ನೈಸರ್ಗಿಕ ಕೃಷಿ ಕುರಿತ ರಾಷ್ಟ್ರೀಯ ಸಮಾವೇಶದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ

ನೈಸರ್ಗಿಕ ಕೃಷಿ ಕುರಿತ ರಾಷ್ಟ್ರೀಯ ಸಮಾವೇಶದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ.

"ಸ್ವಾತಂತ್ರ್ಯದ 100ನೇ ವರ್ಷದವರೆಗಿನ ನಮ್ಮ ಈಗಿನ ಪ್ರಯಾಣದಲ್ಲಿ ಹೊಸ ಅಗತ್ಯಗಳು ಮತ್ತು ಹೊಸ ಸವಾಲುಗಳಿಗೆ ಅನುಗುಣವಾಗಿ ನಮ್ಮ ಕೃಷಿಯನ್ನು ಹೊಂದಿಸಿಕೊಳ್ಳಬೇಕು" "ನಾವು ನಮ್ಮ ಕೃಷಿಯನ್ನು ರಸಾಯನಶಾಸ್ತ್ರದ ಪ್ರಯೋಗಾಲಯದಿಂದ ಹೊರತಂದು, ಪ್ರಕೃತಿಯ ಪ್ರಯೋಗಾಲಯಕ್ಕೆ ಒಡ್ಡಬೇಕಿದೆ.

ನಾನು ಮಾತನಾಡುತ್ತಿರುವ ಪ್ರಕೃತಿಯ ಪ್ರಯೋಗಾಲಯವು ಸಂಪೂರ್ಣವಾಗಿ ವಿಜ್ಞಾನ ಆಧಾರಿತವಾಗಿದೆ" "ನಾವು ಕೃಷಿಯ ಪ್ರಾಚೀನ ಜ್ಞಾನವನ್ನು ಮತ್ತೆ ಕಲಿಯುವುದಷ್ಟೇ ಅಲ್ಲ, ಆಧುನಿಕ ಕಾಲಕ್ಕೆ ತಕ್ಕಂತೆ ಅದನ್ನು ತೀಕ್ಷ್ಣಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ, ನಾವು ಪ್ರಾಚೀನ ಜ್ಞಾನವನ್ನು ಆಧುನಿಕ ವೈಜ್ಞಾನಿಕ ಚೌಕಟ್ಟಿನಲ್ಲಿ ಹೊಸದಾಗಿ ಸಂಶೋಧನೆ ಮಾಡಬೇಕು" "ನೈಸರ್ಗಿಕ ಕೃಷಿಯಿಂದ ಹೆಚ್ಚು ಪ್ರಯೋಜನ ಪಡೆಯಲಿರುವವರಲ್ಲಿ ದೇಶದ ಶೇ 80% ರೈತರು ಸೇರಿದ್ದಾರೆ” "21ನೇ ಶತಮಾನದ `ಪರಿಸರಕ್ಕಾಗಿ ಜೀವನಶೈಲಿ'ಯ (Lifestyle for Environment’- LIFE) ಜಾಗತಿಕ ಧ್ಯೇಯವನ್ನು ಭಾರತ ಮತ್ತು ದೇಶದ ರೈತರು ಮುನ್ನಡೆಸಲಿದ್ದಾರೆ".

"ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಪ್ರತಿ ಪಂಚಾಯಿತಿಯ ಕನಿಷ್ಠ ಒಂದು ಹಳ್ಳಿಯನ್ನು ಸಂಪೂರ್ಣ ನೈಸರ್ಗಿಕ ಕೃಷಿ ಗ್ರಾಮವಾಗಿಸಲು ಪ್ರಯತ್ನಗಳು ನಡೆಯಬೇಕು " ಭಾರತ ಮಾತೆಯ ಭೂಮಿಯನ್ನು ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳಿಂದ ಮುಕ್ತಗೊಳಿಸುವ ಪ್ರತಿಜ್ಞೆಯನ್ನು ಕೈಗೊಳ್ಳೋಣ ಎಂದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೈಸರ್ಗಿಕ ಕೃಷಿ ಕುರಿತ ರಾಷ್ಟ್ರೀಯ ಸಮಾವೇಶದಲ್ಲಿ ರೈತರನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಕೇಂದ್ರ ಸಚಿವರಾದ ಶ್ರೀ ಅಮಿತ್ ಶಾ, ಗುಜರಾತ್ ರಾಜ್ಯಪಾಲ ಶ್ರೀ ನರೇಂದ್ರ ಸಿಂಗ್ ತೋಮರ್, ಗುಜರಾತ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Enjoyed this article? Stay informed by joining our newsletter!

Comments

You must be logged in to post a comment.

About Author

I am published all type of Kannada news