ನಿಗೂಢ ರಹಸ್ಯ

Mysterious mystery

 

 

"ಮನುಷ್ಯನಲ್ಲಿಯೇ ಅಡಗಿರತ್ವೆ ಎರಡೆರಡು ಗುಣ,

 ಅವಶ್ಯಕತೆಗೆ ತಕ್ಕ ಹಾಗೆ ಹಚ್ಚುವರು ಬಣ್ಣ..."

 

  ಕಬ್ಬಿನಾಲೆ ಉಡುಪಿ ಜಿಲ್ಲೆಯಲ್ಲಿ ಇರುವ ಒಂದು ಹಳ್ಳಿ.ಈ ಊರಲ್ಲಿ ಸಾಲು ಸಾಲು ಕೊಲೆಗಳು ನಡೆಯುತ್ತಿರುತ್ತವೆ,ಈ ಎಲ್ಲಾ ಕೊಲೆಗಳನನ್ನು ದೆವ್ವಗಳು ಮಾಡುತ್ತಿವೆ ಎನ್ನುವುದು ಊರವರ ನಂಬಿಕೆ.ಇದೆ ಊರಲ್ಲಿ ಮನೋಜ,ಕಿರಣ,ರವಿ,ರಾಹುಲ,ವಿಜಯ ಎಂಬ ಯುವಕರು ವಾಸ ವಾಗಿರುತ್ತಾರೆ.ರಾಹುಲ ಮತ್ತು ಕಿರಣ ಪ್ರಾಣ ಸ್ನೇಹಿತರು.ಮನೋಜ ಮತ್ತು ವಿಜಯ ಇವರ ಸಹ ಸ್ನೇಹಿತರು ಹಾಗೇ ರವಿ ಒಬ್ಬ ಭಿಕ್ಷುಕ ಇತನಿಗೆ ಒಂದು ಕಾಲು ಇರುವುದಿಲ್ಲ.ವೀರಭದ್ರ ಎಂಬ ಸ್ವಾಮಿಯು ಸಹ ಇರುತ್ತಾನೆ ದೆವ್ವಗಳನ್ನು ಬಂಧಿಸುವುದಾಗಿ ಜನಗಳ‌ ಹತ್ತಿರ ಪೂಜೆಗೆಂದು ಹಣವನ್ನು ತೆಗೆದುಕೊಳ್ಳುತ್ತಿರುತ್ತಾನೆ.ಸದ್ಯಕ್ಕೆ ರಾಹುಲ ಬೆಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದುಕೊಳ್ಳುತ್ತಿರುತ್ತಾನೆ. ಹೀಗೆ ಈ ಸರಣಿ ಕೊಲೆಗಳ ಬಗ್ಗೆ ಕಿರಣನಿಗೆ ಸುಳಿವೊಂದು ದೊರೆಯುತ್ತದೆ.ಈ ಸುಳಿವನ್ನು ಬೆನ್ನತ್ತಿ ಹೋದ ಕಿರಣ ಕೊಲೆಯಾಗುತ್ತಾನೆ.ಈ ಕೊಲೆಯನ್ನು ಸಹ ದೆವ್ವಗಳೆ ಮಾಡಿದ್ದು ಎಂದು ತನಿಖೆಯನ್ನು ಮುಕ್ತಾಯಗೊಳಿಸಲಾಗುತ್ತದೆ.

 

  ಪ್ರಾಣ ಸ್ನೇಹಿತನ ಸಾವು ರಾಹುಲನಿಗೆ ವಿಪರೀತ ದುಃಖ ಉಂಟು ಮಾಡುತ್ತದೆ.ಕಾರಣಾಂತರಗಳಿಂದ ಕಿರಣನ ಅಂತಿಮ ಕಾರ್ಯಕ್ಕೆ ರಾಹುಲ ಬರಲು ಸಾಧ್ಯವಾಗಿರಲಿಲ್ಲ.ಆದರೆ ಒಂದು ವಾರದ ನಂತರ ರಾಹುಲನ ಕನಸ್ಸಲ್ಲಿ ಕಿರಣ ಬಂದು ನನ್ನ ಸಾವಿಗೆ ನ್ಯಾಯ ಕೊಡಿಸು ಅಂತ ಕೇಳಿಕೊಳ್ಳುತ್ತಾನೆ.ಈ ಕನಸ್ಸು ರಾಹುಲನನ್ನು ವಿಪರೀತ ಗೊಂದಲಗಳಲ್ಲಿ ಸಿಕ್ಕಿಹಾಕಿಸುತ್ತದೆ.ಎರಡನೆಯ ದಿನವೂ ಅದೇ ಕನಸ್ಸು ಆಗ ರಾಹುಲನಿಗೆ ತನ್ನ ಪ್ರಾಣ ಸ್ನೇಹಿತನ ಸಾವು ಸಹಜ ಸಾವಲ್ಲಾ ಎಂಬ ಅನುಮಾನ ಬರುತ್ತದೆ.

ಒಮ್ಮೆ ಊರಿಗೆ ಬೇಟಿ ಕೊಡುವುದೇ ಸರಿ ಎಂದು ತನ್ನ ತಂದೆ ತಾಯಿಗೆ ಕರೆ ಮಾಡಿ ಊರಿಗೆ ಬರುತ್ತಿರುವುದಾಗಿ ತಿಳಿಸಿ.೧೫ ದಿನಗಳ ರಜೆ ಪಡೆದುಕೊಂಡು ಊರಿಗೆ ಹೋರಡುತ್ತಾನೆ.

 

  ತನ್ನ ಸ್ವಂತ ಕಾರಿನಲ್ಲಿ ಒಬ್ಬನ್ನೆ ಊರಿಗೆ ಬರುತ್ತಿರುವಾಗ ಇನ್ನೆನ್ನು ೧ ಘಂಟೆ ಪ್ರಯಾಣ ಬಾಕಿ ಇರುವಾಗ.ಮಧ್ಯರಾತ್ರಿ ಸರಿಸುಮಾರು ೧ ಘಂಟೆ ರಾಹುಲನು ಚಲಿಸುತ್ತಿದ್ದ ದಾರಿ ಮಧ್ಯೆ ಕಲ್ಲನ್ನು ಇಟ್ಟು work in progress ಅಂತ ಬೋರ್ಡ್ ಅನ್ನು ಹಾಕಿ ಬೇರೆ ದಾರಿಗೆ ಬಾಣದ ಗುರುತು ತೋರಿಸಿರುತ್ತಾರೆ.ಇದನ್ನು ಕಂಡು ರಾಹುಲ್ ರಸ್ತೆ ಬದಲಾಯಿಸುತ್ತಾನೆ ಆದರೆ ಈ ರಸ್ತೆ ಹೋಗಿ ತಲುಪಿದ್ದು ಒಂದು ದಟ್ಟ ಕಾಡನ್ನು ಅಲ್ಲಿ ಒಂಚೂರು ಮುಂದೆ ಹೋಗಿದ್ದರು ಕಿರಣ ಇದ್ದ ಸ್ಥಳಕ್ಕೆ ರಾಹುಲ ಹೋಗಬೇಕಾದ ಪರಿಸ್ಥಿತಿ ಏಕೆಂದರೆ ಮುಂದೆ ಇದ್ದದ್ದು ಬೃಹತ್ತಾದ ತೆಗ್ಗು.ರಾಹುಲ್ ಒಮ್ಮೆಲೇ ಭಯದಿಂದ ಕೆಳಗೆ ಇಳಿಯುತ್ತಾನೆ.ಅಲ್ಲಿ ಮರದ ಎಲೆಗಳ ಸದ್ದು,ದೂದದಲ್ಲಿ ಯಾರೋ ಅಳುತ್ತಿರುವ ಶಬ್ದ,ಕರ್ಕಶ ಧ್ವನಿಯಲ್ಲಿ ನಿನ್ನನ್ನು ಸಾಯಿಸುವೆ ಎನ್ನುವ ಬೆದರಿಕೆ, ರಾಹುಲ್ ಸುತ್ತಲೂ ನೋಡುತ್ತಾನೆ.ಯಾರೂ ಸಹ ಕಾಣುವುದಿಲ್ಲ ಆದರೆ ಅಳುವ ಶಬ್ದ ಜಾಸ್ತಿ ಆಗುತ್ತದೆ.ಪಕ್ಕದಲ್ಲಿ ಯಾರೂ ಹೋದ ಹಾಗೆ ಭಾವನೆ ಉಂಟಾಗುತ್ತದೆ.ರಾಹುಲ್ ಒಂದು ಕ್ಷಣ ಬೆವರು ಇಳಿಯುತ್ತದೆ.ಆ ದೆವ್ವ ಇದಿಯಾ?ರಾಹುಲ್ನನನ್ನು ದೆವ್ವ ಕೊಲ್ಲುತ್ತಾ ಅಥವಾ ರಾಹುಲ್ ದೆವ್ವದ ನಿಗೂಢ ರಹಸ್ಯ ಭೇದಿಸುತ್ತಾನಾ??????????

ರಾಹುಲನಿಗೆ ಭಯದಲ್ಲಿ ಏನು ಮಾಡುವುದೆಂದು ತೋಚುವುದಿಲ್ಲ.ತಡಮಾಡದೆ ಕಾರನ್ನು ಹತ್ತಿ ಅಲ್ಲಿಂದ ವಾಪಸ ಆಗುವನು.ಆದರೆ ಆಗಲೇ ರಸ್ತೆ ಮಧ್ಯೆ ಇದ್ದ ಕಲ್ಲುಗಳು ಈ ಬಾ ರಿ ಇರಲಿಲ್ಲ ಇದು ಮಾಯವೋ ದೆವ್ವದ ಆಟವೋ.ಇದನ್ನು ಕಂಡು ಭಯದಿಂದಲೇ ಮುನ್ನಡೆದ ರಾಹುಲನಿಗೆ ಮತ್ತೊಂದು ಆಘಾತ ಇದ್ದಕ್ಕಿದ್ದಂತೆ ಕಾರಿನ ಮುಂಭಾಗದ ಗಾಜಿನ ಮೇಲೆ ಬಿಳಿಯ ಬಟ್ಟೆಯ ತೊಟ್ಟ ಒಂದು ದೇಹ ಬೀಳುತ್ತೆ ನಾ ನಿನ್ನ ಬೀಡುವುದಿಲ್ಲ ನಿನ್ನ ರಕ್ತ ನನಗೆ ಬೇಕು ಎನ್ನುವ ಕೂಗು ರಾಹುಲನ ಮೈ ಒಂದು ಕ್ಷಣ ಭಯದಿಂದ ನಡುಗಲಾರಂಭಿಸುತ್ತದೆ ಒಂದು ಕ್ಷಣ ಕಣ್ಣು ಮುಚ್ಚಿ ಕಣ್ಣು ತೆಗೆದೊಡನೆ ಕಾರಿನ ಮೇಲಿದ್ದ ದೇಹ ಮಾಯ!!!! ಈ ದೃಶ್ಯ ರಾಹುಲನನ್ನು ವಿಪರೀತ ಗಾಬರಿಗೊಳಿಸುತ್ತದೆ.ಸ್ವಲ್ಪ ಮುಂದೆ ಹೋಗುವಷ್ಟರಲ್ಲಿ ಕಾರಿನ ಗಾಜಿನ ಮೇಲೆ ರಕ್ತ ಬೀಳುತ್ತದೆ.ರಾಹುಲ ಆಗಿದ್ದು ಆಗಲಿ ಏನಾಗುತ್ತೆ ನೋಡಿಯೇ ಬಿಡೋಣ ಅಂತ ಕಾರಿನಿಂದ ಕೆಳಗೆ ಇಳಿದು ಆ ರಕ್ತ ಯಾವುದೆಂದು ಪರೀಕ್ಷಿಸಲು ಕೈಯಿಂದ ಆ ರಕ್ತ ಮುಟ್ಟುತ್ತಾನೆ ಅಷ್ಟರಲ್ಲಿ ದೂರದಿಂದ ಕಲ್ಲೊಂದು ಬಂದು ರಾಹುಲನ ತಲೆಗೆ ಬೀಳುತ್ತೆ ಗಾಯದಿಂದ ರಕ್ತ ಸುರಿಯಲಾರಂಭಿಸುತ್ತದೆ.ಮತ್ತದೆ ಧ್ವನಿ ನಾ ನಿನ್ನ ಬಿಡಲಾರೆ.ಗಾಬರಿಯಿಂದ ಕಾರೊಳಗೆ ಬಂದು ಪ್ರಥಮಚಿಕಿತ್ಸೆ ಪೆಟ್ಟಿಗೆಯಿಂದ ತನ್ನ ಗಾಯಕ್ಕೆ ತಾನೇ ಚಿಕಿತ್ಸೆ ಪಡೆದುಕೊಂಡು ಅಲ್ಲಿಂದ ಹೊರಡುವನು.

 

  ಸಾಕಷ್ಟು ಸವಾಲು ಜೀವ ಬೆದರಿಕೆಗಳಿಂದ ಬೇಸತ್ತು ರಾಹುಲ ಮನೆ ತಲುಪುವಷ್ಟರಲ್ಲಿ ಮುಂಜಾನೆ ೪ ಘಂಟೆ.ಈ ದೆವ್ವದ ಸಹವಾಸವೇ ಬೇಡ ಮಲಗಿ ಎದ್ದು ಎರಡು ದಿನ ವಿಶ್ರಾಂತಿ ಪಡೆದು ಮರಳಿ ಊರಿಗೆ ಹೋಗುವ ಚಿಂತನೆ ಮಾಡಿ ಮಲಗುತ್ತಾನೆ.ಆದರೆ ಮತ್ತೆ ಕನಸ್ಸಿನಲ್ಲಿ ಕಿರಣ ಆಗಮಿಸಿ "ಗೆಳೆಯ ನಿನ್ನ ಬಿಟ್ಟರೆ ನನ್ನ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಕೊಡಿಸಲು ಬೇರೆ ಯಾರಿಂದಲೂ ಸಾಧ್ಯವಿಲ್ಲ ದಯವಿಟ್ಟು ಭಯ ಪಡಬೇಡ ನೀ ಈ ರಹಸ್ಯವನ್ನು ಬೇಧಿಸಿ ಊರಿನ ಜನರಿಗೆ ನೆಮ್ಮದಿಯ ನಿದ್ರೆ ಮಾಡಲು ಅವಕಾಶ ಕಲ್ಪಿಸು ಗೆಳೆಯ" ಎಂದು ಹೇಳುತ್ತಾನೆ.ತಕ್ಷಣವೇ ಎಚ್ಚರಗೊಂಡ ರಾಹುಲ್ ಸಮಯ ನೋಡಿದನು ಬೆಳಗ್ಗೆ ೧೧ ಘಂಟೆ.ಈ ಕನಸ್ಸು ರಾಹುಲನಲ್ಲಿ ಹೊಸರಕ್ತ ಸಂಚಾರವಾದ್ದಂತೆ ಮಾಡುತ್ತದೆ ನನ್ನ ಪ್ರಾಣ ಹೋದರೂ ಸರಿ ಈ ರಹಸ್ಯ ಭೇದಿಸಲು ಪ್ರಯತ್ನಿಸುವೆ ಎಂದು ತಿಂಡಿ ಮಾಡಿ ಕಿರಣನ ಮನೆಗೆ ಹೋಗುತ್ತಾನೆ.ಅವರ ತಂದೆ ತಾಯಿಯೊಡನೆ ಮಾತನಾಡಿ ಕಿರಣನ ಕೊಣೆಗೆ ಹೋಗುತ್ತಾನೆ ಅಲ್ಲಿ ಇವನಿಗೆ ವಿಪರೀತ ಕಿರಣನ ನೆನಪುಗಳು ಕಾಡುತ್ತವೆ.ಅಲ್ಲಿದ್ದ ಕಿರಣನ ಲೈಪ್ ಡೈರಿಯನ್ನು ಓದತೊಡಗಿದನು ಕೊನೆಯ ಪುಟದಲ್ಲಿ "ಈ ಊರಿನಲ್ಲಿ ಯಾವ ದೆವ್ವವು ಇಲ್ಲ ಇದರ ಬಗ್ಗೆ ನನಗೆ ಸುಹಿವೊಂದು ದೊರೆತಿದೆ ನಾಳೆ ಬೆಳಿಗ್ಗೆ ನಾನು ಈ ಸುಳಿವನ್ನು ಬೆನ್ನತ್ತಿ ಹೋಗುವೆನು ಎಂದು ಬರೆದು ದಿನಾಂಕ ಹಾಕಿರುತ್ತಾನೆ". ವಿಪರ್ಯಾಸವೆಂದರೆ ಅದೇ ದಿನ ರಾತ್ರಿ ಕಿರಣ ಸಾವನ್ನು ಒಪ್ಪಿರುತ್ತಾನೆ.ರಾಹುಲನು ಕಿರಣನ ಕೊಣೆಯನ್ನು ಸಂಪೂರ್ಣವಾಗಿ ಪರೀಶಿಲಿಸಿದಾಗ ಅಲ್ಲಿ ಒಂದು ಮೈಕ್ರೋ ಕ್ಯಾಮೆರಾ ದೊರೆಯುತ್ತದೆ ಇದನ್ನು ನೋಡಿ ರಾಹುಲನಿಗೆ ಪ್ರಶ್ನೆಗಳುಉದ್ಭವವಾಗುತ್ತವೆ.ಹಾಗಾದರೆ ಈ ಕ್ಯಾಮೆರಾ ರಹಸ್ಯ ಭೇದಿಸಲು ಸಹಾಯ ಮಾಡುತ್ತಾ?????????????

 

ರಾಹುಲ್ ಆ ಕ್ಯಾಮೆರಾವನ್ನು ತೆಗೆದುಕೊಂಡು ಇದು ಯಾರದ್ದು? ಯಾತಕ್ಕಾಗಿ ಇಲ್ಲಿಗೆ ಬಂತು? ಎಂಬ ಪ್ರಶ್ನೆ .ಕಿರಣ ಡೈರಿ ಅಲ್ಲಿ ಬರೆದ ಪ್ರಕಾರ ದೆವ್ವವೆ ಇಲ್ಲವಾದ್ದಲ್ಲಿ ನಿನ್ನೆ ನನ್ನ ಕಾರಿನ ಮೇಲೆ ಬಿದ್ದ ದೇಹ ಯಾವುದು?ಕಿರಣನ ಕೊಣೆಗೆ ರಾತ್ರಿ ವೇಳೆ ಬಂದು ಕೊಲೆ ಮಾಡಿದ್ದು ಯಾರು?ಪರಿಚಯ ಅಥವಾ ತುಂಬಾ ಹತ್ತಿರವಿರುವ ವ್ಯಕ್ತಿಗಳೆ ಈ ಕೊಲೆಗಾರರಾ ಕಿರಣ ದೆವ್ವವೆ ಇಲ್ಲವೆಂದು ಬರಿದಿದ್ದಾನೆ ಹಾಗೆ ನನ್ನ ಜೊತೆ ನಿನ್ನೆ ರಾತ್ರಿ ನಡೆದ ಘಟನೆ ಭ್ರಮೆ ಅಂತು ಅಲ್ಲ ಇದರ ಹಿಂದೆ ಯಾವುದೋ ಒಂದು 'ಮಾಸ್ಟರ್ ಮೈಂಡ್' ಇದೆ ಯಾರದು???????ಹೀಗೆ ರಾಹುಲನ ಮನದಲ್ಲಿ ನೂರಾರು ಗೊಂದಲ ಪ್ರಶ್ನೆ.ಆ ಕ್ಯಾಮೆರಾವನ್ನು ತನ್ನೊಟ್ಟಿಗೆ ತೆಗೆದುಕೊಂಡು ಊರಿನಲ್ಲಿ ಇರುವ ಮನೋಜ ಮತ್ತು ವಿಜಯ್ ಎಂಬ ಸ್ನೇಹಿತರ ಬಳಿ ಬರುವನು.

 

  ಮೂವರು ಸ್ನೇಹಿತರು ಮಾತನಾಡುವಾಗ.

ರಾಹುಲ್:ನಂಗೆ ಯಾಕೋ ಕಿರಣನನ್ನು ದೆವ್ವ ಕೊಂದಿಲ್ಲ ಇದರ ಹಿಂದೆ ಬೇರೆ ಏನೋ ಇದೆ ಅನಿಸುತ್ತದೆ.

ಮನೋಜ:ಎಂಥ ಸಾವ ಮಾರ್ರೆ ನಿಂದು.ಇದು ಆಗಲೇ ದೆವ್ವ ಕೊಂದಿದು ಅಂತ ಸಾಬೀತಾಗಿದೆ ಈಗ ನೀನ ಒಳ್ಳೆ ಅನುಮಾನ ಪಟ್ಕೊಂಡು.ಬಿಟ್ಬೀಡ.

ರಾಹುಲ್:ಹಾಗಲ್ಲ ಕಣ್ರೋ(ರಾಹುಲ್ ಕಿರಣನ ಡೈರಿ ಬಗ್ಗೆ ಮತ್ತು ತನ್ನ ಕನಸ್ಸಿನ ಬಗ್ಗೆ ಅವರ ಹತ್ತಿರ ಹೇಳುವನು).

ವಿಜಯ್:ಎಂಥದ ಅವನೇನೊ ಹುಚ್ಚ ಮಾರ್ರೆ,ಎಂಥ ಬೇಕಂತ ಹೇಳ್ತಾನೆ ಅದ್ನೇಲ್ಲಾ ಹೇಗೆ ನಂಬೋದು?

ರಾಹುಲ್:ನಂಗೆ ಅವನ ಬಗ್ಗೆ ಸಂಪೂರ್ಣ ನಂಬಿಕೆ ಇದೆ.ಈ ರಹಸ್ಯವನ್ನು ಭೇದಿಸ್ತೀನಿ.ಮನೋಜ:ಬೇಡ ಮಾರ್ರೆ, ಆಮೇಲೆ ನೀನು ಬದಕಲ್ಲಾ.

ರಾಹುಲ್: ಏನಾದ್ರೂ ಆಗಲಿ.

ವಿಜಯ್: ರಾಹುಲ್ ನಂಗ್ಯಾಕೋ ಆ ವೀರಭದ್ರ ಸ್ವಾಮೀಜಿ ಮೇಲೆ ಅನುಮಾನ ಕಣೋ.ಜನ ಹತ್ತಿರ ಆ ಪೂಜೆ ಈ ಪೂಜೆ ಅಂತ ಹಣ ತಗೋಳ್ತಾನೆ.ಅವನೇ ಯಾಕೆ ದೆವ್ವ ಇದೆ ಅಂತ ನಂಬಿಸಿರಬಾರದು?

ರಾಹುಲ್: ಇರಬಹುದು.ಒಮ್ಮೆ ಅವರನ್ನು ಭೇಟಿಯಾಗಬೇಕು ಬನ್ನಿ ಹೋಗೋಣ.(ಮೂವರು ಆ ಸ್ವಾಮೀಜಿ ಇರುವ ದೇವಸ್ಥಾನಕ್ಕೆ ಹೋರಡುವರು).

ಅದೇ ದೇವಸ್ಥಾನದ ಮುಂದೆ ಕಾಲು ಕಳೆದುಕೊಂಡ ರವಿ ಭಿಕ್ಷೆ ಬೇಡುತ ಕುಳಿತಿರುತ್ತಾನೆ.

 

ಮೂವರು: ನಮಸ್ತೇ ಸ್ವಾಮೀಜಿ

ಸ್ವಾಮೀಜಿ: ನಮಸ್ತೇ ಹೇಳಿ

ರಾಹುಲ್: ಸ್ವಾಮೀಜಿ ನಿಜವಾಗ್ಲೂ ದೆವ್ವ ಇದ್ದೀಯಾ?

ಸ್ವಾಮೀಜಿ:ಹೂ ಇದೆ.ಇಲ್ಲ ಅಂತ ಏನೋ ಸಾಧಿಸ್ತೀನಿ ಅಂತ ಹೋದ ನಿನ್ನ ಸ್ನೇಹಿತ ಸಾವಾದ.ಈವಾಗ ನೀನು ಹಾಗೆ ಆಡ್ಬೇಡಾ ನಿನ್ನ ಕೆಲಸ ನೋಡ್ಕೊಂಡು ಸುಮ್ನೇ ಇರು.ನಡೆ ಇಲ್ಲಿಂದ.

ರಾಹುಲ್: ಸುಮ್ನೇ ಇರೋಕೆ ನಾನು ಹೇಡಿ ಅಲ್ಲಾ ಇದರ ಹಿಂದೆ ಏನಿದೆ ಕಂಡುಹಿಡಿತಿನಿ.ಹೋಗಿ ಬರ್ತಿನಿ.

ಮೂವರು ಹೊರಡುವರು.

 

  ರಾಹುಲನಿಗೆ ಒಂದೆಡೆ ಸ್ವಾಮೀಜಿ ಮೇಲೂ ಅನುಮಾನ.ಹೇಗಾದ್ರೂ ಮಾಡಿ ಈ ಸುಳಿವು ಬೇದಿಸೊಕೆ ಪಣ ತೊಟ್ಟಿರುತ್ತಾನೆ‌.ಇದೇ ಸಮಯದಲ್ಲಿ ಅನಾಥೆಯಾಗಿದ್ದ ರಾಹುಲನ ಅತ್ತೆ ಮಗಳಾದ ಜ್ಯೋತಿ ರಾಹುಲನ ಮನೆಗೆ ಬಂದು ಉಳಿದುಕೊಳ್ಳುತ್ತಾಳೆ.ರಾಹುಲನಿಗೆ ಜ್ಯೋತಿ ಮೇಲೆ ಮೊದಲಿಂದಲೂ ಪ್ರೀತಿ ಇರುತ್ತೆ.ಸಾಕಷ್ಟು ಅನುಮಾನ ಗೊಂದಲ ಹೊಂದಿರುವ ಕಥೆ ಮುಂದೆ ಏನಾಗತ್ತೆ??????

 

"ಕಥೆಯಲ್ಲಿ ಬಂದಳೊಬ್ಬಳು ಜ್ಯೋತಿ,

 ಇವಳಿಂದ ಏನೇನಿದೆ ಪಜೀತಿ..."

 

ಜ್ಯೋತಿಗೂ ಸಹ ರಾಹುಲನೆಂದರೆ ಅಚ್ಚುಮೆಚ್ಚು,ರಾಹುಲನ ಮನೆಯವರು ನಿರ್ಧಾರ ಮಾಡಿ ತಬ್ಬಲಿ ಜ್ಯೋತಿ ಹಾಗೂ ತಮ್ಮ ಮಗ ರಾಹುಲನಿಗೆ ಮದುವೆ ಮಾಡುವ ನಿರ್ಧಾರ ಮಾಡಿ ನಿಶ್ಚಿತಾರ್ಥ ಮಾಡುತ್ತಾರೆ.ಈದಾದ ಮರುದಿನ ಜ್ಯೋತಿ ಮತ್ತು ರಾಹುಲ್ ಇಬ್ಬರೆ ಮನೆಯಲ್ಲಿ ಇರುತ್ತಾರೆ.ಮದುವೆಯಾಗುವ ಹುಡುಗಿನ ನೋಡಿಕೊಂಡು ಕಲ್ಪನೆಯ ಲೋಕದಲ್ಲಿ ತೆಲಾಡುತ್ತಿದ ನಮ್ಮ ಹುಡುಗನಿಗೆ ಅಚ್ಚರಿಯೊಂದು ಬಂದು ತಲುಪುತ್ತದೆ.ಮನೆಯ ಹೊರಗಡೆ ಇಂದ ರಾಹುಲ್ ರಾಹುಲ್ ಎಂಬ ಕೂಗು ರಾಹುಲ್ ಹೊರಗೆ ಹೊದನು ಬಂದಿದ್ದು ಮನೋಜ.

ರಾಹುಲ್:ಏನೋ ಮನೋಜ?

ಮನೋಜ:ನಾನು ಇವತ್ತು ಕಿರಣನ ಮನೆಗೆ ಹೋಗಿದ್ದೆ ಅಲ್ಲಿ ಈ ಲೇಟರ್ ಸಿಗ್ತು ತಗೋ ನಾ ಹೊರಡುವೆ ಕೆಲಸ ಇದೆ.(ಹೊರಡುವನು ಆ ಲೇಟರನಲ್ಲಿ ನಾನು(ಅಂದರೆ ಕಿರಣ) ಅಮಾವಾಸ್ಯೆಯ ರಾತ್ರಿ ಕಾಡಿಗೆ ಹೋಗ್ತಾ ಇದ್ದೇನೆ ಅದೇ ರಾತ್ರಿ ಈ ರಹಸ್ಯ ಭೇದಿಸುತ್ತೇನೆ ಈ ರಹಸ್ಯದ ಸೂತ್ರದಾರಿಗಳು ಅಲ್ಲಿಯೇ ಇದ್ದಾರೆ.ಎಂದು ಬರೆದಿರುತ್ತದೆ)ಇದೇ ದಿನ ಅಮಾವಾಸ್ಯೆ ಆಗಿರುತ್ತದೆ.ಇದನ್ನು ಓದಿ ನಂಬಿದ ರಾಹುಲ್ ರಾತ್ರಿ ಕಾಡಿಗೆ ಹೋಗಲು ನಿರ್ಧರಿಸಿದನು.

 

  ಈ ಬಾರಿ ರಾಹುಲ್ ಒಂದು ಉಪಾಯ ಮಾಡುತ್ತಾನೆ.ಅವನಿಗೆ ಸಿಕ್ಕ ಮೈಕ್ರೋ ಕ್ಯಾಮೆರಾ ನೋಡಿದಾಗ ಅದರ ಮೇಲೆ ದೆವ್ವದ ಎಮೋಜಿ ಇರುತ್ತದೆ.ಹಾಗಾದ್ರೆ ಈ ಕ್ಯಾಮೆರಾ ನಿಗೂಢ ರಹಸ್ಯದ ಸೂತ್ರದಾರರದಾ? ರಾಹುಲ್ ಮತ್ತೊಂದು ಮೈಕ್ರೋ ಕ್ಯಾಮೆರಾ ಖರೀದಿಸಿ ತನ್ನ ಅಂಗಿಗೆ ಮುಂದೆ ಮತ್ತು ಹಿಂದೆ ಹಾಕಿಕೊಂಡು ಹೋಗುವ ನಿರ್ಧಾರ.

 

  ಅವನ ನಿರ್ಧಾರದಂತೆ ದೆವ್ವ ಇದೇಯೋ?ಇಲ್ಲವೋ ನೋಡಲು ಕ್ಯಾಮೆರಾ ಅಳವಡಿಸಿಕೊಂಡು ಹೊರಡುತ್ತಿರುವನು.

ಜ್ಯೋತಿ: ರಾಹುಲ್ ದಯವಿಟ್ಟು ಬೇಡ ಇದ್ದೇಲ್ಲಾ ಬಿಟ್ಟು ಸುಮ್ನೆ ಇರು ನಿನ್ನ ನಂಬ್ಕೊಂಡು ತುಂಬಾ ಜನ ಇದ್ದಾರೆ.

ರಾಹುಲ್:ನೋ ಒಂದು ಈ ರಹಸ್ಯ ಇರ್ಬೇಕು ಇಲ್ಲಾ ನಾನೀರಬೇಕು ಕ್ಷಮಿಸು ನನ್ನ ನಿರ್ಧಾರ ಬದಲಾಗುವುದಿಲ್ಲ.

ಜ್ಯೋತಿ: ದಯವಿಟ್ಟು ನನ್ನ ಮಾತು ಕೇಳು ರಾಹುಲ್.

ರಾಹುಲ್: ಕ್ಷಮಿಸು ಸಮಯವಾಯಿತು ಹೊರಡುವೆ.

 

  ದಟ್ಟವಾದ ಕಾಡು ರಾಹುಲ್ ಒಳಗೆ ಹೋಗುತ್ತಿರುವನು ಅಲ್ಲಲ್ಲಿ ಮಾಟ ಮಂತ್ರ ಮಾಡಿ ಎಸೆದ ಲಿಂಬೆಹಣ್ಣುಗಳಿವೆ.ಏನೋ ಒಂದು ಶಬ್ದ ದೂರದಿಂದ ಯಾರೋ ಕರೆಯುತ್ತಿರುವ ಭಾವನೆ.ಮನದಲ್ಲಿ ಭಯ ಇದ್ದರು ಮೂಖದಲ್ಲಿ ಕಿಚ್ಚಿದೆ.ಹಾಗೆ ಮುನ್ನಡೆಯುವನು ಅಲ್ಲಿ ಒಂದು ಗೊಂಬೆಯ ರುಂಡ ತುಂಡಾಗಿ ಬಿದ್ದಿರುತ್ತದೆ.ಆ ಗೊಂಬೆಯ ಮೇಲೆ ರಾಹುಲ್ ಎಂದು ಬರೆದಿರುತ್ತದೆ.ರಾಹುಲ್ ನೋಡಿ ಭಯಬೀತಗೊಳ್ಳುತ್ತಾನೆ.ಆಗ ರಾಹುಲ್ ನ ಎದುರಲ್ಲಿ ಒಂದು ಹೆಣ್ಣು ದೇಹ ಪ್ರತ್ಯಕ್ಷ ಬಿಳಿಯ ಸೀರೆ ಉದ್ದನೆಯ ಕೂದಲು ಮೂಖದಲ್ಲಿ ಕೆಂಪು ಬಣ್ಣ ರಾಹುಲ್ ನಿಂದ ಸ್ವಲ್ಪ ದೂರ ನಿಂತು 

ದೆವ್ವ: ಎಷ್ಟು ಸಲ ನಿಂಗೆ ಎಚ್ಚರಿಕೆ ನೀಡುವುದೋ ಮಗನೇ?ಬದುಕುವ ಆಸೆ ಇಲ್ಲವೋ ನಿನಗೆ?

ರಾಹುಲ್:ಯಾವಲೇ ನೀನು?ನೀನು ದೆವ್ವನಾ?ತು ಯಾಕೆ ಹೀಗೆ ಆಟ ಆಡ್ತೀದಿಯಾ?

ದೆವ್ವ:ಬೇಡ ರಾಹುಲ್ ನಿನ್ನ ಸಾಯಿಸೋಕೆ ಇಷ್ಟ ಇಲ್ಲ ಸುಮ್ನೆ ಇರು.

ರಾಹುಲ್:ನಿಂತ್ಕೋಳೆ ಅಲ್ಲೆ ನೀನೆನ ನನ್ನ ಸಾಯ್ಸೋದು ನಾನೇ ನಿನ್ನ ಸಾಯಿಸ್ತೀನಿ

ದೆವ್ವ ಓಡೋಕೆ ಶುರುಮಾಡತ್ತೆ.ರಾಹುಲ್ ಹಿಂದೆ ಬೆನ್ನು ಹತ್ತುತ್ತಾನೆ.ದೆವ್ವಕ್ಕೆ ದಾಹವಾಗಿ ನಿಲ್ಲುತ್ತೆ ರಾಹುಲ್ ಇನ್ನೆನ್ನೂ ದೆವ್ವವನ್ನು ಮುಟ್ಟಬೇಕು ಅಷ್ಟರಲ್ಲಿ???????

 

ಅಷ್ಟರಲ್ಲಿ ಶರವೇಗದಲ್ಲಿ ಮತ್ತೆರಡು ದೇಹಗಳು ರಾಹುಲನ ಹಿಂದೆ ಬಂದು ನಿಲ್ಲುತ್ತವೆ.ಕರ್ಕಶ ಧ್ವನಿಯಲ್ಲಿ ರಾಹುಲ ನೀನಿನ್ನು ಬದುಕಲಾರೆ.ರಾಹುಲ ಒಮ್ಮೆಲೇ ಹಿಂದೆ ತಿರುಗುವನು ಎರಡು ವಿಚಿತ್ರ ರೂಪ ಹೊಂದಿದ್ದ ದೇಹಗಳು ಅವನಿಗೆ ಕಾಣುತ್ತವೆ ಅದರಲ್ಲಿ ಒಂದು ರಾಹುಲ ಈ ಹಿಂದೆಯೇ ಕಾರಿನಲ್ಲಿ ಪ್ರಯಾಣಿಸುವಾಗ ಕಾರಿನ ಮೇಲೆ ಬಿದ್ದ ದೆವ್ವ.ರಾಹುಲನಲ್ಲಿ ಭಯವಿದ್ದರು ಆ ದೆವ್ವವನ್ನು ಮುಟ್ಟೊದಕ್ಕೆ ಮುಂದಾಗುತ್ತಾನೆ ತಕ್ಷಣವೇ ಆ ಎರಡು ದೇಹಗಳು ಬಂದ ವೇಗದಲ್ಲೇ ವಾಪಸ ಆಗುತ್ತವೆ.ರಾಹುಲನಿಗೆ ಅಚ್ಚರಿ ಇವು ಹೋಗಲಿ ಆಗಲೇ ಇದ್ದವರು ಯಾರು ಎಂದು ಹಿಂದೆ ತಿರುಗುವಷ್ಟರಲ್ಲಿ ಆ ಹೆಣ್ಣು ದೆವ್ವ ಮಾಯ.ರಾಹುಲನ ಮನದಲ್ಲಿ ಮತ್ತಷ್ಟು ಪ್ರಶ್ನೆಗಳು ಉದ್ಭವಿಸುತ್ತವೆ.ಆ ಹೆಣ್ಣು ದೇಹ ದೆವ್ವವೆ ಅಲ್ಲ ಹಾಗಾದರೆ ಆ ಹುಡುಗಿ ಯಾರು? ಮನುಷ್ಯ ಶರವೇಗದಲ್ಲಿ ಚಲಿಸಲಿಕೆ ಅಸಾಧ್ಯ ಹಾಗಾದರೆ ನನಗೆ ಕಾಣಿಸಿದ ಇನ್ನೇರಡು ದೇಹ ಯಾರದ್ದು ಅವು ಅಷ್ಟು ವೇಗವಾಗಿ ಚಲಿಸಿದ್ದು ಹೇಗೆ?ಇಲ್ಲಿ ದೆವ್ವಗಳಿಗು ಮನುಷ್ಯರಿಗೂ ಸಂಬಂಧ ಇದೀಯಾ?????????!

 

  ರಾಹುಲ್ ಮನೆಗೆ ಬರುತ್ತಾನೆ ಆಗಲೇ ತಾನು ಮಾಡಿದ ಉಪಾಯದ್ದಂತೆ ಮೈಕ್ರೋ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ನೋಡತೋಡಗುತ್ತಾನೆ ಪ್ರತಿಯೊಂದು ಕ್ಷಣವನ್ನೂ ಸಹ ತುಂಬಾ ಗಮನವಿಟ್ಟು ನೋಡುತ್ತಾನೆ.ಅಲ್ಲಿ ರಾಹುಲನನ ಹಿಂದೆ ಎರೆಡು ದೇಹ ಬಂದಾಗ ಆ ಹೆಣ್ಣು ದೆವ್ವ ಅಲ್ಲಿಂದ ಓಡಿಹೋಗಿರೋದು ಕಂಡುಬರುತ್ತದೆ.ಆ ಹೆಣ್ಣು ದೇಹದ ಕುತ್ತಿಗೆ ಭಾಗದಲ್ಲಿ 'R' ಎಂಬ ಅಕ್ಷರದ ಅಚ್ಚೆ ಇರುವುದು ಕಂಡುಬರುತ್ತದೆ.ಇದು ರಾಹುಲನನಿಗೆ ಗೆಲುವು ತಂದುಕೊಡುತ್ತಾ????

 

  ರಾಹುಲನಿಗೆ ಆ ಲೇಟರ್ ಮೇಲೂ ಅನುಮಾನ ಬಂದು ತನ್ನ ಸ್ನೇಹಿತ ಪೋಲಿಸ ಅಧಿಕಾರಿ ಮೂಲಕ ಕೈಬರಹದ ಪರೀಕ್ಷೆ ಮಾಡಿಸುತ್ತಾನೆ.ಅಲ್ಲಿ ತಿಳಿದು ಬಂದಿದು ಆ ಕೈಬರಹ ಕಿರಣನದು ಅಲ್ಲವೆಂಬ ಮಾಹಿತಿ.ಹಾಗಾದರೆ ಆ ಕೈಬರಹ ಯಾರದ್ದು????????? ಮನೋಜನ ಮೇಲೆ ಅನುಮಾನ ಬಂದು ಮನೋಜ ಮತ್ತು ವಿಜಯ್ ಇಬ್ಬರದು ಕೈಬರಹ ಪರೀಕ್ಷೆ ಮಾಡುತ್ತಾನೆ.ಆ ಕೈ ಬರಹ ಅವರದ್ದು ಆಗಿರಲ್ಲ, ಹಾಗಾದರೆ ಆ ಲೇಟರಿನ ಸೂತ್ರದಾರ ಯಾರು???

ರಾಹುಲ್:ಮನೋಜ ನಿಜ ಹೇಳು ನಿಂಗೆ ಆ ಲೇಟರ್ ಎಲ್ಲಿ ಸಿಕ್ಕಿತು?

ಮನೋಜ:ನಿಜ ಕಿರಣನ ಮನೆಯಲ್ಲಿಯೇ ಸಿಕ್ಕಿದು ನಾನೇಕೆ ನಿನಗೆ ಸುಳ್ಳು ಹೇಳಲಿ????

ರಾಹುಲ್: Something is wrong I will find that something.

 

  ಆ ದಿನ ರಾತ್ರಿ ರಾಹುಲನ ಮನೆಯಲ್ಲಿ ಯಾರೂ ಇರುವುದಿಲ್ಲ.ಒಂಟಿಮನೆ ಒಳಗೆ ಮದುವೆಯಾಗುತ್ತಿರುವ ಮುದ್ದಾದ ಜೋಡಿ,ಕಣ್ಣೋಟದಲ್ಲೇ ಮಾಡುತ್ತಿವೆ ಮೋಡಿ.ರಾತ್ರಿ ಸಮಯ ಬೇರೆ ರಾಹುಲನಿಗೆ ತನ್ನ ಭಾವಿಪತ್ನಿಯನ್ನು ಮುದ್ದಾಡುವ ಆಸೆ, ಜ್ಯೋತಿ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿರುತ್ತಾಳೆ ತುಂಟ ರಾಹುಲ್ ಕಳ್ಳಬೆಕ್ಕಿನ ಹಾಗೆ ಜ್ಯೋತಿಯ ಹಿಂದೆ ಹೋಗಿ ತನ್ನ ಕೈಯಿಂದ ಅವಳ ಸೊಂಟವನ್ನು ಹಿಡಿಯುತ್ತಾನೆ, ಗಾಬರಿಯಿಂದ ಮುಂದೆ ತಿರುಗುತ್ತಾಳೆ,ಎರಡು ತುಟಿಗಳ ಸಮ್ಮಿಲನ ಆಗುತ್ತವೆ.ನಂತರ ರಾಹುಲ ಜ್ಯೋತಿಯ ಗುತ್ತಿಗೆಗೆ ಚುಂಬಿಸಲು ಹೋದಾಗ ಅಲ್ಲಿ ಏನನ್ನೋ ಕಂಡು ಗಾಬರಿಗೊಳ್ಳುತ್ತಾನೆ ಏನದು? ಅಷ್ಟರಲ್ಲಿ ಕರೆಂಟ್ ಹೋಗತ್ತೆ ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಒಂದು ಕೊಲೆ ನಡೆಯುತ್ತದೆ,ಯಾರು ಸಾವನ್ನು ಒಪ್ಪುತ್ತಾರೆ??????

 

  ಕರೆಂಟ್ ಹೋಗಿ ೨ ನಿಮಿಷದಲ್ಲಿ ವಾಪಸ್ ಬರತ್ತೆ, ಆದರೆ ರಾಹುಲನಿಗೆ ಸಿಡಿಲೇ ಬಡಿದಂತಾಗುತ್ತದೆ.ಯಾಕೆಂದರೆ ಅವನ ಕಣ್ಣೇದುರು ಇದ್ದಿದ್ದು ಜ್ಯೋತಿಯ ಹೆಣ!!! ಅವನಂತು ಆ ಕೊಲೆ ಮಾಡಿಲ್ಲ ಹಾಗಾದರೆ ಮಾಡಿದವರಾರು? ಇವರಿಬ್ಬರ ನಡುವೆ ಎರಡೇ ನಿಮಿಷದಲ್ಲಿ ಮೂರನೇ ವ್ಯಕ್ತಿ ಆಗಮನವಾಯಿತೇ?ಯಾರವರು?ಅವರೇಕೆ ಜ್ಯೋತಿಯನ್ನು ಕೊಂದರು? ರಾಹುಲನ ಮನದಲ್ಲಿ ಸಾವಿರಾರು ಪ್ರಶ್ನೆ.ಅಷ್ಟಕ್ಕೂ ರಾಹುಲ್ ಜ್ಯೋತಿಯ ಕುತ್ತಿಗೆಯಲ್ಲಿ ನೋಡಿದ್ದು ಆ ಹೆಣ್ಣು ದೆವ್ವದ ಕುತ್ತಿಗೆಯಲ್ಲಿರುವ ತರಹದೇ 'R' ಅಕ್ಷರದ ಅಚ್ಚೆ.ಈಗ ರಾಹುಲನಿಗೆ ತಿಳಿದಿದ್ದು ಆ ಹೆಣ್ಣು ದೆವ್ವದ ವೇಷದಲ್ಲಿದವಳು ಜ್ಯೋತಿ,ಇವಳು ಈ ನಿಗೂಢ ರಹಸ್ಯದ ಒಂದು ಪಾತ್ರದಾರಿ ಇವತ್ತು ಇವಳು ಸತ್ಯ ಹೇಳುತ್ತಾಳೆ ಎಂಬ ಕಾರಣಕ್ಕೆ ಇವಳನ್ನು ಕೊಲೆ ಮಾಡಲಾಗಿದೆ.ಆದರೆ ನಮ್ಮಿಬ್ಬರ ಮಧ್ಯೆ ನಡೆಯುತ್ತಿರುವುದು ಅವರಿಗೆ ಹೇಗೆ ತಿಳಿಯಿತು? ರಾಹುಲ್ ಜ್ಯೋತಿ ದೇಹವನ್ನೇಲ್ಲಾ ಪರೀಕ್ಷಿಸುತ್ತಾನೆ ಅಲ್ಲಿ ಅವನಿಗೆ ಸಿಕ್ಕಿದ್ದು ಕಿರಣನ ಮನೆಯಲ್ಲಿ ಸಿಕ್ಕ ತರಹದೇ ಮೈಕ್ರೋ ಕ್ಯಾಮೆರಾ ಈ ಕ್ಯಾಮೆರಾ ಮೇಲೂ ಅದೇ ತರಹದ ಎಮೋಜಿ ಮತ್ತು ಮೈಕ್ ಹಾಗಾದರೆ ಇಲ್ಲಿ ನಡೆಯುತ್ತಿರುವುದನ್ನೆಲ್ಲಾ ಯಾರೋ ದೂರದಲ್ಲಿಯೇ ಕುಳಿತುಕೊಂಡು ನೋಡುತ್ತಿದ್ದಾರೆ? ಯಾರವರು???

 

  ರಾಹುಲನಿಗೆ ಅರ್ಥವಾಗಿದ್ದು ಇದರ ಹಿಂದೆ ಒಂದು ಗುಂಪೆ ಇದೆ ಇವಳು ಅದರ ಒಂದು ಪಾತ್ರದಾರಿ ಅಷ್ಟೇ ಹಾಗಾದರೆ ಈ ಗುಂಪಿನ ಮಾಸ್ಟರ್ ಮೈಂಡ್ ಯಾರು??? ಜ್ಯೋತಿಯ ಸಾವಿಗೆ ರಾಹುಲ್ ಭಾವುಕನಾಗುತ್ತಾನೆ.ಸಾಕ್ಷಾಧಾರಗಳು ಇಲ್ಲದ ಕಾರಣ ಈ ಕೊಲೆಯನ್ನು ದೆವ್ವವೆ ಮಾಡಿದೆಂದು ಎಲ್ಲರೂ ನಂಬುತ್ತಾರೆ.ಆದರೆ ರಾಹುಲ್ ಈ ರಹಸ್ಯ ಭೇದಿಸಲು ದಿಟ್ಟ ನಿರ್ಧಾರ ಮಾಡುತ್ತಾನೆ.

 

  ರಾಹುಲನಿಗೆ ಸ್ವಾಮೀಜಿಯ ಮೇಲೆ ಬಲವಾದ ಅನುಮಾನ ಅದಕ್ಕಾಗಿ ಅವನ ಕೈಬರಹವನ್ನು ಸಹ ಪರೀಕ್ಷೆಗೆ ಕಳಿಹಿಸುತ್ತಾನೆ.ಪರೀಕ್ಷೆಯ ವರದಿ ಬರಬೇಕಾಗಿದೆ.

 

  ಒಂದಿನ ರಾತ್ರಿ ರಾಹುಲ್ ಏನಾದರೂ ಸುಳಿವು ಸಿಗಬಹುದೆಂದು ಕಾಡಿಗೆ ಹೋಗುತ್ತಾನೆ ಅಲ್ಲಿ ಇವನು ಕಂಡಿದು ಭಯಂಕರವಾದದ್ದು ದೆವ್ವದ ರೂಪದಲ್ಲಿ ಇಬ್ಬರು ಯಾವುದೋ ವ್ಯಕ್ತಿಯನ್ನು ಕೊಲೆ ಮಾಡುತ್ತಿದ್ದಾರೆ.ಇನ್ನೊಬ್ಬ ಸಾಮಾನ್ಯ ವ್ಯಕ್ತಿಯಂತೆ ನಿಂತಿದ್ದಾರೆ ಮೂಖಕ್ಕೆ ವಿಚಿತ್ರ ಮೂಖವಾಡ ಕೈಯಲ್ಲಾ ರಕ್ತ ರಾಹುಲ್ ಕಾರಿನಿಂದ ಇಳಿದು ಅವನ ಬಳಿ ಹೋದನು ಆ ವ್ಯಕ್ತಿ ಮುಗಿತು ನಿನ್ನ ಕಥೆಯೆಂದು ಎರಡು ಕೈಗಳಿಂದ ರಾಹುಲನ ಕುತ್ತಿಗೆ ಹಿಡಿದು ಮೇಲೆತ್ತುವನು ರಾಹುಲ್ ಒದೆಯಬಾರದ ಜಾಗಕ್ಕೆ ಆ ವ್ಯಕ್ತಿ ಗೆ ಒದ್ದು ತಪ್ಪಿಸಿಕೊಂಡು ಅಲ್ಲಿಂದ ಮನೆಸೇರಿದನು.ಮನೆಗೆ ಬಂದು ಚೇತರಿಸಿಕೊಂಡು ಕುರುತ್ತಾನೆ.ಅವನೆದುರೆ ಕನ್ನಡಿ ಇರುತ್ತದೆ ರಕ್ತದ ಕೈಯಿಂದ ಮುಟ್ಟಿರುವುದರಿಂದ ಬೆರಳುಗಳ ಅಚ್ಚೆ ಮೂಡಿರುತ್ತದೆ ರಾಹುಲ್ ಗಮನದಿಂದ ನೋಡಿದಾಗ ಆ ವ್ಯಕ್ತಿಯ ಎಡಗೈ ಹೆಬ್ಬೆರಳು ಅರ್ಧ ಮಾತ್ರ ಇರುವುದು ಗೊತ್ತಾಗುತ್ತದೆ ಈ ಅರ್ಧ ಹೆಬ್ಬೆರಳು ಕಥೆಗೆ ಹೇಗೆ ಟ್ವಿಸ್ಟ್ ಕೊಡತ್ತೆ????

 

ರಾಹುಲನಿಗೆ ಸಿಕ್ಕ ಬಹುದೊಡ್ಡ ಸುಳಿವು ಈ ಅರ್ಧ ಹೆಬ್ಬೆರಳು, ರಾಹುಲ್ ಯೋಚನೆ ಮಾಡೋಕೆ ಶುರು ಮಾಡುತ್ತಾನೆ.(ಮನದಲ್ಲಿ)ಈ ಅರ್ಧ ಹೆಬ್ಬೆರಳು ಇರೋ ವ್ಯಕ್ತಿಯನ್ನು ನಾನು ಎಲ್ಲಿಯೋ ಒಮ್ಮೆ ನೋಡಿದ್ದೇನೆ ಎಲ್ಲಿ?ಯಾರು ಆತ?ಕಮಾನ್ ರಾಹುಲ್ ನೆನ್ಪು ಮಾಡ್ಕೋ ಕಮಾನ್,ಶೆಟ್ ನೆನಪಾಗ್ತಿಲ್ಲ ಆದರೆ ನೋಡಿರುವುದಂತು ನಿಜ ಎಲ್ಲಿ???.

 

  ಮರುದಿನ ಬೆಳಿಗ್ಗೆ ಕೈಬರಹದ ವರದಿ ಬರುತ್ತದೆ ಅದು ಸ್ವಾಮೀಜಿಯದು ಆಗಿರುವುದಿಲ್ಲ.(ರಾಹುಲ್ ಮನದಲ್ಲಿ) ಹಾಗಾದರೆ ಸ್ವಾಮೀಜಿ ಈ ಮಾಸ್ಟರ್ ಮೈಂಡ್ ಅಲ್ವಾ? ಅಕಸ್ಮಾತ್ ಸಿಕ್ಕಿ ಹಾಕಿಕೊಳ್ಳುವ ಭಯದಿಂದ ಬೇರೆ ಯಾರ ಕೈಯಿಂದಲೋ ಬರಿಸಿದ್ದರೆ,ಮೊದಲೇ ಒಂದು ಸುಳಿವು ಕೊಡದೆ ಸಿಕ್ಕ ಸುಳಿವುಗಳನ್ನು ಕೊಲ್ಲುತ್ತಿರುವ ವ್ಯಕ್ತಿ ಆತ ಇಲ್ಲಿ ಯಾರನ್ನು ನಂಬುವುದು ಯಾರನ್ನು ಬೀಡುವುದು.ಒಂದು ಸಲ ಸ್ವಾಮೀಜಿಯ ಎಡಗೈ ಪರೀಶಿಲನೆ ಮಾಡಬೇಕು.ರಾಹುಲ್ ಮನೋಜನ ಬಳಿ ಹೋಗುವನು

ರಾಹುಲ್:ಮನೋಜ ಸ್ವಾಮೀಜಿಯನ್ನು ಬೇಟಿ ಮಾಡಿಕೊಂಡು ಬರೋಣ.

ಮನೋಜ:ಯಾಕೋ

ರಾಹುಲ್:ಹಾಗೆ ಸುಮ್ಮನೆ

ಮನೋಜ:ಅವರು ಊರಿನಲ್ಲಿ ಇಲ್ವಂತೆ ಕೆಲಸದ ಮೇಲೆ ಬೆಂಗಳೂರಿಗೆ ಹೋಗಿದ್ದಾರಂತೆ.

ರಾಹುಲ್:ಹೌದಾ?ಯಾವಾಗ?

ಮನೋಜ: ಬಹುಶಃ ಮುಂಜಾನೆ.

ರಾಹುಲ್:ಯಾವಾಗ ಬರುತ್ತಾರೆ?

ಮನೋಜ: ಒಂದು ವಾರ ಆಗಬಹುದು.ಯಾಕೆ?

ರಾಹುಲ್:ಹಾ ತಾಯತ್ ಮಾಡ್ಸೋಕೆ.

ಮನೋಜ: ದಯವಿಟ್ಟು ದೆವ್ವ ಹಿಂದೆ ಹೋಗ್ಬೇಡ, ನಿಂಗೆ ಅಪಾಯ.

ರಾಹುಲ್:ಹೋಗಲೋ.

 

  ರಾಹುಲ್ ಮನೆಗೆ ಮರುಳುವ ಹಾದಿಯಲ್ಲಿ ಒಂದು ಕಾರಿನಲ್ಲಿಸ್ವಾಮೀಜಿಯನ್ನು ನೋಡುತ್ತಾನೆ.ಹಾಗಾದರೆ ಮನೋಜ ಹೇಳಿದ್ದು ಸುಳ್ಳಾ?ಅವನೇಕೆ ಸುಳ್ಳು ಹೇಳಿದ? ರಾಹುಲ್ ಆ ಕಾರನ್ನು ಬೆನ್ನು ಹತ್ತಿದ ಸಂಜೆ ವೇಳೆ ಮುಂ ಬಿಸದೆ ಹೋದಂತೆ ಸ್ವಾಮೀಜಿ ಕಾರು ಮಾಯ!ಎಲ್ಲಿ ಹೋಯಿತು?ಫಲವಿಲ್ಲದೆ ರಾಹುಲ್ ಹಿಂದಿರುಗುವಾಗ ಕತ್ತಲೆ ರಾಹುಲನ ಕಾರಿನ ಮುಂದೆ ದೆವ್ವದ ರೂಪದಲ್ಲಿ ಒಂದು ದೇಹ ಕಾಡಿನ ಪ್ರದೇಶ ರಾಹುಲ್ ಕಾರಿನಿಂದ ಇಳಿಯುವನು ದೆವ್ವ ಮೂಖ ಕೆಳಗೆ ಮಾಡಿ ಮಾತನಾಡೋಕೆ ಶುರು.

ದೆವ್ವ:ಲೋ ಕಂದ ಬದ್ಕೋ ಆಸೆ ಇಲ್ವೇನಪ್ಪಾ? ಯಾಕೋ ಹೀಗೆ ಮಾಡ್ತೀಯಾ?

ರಾಹುಲ್: ಯಾರೋ ನೀನು?

ರಾಹುಲ್ ಪಕ್ಕದಲ್ಲಿದ್ದ ಒಂದು ಕಟ್ಟಿಗೆಯನ್ನು ತೆಗೆದು ಆ ದೇಹಕ್ಕೆ ಎಸೆದನು ಅದು ಕೆಳಗೆ ಬೀಳುತ್ತದೆ ಬಿದ್ದ ತಕ್ಷಣ ಮೇಲೆ ಹಾರಾಡೋಕೆ ಶುರು ಆದರೆ ಯಾವ ಕಡೆ ಹೋಗಬೇಕೆಂದು ಗೊತ್ತಾಗಲಿಲ್ಲ.ರಾಹುಲ ಮುಂದೆ ಹೋಗಿ ಆ ದೇಹದಿಂದ ಬಿದ್ದ ತುಣುಕುಗಳನ್ನು ನೋಡಿದನು.ಅಲ್ಲಿ ಅವನಿಗೆ ಸಿಕ್ಕಿದ್ದು ೪ ಮೈಕ್ರೋ ಕ್ಯಾಮೆರಾ ಮತ್ತು ಒಂದು ಸ್ಪೀಕರ್ ಹಾಗಾದರೆ ಅದು ದೆವ್ವಾನು ಅಲ್ಲ ಮನುಷ್ಯನು ಅಲ್ಲ ಒಂದು ಗೊಂಬೆ ಅದನ್ನ ಕ್ಯಾಮೆರಾ ಮೂಲಕ ದೂರದಿಂದ ಯಾರೋ ಆಪರೇಟ ಮಾಡುತ್ತಿದ್ದಾರೆ ಆ ದೇಹಕ್ಕೆ ಎತ್ತ ಸಾಗುವುದು ಗೊತ್ತಾಗದೆ ಕೆಳಗೆ ಬೀಳುತ್ತದೆ.ಮುಟ್ಟಿ ನೋಡಿದನು ಅದು ಒಂದು ಗೊಂಬೆ ಟೆಕ್ನೋಲಜಿ ಮೂಲಕ ರಿಮೋಟ್ ಇಂದ ಮೂವ ಮಾಡಿ ಎಲ್ಲೋ ಕುಳಿತು ಕೊಂಡು ಮಾತನಾಡಿ ಸ್ವೀಕರ್ ಮೂಲಕ ಈ ಗೊಂಬೆ ಮಾತನಾಡುವ ಹಾಗೆ ಮಾಡಿದ್ದಾರೆ ವಾವ್!!! ಮಾಸ್ಟರ್ ಮೈಂಡ್ ಐ ಲವ್ ಯುರ್ ಹಾರ್ಡ ವರ್ಕ ಸೂನ್ ಐ ವಿಲ್ ಮೀಟ ಯು.ಮರದ ಹಿಂದೆ ಯಾರೋ ನಿಂತ ಹಾಗೆ ಕಂಡಿತು ರಾಹುಲ್ ಅತ್ತ ಓಡಿದನು ಅಷ್ಟರಲ್ಲಿ ಯಾರೋ ಆ ವ್ಯಕ್ತಿಯನ್ನು ಶೂಟ್ ಮಾಡಿದರು.ಆ ವ್ಯಕ್ತಿಯ ಕತ್ತಲ್ಲಿ 'I'ಅಕ್ಷರದ ಅಚ್ಚೆ ಏನಿದು???

 

 ಪ್ರಾಣ ಕಳೆದುಕೊಂಡ ವ್ಯಕ್ತಿ ರಾಹುಲನಿಗೆ ಅಪರಿಚಿತ ಆದರೆ 'I' ಅಕ್ಷರ ರಾಹುಲನಿಗೆ ಇನ್ನೊಂದು ಸುಳಿವಾ?ಆ ವ್ಯಕ್ತಿ ಯಾರು ? ಅಲ್ಲೇನು ಮಾಡುತ್ತಿದ? ಆತನನ್ನು ಯಾರು ಕೊಂದರು?ಯಾಕೆ ಕೊಂದರು?. ಸುಳಿವು ಸಿಕ್ಕವರನ್ನೇಲ್ಲಾ ಕೊಲ್ಲುತ್ತಿರುವ ಆ ಮಾಸ್ಟರ್ ಮೈಂಡ್ ಯಾರು???.ರಾಹುಲ ಮನೆಗೆ ಹೋಗುವನು.ಚಿಂತಿಸಿದನು ಮೊದಲು'R' ಇವಾಗ 'I' ಏನಿದರ ಗುಟ್ಟು? ಹಾಗೆ ನಿದ್ರೆಗೆ ಜಾರುವನು.೧೫ ದಿನ ರಜೆ ತೆಗೆದುಕೊಂಡಿದ್ದ ರಾಹುಲ ತಿಂಗಳು ಕಳೆಯಲು ಬಂದರು ಇನ್ನೂ ಪತ್ತೆ ಮಾಡಿಲ್ಲ.

 

 ‌ಮರುದಿನ ರಾಹುಲ್, ವಿಜಯ್ ಮತ್ತು ಮನೋಜ ಮಾತನಾಡುತ್ತಿರುತ್ತಾರೆ.

ಮನೋಜ: ರಾಹುಲ್ ನಿನ್ನೆ ದೆವ್ವ ಮತ್ತೊಂದು ಕೊಲೆ ಮಾಡಿದೆ.

ರಾಹುಲ್:ಅದು ದೆವ್ವ ಅಲ್ಲ, ಮನುಷ್ಯ ದೆವ್ವ ಅದಿರಲಿ ಆ ವ್ಯಕ್ತಿಯ ಕುತ್ತಿಗೆ ಮೇಲೆ 'I' ಅಂತ ಇತ್ತು ಏನದು?

ಮನೋಜ:ಅದಾ ಅವನ ಹೆಸರು ಇರ್ಷಾದ್ (Irshad) ಅದಿಕ್ಕೆ I.

ರಾಹುಲ್:ಹಾ(ಹಾಗೆ ವಿಜಯನನ್ನು ನೋಡುತ್ತಿರುವಾಗ ಅವನ ಕತ್ತಲ್ಲಿ ಏನು ಕಂಡಂತೆ ಆಗುತ್ತದೆ ಮುಂದೆ ಹೋಗಿ ನೋಡಿದಾಗ 'V' ಅಕ್ಷರದ ಅಚ್ಚೆ)ಏನಿದು ವಿಜಯ 'V'?

ವಿಜಯ್:ಇದಾ ನನ್ನ ಹೆಸರು ಕಣೋ.

ರಾಹುಲ್: ಹಾಗಾದರೆ ಜ್ಯೋತಿ ಯಾಕೆ 'R' ಅಕ್ಷರ?

ವಿಜಯ್: ಅಯ್ಯೋ ಪೆದ್ದಾ ನಿನ್ನ ಹೆಸರು ಕಣೋ, ಪ್ರೀತಿಯಿಂದ ಹಾಕಿಸಿಕೊಂಡಿದ್ದಾಳೆ ಅಷ್ಟೇ.

ರಾಹುಲ್:(ಎಲ್ಲೋ ಏನೋ ಮಿಸ್ ಹೋಡಿತಿದೆ ಏನದು? R,I,V ಒಂದೇ ಗಾತ್ರ ಹೇಗೆ, ಏನಿದು 🤔)ಮನೋಜ ಆ ಸ್ವಾಮೀಜಿ ಹೆಸರು ಏನು?

ಮನೋಜ:ಹಾ, ವೀರಭದ್ರ ಎಲ್ರೂ ಪ್ರೀತಿಯಿಂದ ವಿರು ಅಂತ ಕರೆತಾರೆ.

ರಾಹುಲ್:ಹಾ ವಿರು(ಹಾಗಾದರೆ VIR ವೀರು ಆಗತ್ತಾ ಇ ಅಕ್ಷರಗಳು ಮಾಸ್ಟರ್ ಮೈಂಡ್ ಹೆಸರಾ???) ನಿನ್ನೆ ಯಾಕೋ ಸುಳ್ಳು ಹೇಳಿದೆ?

ಮನೋಜ:ತಾಯಾನೆ ಊರವರು ಹಾಗೆ ಮಾತಾಡ್ತೀದ್ರು.

 

  ಮೂವರು ಮನೆಗೆ ಹಿಂದಿರುಗುವರು.ರಾಹುಲನಿಗೆ ಆ ಅಕ್ಷರಗಳ ಗೊಂದಲ ಅದು ವೀರುನಾ?ಅಥವಾ ಬೇರೆ ಏನಾದರೂ ಇದ್ದೀಯಾ? ಆ ವ್ಯಕ್ತಿಯ ಹೆಸರು ನಿಜಕ್ಕೂ ಇರ್ಷಾದಾ?ಇನ್ನೊಂದು ಅಕ್ಷರ ಸಿಕ್ಕರೆ ಪರಿಹಾರ.ಹಾಸಿಗೆ ಮೇಲೆ ಮಲಗಿಕೊಂಡು ಅರ್ಧ ಹೆಬ್ಬರಳಿನ ವ್ಯಕ್ತಿಯ ಬಗ್ಗೆ ಕಣ್ಣು ಮುಚ್ಚಿ ಯೋಚಿಸ ತೊಡಗಿದ ಎಸ್ ಎಲ್ಲಿ,ಯಾವಾಗ ಮತ್ತು ಯಾರು ಎಂಬುದು ನೆನಪಾಯ್ತು, ರಾಹುಲ್ ಖುಷಿಯಿಂದ ಕಣ್ಣು ತೆಗೆದ ಆದರೆ ಕಣ್ಮುಂದೆ ಮುಖವಾಡ ಧರಿಸಿದ ವ್ಯಕ್ತಿ ಚಾಕುವಿನಿಂದ ರಾಹುಲನ ಕೊಲ್ಲುವ ಪ್ರಯತ್ನ ರಾಹುಲ ಗಾಬರಿಯಾದ ಆದರೂ ಅವನೊಡನೆ ಹೋರಾಡಿ ಆತನನ್ನು ಕಟ್ಟಿ ಹಾಕಿದ.ಇತನ ಕತ್ತಿನಲ್ಲೂ ಒಂದು ಅಕ್ಷರ ಸಿಗುತ್ತೆ,ಏನದು?ಯಾರಾತ??? ರಾಹುಲ್ ಅವನನ್ನು ಒಂದೇ ಬಾರಿ ನೋಡಿರುತ್ತಾನೆ.ಆ ಅಕ್ಷರಗಳ ಸುಳಿವು ಮತ್ತು ಹೆಬ್ಬರಳಿನ ವ್ಯಕ್ತಿ ಒಬ್ನೇನಾ? ಬೇರೆ ಬೇರೆನಾ???

 

  ಆ ಮಾಸ್ಟರ್ ಮೈಂಡ್ ಸ್ವಾಮೀಜಿನಾ?ಆ ಅಕ್ಷರ 'U' ಆ? ಅಥವಾ ಬೇರೆನಾ?

 

ರಾಹುಲನನ್ನು ಕೊಲ್ಲಲ್ಲು ಬಂದ ವ್ಯಕ್ತಿ ಬೇರೆ ಯಾರು ಅಲ್ಲ ಮನೋಜ,ಅವನ ಕುತ್ತಿಗೆ ಮೇಲೆ ಇದ್ದ ಅಚ್ಚೆ 'A',ರಾಹುಲನಿಗೆ ಉಳಿದ ಕೆಲಸ ಮಾಸ್ಟರ್ ಮೈಂಡ್ ನಾ ಹಿಡಿಯೋದು.

ರಾಹುಲ್:ಯಾಕೋ ಮನೋಜ?ನನಗೆ ಮೊದಲೇ ಅನುಮಾನ ಇತ್ತು,ಹೇಳು ನಿಮ್ಮ ಮಾಸ್ಟರ್ ಮೈಂಡ್ ಯಾರು?

ಅಷ್ಟೇ ಬಾಂಬ್ ಒಂದು ಸ್ಪೋಟಗೊಳ್ಳತ್ತೆ ಅದು ಇದ್ದಿದ್ದು ಮನೋಜನ ಬಳಿ,ಮನೋಜನ ದೇಹ ಛಿದ್ರ ಛಿದ್ರವಾಗಿ ಹೋಗುತ್ತದೆ.ರಾಹುಲನಿಗೆ ಆಶ್ಚರ್ಯವಾದರೂ ಹೊಸದೆನ್ನಲ್ಲಾ.ಆದರೆ ನನಗೆ ಆಗಲೇ ಮಾಸ್ಟರ್ ಮೈಂಡ್ ಯಾರೆಂದು ತಿಳಿದಿದೆ.ಆದರೆ ಈ ಅಕ್ಷರಗಳೇನು "R,I,V,A" ರಾಹುಲ್ ಈ ಅಕ್ಷರಗಳನ್ನು ಜೋಡಿಸ್ತಾನೆ ಆಗ ಸಿಕ್ಕ ಹೆಸರು "RAVI" ರಾಹುಲ್ (ಮನದಲ್ಲಿ) ಯಾರಿದು ರವಿ?

ಆ ಅರ್ಧ ಹೆಬ್ಬೆರಳಿನ ವ್ಯಕ್ತಿಯ ಹೆಸರು ರವಿಯಾ?ನೋಡಿ ಬಿಡೋಣ.

 

  ರಾಹುಲನಿಗೆ ನೆನಪಾದ ದೃಶ್ಯ ಹಿಂದೆ ಒಮ್ಮೆ ಸ್ವಾಮೀಜಿಯನ್ನು ಭೇಟಿಮಾಡಲು ಬಂದಾಗ(ಭಾಗ ೩ ರಲ್ಲಿ)ಅಲ್ಲಿ ಒಬ್ಬ ಅರ್ಧ ಹೆಬ್ಬೆರಳಿನ ವ್ಯಕ್ತಿಯನ್ನು ನೋಡಿರುತ್ತಾನೆ. ರಾಹುಲ್ ವೇಷ ಧರಿಸಿಕೊಂಡು ವೀರಭದ್ರ ಸ್ವಾಮೀಜಿ ಇರುವ ದೇವಸ್ಥಾನಕ್ಕೆ ಅರ್ಧ ಹೆಬ್ಬೆರಳಿನ ವ್ಯಕ್ತಿಯನ್ನು ಹುಡುಕಿಕೊಂಡು ಹೋಗುವನು.ದೇವಸ್ಥಾನಕ್ಕೆ ಹೋಗಿದ್ದು ಸ್ವಾಮೀಜಿ ನೋಡಲು ಅಲ್ಲ ಹೊರಗೆ ಭಿಕ್ಷೆ ಬೇಡುವ ಕುಂಟ ರವಿಯನ್ನು ನೋಡಲು.ಆದರೆ ರಾಹುಲನಿಗೆ ಆತನ ಹೆಸರು ಗೊತ್ತಿರುವುದಿಲ್ಲ.ವೇಷ ಧರಿಸಿದ ಕಾರಣ ರಾಹುಲನನ್ನು ಕಂಡು ಹಿಡಿಯಲು ಭಿಕ್ಷುಕನಿಗೆ ಸಾಧ್ಯವಿಲ್ಲ.

 

ರಾಹುಲ್ ರವಿಯ ಮುಂದೆ ನಿಂತು

ರಾಹುಲ್:ನಿನ್ನ ಹೆಸರೇನು?

ರವಿ:ರವಿ, ದಯಮಾಡಿ ಭಿಕ್ಷೆ ಹಾಕಿ ಸ್ವಾಮಿ 🙏.

ರಾಹುಲ್: ಭಿಕ್ಷೆ, ವಾವ್ ಡಿಯರ್ ಮಾಸ್ಟರ್ ಮೈಂಡ್ ವಾವ್ ನಾನು ರಾಹುಲ್, ನಾನು ಮಾಸ್ಟರ್ ಮೈಂಡ್ ಯಾರೋ ಆಗಿರುತ್ತಾರೆಂದು ಕೊಂಡರೆ ನೀನು ಒಬ್ಬ ಭಿಕ್ಷುಕ ಮೆಚ್ಚಿದ ಮಗನೇ ನಿನ್ನ.ಅದಕ ಒಂದು ಕಾಲಿಲ್ಲದ ಮನುಷ್ಯ ಶಹಬ್ಬಾಸ್.ಸಾಕು ಭಿಕ್ಷೆ ಎತ್ತಿದ್ದು ಜೈಲಿನಲ್ಲಿ ಮುದ್ದೆ ತಿನ್ನುವಂತೆ ನಡೆ.

ಅವನನ್ನು ಅಲ್ಲಿಂದ ವಿಜಯನ ಬಳಿ ಕರೆತಂದು.(ಆಗಲೇ ರಾಹುಲ್ ವಿಜಯನನ್ನು ತಂದು ಕಟ್ಟಿಹಾಕಿರುತ್ತಾನೆ)

ರಾಹುಲ್:ಹೇಳೋ ಯಾರ್ಯರು ಇದೀರಾ ನಿಮ್ಮ ಗುಂಪಿನಲ್ಲಿ.

ರವಿ:ನಾನು, ವಿಜಯ್,ಮನೋಜ, ಜ್ಯೋತಿ, ನಿತೀಶ್.

ರಾಹುಲ್: ನಿತೀಶ್ ಯಾರೋ?ಓಹೋ ಇರ್ಷಾದ್ ಎಂದು ಹೇಳಿದ್ದು ನೀತಿಶ್?

ವಿಜಯ್: ಹೌದು ರಾಹುಲ್,ನಾವು ಈ ಕೆಲಸವನ್ನು ದುಡ್ಡಿಗಾಗಿ ಮಾಡಿದ್ದು.ಅವರನ್ನು ಕೊಂದು ಮನೆಯಲ್ಲಿದ್ದ ಹಣ, ಒಡವೆ ಎಲ್ಲ ಕದಿತಾ ಇದ್ದವಿ ಇದು ಕಿರಣನಿಗೆ ಗೊತ್ತಾಯಿತು ಅದಕ್ಕೆ ಅವನನ್ನು ಕೊಂದ್ವಿ.

ರಾಹುಲ್: ಸ್ವಾಮೀಜಿ ಇಲ್ಲವಾ ನಿಮ್ಮ ಗುಂಪಿನಲ್ಲಿ?ಯಾಕೆ ನಿಮ್ಮ ಗುಂಪಿನವರನ್ನೆ ಕೊಂದಿರಿ?

ರವಿ: ಸ್ವಾಮೀಜಿ ಇಲ್ಲ,ನಾವೆ ತನಿಖೆಯ ಹಾದಿ ತಪ್ಪಿಸಲು ಅವನ ಮೇಲೆ ಅನುಮಾನ ಬರುವ ಹಾಗೆ ಮಾಡಿದೇವು. ಯಾಕೆಂದರೆ ದೆವ್ವದ ಆಟಕ್ಕೆ ಲಕ್ಷ ಲಕ್ಷ ಖರ್ಚು ಮಾಡಿದ್ದೀವಿ ಆ ರಹಸ್ಯ ಬಯಲು ಆಗಬಾರದೆಂದು.

ರಾಹುಲ್:ಇವಾಗ ಆಯಿತಲ್ಲ,ಕಂಬಿಯನಿಸಿ.

 

  ತಪ್ಪು ಮಾಡಿದವರು ಜೈಲು ಸೇರಿದರು,ಊರವರೆಲ್ಲಾ ರಾಹುಲನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೊನೆಗೂ ನಿಗೂಢ ರಹಸ್ಯ ಬಯಲು.

ಧನ್ಯವಾದಗಳು

 

 

 

 

 

 

 

 

 

 

 

 

 

 

Enjoyed this article? Stay informed by joining our newsletter!

Comments
Ramzan Nadaf - 28,ಅಕ್ಟೋ,2021, ಗುರು,10:26 ಪೂರ್ವಾಹ್ನ - Add Reply

Super story intresting

You must be logged in to post a comment.

You must be logged in to post a comment.

About Author