ಏರ್ಟೆಲ್ ಮತ್ತೊಮ್ಮೆ ಠಕ್ಕರ್ ನೀಡಿದ ಜಿಯೋ, ಕೇವಲ ಒಂದು ರೂಪಾಯಿಗೆ ಹೊಸ ಪ್ಯಾಕ್ ಬಿಡುಗಡೆ, 1 ರೂಪಾಯಿಗೆ ಏನೆಲ್ಲಾ ಸಿಗುತ್ತದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ನಿಮಗೆಲ್ಲ ತಿಳಿದಿರುವಂತೆ ಮುಕೇಶ್ ಅಂಬಾನಿ ಅವರ ನೇತೃತ್ವದ ಜಿಯೋ ಸಂಸ್ಥೆ ಬರುವುದಕ್ಕಿಂತ ಮುಂಚೆ ಎಲ್ಲಾ ಸೇವೆಗಳು ಕೂಡ ಸಾಕಷ್ಟು ದುಬಾರಿಯಾಗಿದ್ದವು. ಜಿಯೋ ಬಂದನಂತರ ನಿರೀಕ್ಷೆಗೂ ಮೀರಿದ ಅಗ್ಗದ ಬೆಲೆಗಳನ್ನು ಸೇವೆಯ ಮೂಲಕ ನೀಡುವುದರ ಜೊತೆಗೆ ಟೆಲಿಕಾಂ ಕ್ಷೇತ್ರದಲ್ಲಿ ತನ್ನದೇ ಆದಂತಹ ಸಾಮ್ರಾಜ್ಯವನ್ನು ಸೃಷ್ಟಿಸಿಕೊಂಡಿತು. ಇದರಿಂದಾಗಿ ಹಲವಾರು ಟೆಲಿಕಾಂ ಸಂಸ್ಥೆಗಳು ಬಾಗಿಲು ಮುಚ್ಚಿ ಕೊಳ್ಳಬೇಕಾ ದಂತಹ ಪರಿಸ್ಥಿತಿ ಕೂಡ ಒದಗಿ ಬಂದಿತ್ತು.ಇನ್ನು ಇತ್ತೀಚಿಗಷ್ಟೇ ಬಹುತೇಕ ಎಲ್ಲಾ ಭಾರತೀಯ ಟೆಲಿಕಾಂ ಸಂಸ್ಥೆಗಳು ತಮ್ಮ ಸೇವೆಯ ದರವನ್ನು ಜಾಸ್ತಿ ಮಾಡಿದ್ದವು. ಇವುಗಳಲ್ಲಿ ಜಿಯೋ ಸಂಸ್ಥೆ ಕೂಡ ಸೇರಿತ್ತು. ಇನ್ನು ಜಿಯೋ ಸಂಸ್ಥೆಯಲ್ಲಿ ಎಲ್ಲಾ ಸೇವೆಗಳು ಕೂಡ ದರ ಜಾಸ್ತಿ ಆಗಿಲ್ಲ. ಇದರಲ್ಲಿ ಇಂದು ನಾವು ಹೇಳಹೊರಟಿರುವ ಸೇವೆಯ ದರ ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡುವುದು ಗ್ಯಾರಂಟಿ. ಅತ್ಯಂತ ಕಡಿಮೆ ಸೇವೆಯಲ್ಲಿ ಟೆಲಿಕಾಂ ಸೇವೆಯನ್ನು ನೀಡಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಜಿಯೋ ಸಂಸ್ಥೆ ಈಗ ಅತ್ಯಂತ ಕಡಿಮೆ ದರದಲ್ಲಿ ಅಂದರೆ ಕೇವಲ ಒಂದು ರೂಪಾಯಿಗೆ ಟೆಲಿಕಾಂ ಸೇವೆಯನ್ನು ನೀಡೋಕೆ ಪ್ರಾರಂಭಿಸಿದೆ.ಇಡೀ ಭಾರತೀಯ ಇತಿಹಾಸದಲ್ಲೇ ಇಷ್ಟೊಂದು ಕಡಿಮೆ ದರದಲ್ಲಿ ಯಾರು ಕೂಡ ಸೇವೆಯನ್ನು ಒದಗಿಸಿಲ್ಲ. ಇನ್ನೂ ಈ ಒಂದು ರೂಪಾಯಿ ಯೋಜನೆಯನ್ನು ಸಿಮ್ ಅನ್ನು ಸಕ್ರಿಯವಾಗಿ ಇಡಲು ಬಯಸುವವರಿಗೆ ಪರಿಚಯಿಸಲಾಗಿದೆ. ಇದರಿಂದಾಗಿ ಕರೆಯ ಹಾಗೂ ಮೆಸೆಜ್ ಸೇವೆಗಳು ಲಭ್ಯವಿಲ್ಲವಾದರೂ ಕೂಡ. ದಿನಕ್ಕೆ 100mb ಡೇಟಾವನ್ನು ನೀಡುತ್ತದೆ. ಒಂದು ವೇಳೆ ನೀವು ನಿಮ್ಮ ಜಿಯೋ ಸಿಮ್ ಅನ್ನು ಬಳಸದೆ ಇದ್ದರೆ ಅದನ್ನು ಜೀವಂತವಾಗಿರಿಸಲು ಒಂದು ರೂಪಾಯಿ ಯೋಜನೆ ಸಹಕಾರಿಯಾಗಿದೆ. ಇನ್ನು 10ರೂಪಾಯಿ ಯೋಜನೆಯಲ್ಲಿ 7.45 ನ ಅನ್ಲಿಮಿಟೆಡ್ ವ್ಯಾಲಿಡಿಟಿ ಟಾಕ್ ಟೈಮ್. 20 ರೂಪಾಯಿ ಯೋಜನೆಯಲ್ಲಿ 14.95 ನ ಅನ್ಲಿಮಿಟೆಡ್ ಟಾಪ್ ಟೆನ್ ಯೋಜನೆ ಕೂಡ ಸಿಗಲಿದೆ.

Enjoyed this article? Stay informed by joining our newsletter!

Comments

You must be logged in to post a comment.

About Author