`ಪುಷ್ಪ’ ಚಿತ್ರಕ್ಕೆ ಕಾಡುಗಳ್ಳ ವೀರಪ್ಪನ್​ ಪ್ರೇರಣೆ? ಅಲ್ಲು ಗೆಟಪ್​ ಕಂಡು ಯೆಸ್​​ ಅಂತಿದ್ದಾರೆ ನೆಟ್ಟಿಗರು!

ಟ್ರೈಲರ್​(Trailer)ನಲ್ಲೇ ಅಲ್ಲು ಅರ್ಜುನ್​ ಅಭಿನಯದ ಮೋಸ್ಟ್​ ಎಕ್ಸ್​ಪೆಕ್ಟೆಡ್​​ ಸಿನಿಮಾ ಪುಷ್ಪ(Pushpa) ಸಖತ್​ ಸೌಂಡ್ ಮಾಡುತ್ತಿದ್ದೆ. ಇಂದು ರಿಲೀಸ್ ಆಗಿರುವ ಟ್ರೈಲರ್​ನಲ್ಲೇ ಇಂಟರ್​ನೆಟ್​ ಅಲ್ಲಿ ಅಲ್ಲು ಅರ್ಜುನ್​ ಬೆಂಕಿ(Fir) ಹಚ್ಚಿದ್ದಾರೆ. ಏಯ್​ ಬಿಡ್ಡಾ.. ಇದು ಅಲ್ಲು ಅಡ್ಡ ಅಂತ ಫ್ಯಾನ್ಸ್​ ಕಮೆಂಟ್​ ಮಾಡುತ್ತಿದ್ದಾರೆ. ಟ್ರೈಲರ್​ ನೋಡಿದ ಪ್ರತಿಯೊಬ್ಬರಿಗೂ ಈ ಸಿನಿಮಾ ಮೇಲಿದ್ದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಅಬ್ಬಬ್ಬಾ ಟ್ರೈಲರ್​​​ನಲ್ಲೇ ಇಷ್ಟು ಕಿಕ್​ ಇದೆ. ಇನ್ನೂ ಸಿನಿಮಾದಲ್ಲಿ ಅದೆಷ್ಟು ಥ್ರಿಲ್(Thrill)​ ಇರಬೇಡ ಅಂತ ಫ್ಯಾನ್ಸ್​(Fans ಮಾತನಾಡಿಕೊಳ್ಳುತ್ತಿದ್ದಾರೆ. ಡಿಸೆಂಬರ್​ 17ರಂದು ಪುಷ್ಪ ವಿಶ್ವದಾದ್ಯಂತ ತೆರೆಕಾಣುತ್ತಿದೆ. ಯಾವಾಗ ಡಿಸೆಂಬರ್(December)​​ 17 ಆಗುತ್ತೆ ಗುರೂ ಅಂತ ಅಲ್ಲು ಅಭಿಮಾನಿಗಳು ಜಪ ಮಾಡುತ್ತಿದ್ದಾರೆ.  ಇದರ ಮಧ್ಯೆ ಹೊಸ ವಿಚಾರ ಅಂದರೆ, ಈ ಪುಷ್ಪ ಚಿತ್ರಕ್ಕೆ ಕಾಡುಗಳ್ಳ ವೀರಪ್ಪನ್(Veerappan)​ ಪ್ರೇರಣೆನಾ ಎಂಬ ಪ್ರಶ್ನೆಯನ್ನು ನೆಟ್ಟಿಗರು ಇಟ್ಟಿದ್ದಾರೆ. ಯಾಕೆಂದರೆ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಅವರ ಪಾತ್ರ ವೀರಪ್ಪನ್​ನಂತೆ ಇದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ವೀರಪ್ಪನ್​ನನ್ನು ಪ್ರೇರಣೆಯಾಗಿ ಇಟ್ಟುಕೊಂಡೇ ಕಥೆ ಸೃಷ್ಟಿಯಾಗಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ. 

 ವೀರಪ್ಪನ್​ ಪ್ರೇರಣೆಯಾ ‘ಪುಷ್ಪ’ ಪಾತ್ರ?

 ರಕ್ತಚಂದನ ಕಳ್ಳಸಾಗಾಣಿಕೆ ಕುರಿತು ಈ ಸಿನಿಮಾವಿದೆ. ಈ ಹಿಂದೆ ಎಂದೂ ಕಾಣದ ರೀತಿಯಲ್ಲಿ ಅಲ್ಲು ಅರ್ಜುನ್ ವಿಭಿನ್ನವಾದ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಲಾರಿ ಡ್ರೈವರ್ ಪುಷ್ಪರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ನಟಿಸಿದ್ದಾರೆ. ಟ್ರೇಲರ್‌ನಲ್ಲಿ ಅಲ್ಲು ಅರ್ಜುನ್ ಮೂರು, ನಾಲ್ಕು ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಒಂದು ಗೆಟಪ್ ಮಾತ್ರ ವೀರಪ್ಪನ್ ಅವರನ್ನು ಹೋಲುತ್ತದೆ. ಕಾಡುಗಳ್ಳ ವೀರಪ್ಪನ್ ಕೂಡ ಕಳ್ಳಸಾಗಾಣಿಕೆ ಮಾಡಿ ಕುಖ್ಯಾತಿ ಪಡೆದಿದ್ದರು. ಹಾಗಾಗಿ ವೀರಪ್ಪನ್ ಪ್ರಭಾವ ಪುಷ್ಪರಾಜ್ ಮೇಲಿದೆಯೇ ಎಂಬ ಅನುಮಾನ ಶುರುವಾಗಿದೆ. ವೀರಪ್ಪನ್ ಕುರಿತು ಕನ್ನಡದಲ್ಲಿ ಎರಡು ಸಿನಿಮಾಗಳು ಬಂದಿವೆ. ಕಿಲ್ಲಿಂಗ್​ ವೀರಪ್ಪನ್, ಹಾಗೂ ಅಟ್ಟಹಾಸ ಸಿನಿಮಾಗಳು ಬಂದಿವೆ.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author

A passionate Creator