ನಟ ಅಮೀರ್ ಖಾನ್ (Aamir Khan)ಅವರು, ಸಾಮಾಜಿಕ ಮಾಧ್ಯಮದಿಂದ ಅಧಿಕೃತವಾಗಿ ಹೊರಗೆ ಉಳಿದಿದ್ದರೂ ಕೂಡ ಟ್ರೆಂಡಿಂಗ್ನಲ್ಲಿ(trending) ಇದ್ದಾರೆ. ಅಭಿಮಾನಿಗಳ ಕ್ಲಬ್ , ಯೂಟ್ಯೂಬ್ನಲ್ಲಿ(You Tube) ಹಂಚಿಕೊಂಡ ಅಮೀರ್ ಖಾನ್ ಸಂದರ್ಶನದ ತುಣುಕೊಂದು ಅದಕ್ಕೆ ಕಾರಣವಾಯಿತು. ಆ ವಿಡಿಯೋದಲ್ಲಿ ಅವರು ತಮ್ಮ ನಿರ್ಮಾಪಕಿ ಪತ್ನಿ ಕಿರಣ್ ರಾವ್ ಅವರ ಜೊತೆ ತಮ್ಮ ಮುಂಬರುವ ಸಿನಿಮಾ ಲಾಲ್ ಸಿಂಗ್ ಚಡ್ಡಾದ ಕುರಿತು ಮಾತನಾಡುತ್ತಿರುವುದನ್ನು ಕಾಣಬಹುದು. ಲಾಲಾ ಸಿಂಗ್ ಚಡ್ಡಾ ಸಿನಿಮಾ, 1994 ರಲ್ಲಿ ಟಾಮ್ ಹ್ಯಾಂಕ್ಸ್ ನಟಿಸಿದ್ದ, ಫಾರೆಸ್ಟ್ ಗಂಪ್ ಸಿನಿಮಾದ ಹಿಂದಿ ರೀಮೇಕ್ ಆಗಿದೆ. ನಟಿ ಕರೀನಾ ಕಪೂರ್ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಆ ವಿಡಿಯೋದಲ್ಲಿ, ಅಮೀರ್ ಖಾನ್ ಅವರು, ಲಾಲ್ ಸಿಂಗ್ ಚಡ್ಡಾ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಎದುರಿಸಬೇಕಾಗಿ ಬಂದ ತೊಂದರೆಗಳ ಕುರಿತು ಮಾತನಾಡಿರುವುದನ್ನು ಕಾಣಬಹುದು. ಆ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ , ಚಿತ್ರದ ನಾಯಕಿ ಕರೀನಾ ಕಪೂರ್ ಅವರು ಗರ್ಭಿಣಿಯಾಗಿದ್ದರು.
ಆ ಕುರಿತು ಮಾತನಾಡುತ್ತಾ ಅಮೀರ್ ಖಾನ್ , “ ಇಡೀ ಜಗತ್ತು ಕೊರೋನಾದ ಜೊತೆ ಹೋರಾಡುತ್ತಿದ್ದರೆ, ನಾವು ಕೊರೋನಾ ಮತ್ತು ಚಿತ್ರದ ನಾಯಕಿ ಕರೀನಾ ಅವರನ್ನು ನಿರ್ವಹಿಸಬೇಕಿತ್ತು. ಆಕೆ ಗರ್ಭಿಣಿಯಾದರು, ಮತ್ತೊಂದು ತೊಂದರೆ, ಹಾಗಾಗಿ ಗಾಳಿಯ ಇನ್ನೊಂದು ಹೊಡೆತ ನಮ್ಮನ್ನು ಮತ್ತೊಂದು ದಿಕ್ಕಿಗೆ ತಳ್ಳಿದಂತೆ ಅನಿಸಿತ್ತು” ಎಂದು ಹೇಳಿದ್ದಾರೆ.
ಲಾಲ್ ಸಿಂಗ್ ಚಿತ್ರದ ನಿರ್ದೇಶಕ ಅದ್ವೈತ್ ಚಂದನ್. ಅವರು ಯಾವಾಗಲೂ ತಮಾಷೆ ಮಾಡುತ್ತಿದ್ದದ್ದು ಏನೆಂದರೆ, “ನಾವು ಈ ಚಿತ್ರವನ್ನು ಆಯ್ಕೆ ಮಾಡಿಕೊಂಡ ನಮ್ಮ ಬದುಕುಗಳು ಒಂದು ಗರಿಯಂತೆ ಆಗಿದೆ- ವಿವಿಧ ಗಾಳಿಗಳು ನಮ್ಮನ್ನು ವಿವಿಧ ದಿಕ್ಕುಗಳಲ್ಲಿ ತಳ್ಳುತ್ತಿವೆ, ಮತ್ತು ನಾವು ಅವುಗಳ ಜೊತೆ ಹಾರಾಡುತ್ತಿದ್ದೇವೆ ಹಾಗೂ ಸಿನಿಮಾದ ಅಂತ್ಯದ ವೇಳೆ ನಾವು ಎಲ್ಲಿ ತಲುಪಲಿದ್ದೇವೆ ಎಂಬುದನ್ನು ಲೆಕ್ಕಾಚಾರ ಮಾಡಲಿದ್ದೇವೆ.”
ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ , ಕಳೆದ ವರ್ಷ ಲಾಲ್ ಸಿಂಗ್ ಸಿನಿಮಾದ ಚಿತ್ರೀಕರಣ ಮಾಡಿದ್ದ ಕರೀನಾ ಕಪೂರ್, ಆಮೀರ್ ಖಾನ್ ಜೊತೆಗೆ ತಮ್ಮ ಫೋಟೋವನ್ನು ಹಂಚಿಕೊಂಡು, “ ಮತ್ತು ಎಲ್ಲಾ ಪ್ರಯಾಣಗಳು ಕೊನೆಗೊಳ್ಳಲೇಬೇಕು. ಇವತ್ತು ನನ್ನ ಸಿನಿಮಾ ಲಾಲ್ ಸಿಂಗ್ ಚಡ್ಡಾ ಚಿತ್ರೀಕರಣ ಮುಗಿಸಿದ್ದೇನೆ. ..ಕಠಿಣ ಸಮಯಗಳು. . .ಸಾಂಕ್ರಾಮಿಕ, ನನ್ನ ಗರ್ಭಾವಸ್ಥೆ, ಹೆದರಿಕೆ, ಆದರೆ, ಯಾವುದೂ ತಮ್ಮನ್ನು ತಡೆಯಲು ಸಾಧ್ಯವಾಗಲಿಲ್ಲ, ಎಲ್ಲಾ ಸುರಕ್ಷಾ ಕ್ರಮಗಳ ಜೊತೆ ನಾವು ಚಿತ್ರೀಕರಣ ನಡೆಸಿದೆವು” ಎಂದು ಬರೆದುಕೊಂಡಿದ್ದಾರೆ.
2009 ರಲ್ಲಿ ಕರೀನಾ ಕಪೂರ್ ಮತ್ತು ಆಮೀರ್ ಖಾನ್ ಥ್ರೀ ಈಡಿಯಟ್ಸ್ ಸಿನಿಮಾದಲ್ಲಿ ನಟಿಸಿದ್ದರು. ಲಾಲ್ ಸಿಂಗ್ ಚಡ್ಡಾ ಅವರಿಬ್ಬರು ಜೊತೆಯಾಗಿ ನಟಿಸುತ್ತಿರುವ ಎರಡನೇ ಸಿನಿಮಾ.
ಥ್ರೀ ಈಡಿಯಟ್ಸ್ ಸಿನಿಮಾದಲ್ಲಿ ಅವರಿಬ್ಬರ ಜೊತೆ ನಟಿಸಿದ್ದ, ಮೋನಾ ಸಿಂಗ್ ಈ ಸಿನಿಮಾದಲ್ಲೂ ಕೂಡ ಅಭಿನಯಿಸುತ್ತಿದ್ದಾರೆ. ತೆಲುಗು ನಟ ನಾಗಚೈತನ್ಯ ಅವರು ಕೂಡ ಈ ಸಿನಿಮಾದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ. ಇದು ಅವರ ಚೊಚ್ಚಲ ಬಾಲಿವುಡ್ ಸಿನಿಮಾವಾಗಲಿದೆ. ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಅಮೀರ್ ಖಾನ್ ಪ್ರೊಡಕ್ಷನ್ಸ್ ನಿರ್ಮಿಸಿದೆ.
You must be logged in to post a comment.