ಔರಂಗಾಬಾದ್‍’ನ ಅತ್ಯಾಕರ್ಷಕ ಅಜಂತಾ-ಎಲ್ಲೋರಾ ಗುಹೆಗಳು

ಔರಂಗಾಬಾದ್‍’ನ ಅತ್ಯಾಕರ್ಷಕ ಅಜಂತಾ-ಎಲ್ಲೋರಾ ಗುಹೆಗಳು

Ajanta and ellora caves aurangabadImage Credits : Wikipedia

ಭಾರತದಲ್ಲಿ ಹಲವಾರು ರೀತಿಯ ದೇವಾಲಯಗಳಿವೆ. ತಮ್ಮ ವಿಶಿಷ್ಟ ಶೈಲಿಯ ಕುಸುರಿ, ಕೆತ್ತನೆ ಕೆಲಸಗಳಿಂದ ಪ್ರಸಿದ್ಧಿ ಪಡೆದಿವೆ. ಅದರಲ್ಲೂ ಭಾರತೀಯ ಶಿಲ್ಪಕಲೆ ಇದೆಲ್ಲವನ್ನೂ ಮೀರಿದ್ದು, ದೇಗುಲ, ಮಂದಿರಗಳಲ್ಲಿ ಕೆತ್ತಲ್ಪಟ್ಟಿರುವ ಭವ್ಯವಾದ ಶಿಲ್ಪಕಲೆಗಳು ವಿದೇಶಗಳಲ್ಲಿಯೂ ಹೆಸರುವಾಸಿಯಾಗಿದೆ. ಹಾಗೆಯೇ ಇಲ್ಲಿನ ಕೆಲವು ದೇವಾಲಯಗಳಲ್ಲಿ ಕಾಣಸಿಗುವ ಗುಹೆಗಳು ಸಹ ಅಚ್ಚರಿ ಮೂಡಿಸುವಂತದ್ದು. ರಚನಾತ್ಮಕವಾಗಿ ರೂಪುಗೊಂಡಿರುವ ಹಳೆಯ ಕಾಲದ ಗುಹೆಗಳು ದೇಶದ ಹಲವು ರಾಜ್ಯಗಳ ಪುರಾತನ ದೇವಾಲಯಗಳಲ್ಲಿವೆ. ಇಂಥಹಾ ಸ್ಥಳಗಳಲ್ಲಿ ಮಹಾರಾಷ್ಟ್ರದ ಅಜಂತಾ-ಎಲ್ಲೋರಾ ಗುಹೆಗಳು ಕೂಡಾ ಸೇರಿವೆ.

 

ಮಹಾರಾಷ್ಟ್ರದ ಔರಂಗಾಬಾದ್‌ನ ವಾಯುವ್ಯ ದಿಕ್ಕಿನಲ್ಲಿ ಔರಂಗಾಬಾದ್‌-ಚಾಲಿಸ್ಗಾಂವ್ ರಸ್ತೆಯ ವೆರುಲ್ ಬಳಿ ಈ ಪ್ರಾಚೀನ ಗುಹೆಗಳು ಇವೆ. ಎಲ್ಲೋರಾ ಗುಹೆಗಳು ಸ್ಥಳೀಯವಾಗಿ ವೆರುಲ್ ಲೆನಿ ಎಂದು ಕರೆಯಲ್ಪಡುತ್ತವೆ. ಎಲ್ಲೋರಾದಲ್ಲಿನ ಗುಹೆಗಳನ್ನು ಕ್ರಿ.ಶ 6 ಮತ್ತು 10ನೇ ಶತಮಾನಗಳ ನಡುವೆ ಚರಣಂದ್ರಿ ಬೆಟ್ಟಗಳ ಲಂಬ ಮುಖದಿಂದ ಕೆತ್ತಲಾಗಿದೆ ಎಂದು ತಿಳಿದುಬಂದಿದೆ. ಕೆತ್ತನೆ ಕಾರ್ಯವು ಕ್ರಿ.ಶ 550ರ ಸುಮಾರಿಗೆ ಆರಂಭವಾಗಿದ್ದು, ಇದೇ ಸಮಯದಲ್ಲಿ ಅಜಂತಾ ಗುಹೆಗಳ ಕಾರ್ಯವನ್ನು ಕೈಬಿಡಲಾಯಿತು ಎಂದು ಹೇಳಲಾಗುತ್ತದೆ.

 

ಭಾರತದಲ್ಲಿ ಬೌದ್ಧಧರ್ಮವು ಕ್ಷೀಣಿಸುತ್ತಿದ್ದ ಸಮಯದಲ್ಲಿ ಎಲ್ಲೋರಾ ಗುಹೆಗಳನ್ನು ನಿರ್ಮಿಸಲಾಯಿತು. ಹಿಂದೂ ಧರ್ಮವು ಪುನಃ ಪ್ರತಿಪಾದಿಸಲು ಪ್ರಾರಂಭಿಸುತ್ತಿದ್ದ ಸಂದರ್ಭ ಗುಹೆಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. 8ನೇ ಶತಮಾನದಲ್ಲಿ ನಿರ್ಮಿಸಲಾದ ಭವ್ಯವಾದ ಕೈಲಾಶ್ ದೇವಾಲಯ ಸೇರಿದಂತೆ ಎಲ್ಲೋರಾದಲ್ಲಿ ಹೆಚ್ಚಿನ ಕೆಲಸಗಳನ್ನು ಚಾಲುಕ್ಯರು ಮತ್ತು ರಾಷ್ಟ್ರಕೂಟರ ನೋಡಿಕೊಂಡರು. ಇವರ ಆಶ್ರಯದಲ್ಲಿ ಬ್ರಾಹ್ಮಣ ಚಳುವಳಿ ವಿಶೇಷವಾಗಿ ಪ್ರಬಲವಾಗಿತ್ತು.

reason to visit ajanta and ellora cavesImage Credits : Britannica

ಶಿಲೆಯಲ್ಲಿ ಕೊರೆದು ಮಾಡುವ ಶಿಲ್ಪಶಾಸ್ತ್ರದ ಭಾರತೀಯ ಶೈಲಿಯ ಮಹಾನ್ ದ್ಯೋತಕವಾಗಿರುವ ಎಲ್ಲೋರಾ ಗುಹೆಗಳಲ್ಲಿ ಹಿಂದೂ, ಬೌದ್ಧ ಮತ್ತು ಜೈನ ದೇವಾಲಯಗಳಿವೆ. ಜೊತೆಗೆ ಧರ್ಮಶಾಲೆಗಳು ಸಹ ಇರುವ ಈ ಸಂಕೀರ್ಣವನ್ನು 5ರಿಂದ 10ನೇಯ ಶತಮಾನದ ಮಧ್ಯೆ ನಿರ್ಮಿಸಲಾಯಿತು. ದೇವಸ್ಥಾನದ ಆವರಣದಲ್ಲಿ ಅತ್ಯಂತ ಸೊಗಸಾದ ಶಿಲ್ಪಗಳಿವೆ. ಗುಹೆಯ ಸಂಕೀರ್ಣವನ್ನು ಚರಣಾಂದ್ರಿ ಬೆಟ್ಟಗಳ ಘನ ಬಂಡೆಗಳಿಂದ ಕತ್ತರಿಸಿದ್ದು, 34 ಗುಹೆಗಳನ್ನು ಒಳಗೊಂಡಿದೆ. 

 

ಎಲ್ಲೋರಾ ಸಂಕೀರ್ಣವು 12 ಬೌದ್ಧ, 17 ಹಿಂದೂ ಮತ್ತು 5 ಜೈನ ಗುಹೆಗಳನ್ನು ಒಳಗೊಂಡಿದೆ. 1 ರಿಂದ 12ರ ಗುಹೆಗಳು ಬೌದ್ಧ ಮಠಗಳು, ಚೈತರು ಮತ್ತು ವಿಹಾರಗಳು, 13 ರಿಂದ 29 ಗುಹೆಗಳು ಹಿಂದೂ ದೇವಾಲಯಗಳಾಗಿವೆ. 9 ಮತ್ತು 10ನೇ ಶತಮಾನದ ಹಿಂದಿನ 30 ರಿಂದ 34 ಗುಹೆಗಳು ಜೈನ ದೇವಾಲಯಗಳಾಗಿವೆ. ಮೂರು ವಿಭಿನ್ನ ಧರ್ಮಗಳ ರಚನೆಗಳು ಭಾರತದ ಪ್ರಚಲಿತ ಧಾರ್ಮಿಕ ಸಹಿಷ್ಣುತೆಯ ಅದ್ಭುತ ದೃಶ್ಯ ನಿರೂಪಣೆಯಾಗಿ ಕಾರ್ಯನಿರ್ವಹಿಸುತ್ತಿವೆ.

ಇದನ್ನು ಓದಿ : ಶೃಂಗಾರಮಯ ಶಿಲ್ಪಕಲೆಗಳಿಗೆ ಹೆಸರುವಾಸಿಯಾದ ಮಧ್ಯಪ್ರದೇಶದ ಖಜುರಾಹೊ ದೇವಾಲಯ

ಎಲ್ಲೋರಾದ ಕೇಂದ್ರ ಆಕರ್ಷಣೆ ಕೈಲಾಶ್ ದೇವಾಲಯವಾಗಿದೆ, ಒಂದೇ ಬೃಹತ್ ಬಂಡೆಯಿಂದ ಕೈಯಿಂದ ಆಕಾರ ಪಡೆದ ಗೇಟ್‌ ವೇ ಇದಾಗಿದ್ದು, ಅತ್ಯಂತ ಗಮನಾರ್ಹವಾಗಿದೆ. ವಿಶ್ವಪ್ರಸಿದ್ಧ ಕೈಲಾಸನಾಥ ದೇವಾಲಯವು ರಾಷ್ಟ್ರಕೂಟ ವಾಸ್ತುಶಿಲ್ಪಕ್ಕೆ ಅದ್ಭುತ ಉದಾಹರಣೆಯಾಗಿದೆ. ಇದು ಶಿವನ ವಾಸಸ್ಥಾನವಾದ ಕೈಲಾಶ್ ಪರ್ವತವನ್ನು ಪ್ರತಿನಿಧಿಸುತ್ತದೆ. ಅಂಗಳದೊಳಗೆ ಶಿವನಿಗೆ ಅರ್ಪಿತವಾದ ಕೇಂದ್ರ ದೇವಾಲಯ ಮತ್ತು ನಂದಿಯ ಚಿತ್ರವಿದೆ. ಇದು ಪ್ರದರ್ಶನ ಪ್ರದೇಶ, ಚೌಕ, ಸಭಾಂಗಣ, ಗರ್ಭಗುಡಿ ಮತ್ತು ಗೋಪುರವನ್ನು ಒಳಗೊಂಡಿದ್ದು, ದ್ರಾವಿಡ ಕಲೆಯ ವೈಭವವನ್ನು ಎತ್ತಿ  ತೋರಿಸುತ್ತದೆ.  ಇದನ್ನು ರಾಷ್ಟ್ರಕೂಟ ರಾಜ ಕೃಷ್ಣ I (756-773) ಪ್ರಾರಂಭಿಸಿದನೆಂದು ನಂಬಲಾಗಿದೆ.

 

ದೇವಾಲಯದಲ್ಲಿ ರಾಮಾಯಣ ಮತ್ತು ಮಹಾಭಾರತದ ಘಟನೆಗಳನ್ನು ಚಿತ್ರಿಸುವ ಅನೇಕ ಶಿಲ್ಪಕಲೆಗಳಿವೆ. ದೇವಾಲಯದ ಆವರಣದಲ್ಲಿ ಐದು ಬೇರ್ಪಟ್ಟ ದೇವಾಲಯಗಳಿವೆ. ಇವುಗಳನ್ನು ಗಣೇಶ, ರುದ್ರ, ಗಂಗಾ, ಯಮುನಾ ಮತ್ತು ಸರಸ್ವತಿಗೆ ಅರ್ಪಿಸಲಾಗಿದೆ. ಅಂಗಳದಲ್ಲಿ ಎರಡು ಧ್ವಜಸ್ತಂಭಗಳಿವೆ. ಈ ದೇವಾಲಯನ್ನು 250,000 ಟನ್ ಬಂಡೆಯಿಂದ ಕೆತ್ತಿದ್ದು, ಪೂರ್ಣಗೊಳ್ಳಲು 100 ವರ್ಷಗಳನ್ನು ತೆಗೆದುಕೊಂಡಿತು ಎಂದು ತಿಳಿದುಬಂದಿದೆ..

ajanta caves aurangabadImage Credits : India Tv

ಅಜಂತಾ-ಎಲ್ಲೋರ ಗುಹೆಗಳು 1819 ವರ್ಷದ ವರೆಗೂ ಕಾಡು ಮಣ್ಣು, ನೀರಿನಿಂದ ಮುಚ್ಚಿಹೋಗಿತ್ತು. ಬ್ರಿಟಿಷ್ ಅಧಿಕಾರಿ ಜಾನ್ ಸ್ಮಿತ್ 1819 ರಲ್ಲಿ ಹುಲಿಯನ್ನು ಬೇಟೆಯಾಡುವಾಗ ಆಕಸ್ಮಿಕವಾಗಿ ಈ ಗುಹೆಗಳನ್ನು ಪತ್ತೆ ಹಚ್ಚಿದ್ದರು ಎಂದು ಹೇಳಲಾಗುತ್ತದೆ. ಜಾನ್ ಸ್ಮಿತ್ ಅವರು ಈ ಅದ್ಭುತಗಳನ್ನು ನೋಡಿ ನಿಬ್ಬೆರಗಾಗಿದ್ದರು. ಈ ಗುಹೆ ಪ್ರದೇಶಗಳು ಹೈದರಾಬಾದ್ ನಿಜಾಮ್ ಆಳ್ವಿಕೆಯ ವ್ಯಾಪ್ತಿಯಲ್ಲಿ ಇತ್ತು. ಅದಕ್ಕಾಗಿ ಸ್ಮಿತ್ ಅವರು ಈ ಗುಹೆಗಳ ಬಗ್ಗೆ ಬ್ರಿಟಿಷ್ ಸರ್ಕಾರ ಹಾಗೂ ಹೈದರಾಬಾದ್ ನಿಜಾಮ್ ಸಂಸ್ಥಾನಕ್ಕೆ ಮಾಹಿತಿ ತಲುಪಿಸಿದರು.

 

ಬ್ರಿಟಿಷ್ ಸರ್ಕಾರ ಈ ಗುಹೆಗಳನ್ನು ಉಳಿಸಲು ಪ್ರಯತ್ನ ಮಾಡಿತ್ತು. ಈ ಗುಹೆಗಳನ್ನು ಪುನಶ್ಚೇತನಗೊಳಿಸಲು 30 ವರ್ಷಗಳ ಸಮಯ ಹಿಡಿದಿತ್ತು ಎಂದು ತಿಳಿದುಬಂದಿದೆ. ಸುಮಾರು 6ನೇ ಶತಮಾನದಿಂದ 10ನೇ ಶತಮಾನದವರೆಗೆ ಈ ಗುಹೆಗಳು ನಿರ್ಮಾಣವಾಗಿವೆ’ ಎಂದು ಹೇಳಲಾಗುತ್ತದೆ. ಒಟ್ಟು 100 ಗುಹೆಗಳಿವೆ. ಆದರೆ ಜನರಿಗೆ 34 ಗುಹೆಗಳನ್ನು ನೋಡಲು ಅನುಮತಿ ನೀಡಲಾಗಿದೆ.

ಇದನ್ನು ಓದಿ : ಭಾರತದಲ್ಲಿರುವ 1000 ವರ್ಷಗಳಿಗೂ ಹಿಂದಿನ ಪುರಾತನ ದೇವಾಲಯಗಳಿವು

ಔರಂಗಾಬಾದ್‌ನಲ್ಲಿ ಪ್ರತಿ ವರ್ಷ ಅಜಂತ-ಎಲ್ಲೋರಾ ಉತ್ಸವ ನಡೆಯುತ್ತದೆ. ಎಲ್ಲೋರಾ, ಅಜಂತಾ ಮತ್ತು ಈ ಪ್ರದೇಶದ ಇತರ ಐತಿಹಾಸಿಕ ಸ್ಮಾರಕಗಳ ಪೌರಾಣಿಕ ಗುಹೆಗಳಿಗೆ ಗೌರವ ಸಲ್ಲಿಸಲು ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಭವ್ಯ ಸಮಾರಂಭದಲ್ಲಿ ಶ್ರೇಷ್ಠ ಕಲಾವಿದರು ಭಾಗವಹಿಸುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶಾಸ್ತ್ರೀಯ ಮತ್ತು ಜಾನಪದ ನೃತ್ಯ, ಹಾಡುಗಾರಿಕೆ ಮತ್ತು ವಾದ್ಯ ಸಂಗೀತದ ಪ್ರದರ್ಶನಗಳು ಸೇರಿವೆ. ಈ ಉತ್ಸವ ಮೊದಲು ಎಲ್ಲೋರಾ ಗುಹೆಗಳ ಕೈಲಾಸ ದೇವಾಲಯದಲ್ಲಿ ನಡೆಯುತ್ತಿತ್ತು. ನಂತರ ಇದನ್ನು ಔರಂಗಾಬಾದ್‌ನ ಐತಿಹಾಸಿಕ ಅರಮನೆಯಾದ ಸೋನೆರಿ ಮಹಲ್‌ಗೆ ಸ್ಥಳಾಂತರಿಸಲಾಯಿತು.

 

ಮಹಾರಾಷ್ಟ್ರದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿರುವ, ಮುಂಬೈ ಸಮೀಪವಿರುವ ಈ ಗುಹೆಗಳಿಗೆ ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಎಲ್ಲೋರಾ ಗುಹೆಗಳನ್ನು 1983 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಹೆಸರಿಸಲಾಯಿತು.

Featured Image Credits : istock

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author