Amazonಗೆ ಜಾಗತಿಕ ಮಟ್ಟದಲ್ಲಿ ಭಾರೀ ಮುಖಭಂಗ.. ಬರೋಬ್ಬರಿ $1.3 ಬಿಲಿಯನ್ ದಂಡ ವಿಧಿಸಿದ ಇಟಲಿ!

ಬೃಹತ್​ ಆನ್​ಲೈನ್​ ಮಾರಾಟ ಸಂಸ್ಥೆ ಅಮೆಜಾನ್​ಗೆ (Amazon) ಜಾಗತಿಕ ಮಟ್ಟದಲ್ಲಿ ಭಾರೀ ಹಿನ್ನಡೆಯಾಗಿದೆ. ಇಟಲಿಯ ಆಂಟಿಟ್ರಸ್ಟ್ ನಿಯಂತ್ರಕರು (Antitrust Regulators) ಅಮೆಜಾನ್‌ ಸಂಸ್ಥೆಗೆ ಬರೋಬ್ಬರಿ $1.3 ಶತಕೋಟಿ (fined $1.3 billion) ದಂಡವನ್ನು ವಿಧಿಸಿದ್ದಾರೆ. ಆನ್‌ಲೈನ್ ಶಾಪಿಂಗ್ ಜಗತ್ತಿನಲ್ಲಿ ಅಮೆಜಾನ್​​​ ತನ್ನ ಪ್ರಾಬಲ್ಯವನ್ನು ಬಳಸಿಕೊಂಡು ಅಕ್ರಮ ಎಸಗಿರುವ ಆರೋಪದ ಮೇಲೆ ದಂಡ ವಿಧಲಾಗಿದೆ. ಇಟಾಲಿಯನ್ ಮಾರಾಟಗಾರರು ಅಮೆಜಾನ್ (ಎಫ್‌ಬಿಎ) ಮೂಲಕವೇ ಪೂರೈಸುವಂತೆ ಮಾಡಿದೆ ಎಂದು ಆರೋಪಿಸಲಾಗಿದೆ. ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಅಮೆಜಾನ್ ತಿಳಿಸಿದೆ.  ಕಳೆದ ತಿಂಗಳಷ್ಟೇ, ಆಪಲ್ ಮತ್ತು ಬೀಟ್ಸ್ ಉತ್ಪನ್ನಗಳ ಪೂರೈಕೆಯನ್ನು ಮಿತಿಗೊಳಿಸಲು ಸಂಚು ರೂಪಿಸಿದ ಆರೋಪದ ಮೇಲೆ ಅಮೆಜಾನ್ , ಆಪಲ್ ಎರಡರ ಮೇಲೂ ಇದೇ ಇಟಾಲಿಯನ್ ಆಂಟಿಟ್ರಸ್ಟ್ ನಿಯಂತ್ರಕರು ದಂಡ ವಿಧಿಸಿದ್ದರು. ಆಗ ಅಮೆಜಾನ್​ಗೆ ಕೇವಲ $77 ಮಿಲಿಯನ್ ಫೈನ್​ ಹಾಕಲಾಗಿತ್ತು. ಆದರೆ ಈಗ ಹಾಕಿರುವ ದಂಡದ ಮೊತ್ತ ವಿಶ್ವಾದ್ಯಂತ ಸುದ್ದಿಗೆ ಗ್ರಾಸವಾಗಿದೆ.

ಇತರೆ ಮಾರಾಟಗಾರರಿಗೆ ಹಾನಿ ಮಾಡಿದ ಅಮೆಜಾನ್​​!

ಅಮೆಜಾನ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟಗಾರರಿಗೆ ಅದರ ಎಫ್‌ಬಿಎ ಲಾಜಿಸ್ಟಿಕ್ಸ್ ಸೇವೆಯನ್ನು ಬಳಸಲು ಅವಕಾಶ ಬೀಡುತ್ತೆ. FBA ಗೆ ಸೈನ್ ಅಪ್ ಮಾಡಿದ ಮಾರಾಟಗಾರರು ತಮ್ಮ ಸರಕುಗಳನ್ನು ಲೇಬಲ್‌ನೊಂದಿಗೆ ಗುರುತಿಸಬಹುದು. ಆದರೆ Amazon ಆನ್‌ಲೈನ್ ಮಾರಾಟಗಾರರಿಗೆ ತಮ್ಮನ್ನು ತಾವು ಸೈಟ್​ನಲ್ಲಿ ಪ್ರಮೋಟ್​ ಮಾಡಿಕೊಳ್ಳುವುದನ್ನು ತಡೆಯುವ ಮೂಲಕ ಸ್ಪರ್ಧಾತ್ಮಕ ಇ-ಕಾಮರ್ಸ್ ಲಾಜಿಸ್ಟಿಕ್ಸ್ ಆಪರೇಟರ್‌ಗಳಿಗೆ ಹಾನಿ ಮಾಡಿದೆ.ಈ ಹಿನ್ನೆಲೆಯಲ್ಲಿ ಅಮೆಜಾನ್​ ದಂಡಕ್ಕೆ ಗುರಿಯಾಗಿದೆ.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author

A passionate Creator