ದೇಶವನ್ನೇ ಬೆಚ್ಚಿ ಬೀಳಿಸಿದ್ದ ಆರುಷಿ ತಲ್ವಾರ್ ಮರ್ಡರ್ ಕೇಸ್‍; ಹಂತಕರು ಯಾರೆಂಬುದೇ ನಿಗೂಢ..!

 aarushi talwarFeatured image source : Timesofindia

ದೇಶದಲ್ಲಿ ಕಾನೂನು, ಕೋರ್ಟ್ಅದೆಷ್ಟೇ ಪ್ರಬಲವಾದರೂ ಕೊಲೆ, ಸುಲಿಗೆ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇವೆ. ಖಾಕಿ ತಂಡ ತನ್ನೆಲ್ಲಾ ಬುದ್ಧಿ ಉಪಯೋಗಿಸಿ ಅಪರಾಧಿಗಳನ್ನು ಕಟಕಟೆಗೆ ತರಲು ಯತ್ನಿಸಿದ್ರೆ, ಅಪರಾಧಿಗಳು ಶತಾಯಗತಾಯ ಯತ್ನಿಸಿ ಕಾನೂನಿನ ಕೋಳಗಳಿಂದ ಹೊರಬರಲು ಯತ್ನಿಸುತ್ತಾರೆ. ಹೀಗಾಗಿ, ಅದೆಷ್ಟೋ ದರೋಡೆ, ಕೊಲೆ ಪ್ರಕರಣಗಳು ಇಂದಿಗೂ ನಿಗೂಢವಾಗಿಯೇ ಉಳಿದಿವೆ. ಕೊಲೆ ನಡೆದು ವರ್ಷಗಳೇ ಕಳೆದರೂ ಅಪರಾಧಿಗಳನ್ನು ಹುಡುಕಲಾಗದೆ ಪೊಲೀಸರು ಕೈ ಚೆಲ್ಲಿದ್ದಾರೆ.

ರಕ್ತಪಾತ, ಪಾತಕಲೋಕದಲ್ಲಿ ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇಬೇಕು. ಹೀಗಿದ್ದೂ ಕೊಲೆಗಾರರು ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಸಾಕ್ಷ್ಯನಾಶಕ್ಕಾಗಿ ಎಂಥೆಂತಹಾ ಕೃತ್ಯಗಳನ್ನು ಮಾಡಿಬಿಡುತ್ತಾರೆ. ಪೊಲೀಸರಿಗೆ ಕುರುಹೂ ಸುಳಿಯದಂತೆ ಯಾಮಾರಿಸಿ ಬಿಡುತ್ತಾರೆ. ಹೀಗಿದ್ದೂ ಪೊಲೀಸರ ಪ್ರಯತ್ನದಿಂದ ಅದೆಷ್ಟೋ ಪ್ರಕರಣಗಳು ಕೊಲೆಯಾದ ಅದೆಷ್ಟೋ ವರ್ಷಗಳ ನಂತರ ಬಗೆಹರಿದಿದೆ. ಕೊಲೆಗಾರರು ಕಂಬಿಗಳ ಹಿಂದೆ ಶಿಕ್ಷೆ ಅನುಭವಿಸುತ್ತಿದ್ದಾರೆ.

ಇದು ಅಂಥಹದ್ದೇ ಒಂದು ಪ್ರಕರಣ. ಅಲ್ಲಿ ಮನೆಯೊಳಗೇ ಬರ್ಬರ ಹತ್ಯೆ ನಡೆದಿತ್ತು. ಮನೆಯೊಳಗೆ ಯಾರೂ ಇರಲ್ಲಿಲ್ಲ. ಇದು ಪೊಲೀಸರಿಗೇ ತಲೆನೋವಾಗಿದ್ದ ಕೇಸ್‍. ಮೊದಲು ತನಿಖೆ ನಡೆಸಿದ ಪೊಲೀಸರು ಮನೆ ಕೆಲಸಗಾರನೇ ಆ ಕೊಲೆ ಮಾಡಿದ್ದ ಎಂದು ಅಂದುಕೊಂಡಿದ್ದರು. ಆದರೆ ಕೆಲ ದಿನಗಳ ಬಳಿಕ ಕೆಲಸಗಾರನ ಮೃತದೇಹವೂ ಟೆರೇಸ್ ಮೇಲೆ ದೊರಕಿತ್ತು. ಅಲ್ಲಿಂದ  ಕೊಲೆ ಕೇಸ್ ಟ್ವಿಸ್ಟ್ ಪಡೆದುಕೊಳ್ಳುತ್ತಾ ಗೊಂದಲ ಸೃಷ್ಟಿಸುತ್ತಲೇ ಹೋಯಿತು. ಪೋಷಕರೇ ಕೊಲೆ ಮಾಡಿದ್ದಾರೆ ಎಂದು ಬಂಧಿಸಿ ಕರೆದೊಯ್ಯಲಾಯಿತು. ಆದರೆ ಸಾಕ್ಷ್ಯಾಧಾರದ ಕೊರತೆಯಿಂದ ಅವರ ಬಿಡುಗಡೆ ಮಾಡಲಾಯಿತು.

ಇವತ್ತಿನ ವರೆಗೂ ಆ ನಿಗೂಢ ಕೇಸ್ ಬಗೆಹರಿದಿಲ್ಲ. ಕೊಲೆಗಾರರು ಯಾರೆಂಬುದು ಗೊತ್ತಾಗಿಲ್ಲ. ಪಾಪಿಗಳ ಲೋಕವನ್ನೇ ಬೆಚ್ಚಿ ಬೀಳಿಸಿದ್ದ ಆ ಕೇಸ್ ವಿಚಾರಕ್ಕೆ ದೇಶವೇ ದಂಗುಬಡಿದಿತ್ತು. ಅದು ಮತ್ಯಾವುದೂ ಅಲ್ಲ, ಆರುಷಿ ತಲ್ವಾರ್ ಕೊಲೆ ಕೇಸ್.

ದೇಶವನ್ನೇ ಬೆಚ್ಚಿಬೀಳಿಸಿದ್ದ ಡಬಲ್ ಮರ್ಡರ್‍..!

Double murder case aarushi murderImage Source : India.com

2008ರಲ್ಲಿ ನೋಯ್ಡಾದಲ್ಲಿ ನಡೆದಿದ್ದ ಆರುಷಿ ತಲ್ವಾರ್ ಮರ್ಡರ್ ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು. ನೋಯ್ದಾದಲ್ಲಿದ್ದ ಮನೆಯಲ್ಲಿ 14 ವರ್ಷದ ಆರುಷಿಯ ಮೃತದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಜಲವಾಯುವಿಹಾರ್ ನ ಫ್ಲಾಟ್ ನಂ. ಎಲ್ -32ರಲ್ಲಿ ರಾತ್ರಿ 9.30ಕ್ಕೆ ಈ ಕೃತ್ಯ ನಡೆದಿತ್ತು. ಆ ಮನೆಯ ಕೆಲಸದಾಳು 45 ವರ್ಷದ ಹೇಮರಾಜ್ ಜೊತೆ ಆರುಷಿಗೆ ಅನೈತಿಕ ಸಂಬಂಧವಿತ್ತು. ಆರುಷಿಯನ್ನು ಹೇಮರಾಜ್'ನೇ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತದೆ. ದೂರದ ನೇಪಾಳದಿಂದ ಬಂದ ಹೇಮರಾಜ್ತಲ್ವಾರ್ ದಂಪತಿಯ ಮನೆಯಲ್ಲಿ ಎಲ್ಲಾ ಕೆಲಸವನ್ನೂ ಮಾಡಿಕೊಂಡಿದ್ದ. ಎಲ್ಲರ ಜತೆಗೂ ಉತ್ತಮ ಒಡನಾಟ ಹೊಂದಿದ್ದ.ಪೊಲೀಸರು ಅದೇ ಆಯಾಮದಲ್ಲಿ ತನಿಖೆ ನಡೆಸಿ ಹೇಮರಾಜ್ಗಾಗಿ ಹುಡುಕಾಟ ಆರಂಭಿಸುತ್ತಾರೆ.

ಆದರೆ ಕೆಲವೇ ದಿನಗಳಲ್ಲಿ ಪೊಲೀಸರೇ ಬೆಚ್ಚಿ ಬೀಳುವಂತೆ ಹೇಮರಾಜ್'ನ ಶವ ಕೂಡ ಮನೆಯ ಟೆರೇಸ್'ನಲ್ಲಿ ಪತ್ತೆಯಾಗುತ್ತದೆ. ಅಲ್ಲಿಗೆ ಪ್ರಕರಣಕ್ಕೆ ಟ್ವಿಸ್ಟ್ ಸಿಗುತ್ತದೆ. ಆರುಷಿ ಮತ್ತು ಹೇಮರಾಜ್ ಮಧ್ಯೆಯ ಲೈಂಗಿಕ ಸಂಬಂಧವನ್ನು ಸಹಿಸದ ಆರುಷಿ ತಂದೆ ರಾಜೇಶ್ ತಲ್ವಾರ್ ಅವರೇ ಈ ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗುತ್ತದೆ.

ಆರಂಭದಲ್ಲಿ ಈ ಪ್ರಕರಣದ ತನಿಖೆಯನ್ನು ಉತ್ತರಪ್ರದೇಶದ ಪೊಲೀಸರು ಆರಂಭಿಸುತ್ತಾರೆ. ಆನಂತರದಲ್ಲಿ ಪ್ರಕರಣ ದೇಶವ್ಯಾಪಿ ಬಹುದೊಡ್ಡ ಸುದ್ದಿ ಮಾಡಿದ್ದ ನಂತರ ಅಂದಿನ ಮುಖ್ಯಮಂತ್ರಿ ಮಾಯಾವತಿ ಅವರು ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುತ್ತಾರೆ. 14 ವರ್ಷದ ಪುತ್ರಿ ಆರುಷಿ ಮನೆಕೆಲಸದ ಆಳು ಹೇಮರಾಜ್ ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂಬ ಕಾರಣಕ್ಕೆ ಆರುಷಿಯನ್ನು ಪೋಷಕರು ಕೊಲೆ ಮಾಡಿದ್ದಾಗಿ ಸಿಬಿಐ ಆರೋಪಿಸಿ ಪ್ರಕರಣ ದಾಖಲಿಸುತ್ತದೆ.

ಆರುಷಿ ಪೋಷಕರೇ ಕೊಲೆಗಾರರೆಂದ ಸಿಬಿಐ..!

aarushi murder case aarushi parentsImage Source : thetruecrimefiles.com

ಮನೆಕೆಲಸದ ಆಳು ಹೇಮರಾಜ್ ಕೊಲೆ ಪ್ರಕರಣದಲ್ಲಿ ದಂತವೈದ್ಯ ದಂಪತಿ ರಾಜೇಶ್ ಮತ್ತು ನೂಪುರ್ ತಲ್ವಾರ್ ದಂಪತಿಯನ್ನು ಪೋಷಕರು ವಶಕ್ಕೆ ಪಡೆಯುತ್ತಾರೆ. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಸಿಬಿಐ ವಾದಿಸಿತ್ತು. ಆದರೆ, ಹೇಮರಾಜ್ ಜತೆ ಆರುಷಿ ಸಂಬಂಧ ಹೊಂದಿದ್ದಳು, ದಂಪತಿಗಳು ಮಗಳನ್ನು ಕೊಲೆ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಸಿಕ್ಕಿರಲ್ಲಿಲ್ಲ. ಬಳಿಕ ಹೆತ್ತವರನ್ನು ಅಲಹಾಬಾದ್‌ ಹೈಕೋರ್ಟ್‌ ಖುಲಾಸೆಗೊಳಿಸಿ ತೀರ್ಪು ನೀಡುತ್ತದೆ.

ಕೊಲೆಯನ್ನು ಒಬ್ಬರೇ ಮಾಡಿದರೇ, ಇಲ್ಲವೇ ಒಬ್ಬರಿಗಿಂತ ಹೆಚ್ಚು ಜನರು ಸೇರಿ ಮಾಡಿದರೇ ಎಂಬ ಅನುಮಾನಕ್ಕೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ನಿಜವಾದ ಕೊಲೆಗಡುಕರು ಯಾರು ಎಂಬುದು ಆರುಷಿ ಕೊಲೆ ನಡೆದ ವರ್ಷಗಳ ನಂತರ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ. ಮನೆಯ ತಾರಸಿ ಮೇಲೆ ಹೇಮರಾಜ್‌ ಮೃತದೇಹ ಹೇಗೆ ಬಿದ್ದಿತ್ತು ಎಂಬುದನ್ನು ಅರಿಯಲು ಪೊಲೀಸರಿಗೆ ಸಾಧ್ಯವಾಗದೇ ಹೋಯಿತು. ಇಲ್ಲಿಂದಲೇ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಗದಂತಾಯಿತು. ಪ್ರಕರಣದ ತನಿಖೆಯನ್ನು ಉದ್ದೇಶಪೂರ್ವಕವಾಗಿಯೇ ದಾರಿ ತಪ್ಪಿಸುವ ಯತ್ನಗಳು ನಡೆಯುತ್ತಲೇ ಬಂದವು ಎಂಬ ಮಾತು ಕೇಳಿ ಬಂತು.

ಒಟ್ಟಾರೆ ಆರುಷಿ ಕೊಲೆ ಮರ್ಡರ್ಕೇಸ್ಗೆ ತಾರ್ಕಿಕ ಅಂತ್ಯವೇ ಸಿಕ್ಕಿಲ್ಲ. ಪ್ರಕರಣ ನಡೆದು ವರ್ಷಗಳು ಕಳೆದ ಬಳಿಕವೂ ಆರುಷಿಯ ಕೊಲೆಗಾರರು ಯಾರು ಎಂಬುದು ನಿಗೂಢವಾಗಿಯೇ ಉಳಿದಿದೆ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author