ಶ್ರೀ ರಾಜೀವ್ ಗಾಂಧಿ ಹತ್ಯೆ! ಭದ್ರತಾ ಲೋಪ ಆದದ್ದು ಹೇಗೆ?!

ಈಗ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವ ಮುನ್ನ ಸಾಕಷ್ಟು ಭದ್ರತಾ ಪರಿ ಶೀಲನೆ ಮಾಡಲಾಗುತ್ತದೆ. ಅಗತ್ಯವಿದ್ದಾಗ z+ ಸೆಕ್ಯುರಿಟಿ ನೀಡಲಾಗುತ್ತದೆ. ಆದರೆ ಇತಿಹಾಸದ ಉದ್ದಕ್ಕೂ ಅಲ್ಲಲ್ಲಿ ಅವಘಡಗಳು ಸಂಭವಿಸುತ್ತಲೇ ಇರುತ್ತದೆ. ಇಂದಿರಾಗಾಂಧಿ ಅವರ ಹತ್ಯೆ ಆದಾಗ ಆ ಘಟನೆಯಿಂದ ಪಾಠ ಕಲಿಯದ ತಪ್ಪು ರಾಜೀವ್ ಗಾಂಧಿಯ ಹತ್ಯೆಗೂ ಕಾರಣ ಆಯಿತು.

ಅಷ್ಟಕ್ಕೂ ರಾಜೀವ್ ಗಾಂಧಿ ಅವರು ಎಲ್ ಟಿ ಟಿ ಯನ್ನು ನಿಗ್ರಹಿಸುವ ಸಲುವಾಗಿ ಶ್ರೀಲಂಕಾಕ್ಕೆ ಭಾರತೀಯ ಸೈನ್ಯ ಕಳುಹಿಸಿದರು. ಅದೊಂದು ನಿರ್ಧಾರ ಅವರು ಚಾಚಿದ ಸಹಾಯ ಹಸ್ತ ದುಬಾರಿ ಆಗಿತ್ತು. ಯಾವಾಗ ರಾಜೀವ್ ಗಾಂಧಿ ಅವರು ಕಳುಹಿಸಿದ ಸೈನ್ಯ ಶ್ರೀಲಂಕದಲ್ಲಿ ನುಗ್ಗಿ ಎಲ್ ಟಿ ಟಿ ಅವರನ್ನು ಬಗ್ಗು ಬಡಿಯಿತು ಅಲ್ಲಿಗೆ ಎಲ್ ಟಿ ಟಿ ತಂಡಕ್ಕೆ ಒಂದು ವಿಷಯ ಪಾಠದಂತೆ ಅರ್ಥವಾಯಿತು. ರಾಜೀವ್ ಗಾಂಧಿಯವರು ಪುನಃ ಪ್ರಧಾನಿ ಆದರೆ ಎಲ್ ಟಿ ಟಿ ಹೇಳ ಹೆಸರು ಇಲ್ಲದೇ ನಾಮಾವಶೇಷ ಆಗಲಿದೆ. ಆ ಕೂಡಲೇ ಎಲ್ ಟಿ ಟಿ ಎಚ್ಛೆತ್ತುಕೊಂಡಿತು. ರಾಜೀವ್ ಅವರನ್ನು ಮುಗಿಸುವ ನಿರ್ಧಾರ ತೆಗೆದುಕೊಂಡಾಗ ರಾಜೀವ್ ಗಾಂಧಿ ಅವರ ಪಾಲಿಗೆ ಡೆತ್ ವಾರೆಂಟ್ ಪಾಸ್ ಆಗಿತ್ತು!

ಹ್ಯೂಮನ್ ಬಾಂಬ್ ಅಥವಾ ಮಾನವ ಬಾಂಬ್ ದಾಳಿಯ ಬಗ್ಗೆ ಆಗ ಯಾರೂ ಊಹಿಸಿರಲಿಲ್ಲ. ಆದರೆ ಎಲ್ ಟಿ ಟಿ ರಾಜೀವ್ ಗಾಂಧಿ ಅವರನ್ನು ಮುಗಿಸಲು ಬ್ರಹ್ಮಾಸ್ತ್ರ ಹೂಡುವ ನಿರ್ಧಾರಕ್ಕೆ ಬಂದಿತ್ತು. ಅವತ್ತು ಎಲ್ ಟಿ ಟಿ ಯ ಧನು ಹರಕೆಯ ಕುರಿಯಂತೆ ರಾಜೀವ್ ಗಾಂಧಿ ಅವರನ್ನು ಮುಗಿಸಲು ಆತ್ಮಹತ್ಯೆ ಮಾಡಿಕೊಳ್ಳುವ ಮಾನವ ಬಾಂಬ್ ರ್ ಆಗಿ ಸಿದ್ಧನಾದ.

ಅವತ್ತು ಮೇ 21, 1991 ರಾಜೀವ್ ಗಾಂಧಿ ತಮಿಳುನಾಡಿನ ಪೆರಂಬೂರಿಗೆ ಚುನಾವಣೆ ಪ್ರಚಾರಕ್ಕೆ ಬರಲಿದ್ದಾರೆ ಎನ್ನುವ ಮಾಹಿತಿ ಅಧರಿಸಿ ದಾಳಿ ಮಾಡಲು ಒಂದು ಪ್ಲಾನ್ ಮಾಡಲಾಯಿತು. ಅವತ್ತು ಆಂಧ್ರ ಪ್ರದೇಶದ ವಿಶಾಖ ಪಟ್ಟಣo ನಿಂದ ತಮಿಳು ನಾಡಿನ ಪೆರಂಬೂರಿಗೆ ಕಾರಿನಲ್ಲಿ ಬರುವಾಗ ಆತ್ಮಹತ್ಯೆ ಬಾಂಬರ್ ಧನು ಸೊಂಟಕ್ಕೆ ಆರ್ ಡಿ ಎಕ್ಸ್ ಕಟ್ಟಿಕೊಂಡು ಸಿದ್ಧನಾಗಿದ್ದ. ದಾರಿಯುದ್ಧಕ್ಕೂ ರಾಜೀವ್ ಗಾಂಧಿ ಅವರಿಗೆ ಹಾರ ಹಾಕಲು ಸಾಕಷ್ಟು ನೂಕು ನುಗ್ಗಲಿತ್ತು. ಸ್ಥಳೀಯ ಕಾಂಗ್ರೆಸ್ ನಾಯಕರು ಭದ್ರಾತಾ ಲೋಪ ಆಗುತ್ತದೆ, ಪ್ರೊಟೊಕಾಲ್ ಉಲ್ಲಂಘನೆ ಆಗುತ್ತದೆ ಎನ್ನುವ ಅರಿವು ಇದ್ದೂ ರಾಜೀವ್ ಗಾಂಧಿಯವರನ್ನು ಭೇಟಿ ಆಗಲು ಗುಂಪಿನ ನಡುವೆ ಹಾತೊರೆಯುತ್ತಿದ್ದರು.

ಆಗ ಆ ಗುಂಪಿನ ನಡುವೆಯಿಂದ ಬಂದ ಧನು ರಾಜೀವ್ ಗಾಂಧಿಯ ಹತ್ತಿರಕ್ಕೆ ಬಂದು ಆರ್ ಡಿ ಎಕ್ಸ್ ಬಟನ್ ಅನ್ನು ಅದುಮುತಿದ್ದ ಹಾಗೆ ಭೀಕರ ಸ್ಫೋಟ ಕೇಳಿಸಿತು. ಸಾವಿನ ಯಾವ ಮುನ್ಸೂಚನೆ ಇಲ್ಲದ ರಾಜೀವ್ ಗಾಂಧಿ ಅವರು ಕಣ್ಣು ಮಿಟುಕಿಸಿ ತೆರೆಯುವಷ್ಟರಲ್ಲಿ ಬಾಂಬ್ ದಾಳಿಗೆ ಬಲಿಯಾಗಿದ್ದರು. ಅಸಲಿಗೆ ರಾಜೀವ್ ಗಾಂಧಿ ಅವರಿಗೆ ರಾಜಕೀಯಕ್ಕೆ ಬರಲು ಯಾವ ಒಲವು ಇರಲಿಲ್ಲ. ಅವರು ಪೈಲೆಟ್ ಆಗಲು ಬಯಸಿದ್ದರು. ಸಂಜಯ್ ಗಾಂಧಿ ನಿಧನದ ಕಾರಣದಿಂದ ಅವರು ಅನಿವಾರ್ಯವಾಗಿ ರಾಜಕೀಯದತ್ತ ಹೆಜ್ಜೆ ಇಡಬೇಕಾಯಿತು. ನಂತರ ಅವರು ಪ್ರಧಾನಿ ಆದರು. ಆದರೆ ಶ್ರೀ ಲಂಕಾಕ್ಕೆ ಸಹಾಯ ಹಸ್ತ ಚಾಚಲು ಅವರು ತೆಗೆದುಕೊಂಡ ಒಂದು ನಿರ್ಧಾರ ಅವರ ಹತ್ಯೆಯಲ್ಲಿ ಮುಕ್ತಾಯವಾಯಿತು.

ಶ್ರೀಮತಿ ಇಂದಿರಾಗಾಂಧಿ ಹಾಗೂ ಫಿರೋಜ್ ಗಾಂಧಿಯವರ ಹಿರಿಯ ಮಗನಾದ ರಾಜೀವ್ ಗಾಂಧಿಯನ್ನು ರಾಜಕೀಯಕ್ಕೆ ಎಳೆ ತಂದು ಅವರು ಹತ್ಯೆಯಾದಾಗ ಒಂಟಿ ಆದವರು ಸೋನಿಯಾ ಗಾಂಧಿ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಅವರು ತಂದೆಯನ್ನು ಕಳೆದುಕೊಂಡು ಜೀವನವಿಡೀ ತಂದೆಯ ಪ್ರೀತಿಯಿಂದ ವಂಚಿತರಾಗಬೇಕಾಯಿತು. ತಮಿಳುನಾಡಿಗೆ ಚುನಾವಣೆ ಪ್ರಚಾರ ತೆರಳುವ ಮುನ್ನ ರಾಜೀವ್ ಗಾಂಧಿ ಅವರಿಗೆ ಜೀವ ಬೆದರಿಕೆ ಇದೆಯೆಂದು ಸ್ಪಷ್ಟವಾಗಿ ಮಾಹಿತಿ ಇದ್ದರೂ ರಾಜೀವ್ ಗಾಂಧಿ ಅವರು ಧೈರ್ಯವಾಗಿ ಮುನ್ನುಗ್ಗಿದರು. ಅವರ ಮುನ್ನುಗ್ಗುವಿಕೆ ಕಿಂಚಿತ್ ಭದ್ರತಾ ಲೋಪದಿಂದ ದುರಂತದಲ್ಲಿ ಕೊನೆಗೊಂಡಿದ್ದು ಈ ದೇಶದ ದುರಂತಗಳಲ್ಲಿ ಒಂದು!

Featured Image Source: Google 

Enjoyed this article? Stay informed by joining our newsletter!

Comments

You must be logged in to post a comment.

About Author