ಮರದೊಳಗೆ ಮರ ಹುಟ್ಟಿ ಭೂಚಕ್ರ ತಾಯಾಗಿ ತಿನ್ನಬಾರದ ಹಣ್ಣು ಬಲು ರುಚಿ .
ಈ ಮಾತಿನ ಅರ್ಥ ಮನುಷ್ಯನೊಳಗೆ ಇನ್ನೊಬ್ಬ ಮನುಷ್ಯ ಹುಟ್ಟೋದು ಅಂತ. ಈ ರೀತಿಯ ಆಲೋಚನೆನೇ ವಿಸ್ಮಯ ಅನ್ಸುತ್ತೆ ಅಲ್ವಾ.
ಬರೀ ನಮ್ಮನೆಗೆ ಅಥವಾ ನಮ್ಮ ರೂಂಗೆ ಯಾರಾದ್ರೂ ಹೊಸ ರೂಮೆಂಟ್ಸ್ ಬಂದರೆ ಅಡ್ಜಸ್ಟ್ ಮಾಡ್ಕೊಳ್ಳೋದು ಎಷ್ಟು ಕಷ್ಟ ಆಗುತ್ತೆ ಅಲ್ವಾ.
ಅಂತದ್ರಲ್ಲಿ ನಮ್ಮ ದೇಹದೊಳಗೆ ಇನ್ನೊಬ್ರು ಬರ್ತಾರೆ ಅಂದಾಗ ಆಗೋ ಕಸಿವಿಸಿ ತಳಮಳಗಳು ಅದನ್ನ ಅನುಭವಿಸಿದ ಎಲ್ಲಾ ತಾಯಂದಿರಿಗೆ ಗೊತ್ತು ಬಿಡಿ.
ಹೆಣ್ತನ ಸ್ವಾಭಾವಿಕ ಆದರೆ ತಾಯ್ತನ ದೈವಿಕ . ಆದರೆ ಈ ತಾಯ್ತನನ ದೇವರು ಹೆಣ್ಣುಮಕ್ಕಳ ಪಾಲಿಗೆ ಎತ್ತಿಟ್ಟದ್ದು ವರನೋ ಶಾಪನೋ ಗೊತ್ತಿಲ್ಲ.
ಯಾಕೆಂದರೆ ಎಲ್ಲಾ ನಮ್ಮಿಚ್ಛೆಯಂತೆ ನಡೆದರೆ ಅದು ಖಂಡಿತ ವರವಾಗುತ್ತದೆ. ಆದರೆ ಅದು ಬೇರೆಯವರ ಇಚ್ಛೆಯಂತೆ ನಡೆದರೆ ಅದು ಶಾಪನೇ ಸರಿ . ಆದರೆ ನಾನು ನಿಮಗೆ ಈಗ ಹೇಳೋಕೆ ಹೊರಟಿರೋ ವಿಷಯನೇ ಬೇರೆ.
ಅದು ಏನಪ್ಪಾ ಅಂದ್ರೆ ಅದು ನಮ್ಮ ದೇಹದೊಳಗೆ ಒಂಬತ್ತು ತಿಂಗಳಿಗೆ ಲೀಸ್ಗೆ ಅಂತ ಬರೋ ಹೊಸ ಟೆನೆಂಟ್ ಬಗ್ಗೆ.
ನಮ್ಮ ದೇಹನ ಒಂದು ಮನೆ ಅನ್ಕೊಂಡ್ರೆ ಇಲ್ಲಿ ಆಲ್ರೆಡಿ ಅವರ ತಾತ ಮುತ್ತಾತನ ಕಾಲದಿಂದಲೂ ವಾಸವಾಗಿರೋ ಹಿರಿಯರು ತುಂಬಾ ಜನ ಇದಾರೆ ಉದಾರಣೆಗೆ ಜಠರ ,ದೊಡ್ಡಕರಳು, ಸಣ್ಣ ಕರುಳು, ಹೃದಯ, ಸ್ವಾಶಕೋಶ ಆದರೆ ಇಷ್ಟು ದಿನ ಮೂಲೆಯಲ್ಲಿ ಎಲ್ಲೋ ಎಲೆಮರೆಯ ಕಾಯಿಯಂತಿದ್ದ ಯುಟ್ರಸ್ ಈಗ ತನ್ನ ಮನೆಗೆ ಒಂಬತ್ತು ತಿಂಗಳಿಗೆ ಲೀಸಿಗೆ ಬಂದಿರೋ ತೆಂಪರವರಿ ಬೇಸಿಸ್ ಟೆನೆಂಟ್ ಇಟ್ಕೊಂಡು ಸುತ್ತಮುತ್ತಲಿರುವ ಹಳೆಯ ರೆಸಿಡೆಂಟ್ಸ್ ನ ಜಾಗನ ಒತ್ತುವರಿ ಮಾಡೋಕ್ ಹೋದ್ರೆ ಅವರು ಸುಮ್ನೆ ಇರ್ತಾರ ಹೇಳಿ. ಆದರೆ ಅದೇನೇ ಇರಲಿ ನನ್ನ ವಾದ ಅದರ ಬಗ್ಗೆ ಅಲ್ಲ ಹೊಸದಾಗಿ ಬಂದಿರೋ ಟೆನೆಂಟ್ ಬಗ್ಗೆ.
ವಿಚಿತ್ರ ಏನಪ್ಪಾಂದ್ರೆ ಎಲ್ಲಾ ಕಡೆ ಓನರ್ ಕಂಡಿಶನ್ಸ್ ಹಾಕಿದ್ರೆ ಇಲ್ಲಿ ಟೆನೆಂಟ್ನ ಕಂಡಿಶನ್ಸೆ ಜಾಸ್ತಿ.
ಮೊದಲ ಮೂರು ತಿಂಗಳು ಇವರ ಮುಂದೆ ಹಾಲು ಕಾಯಿಸೋ ಹಾಗಲ್ಲ. ಬೇಳೆ ಬೇಯಿಸೋ ಹಾಗಿಲ್ಲ.ಯಾಕಂದ್ರೆ ಅವೆರಡರ ಸ್ಮೆಲ್ಲು ಇವರಿಗೆ ಆಗೋಲ್ಲ.ಇದರ ಜೊತೆಗೆ ಮಾರ್ನಿಂಗ್ ಸಿಕ್ನೆಸ್ ಬೇರೆ.
ಬೆಡ್ ಇಂದ ಕೆಳಗೆ ಇಳಿಯುತ್ತಿದ್ದ ಹಾಗೆ ವಾಂತಿ ಶುರುವಾಗುತ್ತೆ. ಮತ್ತೆ ಅಡುಗೆಮನೆ ಸಿಂಕ್ ಪಾತ್ರೆಯಿಂದ ತುಂಬೋ ತರ ಯಾವಾಗಲೂ ಬಾಯಲ್ಲಿ ನೀರು ತುಂಬಿಕೊಳ್ಳುತ್ತೆ .ಯಾಕಂದ್ರೆ ಎರಡು ಹೇಗೆ ತುಂಬಿಕೊಳ್ಳುತ್ತೆ ಅಂತಾನೇ ಗೊತ್ತಾಗೊಲ್ಲ.
ಇಷ್ಟಾದಮೇಲೂ ಇವರಿಗೆ ತುಂಬಾ ಹೊಟ್ಟೆ ಹಸಿವಾಗುತ್ತದೆ. ನಾವು ಇವರ ಹೊಟ್ಟೆ ತುಂಬಿಸಬೇಕು ಆದರೆ ಯಾವ ಫುಡ್ ಇವರಿಗೆ ವಾಂತಿ ಬರುತ್ತೆ ಯಾವ ಫುಡ್ ಇವರಿಗೆ ಹೊಟ್ಟೆ ತುಂಬಿಸುತ್ತದೆ ಅನ್ನೋ ಐಡಿಯಾ ಅವರಿಗೆ ಇರೋದಿಲ್ಲ.
ಇಫ್ ಯು ಹ್ಯಾವ್ ನೋ ಐಡಿಯಾ ದೆನ್ ಗೆಟ್ ಐಡಿಯಾ. ಅನ್ನೋ ಹಾಗೆ ಹೊಟ್ಟೆಗೆ ಏನು ಸೇರಿಸಬೇಕು ಅನ್ನೋ ಐಡಿಯಾ ತಿಳಿದುಕೊಳ್ಳುವುದರೊಳಗೆ ಮೂರು ತಿಂಗಳು ಕಳೆದು ಹೋಗುತ್ತೆ.
ಮೊದಲ ಮೂರು ತಿಂಗಳು ಇವರನ್ನ ಫುಡ್ಗೆ ಅಡ್ಜಸ್ಟ್ಮಾಡೋದ್ರಲ್ಲೇ ಕಳೆದು ಹೋಯಿತು.ಈ ಮುಂದಿನ ಮೂರು ತಿಂಗಳು ಇವರಿಗೆ ಫುಡ್ಡು ಸಪ್ಲೈ ಮಾಡೋದ್ರಲ್ಲಿ ಮುಗಿದುಹೋಗುತ್ತೆ .
ಮೊದಲ ಮೂರು ತಿಂಗಳು ಏನು ತಿನ್ನಬೇಕು ಅಂತಾನೆ ಗೊತ್ತಿರಲಿಲ್ಲ .ಆದರೆ ಈಗ ಎಷ್ಟು ತಿನ್ನಬೇಕು ಅನ್ನೋದು ಗೊತ್ತಾಗ್ತಾ ಇಲ್ಲ. ಯಾಕಂದ್ರೆ ಯಾವಾಗಲೂ ತಿಂತಾನೆ ಇರಬೇಕು ಅನ್ಸುತ್ತೆ .
ಮೂರ್ ತಿಂಗಳು ಬರೀ ವಾಂತಿ ಮಾಡಿದ್ದೆ ಆಯ್ತು .ಮತ್ತೆ ಮೂರ್ ತಿಂಗಳು ಬರೀ ತಿಂದಿದ್ದೆ ಆಯ್ತು. ಇದಿಷ್ಟು ನಮ್ಮ ಓನರ್ ನ ಕಂಪ್ಲೇಂಟ್ ಆದರೆ
ಟೆನೆಂಟ್ ಕಷ್ಟನೂ ನಾವು ಕೇಳಬೇಕಲ್ವಾ. ಇವರು ಹೇಳ್ತಾರೆ ಮೊದಲಿಗೆ ನನಗೆ ಈ ಆಕ್ಕಾಮೊಡೇಶನ್ ಇಷ್ಟ ಆಗ್ಲಿಲ್ಲ .ಯಾಕಂದ್ರೆ ಇಲ್ಲಿ ವೆಂಟಿಲೇಶನ್ ಪ್ರಾಬ್ಲಮ್ ಇದೆ ಗಾಳಿ, ಬೆಳಕು ಏನು ಬರಲ್ಲ.ಈ ಮನೆಗೆ ಕಿಟಕಿ ಬಾಗಿಲು ಏನು ಇಲ್ಲ ಬರೀ ಪ್ಲಾಸೆಂಟಾ ಅನ್ನೋ ಪರದೆಯೊಳಗೆ ನನ್ನನ್ನು ಕೂಡಿಹಾಕಿ ಬಿಟ್ಟಿದ್ದಾರೆ.ಹೊರಗಡೆಯದೆಲ್ಲ ಬರಿ ಬ್ಲರ್ ಆಗಿ ಕಾಣಿಸುತ್ತೆ.ಅದರ ಜೊತೆಗೆ ಅಂಬಲಿಕಲ್ ಫ್ಲೂಯಿಡ್ ಬೇರೆ.ಹಗಲು-ರಾತ್ರಿ ಫ್ಲೋಟಿಂಗ್ ಮೋಡ್ ನಲ್ಲಿದ್ದು ಇದ್ದು ಸಾಕಾಗಿದೆ. ನಮ್ಮ ಓನರು ನನ್ನ ಮಾತೇ ಕೇಳಲ್ಲ ದಿನ ಪಾಲಕ್ ಸೊಪ್ಪು ತಿಂದು ತಿಂದು ಸಾಕಾಗಿದೆ ಕೇಳಿದರೆ ಡಾಕ್ಟರ್ ಐರನ್ ಕಂಟೆಂಟ್ ತಗೋಬೇಕು ಅಂತ ಹೇಳಿದ್ದಾರೆ ಅಂತಾರೆ ಆದರೆ ಪ್ರತಿ ಸಲ ಚಕಪ್ ಅಂತ ಹೋದಾಗ ಒಂದು ಸಿರಂಜಿನ ತುಂಬಾ ರಕ್ತ ಎಳೆದುಕೊಳ್ಳುವುದು ಅವರೇ. ನಿಜವಾಗ್ಲೂ ಬ್ಲಡ್ ಕಡಿಮೆ ಆಗುವುದಕ್ಕೂ ನನಗೂ ಯಾವ ಸಂಬಂಧ ಇಲ್ಲ ಇನ್ನೂ ಊಟ ಮಾಡಿದ ತಕ್ಷಣ ನಮ್ಮ ಒನರ್ ವಾಕ್ ಮಾಡೋಕೆ ಶುರು ಮಾಡ್ತಾರೆ ಆದರೆ ನನಗೆ ತಿಂದ ತಕ್ಷಣ ಒಂದು ಒಳ್ಳೆ ನಿದ್ದೆ ಮಾಡಬೇಕು ಅನ್ಸುತ್ತೆ ಇವರೀಗೆ ಓಡಾಡ್ತಾ ಇದ್ರೆ ನನ್ ನಿದ್ದೆ ಮಾಡೋದು ಹೇಗೆ ಹೇಳಿ .
ಇನ್ನು ರಾತ್ರಿ ನಮ್ಮ ಓನರು ಹೊಟ್ಟೆ ತುಂಬಾ ತಿಂದು ಆರಾಮಾಗಿ ನಿದ್ರೆ ಮಾಡ್ತಾರೆ ಆದರೆ ನನ್ನ ಕಷ್ಟ ಕೇಳೋರ್ಯಾರು?
ಎಡಗೈ ಎತ್ತಿದ್ರೆ ಹಾರ್ಟಿಗೆ ಟಚ್ ಆಗುತ್ತೆ ಬಲಗೈ ಎತ್ತಿದ್ರೆ ಲಂಗ್ಸ್ ಕೈಗೆ ಸಿಗುತ್ತೆ. ಸ್ವಲ್ಪ ಕಾಲು ಸ್ಟ್ರೆಚ್ಮಾಡಿ ಮಲಗೋಣ ಅಂದ್ರೆ ಏನೋ ದಾರ ಕಾಲಿಗೆ ಸುತ್ತಿಕೊಂಡಾಗೆ ಆಗುತ್ತೆ. ಬಹುಶಃ ದೊಡ್ಡಕರುಳೋ ಸಣ್ಣಕರುಳೋ ಇರಬೇಕು.
ಕಾಲ್ನ ಸ್ವಲ್ಪ ಫೋಲ್ಡ್ ಮಾಡೋಣ ಅಂದ್ರೆ ಯಾವುದೋ ಎರಡು ಬೀನ್ ಶೇಪ್ ಬಾಲ್ ಕಾಲಿಗೆ ಸಿಗುತ್ತೆ. ಫುಟ್ಬಾಲ್ ಆಡೋಣ ಅನ್ಕೊಂಡೆ. ಆದರೆ ಆಮೇಲೆ ಗೊತ್ತಾಯ್ತು ಅದು ಕಿಡ್ನಿ ಅಂತ. ಖುಷಿಯಲ್ಲಿ ಜೋರಾಗಿ ಕುಣಿಯೋ ಹಾಗಿಲ್ಲ ಅಥವಾ ಬೇಜಾರಾಯ್ತು ಅಂತ ಸುಮ್ನೆ ಮಲಗೋ ಹಾಗಿಲ್ಲ .ಎಲ್ಲಾದಕ್ಕೂ ನಮ್ಮ ಬನರ್ ಆಸ್ಪತ್ರೆ ಕರ್ಕೊಂಡು ಹೋಗ್ತಾರೆ . ಅಲ್ಲೊ ಅ ಡಾಕ್ಟರಮ್ಮ ಒಂಚೂರು ಕರುಣೆ ಇಲ್ಲದೆ ಕೈಕಾಲು, ತಲೆ, ಮುಖ ,ಹೊಟ್ಟೆ ಯಾವುದು ನೋಡಲ್ಲ. ಸುಮ್ನೆ ಪ್ರೆಸ್ ಮಾಡ್ತಾನೆ ಇರ್ತಾರೆ.
ಕೊನೆಗೊಂದು ಕತ್ತಲಿರುವ ರೂಮಿಗೆ ಕರ್ಕೊಂಡು ಹೋಗಿ ಕಣ್ಮುಚ್ಚಿಕೊಂಡು ನಿದ್ದೆ ಮಾಡೋ ಮಗು ಮೇಲೆ ಟಾರ್ಚ್ ಬಿಡುವುದು ಇರಿಟೇಟ್ ಆಗುತ್ತೆ ಗೊತ್ತಾ. ನನಗಂತೂ ಸಾಕಾಗಿದೆ ಯಾವಾಗ ಈ 9ತಿಂಗಳ ಅಗ್ರಿಮೆಂಟ್ ಮುಗಿದು ಇಲ್ಲಿಂದ ಆಚೆ ಹೋಗಬೇಕು ಅನಿಸ್ತಿದೆ. ಈ ಕೊನೆ ಮೂರ್ ತಿಂಗಳು ಇದ್ಯಲ್ಲ ಅದಂತೂ ಭಯಾನಕ ಯಾಕಂದ್ರೆ ನಮ್ಮ ಟೆನೆಂಟ್ ಗೆ ಹೊಟ್ಟೆ ಒಳಗೆ ಜಾಗ ಸಾಕಾಗ್ತಾ ಇರಲ್ಲ .ಓನರ್ಗೆ ಬಟ್ಟೆ ಯೊಳಗೆ ಜಾಗ ಸಾಕಾಗ್ತಾ ಇರಲ್ಲ. ಎದ್ರೆ ಕೂರುವುದು ಕಷ್ಟ .ಕೂತ್ರೆ ಏಳೋದು ಕಷ್ಟ .ಈ ಟೆನೆಂಟ್ ಮನೆ ಕಾಲಿ ಮಾಡಿಬಿಟ್ಟರೆ ಸಾಕು ಅನಿಸುತ್ತೆ.
ಇಷ್ಟು ದಿನ ಇವರನ್ನು ಮನೆ ಒಳಗಡೆ ಇಟ್ಟುಕೊಂಡು ಅನುಭವಿಸಿದ ನೋವು ಸಂಕಟಗಳು ಒಂದುಕಡೆಯಾದರೆ ಇವರನ್ನು ಲಗೇಜ್ ಸಮೇತ ಮನೆ ಕಾಲಿ ಮಾಡಿಸುವಾಗ ಹಾಗೋ ನೋವುಗಳು ಬಹುಶಃ ಅದು ಓನರ್ ನ ಪಾಲಿಗೆ ಪುನರ್ಜನ್ಮವೇ ಸರಿ.
ಇಷ್ಟು ದಿನ ಮನೆಯೊಳಗಿದ್ದ ಟೆನೆಂಟ್ ಮನೆಯಿಂದ ಆಚೆ ಬಂದ ತಕ್ಷಣ ಮನೆಯವರೆಲ್ಲರಿಗೆ ಕರೆಂಟ್ ಆಗಿ ಬಿಟ್ಟಿದ್ದಾರೆ.ಮನೆ-ಮನದ ಬೆಳಕು. ದೇಹ ಖಾಲಿ ಮಾಡಿದಷ್ಟೇ ನೀವು.
ಆದರೀಗ ಮನೆ ಮನಸುಗಳ ತುಂಬಿಕೊಂಡಿದ್ದೀರಾ ಆದರೆ ಈ ವಾಸ ಮಾತ್ರ ಪರ್ಮನೆಂಟ್ ಇದಕ್ಕೆ ಯಾವುದೇ ವ್ಯಾಲಿಡಿಟಿ ಅಥವಾ ಅಗ್ರಿಮೆಂಟ್ ಇಲ್ಲ .
ನಾ ಇರೋ ವರೆಗು ನನ್ನ ಉಸಿರಿರೋವರೆಗು. Love You Kanda
You must be logged in to post a comment.