An IIM Professor was born here, ಪುಟ್ಟ ಗುಡಿಸಲಿನಿಂದ ಬೆಳೆದು ಬಂದ ಪ್ರತಿಭೆ

ಸಾಧಕನಿಗೆ ಯಾವುದೂ ಅಡ್ಡಿಯಲ್ಲ ಅನ್ನೋದಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಇದು ಪುಟ್ಟ ಗುಡಿಸಲಿನಲ್ಲಿ ಹುಟ್ಟಿ ಬಡತನದಲ್ಲೇ ಬದುಕು ಕಟ್ಟಿಕೊಂಡ ವ್ಯಕ್ತಿಯ ಅಪರೂಪದ ಕಥೆ. ಪರಿಶ್ರಮ ಯಾವ ರೂಪದಲ್ಲಾದರೂ ಫಲ ನೀಡುತ್ತದೆ ಎಂಬುದಕ್ಕೆ ಕೇರಳದಕಾಸರಗೋಡು ಜಿಲ್ಲೆಯ ರಂಜಿತ್ ರಾಮಚಂದ್ರನ್ ಅವರ ಈ ಕಥೆಯೇ ಸಾಕ್ಷಿ.

 

ಟರ್ಪಾಲು ಹೊದಿಸಿರುವ ಸಣ್ಣ ಗುಡಿಸಲು, ದುಡಿದರಷ್ಟೇ ಆ ದಿನದ ತುತ್ತು, ಪುಟ್ಟ ಗುಡಿಸಲಿನಲ್ಲಿ ಮಲಗಲೂ ಜಾಗವಿಲ್ಲ. ಮಳೆ ಬಂದರಂತೂ ಪಡಬಾರದ ಪಾಡು. ಉಳಿದ ಸೌಲಭ್ಯಗಳಂತೂ ಮರೀಚಿಕೆ. ಹೀಗಿದ್ದೂ ಆ ಪುಟ್ಟ ಗುಡಿಸಲಿನಲ್ಲಿ ಹುಟ್ಟಿ ಬೆಳೆದಾತ ಎಲ್ಲರೂ ನಿಬ್ಬೆರಗಾಗುವ ಸಾಧನೆ ಮಾಡಿದ್ದಾರೆ. ಜೀವನದ ಸವಾಲುಗಳನ್ನೆಲ್ಲಾ ಗೆದ್ದು ಇಂದು ರಾಂಚಿಯ ಐಐಎಂಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ranjith ramachandransource and pic credit:https://www.news18.com/

ಬಡತನದ ಕುಟುಂಬದಿಂದ ಬಂದ ರಂಜಿತ್‍

 

ರಂಜಿತ್ ಅವರ ತಂದೆ ರಾಮಚಂದ್ರನ್ ನಾಯ್ಕ್, ವೃತ್ತಿಯಲ್ಲಿ ಟೈಲರ್ ಆಗಿದ್ದಾರೆ. ತಾಯಿ ಬೇಬಿ ಆರ್ ಅವರು ಪಣತ್ತೂರಿನ ಕೇಲಪಂಕಯಂನಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ರಂಜಿತ್ ಅವರು ಪಿಲಿಕೋಡ್ ಪಂಚಾಯತ್‌ನ ವೆಲ್ಲಾಚಲ್‌ನಲ್ಲಿ ಬುಡಕಟ್ಟು ಸಮುದಾಯದ ಬಾಲಕರಿಗಾಗಿ ಸರ್ಕಾರ ನಡೆಸುವ ಮಾದರಿ ವಸತಿ ಶಾಲೆಗೆ ಸೇರಿ ಹತ್ತನೇ ತರಗತಿಯ ವಿದ್ಯಾಭ್ಯಾಸ ಪೂರೈಸಿದರು. ನಂತರ ಕಾಲೇಜಿಗೆ ಸೇರಿಕೊಂಡರು. 

 

ಈ ಸಮಯದಲ್ಲಿ ಮನೆಯ ಆರ್ಥಿಕ ಸಂಕಷ್ಟವನ್ನು ಅರಿತುಕೊಂಡಿದ್ದ ರಂಜಿತ್​ ತಿಂಗಳಿಗೆ 4000 ರೂಪಾಯಿ ಸಂಬಳಕ್ಕಾಗಿ ವಾಚ್​ಮ್ಯಾನ್ ಕೆಲಸಕ್ಕೆ ಸೇರಿದರು. ಬಿಎಸ್​ಎನ್​ಎಲ್​ನಲ್ಲಿ ರಾತ್ರಿ ಪಾಳಿಯ ಕೆಲಸ, ಹಗಲು ಕಾಲೇಜು. ಹೀಗೆ ಪದವಿ, ಸ್ನಾತಕೋತ್ತರ ಪದವಿಯನ್ನು ಮುಗಿಸಿಕೊಂಡರು.

ranjith ramachandransource and pic credit: the economic times

28 ವರ್ಷದ ರಂಜಿತ್ ಆರ್ ಅವರು ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದುಕೊಂಡರು. ರಾಂಚಿಯ ಐಐಎಂನಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆ ಸಿಗುವ 2 ತಿಂಗಳು ಮೂದಲು ಬೆಂಗಳೂರಿನಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.ನಂತರ ತಮ್ಮ ಜೀವನದ ಜರ್ನಿಯ ಬಗ್ಗೆ ಫೇಸ್​ಬುಕ್​ನಲ್ಲಿ ಒಂದು ಪೋಸ್ಟ್​ ಮಾಡಿದ್ದರು. ಆ ಪೋಸ್ಟ್​ ಜೊತೆಗೆ ತಾವು ವಾಸವಾಗಿದ್ದ ಮನೆಯ ಒಂದು ಫೋಟೋವನ್ನು ಸಹ ಶೇರ್‍ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.. 

ranjith ramachandransource and pic credit: https://navbharattimes

ವೈರಲ್ ಆದ ರಂಜಿತ್ ಕಥೆ

ರಂಜಿತ್‍ ಫೇಸ್‍ಬುಕ್‍ನಲ್ಲಿ ತಮ್ಮ ಟರ್ಪಾಲು ಹೊದಿಸಿದ ಪುಟ್ಟ ಗುಡಿಸಲಿನ ಫೋಟೋವನ್ನು ಶೇರ್ ಮಾಡಿ, An IIM Professor was born here ಎಂದು ಹಾಕಿಕೊಂಡಿದ್ದರು.ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹಣಕಾಸು ಸಚಿವ ಟಿಎಂ ಥಾಮಸ್ ಐಸಾಕ್ ಅವರು ಫೇಸ್‌ಬುಕ್‌ನಲ್ಲಿ ರಾಮಚಂದ್ರನ್ ಅವರಿಗೆ ಶುಭ ಹಾರೈಸಿದ್ದರು. ರಂಜಿತ್ ರಾಮಚಂದ್ರನ್ ಎಲ್ಲರಿಗೂ ಸ್ಫೂರ್ತಿ. ಬಡತನವದಲ್ಲೂ ಛಲಬಿಡದೆಅದ್ಭುತ ಸಾಧನೆ ಮಾಡಿದ್ದಾರೆ. ಇವರ ಸಾಧನೆ ಎಲ್ಲರಿಗೂ ಸ್ಫೂರ್ತಿ" ಎಂದು ಶ್ಲಾಘಿಸಿದ್ದರು.

ranjith ramachandransource and pic credit: https://odishatv.in

 

ತಮ್ಮ ಪೋಸ್ಟ್ ವೈರಲ್ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ ರಂಜಿತ್ ರಾಮಚಂದ್ರನ್‍, ಸಾಧನೆಗೆ ಬಡತನ ಅಡ್ಡಿಯಲ್ಲ. ನನ್ನಂತೆ ಕಷ್ಟಪಡುತ್ತಿರುವ ಯಾರಿಗಾದರೂ ನನ್ನ ಕಥೆ ಸ್ಫೂರ್ತಿಯಾಗಲಿ ಎಂದು ಈ ಪೋಸ್ಟ್ ಮಾಡಿರುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಪರಿಸ್ಥಿತಿ ಏನೇ ಇದ್ದರೂ ಕನಸು ಕಾಣಬೇಕು. ಕನಸು ಕಂಡು ಅದಕ್ಕಾಗಿ ಪರಿಶ್ರಮ ಪಟ್ಟರಷ್ಟೇ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದಿದ್ದಾರೆ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author