನಾಥನ ದರ್ಶನ ಪಡೆಯುತ್ತಿದ್ದರು ಎಂದು ಸೂಫಿ ಗಾಯಕ ಅಮಿರ್ ಖುಸರೌ ತನ್ನ ಗ್ರಂಥದಲ್ಲಿ ಬರೆದುಕೊಂಡಿದ್ದಾರೆ.. 

ಹೀಗೆ ಪುನರ್ ನಿರ್ಮಾಣಗೊಂಡ ದೇವಾಲಯವನ್ನು 3ನೇ ಬಾರಿಗೆ, 1395ರಲ್ಲಿ ದೆಹಲಿ ಸುಲ್ತಾನರ ಗುಜರಾತ್ ಮುಖ್ಯಸ್ಥನಾಗಿದ್ದ ಝವರ್ ಖಾನ್ ಕೆಡವಿದನು... 

1701ರಲ್ಲಿ ಔರಂಗಜೇಬ್‍ನಿಂದ ದೇವಾಲಯ ಮತ್ತೆ ಭಗ್ನಗೊಂಡಿತು.. ಬಳಿಕ ಪುಣೆಯ ಪೇಶ್ವೆ ರಾಜಾ ಭೋಸ್ಲೆ, ಕೊಲ್ಲಾಪುರದ ಛತ್ರಪತಿ, ಇಂದೋರ್‍ನ ಮಹಾರಾಣಿ ಅಹಲ್ಯಬಾಯಿ ಹೋಳ್ಕರ್, ಮೊದಲಾದವರು ಜೀರ್ಣೋದ್ಧಾರ ಮಾಡಿದರು.... 

ಆದರೆ ದೇವಾಲಯವು ಜುನಾಗಡದ ನವಾಬರ ಕಾಲದಲ್ಲಿ ಮತ್ತೆ ಹೀನಾಯ ಸ್ಥಿತಿಗೆ ತಲುಪಿತ್ತು.. ಶಿಥಿಲವಾಗಿದ್ದ ಬೃಹತ್ ಮಂದಿರವನ್ನು, 1947ರ ಸ್ವಾತಂತ್ರದ ನಂತರ ಉಪ ಪ್ರಧಾನಿಯಾಗಿದ್ದ ಸರ್ದಾರ್ ವಲ್ಲಭಾಯಿ ಪಟೇಲ್ ಹಾಗೂ ಕೆ.ಎಂ.ಮುನ್ಶಿ ಅವರು, ಮಹಾತ್ಮ ಗಾಂಧಿಜೀ ಅವರ ಸಲಹೆಯಂತೆ ಸಾರ್ವಜನಿಕರ ಸಹಕಾರದಿಂದ ಪುನರ್ ನಿರ್ಮಾಣ ಕೈಗೆತ್ತಿಕೊಂಡರು.. 1951ರಲ್ಲಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ದೇವಾಲಯದ ಶಂಕು ಸ್ಥಾಪನೆ ನೆರವೇರಿಸಿದರು. 

ದೇವಾಲಯ ಕಾರ್ಯ ಆರಂಭಗೊಂಡ ಕೆಲವೇ ದಿನಗಳಲ್ಲಿ ಗಾಂಧಿಜೀ ಹಾಗೂ ಸರ್ದಾರ್ ಪಟೇಲ್ ಇಬ್ಬರೂ ನಿಧನ ಹೊಂದಿದ ಕಾರಣ, ಆಗಿನ ಆಹಾರ ಮಂತ್ರಿಯಾಗಿದ್ದ ಕೆ.ಎಂ.ಮುನ್ಶಿ ಅವರೇ ದೇವಾಲಯ ಪುನರ್ ನಿರ್ಮಾಣದ ನೇತೃತ್ವ ವಹಿಸಿಕೊಂಡು ಕಾರ್ಯ ಪೂರ್ಣಗೊಳಿಸಿದರು.... ಹೀಗೆ, ಹಲವು ಬಾರಿ ದಾಳಿಗೊಳಗಾದರೂ ಮತ್ತೆ ಮತ್ತೆ ಜೀರ್ಣೋದ್ಧಾರ ಕಂಡ ಸೋಮನಾಥ

Somnath Jyotirlinga Temple History in Kannada

 

ದೇವಾಲಯವನ್ನು ಶಾಶ್ವತ ದೇವಾಲಯ ಅಂತಲೇ ಕರೆಯಲಾಗುತ್ತೆ... 

ಈಗಿರುವ ದೇವಾಲಯದ ವಿಶೇಷತೆ ಏನು, ಯಾವ ಶೈಲಿಯಲ್ಲಿದೆ ಅನ್ನೋದನ್ನ ಎಲ್ಲರೂ ತಿಳ್ಕೊಳೇಬೇಕು... 

ಸೋಮನಾಥ ದೇವಾಲಯವನ್ನು ಚಾಲುಕ್ಯ ಶೈಲಿಯಲ್ಲಿ ಕಟ್ಟಲಾಗಿದೆ. ದೇವಾಲಯವೂ ಸುಮಾರು 155 ಅಡಿ ಎತ್ತರವಿದ್ದು, ಧ್ವಜಸ್ತಂಭವು 8.2 ಮೀಟರ್‍ನಷ್ಟಿದೆ..ಈ ದೇವಾಲಯವು ಇರುವ ಸ್ಥಳ ಎಷ್ಟು ವಿಶೇಷವಾಗಿದೆ ಎಂದರೆ, ಸೋಮನಾಥ ಹಾಗೂ ಅಂಟಾರ್ಟಿಕಾ ನಡುವೆ ನೇರ ಗೆರೆ ಎಳೆದರೆ ನಡುವೆ ಯಾವುದೇ ಭೂಪ್ರದೇಶವಿಲ್ಲ... 

Somnath Jyotirlinga Temple History in Kannada

ಮಂದಿರ ಮೇಲ್ಚಾವಣಿ ನಯನ ಮನೋಹರವಾಗಿದ್ದು, ಶಿಲ್ಪಕಲೆಯ ಉತ್ತಮ ಉದಾಹಣೆಯಾಗಿದೆ.. ಮಂದಿರದ ಗರ್ಭಗುಡಿಯಲ್ಲಿ ಬೃಹತ್ ಆಕಾರದ ಶ್ರೀ ಸೋಮನಾಥ ಜ್ಯೋರ್ತಿಲಿಂಗವಿದೆ... ಶಿವರಾತ್ರಿ ವೇಳೆ ಇಲ್ಲಿ ಜಾತ್ರೆ ನಡೆಯುತ್ತೆ. ಸೂರ್ಯಗ್ರಹಣ ಮತ್ತು ಅಮವಾಸ್ಯೆಯಂದು ವಿಶೇಷ ಪೂಜೆ ನಡೆಯುತ್ತೆ, ಮತ್ತು ಲಕ್ಷಾಂತರ ಭಕ್ತರು ಬರ್ತಾರೆ... 

ಸೋಮನಾಥ ದೇವಸ್ಥಾನಕ್ಕೆ ಹೋಗೋದು ಬಹಳ ಸುಲಭ.. ಅಹಮದಾಬಾದ್ ವರೆಗೂ ಡೈರೆಕ್ಟ್ ಫ್ಲೈಟ್ ಇದೆ.. ಸೋಮನಾಥದಿಂದ ಕೇವಲ 5 ಕಿಲೋ ಮೀಟರ್ ದೂರದಲ್ಲಿ ವೇರವಲ್ ರೈಲ್ವೆ ನಿಲ್ದಾಣವಿದೆ... ರಸ್ತೆ ಮೂಲಕವೂ ಸುಲಭವಾಗಿ ಹೋಗ್ಬಹುದು... ಇಷ್ಟೆಲ್ಲಾ ಇತಿಹಾಸವಿರುವ, ರಮ್ಯ ರಮಣೀಯವಾಗಿರುವ ಸೋಮನಾಥ ದೇವಸ್ಥಾನಕ್ಕೆ ನೀವೂ ಒಮ್ಮೆ ಹೋಗ್ಬನ್ನಿ... 

Somnath Jyotirlinga Temple History in Kannada

ನಿಮಗೆಮಾಹಿತಿಇಷ್ಟಆಗಿದ್ದರೆಲೈಕ್ಮಾಡಿಶೇರ್ಮಾಡಿನಿಮ್ಮಅನಿಸಿಕೆಗಳನ್ನುಕಾಮೆಂಟ್ಮೂಲಕತಿಳಿಸಿಇನ್ನಷ್ಟುಮಾಹಿತಿಗಾಗಿಕೆಳಗಿನಲಿಂಕ್ಕ್ಲಿಕ್ಮಾಡಿನಮ್ಮನ್ನುಫಾಲೋಮಾಡಿ

 Subscribe to Planet Tv Kannada
https://www.youtube.com/Planet Tv Kannada

 Follow us on Facebook
https://www.facebook.com/Planettvkannada

 Follow us on Twitter
https://twitter.com/Planettvkannada

 Follow us on Instagram
https://www.instagram.com/planettvkannada

 Follow us on Pinterest
https://www.pinterest.com/Planettvkannada

 Follow us on Koo app
https://www.kooapp.com/planettvkannada

 Follow us on share chat
https://sharechat.com/planettvkannada

 Join us on Telegram
https://t.me/planettvkannada

 Follow us on Tumblr

https://www.tumblr.com/planettvkannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author