ರಕ್ಷಿತ್ ಶೆಟ್ಟಿ ಅವರು ಉಳಿದವರು ಕಂಡಂತೆ ಸಿನಿಮಾದಲ್ಲಿ ಮೊದಲು ಹುಲಿ ಕುಣಿತದ ಬಗ್ಗೆ ನೈಜವಾದ ಚಿತ್ರಣ ನೀಡಿದರು. ಇದು ಬಹಳ ಜನರಿಗೆ ಇಷ್ಟವಾಯಿತು. ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿಯೂ ಕೂಡ ಹುಲಿ ಕುಣಿತದ ಕೆಲವು ದೃಶ್ಯಗಳಿದ್ದವು. ರಿಷಬ್ ಶೆಟ್ಟಿ ಅವರು ಒಂದು ಹೆಜ್ಜೆ ಇನ್ನು ಮುಂದುವರೆದು ಅವರ ಕಾಂತಾರ ಸಿನಿಮಾದಲ್ಲಿ ಕಂಬಳ ಮತ್ತು ಪಂಜುರ್ಲಿ ದೈವದ ಬಗ್ಗೆ ಸಿನಿಮಾದಲ್ಲಿ ಚಿತ್ರೀಕರಿಸಿರುವುದನ್ನು ಕನ್ನಡ ಚಿತ್ರರಂಗ ಇದು ಪ್ರಾದೇಶಿಕ ಭೂತ ಕೋಲ ನಂಬಿಕೆಗಳ ಸುತ್ತ ಹಣೆದಿರುವ ಕಥಾನಕ ಎಂದು ಆರಂಭದಲ್ಲಿ ಹೇಳಿದರು.
ಆದರೆ ಪಂಜುರ್ಲಿ ದೈವದ ಕೃಪೆಯೋ ಎನ್ನುವಂತೆ ಈ ಸಿನಿಮಾ ರಾಜ್ಯದಲ್ಲಿ ಅಷ್ಟೆ ಅಲ್ಲದೇ ತಮಿಳು ನಾಡು, ಅಂಧ್ರ ಪ್ರದೇಶದಲ್ಲಿಯೂ ಕೂಡ ಹಿಟ್ ಆಯಿತು. ಈಗ ಈ ಸಿನಿಮಾ ನೂರು ಕೋಟಿ ಕಲೆಕ್ಷನ್ ಮಾಡುವತ್ತ ಹೆಜ್ಜೆ ಹಾಕಿದೆ. ಇದು ಕನ್ನಡ ಸಿನಿಮಾ ರಂಗದ ಗೆಲುವು.
ಗೆಲುವು ಎನ್ನುವುದು ಸಾಮಾನ್ಯವಾಗಿ ಒಂದು ಟೀಮ್ ಆಗಿ ಇದ್ದವರಲ್ಲಿ ಭಿನ್ನಾಭಿಪ್ರಾಯ ಮೂಡಿಸಿ ಇಡಿಯ ಟೀಮ್ ಛಿದ್ರವಾಗಿ ಹೋಗುವುದಿದೆ. ಮುಂಗಾರು ಮಳೆಯ ನಂತರ ಗಾಳಿ ಪಠ ಸಿನಿಮಾ ಮಾಡುವಾಗ ಯೋಗರಾಜ್ ಪ್ರೀತಮ್ ಗುಬ್ಬಿ ಗೋಲ್ಡನ್ ಸ್ಟಾರ್ ಗಣೇಶ್ ಮೂವರ ಟೀಮ್ ಒಡೆದು ಛಿದ್ರವಾಯಿತು. ಹಾಗಾಗಿ ಗೆಲುವು ಎನ್ನುವುದು ಯಾವ ರೀತಿಯ ತಿರುವು ನೀಡಲು ಹೇಳಲಾಗದು. ಇದರ ನಡುವೆ ಮಾಧ್ಯಮಗಳು ಕೂಡ ಅನಗತ್ಯವಾಗಿ ಸ್ಟಾರ್ ನಟರ ಹೇಳಿಕೆ ಇಟ್ಟುಕೊಂಡು ವಿವಾದ ಮಾಡುವುದೂ ಇದೆ.
ಹಂಸಲೇಖ ಅವರ ಒಂದು ವಿವಾದತ್ಮಕ ಹೇಳಿಕೆಯಿಂದ ಒಂದೇ ದಿನದಲ್ಲಿ ಬ್ರೇಕಿಂಗ್ ನ್ಯೂಸ್ ನಂತೆ ಪ್ರಸಾರ ಮಾಡುವುದರ ಮೂಲಕ ಅದೊಂದು ದೊಡ್ಡ ವಿವಾದದ ಸ್ವರೂಪ ಪಡೆದುಕೊಂಡು ಕೊನೆಗೆ ಹಂಸಲೇಖ ಅವರು ಕ್ಷಮೆ ಕೇಳಬೇಕಾಯಿತು. ಅದೇ ರೀತಿಯಲ್ಲಿ ರಿಷಬ್ ಶೆಟ್ಟಿ ಅವರನ್ನು ವಿವಾದಕ್ಕೆ ಕಾರಣ ಆಗುವಂತಹ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಶೆಟ್ರಿಗೆ ಕರಾವಳಿಯನ್ನು ಬಿಟ್ಟು ಬೇರೆ ಕಥೆ ಮಾಡಲು ಬರುವುದಿಲ್ಲ ಎನ್ನುವ ಅಪವಾದ ಕೇಳಿ ಬಂತು.
ಒಂದು ಮಾಧ್ಯಮವೂ ಇನ್ನು ಮುಂದೆ ರಿಷಬ್ ಶೆಟ್ಟರ ಬಳಿ ಅವರು ಎದುರಿಸಿದ ಸವಾಲು ಮಾಡಿದ ಹೋರಾಟ, ಚಿತ್ರರಂಗದಲ್ಲಿನ ಇತ್ತೀಚೆಗೆ ಅವರು ಪಡೆದುಕೊಂಡ ಯಶಸ್ಸು, ಕಾಂತಾರ ಸಿನಿಮಾದ ಬಗ್ಗೆ ಪ್ರಶ್ನೆ ಕೇಳುವುದರ ಜೊತೆಗೆ ಇದ್ದಕ್ಕಿದ್ದ ಹಾಗೆ ರಿಷಬ್ ಶೆಟ್ಟಿ ಅವರಿಗೆ " ನಿಮಗೆ ಸಿದ್ಧರಾಮಯ್ಯ, ರಾಹುಲ್ ಗಾಂಧಿ, ಬಸವರಾಜ್ ಬೊಮ್ಮಾಯಿ ಇವರಲ್ಲಿ ಯಾರು ಇಷ್ಟ" ಎನ್ನುವ ಪಾಲಿಟಿಕಲ್ ಪ್ರಶ್ನೆ ಕೇಳಿತು. ಇಂತಹ ಪ್ರಶ್ನೆಗಳಿಗೆ ನೀಡುವ ಉತ್ತರ ಒಮ್ಮೊಮ್ಮೆ ವಿವಾದಗಳಿಗೆ ಕಾರಣ ಆಗುವುದೂ ಉಂಟು. ಹಾಗಾಗಿ ರಿಷಬ್ ಶೆಟ್ಟರು ಈ ಪ್ರಶ್ನೆಗೆ ನೋ ಕಮೆಂಟ್ಸ್ ಎಂದು ಉತ್ತರ ನೀಡಿದರು. ಒಂದೊಮ್ಮೆ ಅವರು ಯಾವುದೇ ರೀತಿಯ ಉತ್ತರ ನೀಡಿದ್ದರೂ ಅದು ಒಂದು ವಿವಾದಕ್ಕೆ ಕಾರಣ ಆಗುವ ಸಾಧ್ಯತೆಗಳು ಇದ್ದವು. ರಾಜಕೀಯ ರಿಷಬ್ ಶೆಟ್ರ ಕ್ಷೇತ್ರವಲ್ಲ. ಹಾಗಾಗಿ ಇಂತಹ ಪ್ರಶ್ನೆ ಕೇಳುವುದರ ಔಚಿತ್ಯವೇನು ಎನ್ನುವ ಪ್ರಶ್ನೆ ಕೇಳಿ ಬರುತ್ತಿದೆ.
ಹುಲಿ ಕುಣಿತ ಆಯಿತು, ಕಂಬಳ ಆಯಿತು, ದೈವ ಪಂಜುರ್ಲಿಯ ದರ್ಶನವಾಯಿತು. ಇನ್ನು ಕರಾವಳಿಗೆ ಸಂಭಂಧಿಸಿದಂತೆ ಯಕ್ಷಗಾನ ಕಲೆಯ ಬಗ್ಗೆ ಸಿನಿಮಾ ಮಾಡಿ ಎಂದು ರಿಷಬ್ ಶೆಟ್ಟರಿಗೆ ಅಭಿಮಾನಿಗಳು ಅಗ್ರಹಿಸುತ್ತಿದ್ದಾರೆ. ಹೊಸ ಬೆಳವಣಿಗೆ ಎನ್ನುವಂತೆ ಕಾರಂತ ಪ್ರಶಸ್ತಿ ಪಡೆಯಲು ಬಂದಿರುವ ರಮೇಶ್ ಅರವಿಂದ್ ಅವರು ಯಕ್ಷಗಾನದ ಯುವ ರಾಜನ ವೇಷ ಧರಿಸಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಕಥೆಯೊಂದು ಸಿನಿಮಾ ಆಗುವ ಸಾಧ್ಯತೆಗಳೂ ಇವೆ.
ಚಿತ್ರ : ಅಂತರ್ಜಾಲ
You must be logged in to post a comment.