60ರ ಆಸುಪಾಸಿನಲ್ಲಿ ದೇಹದ ಫಿಟ್ನೆಸ್ ಗಾಗಿ ಮಾಡಬಹುದಾದ ವ್ಯಾಯಾಮಗಳು ಇಲ್ಲಿವೆ..

ಆರೋಗ್ಯವೇ ಭಾಗ್ಯ.. ಉತ್ತಮ ಆರೋಗ್ಯಕ್ಕೆ ಮಾಡಿ ನಿಯಮಿತ ವ್ಯಾಯಾಮ

ಆರೋಗ್ಯವೇ ಭಾಗ್ಯ.. ಎಲ್ಲಾ ವಯಸ್ಸಿನವರಿಗೂ ದೇಹದ ಆರೊಗ್ಯ ಬಹಳ ಮುಖ್ಯ.. ವಯಸ್ಸಾದಂತೆ ದೇಹ ಶಕ್ತಿಗುಂದುವುದು ಸಾಮಾನ್ಯ. ಈ ಸಂದರ್ಭದಲ್ಲೇ ಅನೇಕ ಆರೋಗ್ಯ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. 60 ವರ್ಷದ ಆಸುಪಾಸಿನಲ್ಲಿ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಲು, ಮೈ-ಕೈ ನೋವಿನಂತಹ ಸಮಸ್ಯೆಯಿಂದ ಪಾರಾಗಲು ಸುಲಭವಾಗಿ ಮಾಡಬಹುದಾದ ಕೆಲವೊಂದು ವ್ಯಾಯಾಮಗಳು ಇಲ್ಲಿವೆ ನೋಡಿ..

ವಾಕಿಂಗ್ ಅಥವಾ ಜಾಗಿಂಗ್: ಸಾಮಾನ್ಯವಾಗಿ 60 ವರ್ಷದ ಆಸುಪಾಸಿನಲ್ಲಿರುವವರಿಗೆ ಮೈ-ಕೈ ನೋವು ಕಾಣಿಸಿಕೊಳ್ಳುತ್ತಿರುತ್ತದೆ. ಈ ಸಮಸ್ಯೆಯಿಂದ ಪಾರಾಗಬೇಕೆಂದರೆ ನಿಯಮಿತವಾಗಿ ವಾಕಿಂಗ್ ಹಾಗೂ ಜಾಗಿಂಗ್ ಮಾಡುವುದು. ಬೆಳಿಗ್ಗೆ ಹಾಗೂ ಸಂಜೆ ವಾಕಿಂಗ್ ಮಾಡುವುದರಿಂದ ದೈಹಿಕ ಸ್ವಾಸ್ಥ್ಯ ವನ್ನು ಕಾಪಾಡಿಕೊಳ್ಳಬಹುದಾಗಿದೆ. ಪ್ರಾರಂಭದಲ್ಲಿ ವಾಕಿಂಗ್-ಜಾಗಿಂಗ್ ಕಷ್ಟ ಎನಿಸಿದರೂ ನಂತರ ಅಭ್ಯಾಸವಾಗುತ್ತದೆ. ದಿನಕಳೆದಂತೆ ವೇಗದ ಮಿತಿಯನ್ನು ಸಹ ಹೆಚ್ಚಿಸಿಕೊಳ್ಳಬಹುದು.

ಕಾಲುಗಳಿಗೆ ವ್ಯಾಯಾಮ: ಹಿರಿಯರಿಗೆ  ಹೆಚ್ಚು ಕಷ್ಟಕರವಾದ ವ್ಯಾಯಾಮದಿಂದ ಆಯಾಸ ಉಂಟಾದಲ್ಲಿ ಸುಲಭವಾಗಿ ಮಾಡಬಹುದಂತಹ ವ್ಯಾಯಾಮ ಎಂದರೆ, ಕುರ್ಚಿಯ ಹಿಂಭಾಗದಲ್ಲಿ ನಿಂತು, ಅದರ ಸಹಾದಿಂದ ಎಡಗಾಲ ಕಾಲನ್ನು ಹಿಮ್ಮುಖವಾಗಿ ಸಾಧ್ಯವಾದಷ್ಟು ಎತ್ತಿ, ಬಲಗೈಯಿಂದ ಪಾದವನ್ನು ಹಿಡಿಯಲು ಪ್ರಯತ್ನಿಸಿ. ನಂತರ ಬಲಗಾಲನ್ನು ಹಿಮ್ಮುಖವಾಗಿ ಎತ್ತಿ ಎಡಗೈಯಿಂದ ಪಾದವನ್ನು ಹಿಡಿಯಲು ಪ್ರಯತ್ನಿಸಿ. ಸ್ವಲ್ಪ ಸಮಯ ಹಾಗೆ ಇರುವುದು. ನಂತರ ನಿಧಾವಾಗಿ ಕಾಲನ್ನು ಇಳಿಸುವುದು. ಈ ರೀತಿಯಾಗಿ ಮಾಡುವುದರಿಂದ ಸೊಂಟ, ಕೆಳ ಬೆನ್ನಿನ ಸ್ನಾಯು, ತೊಡೆಗೆ ವ್ಯಾಯಾಮ ಸಿಕ್ಕಂತಾಗುತ್ತದೆ.

ಸ್ನಾಯುಗಳಿಗೆ ವ್ಯಾಯಾಮ: ಕಾಲುಗಳನ್ನು ಅಗಲ ಮಾಡಿ ಎರಡು ಕೈಗಳನ್ನು ವೃತ್ತಾಕಾರವಾಗಿ ತಿರುಗಿಸಿ, ಸಾಧ್ಯವಾದರೆ ವೇಗ ಹೆಚ್ಚಿಸಿ 10ರಿಂದ 15ಬಾರಿ ಮಾಡಲು ಪ್ರಯತ್ನಿಸಿ. ವ್ಯಾಯಾಮ ಮಾಡುವ ಮುಂಚೆ ವಾರ್ಮ್ ಅಪ್ ಮಾಡುವಾಗಲೂ ಇದನ್ನು ಮಾಡಬಹುದು.. ಹಾಗೆಯೇ ಕೈಗಳಿಲ್ಲದೆ ಚೇರ್ ಮೇಲೆ ಕುಳಿತು ಕೈಗಳನ್ನು ಲಭಮವಾಗಿ ಅಗಲಿಸಿ ಯಾವುದೇ ಸಹಾಯವಿಲ್ಲದೆ ಏಳಬೇಕು. ಇದನ್ನು ಕನಿಷ್ಠ 10ಬಾರಿಯಾದರೂ ಮಾಡಬೇಕು. ಹಾಗೆಯೇ ಚೇರ್ ನ ಹಿಂದೆ ನಿಂತು ಕೇವಲ ಪಾದದ ಮುಂಭಾಗದ ಮೇಲೆ ನಿಲ್ಲಲು ಪ್ರಯತ್ನಿಸಿ. ಅಂದರೆ ಹಿಮ್ಮಡಿಯನ್ನು ಮೇಲೆ ಎತ್ತಿ ಸ್ವಲ್ಪ ಸಮಯ ಹಾಗೆ ನಿಲ್ಲಲು ಪ್ರಯತ್ನಿಸಬಹುದು. 

ಏರೋಬಿಕ್ಸ್: ಹಿರಿಯರು ಕಿರಿಯರು ಯಾರು ಬೇಕಾದರೂ ಏರೋಬಿಕ್ಸ್ ಮಾಡಬಹುದು. ಎಲ್ಲಾ ವಯಸ್ಸಿನವರಿಗೂ ಇದು ಉತ್ತಮ ವ್ಯಾಯಾಮವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಹಿರಿಯರು ಪ್ರತಿದಿನ ೩೦ ನಿಮಿಷ ಈ ಚಟುವಟಿಕೆಯನ್ನು ಮಾಡಬೇಕು. ಇದು ದೇಹ ಚಟುವಟಿಕಿಯಿಂದ ಕೂಡಿರುವಂತೆ ಮಾಡುತ್ತದೆ.

ಈಜು: ಈಜು ಸಹ ಅತ್ಯುತ್ತಮ ವ್ಯಾಯಾಮವಾಗಿದೆ. ಹಿರಿಯರು ತಾವೇ ಒಂದು ಗುಂಪು ಮಾಡಿಕೊಂಡು ಒಟ್ಟಾಗಿ ಈ ಚಟುವಟಿಕೆ ಮಾಡುವುದರಿಂದ ದೇಹದ ಆರೋಗ್ಯಕ್ಕೂ ಮನಸ್ಸಿನ ಆರೋಗ್ಯಕ್ಕೂ ಒಳ್ಳೆಯದು. 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author