ಕೋಲ್ಕತ್ತಾದಲ್ಲಿದೆ ಬಿಗ್ ಬಿ ಅಮಿತಾಬ್ ಬಚ್ಚನ್ ರನ್ನು ಆರಾಧಿಸುವ ದೇವಾಲಯ

Amitabh bachan temple in kolkata

Featured Image Source : Whatshot

ಭಾರತ ಅಂದ್ರೆ ವೈವಿಧ್ಯತೆಯಲ್ಲಿ ಏಕತೆ ಇರೋ ದೇಶ. ವಿವಿಧ ಭಾಷೆ, ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯಗಳು ಭಾರತದ ವಿಶೇಷ. ಜತೆಗೇ ಭಿನ್ನ-ವಿಭಿನ್ನ ದೇವಾಲಯಗಳೂ ಇಲ್ಲಿವೆ. ಆಯಾ ಪ್ರದೇಶದ ನಂಬಿಕೆಗೆ ತಕ್ಕಂತೆ ವಿಶಿಷ್ಟವಾದ ದೇವಾಲಯಗಳು ರೂಪುಗೊಳ್ಳುತ್ತವೆ. ಅಲ್ಲಿ ನಡೆದ ಯಾವುದೋ ಘಟನೆಗೆ ಸಂಬಂಧಿಸಿದಂತೆ ಜನರಲ್ಲಿಯೂ ನಂಬಿಕೆ ಬೆಳೆದಿರುತ್ತದೆ. ಇದಕ್ಕೆ ಅನುಸಾರವಾಗಿ ದೇವರಿಗೆ ಮಾತ್ರವಲ್ಲದೆ, ವ್ಯಕ್ತಿಗೆ, ವಸ್ತುವಿಗೆ ದೇಶದ ಹಲವೆಡೆ ದೇವಾಲಯವನ್ನು.ಕಟ್ಟಿರುವುದನ್ನು ನೋಡಿರಬಹುದು.

ಭಾರತೀಯರು ಬರೀ ನಂಬಿಕೆ ಮಾತ್ರವಲ್ಲ ಮೂಢನಂಬಿಕೆಗೂ ಹೆಚ್ಚು ಒಳಗಾಗುತ್ತಾರೆ. ಹೀಗಾಗಿ ದೇವರನ್ನು ಮಾತ್ರವಲ್ಲ ವ್ಯಕ್ತಿಯನ್ನೂ ಪೂಜಿಸುವ ಹಲವು ದೇವಾಲಯಗಳನ್ನು ದೇಶದ ಹಲವೆಡೆ ನೋಡಬಹುದು. ದೇವರನ್ನು ಮಾತ್ರವಲ್ಲ ಮನುಷ್ಯರನ್ನೂ ದೇಶದ ಹಲವೆಡೆ ಆರಾಧಿಸುತ್ತಾರೆ. ತೆಲಂಗಾಣದಲ್ಲಿ ರಾಜಕಾರಣಿ ಸೋನಿಯಾ ಗಾಂಧಿಯವರನ್ನು ಪೂಜಿಸುವ ದೇವಾಲಯದ ಬಗ್ಗೆ ನೀವು ಕೇಳಿರಬಹುದು..

ಹಾಗೆಯೇ ಪಶ್ಚಿಮಬಂಗಾಳದಲ್ಲೊಂದು ದೇವಾಲಯವಿದೆ. ಇಲ್ಲಿ, ಮಹಾನ್ ನಟನನ್ನು ದೇವರಂತೆ ಪೂಜಿಸಲಾಗುತ್ತದೆ. ಯಾವುದು ಆ ದೇವಾಲಯ. ಯಾವ ನಟನಿಗಾಗಿ ಆ ದೇವಾಲಯವನ್ನು ಕಟ್ಟಲಾಗಿದೆ. ಕಟ್ಟಿರೋರು ಯಾರು ಮೊದಲಾದ ವಿಷಯಗಳನ್ನು ತಿಳಿಯೋಣ..

ಸಿನಿಮಾ ನಟ-ನಟಿಯರು ಅಂದ್ರೆ ಸಾಕು ನಮ್ಮ ದೇಶದ ಜನರಿಗೆ ಇನ್ನಿಲ್ಲದ ಅಕ್ಕರೆ, ಅಭಿಮಾನ. ತಮ್ಮ ನೆಚ್ಚಿನ ನಟ-ನಟಿಯರ ಚಿತ್ರ ರಿಲೀಸ್ ಆಗುವಾಗ ಹಲವರು ಪೂಜೆಯನ್ನು ಸಲ್ಲಿಸುತ್ತಾರೆ. ಕಟೌಟ್ಗೆ ಹಾಲು, ಹೂವಿನ ಅಭಿಷೇಕವನ್ನೂ ಮಾಡುತ್ತಾರೆ. ಇನ್ನೂ ಹಲವರು ಮೆಚ್ಚಿನ ನಟ, ನಟಿಯ ಹೆಸರನ್ನು ಮೈ ಮೇಲೆ ಹಚ್ಚೆ ಸಹ ಹಾಕಿಕೊಳ್ಳುತ್ತಾರೆ. ನಟನನ್ನೇ ಆರಾಧ್ಯದೈವವೆಂದು ಅಂಧಭಕ್ತಿಯಿಂದ ಆರಾಧಿಸುವ ಬಳಗವೇ ಇದೆ. ಹಲವು ಮೇರು ನಟರಿಗೆ ದೇಶದ ಹಲವು ರಾಜ್ಯಗಳಲ್ಲಿ ಭವ್ಯವಾದ ದೇವಾಲಯಗಳು ಸಹ ನಿರ್ಮಾಣಗೊಂಡಿವೆ. ಆ ಕುರಿತು ಇಲ್ಲಿದೆ ಮಾಹಿತಿ.

ಅಮಿತಾಬ್ ಬಚ್ಚನ್ ಬಗ್ಗೆ ತಿಳಿದಿರದ ಭಾರತೀಯರಿಲ್ಲ. ಹಿಂದಿ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ಅಮಿತಾಬ್ ಬಚ್ಚನ್ ಬಿಗ್ ಬಿ ಎಂದು ಸಹ ಗುರುತಿಸಿಕೊಂಡಿದ್ದಾರೆ. 1970ರ ದಶಕದಲ್ಲಿ ಆಂಗ್ರಿ ಯಂಗ್ ಮ್ಯಾನ್ ಇಮೇಜ್‍ನೊಂದಿಗೆ ಅಮಿತಾಬ್ ಬಚ್ಚನ್ ಬಾಲಿವುಡ್ ಗೆ ಪರಿಚಿತರಾದರು. ಆ ಬಳಿಕ ನಮಕ್ ಹರಾಮ್‍, ರೋಟಿ ಕಪ್ಡಾ ಔರ್ ಮಕಾನ್, ಚುಪ್ಕೆ ಚುಪ್ಕೆ, ಫರಾರ್‍, ದೀವಾರ್ ಮೊದಲಾದ ಚಿತ್ರಗಳಲ್ಲಿ ಅಮಿತಾಬ್ ಬಚ್ಚನ್ ನಟಿಸಿದ್ದಾರೆ. 1982ರಲ್ಲಿ ತೆರೆಕಂಡ ಕೂಲೀ ಚಿತ್ರ ಬಾಕ್ಸಾಫೀಸಿನಲ್ಲಿ ಸೂಪರ್ ಹಿಟ್‍ ಆಗಿ ಬಚ್ಚನ್ ಹೆಸರನ್ನು ಇನ್ನಷ್ಟು ಉತ್ತುಂಗಕ್ಕೆ ಕರೆದೊಯ್ಯಿತು.

‘ಬಿಗ್‍ ಬಿ’ ಅಭಿಮಾನಿಗಳು ಕಟ್ಟಿದ ದೇವಾಲಯ ಎಲ್ಲಿದೆ..?

Amitabh templeImage Source : yes daida news

ದೇಶಾದ್ಯಂತ ಅಮಿತಾಬ್ ಬಚ್ಚನ್‍ಗೆ ಕೋಟ್ಯಾಂತರ ಮಂದಿ ಅಭಿಮಾನಿಗಳಿದ್ದಾರೆ. ಅಭಿಮಾನಿಗಳ ಪ್ರೀತಿಯ ತೀವ್ರತೆ ಎಷ್ಟರಮಟ್ಟಿಗೆ ಇದೆಯೆಂದರೆ ಪಶ್ಚಿಮಬಂಗಾಳದ ಕೋಲ್ಕೋತ್ತಾದಲ್ಲಿ ಅಮಿತಾಬ್ ಬಚ್ಚನ್ ಹೆಸರಿನಲ್ಲಿ ದೇವಾಲಯವ ನಿರ್ಮಾಣಗೊಂಡಿದೆ. ಕೋಲ್ಕತಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಮಿತಾಬ್ ಬಚ್ಚನ್ ಅವರ ಅಭಿಮಾನಿಗಳಿದ್ದಾರೆ. ಅಮಿತಾಬ್ ಬಚ್ಚನ್ ಅಭಿನಯದ ಹೊಸ ಸಿನಿಮಾ ಬಿಡುಗಡೆಯಾಗುವ ದಿನ ಹಬ್ಬದಂತೆ ಸಂಭ್ರಮಿಸುತ್ತಾರೆ. ಅಲ್ಲಿನ ಜನರೇ ಅಮಿತಾಬ್ ಬಚ್ಚನ್ರನ್ನು ಆರಾಧಿಸುವ 'ಗಾಡ್ ಆಫ್ ಬಾಲಿವುಡ್'ಗೆ ಮಾತ್ರ ಮೀಸಲಾಗಿರುವ ದೇವಾಲಯವನ್ನು ನಿರ್ಮಿಸಿದ್ದಾರೆ.

ಕೋಲ್ಕತ್ತಾಗೂ ಅಮಿತಾಬ್ ಬಚ್ಚನ್ಗೂ ಬಿಟ್ಟು ಬಿಡಲಾಗದ ನಂಟಿದೆ. ಅಮಿತಾಬ್ ಬಚ್ಚನ್ ಅಭಿನಯದ ಹಲವು ಚಿತ್ರಗಳು ಕೋಲ್ಕತ್ತಾದಲ್ಲಿ ಚಿತ್ರೀಕರಣಗೊಂಡಿವೆ. ಕೋಲ್ಕತ್ತಾದ ಹಳೆಯ ನಿವಾಸಿಗಳು ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಚಿತ್ರೀಕರಿಸಲ್ಪಟ್ಟ 'ಸಾರಾ ಜಮಾನಾ ಹಸೀನೋ ಕಾ ದಿವಾನ' ಎಂಬ ಹಿಟ್ ಹಾಡನ್ನು ಎಂದೆಂದಿಗೂ ನೆನಪಿಸಿಕೊಳ್ಳುತ್ತಾರೆ. ಪಿಕು ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ತಮ್ಮ ನೆಚ್ಚಿನ ನಾಯಕನ ನೋಡಲು ನಗರದ ಎಲ್ಲೆಡೆಯಿಂದ ಅಭಿಮಾನಿಗಳು ಆಗಮಿಸಿದ್ದರು

ಕೋಲ್ಕತ್ತಾದ ಜನರ ಪಾಲಿಗೆ ಅಮಿತಾಬ್ ಕೇವಲ ನಟರಲ್ಲ. ದೇವರಯ. ಅಲ್ಲಿ ಅವರನ್ನು ದೇವ ಅವತಾರವೆಂದು ಪರಿಗಣಿಸಲಾಗುತ್ತದೆ. ಬಿಗ್ ಬಿ ಕಂಚಿನಂಥಾ ಧ್ವನಿ, ಆಕ್ಷನ್ ಚಿತ್ರಗಳಲ್ಲಿ ಅವರ ಫೈಟ್ ಎಲ್ಲವನ್ನೂ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾರೆ. ದೀವಾರ್ ಚಿತ್ರದಲ್ಲಿನ ಗ್ಯಾಂಗ್ ಸ್ಟರ್ ನಿಂದ ಪಿಂಕ್ ಚಿತ್ರದಲ್ಲಿ ಹಿರಿಯ ವಕೀಲನ ಪಾತ್ರಗಳಲ್ಲಿ ಎಲ್ಲರೂ ಹುಬ್ಬೇರಿಸುವಂತೆ ನಟಿಸಿದ್ದಾರೆ ಆಂಗ್ರಿ ಯಂಗ್ ಮ್ಯಾನ್‍.

ಅಮಿತಾಬ್ಬಚ್ಚನ್‍ ದೇವಾಲಯ ನಿರ್ಮಿಸಿದವರು ಯಾರು ?

Amitabh temple was built by

Image Source : Bankok Post

ಕೋಲ್ಕತ್ತಾದಲ್ಲಿರುವ ಅಮಿತಾಬ್ಬಚ್ಚನ್ನ ಅಭಿಮಾನಿಯೊಬ್ಬರು 2017ರಲ್ಲಿ ಈ ದೇವಾಲಯ ನಿರ್ಮಿಸಿದ್ದಾರೆ. ಅಮಿತಾಬ್ ಚಿತ್ರಗಳಿಂದ ಸ್ಫೂರ್ತಿ ಪಡೆದ ಅವರು ಈ ದೇವಾಲಯವನ್ನು ನಿರ್ಮಿಸಿದ್ದಾರೆ. ದೇವಾಲಯದಲ್ಲಿ ಸರ್ಕಾರ್ ಲುಕ್ ನಲ್ಲಿರುವ ಬಚ್ಚನ್ ಪ್ರತಿಮೆಯನ್ನು ನೋಡಬಹುದು. ದೇವಸ್ಥಾನದ ಗೋಡೆಗಳ ತುಂಬಾ ಅಮಿತಾಬ್ ಬಚ್ಚನ್ ಅವರ ವೈವಿಧ್ಯಮಯ ಫೋಟೋಗಳನ್ನು ಲಗತ್ತಿಸಿರುವುದನ್ನು ನೋಡಬಹುದು. ದೀವಾರ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಹಾಕಿಕೊಂಡಿದ್ದ ಶೂ ಸಹ ಈ ದೇವಾಲಯದಲ್ಲಿದ್ದು, ಜನರು ಇದನ್ನು ನೋಡಿ ಖುಷಿಪಡುತ್ತಾರೆ.

ಅಮಿತಾಬ್ ಬಚ್ಚನ್ ದೇವಾಲಯವು ಪಶ್ಚಿಮ ಬಂಗಾಳಕೋಲ್ಕತ್ತಾ ಶ್ರೀಧಾರ್ ರಾಯ್ ರಸ್ತೆಯಲ್ಲಿದೆ. ದಿನದ 24 ಗಂಟೆಯೂ ದೇವಾಲಯ ತೆರೆದಿರುತ್ತದೆ.  . ದೇವಾಲಯದ ಕಲಾಕೃತಿಗಳು ಮತ್ತು ಒಳಾಂಗಣಗಳನ್ನು ಆಲ್ ಬಂಗಾಳ ಅಮಿತಾಬ್ ಬಚ್ಚನ್ ಫ್ಯಾನ್ಸ್ ಅಸೋಸಿಯೇಷನ್ ​​ಯೋಜಿಸಿ ಕಾರ್ಯಗತಗೊಳಿಸಿದೆ. ದೇವಾಲಯವು ಪ್ರವೇಶದ್ವಾರದಲ್ಲಿ  ಜೈ ಅಮಿತಾಬ್ ಬಚ್ಚನ್  ಬ್ಯಾನರ್ ಜನರನ್ನು ಸ್ವಾಗತಿಸುತ್ತದೆ. ಎಲ್ಲಾ ದೇವಸ್ಥಾನಗಳಲ್ಲಿ ನಡೆಯುವಂತೆ ಕ್ರಮಬದ್ಧವಾಗಿ ಇಲ್ಲಿ ಪೂಜೆ ಸಹ ನಡೆಯುತ್ತದೆ. ಸರ್ಕಾರ್‍ ರೀತಿಯ ಉಡುಗೆಯನ್ನು ತೊಟ್ಟು ಇಲ್ಲಿನ ಪುರೋಹಿತರು ಪೂಜೆಯನ್ನು ನಡೆಸುತ್ತಾರೆ. ಅದೇನೆ ಇರ್ಲಿ, ಅಭಿಮಾನಿಗಳ ಪ್ರತೀಕವಾದ ಅಮಿತಾಬ್ ಬಚ್ಚನ್ ದೇವಾಲಯ ಎಲ್ಲರೂ ಹುಬ್ಬೇರುವಂತೆ ಮಾಡಿದೆ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 ►Follow us on Facebook

https://www.facebook.com/Planettvkannada

 ►Follow us on Blogspot

https://planettvkannada.blogspot.com

 ►Follow us on Dailymotion

https://www.dailymotion.com/planettvkannada

 ►Follow us on Instagram

https://www.instagram.com/planettvkannada/

 ►Follow us on Pinterest

https://in.pinterest.com/Planettvkannada/

 ►Follow us on Koo App

https://www.kooapp.com/profile/planettvkannada

 ►Follow us on Twitter

https://twitter.com/Planettvkannada

 ►Follow us on Share Chat

https://sharechat.com/profile/planettvkannada

 ►Follow us on Tumgir

https://www.tumgir.com/planettvkannada

 ►Follow us on Tumbler

https://planettvkannada.tumblr.com/

 ►Follow us on Telegram

 

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author