ವಿಧಾನ ಪರಿಷತ್ ಚುನಾವಣೆ ಅಂಗವಾಗಿ ಪಕ್ಷದ ಅಭ್ಯರ್ಥಿ ಪರ ಮತಯಾಚನೆ.

ಗ್ರಾಮ ಪಂಚಾಯ್ತಿಗಳಿಗೆ ನೇರ ಅನುದಾನ ನೀಡಿದ ಕೀರ್ತಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಅರೇನಹಳ್ಳಿ, ಭುವನಹಳ್ಳಿ ಹಾಗೂ ಬೈಲಕುಪ್ಪೆ ಗ್ರಾಮಗಳಲ್ಲಿ ಸಭೆ ನಡೆಸಿ ಮುಂಬರುವ ವಿಧಾನ ಪರಿಷತ್ ಚುನಾವಣೆ ಅಂಗವಾಗಿ ಪಕ್ಷದ ಅಭ್ಯರ್ಥಿ ಪರ ಮತಯಾಚಿಸಿ ಅವರು ಮಾತನಾಡಿದರು, ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರವಿರುವುದರಿಂದ ವಿಧಾನಪರಿಷತ್ ಸದಸ್ಯರು ನಮ್ಮ ಪಕ್ಷದಿಂದ ಆಯ್ಕೆಯಾದಲ್ಲಿ ಗ್ರಾಮ ಪಂಚಾಯತಿಗಳ ಅಭಿವೃದ್ಧಿಗೆ ಅವರಿಗೆ ಹೆಚ್ಚಿನ ಸಹಕಾರ ದೊರೆಯಲಿದೆ, ಪಕ್ಷದ ವತಿಯಿಂದ  ಯಾವುದೇ ಗೊಂದಲ ಮತ್ತು ಅಸಮಾಧಾನಕ್ಕೆ ಎಡೆ ಕೊಡದೆ ಅಭ್ಯರ್ಥಿ ಆಯ್ಕೆ ಮಾಡಿ ಈಗಾಗಲೇ ಬಿರುಸಿನ ಪ್ರಚಾರದಲ್ಲಿ ತೊಡಗಲಾಗಿದೆ ಆದರೆ ಕಾಂಗ್ರೆಸ್ ನವರು ತಡವಾಗಿ ಅಭ್ಯರ್ಥಿಯನ್ನು ಘೋಷಣೆ ಮಾಡಿ ಇನ್ನೂ ಗೊಂದಲ ಮುಂದುವರೆದಿದ್ದು ಅವರು ಪ್ರಚಾರ ಮುಗಿಸುವಷ್ಟರಲ್ಲಿ ನಾವು ಗೆಲುವಿನ ದಡ 
ಸೇರಿರುತ್ತೇವೆ, ಇನ್ನು ಜೆಡಿಎಸ್ ಅಭ್ಯರ್ಥಿ ಒಂದೇ ನಿವೇಶನವನ್ನು ಮೂರ್ನಾಲ್ಕು ಜನರಿಗೆ ಮಾರಾಟ ಮಾಡಿರುವ ಅಪಖ್ಯಾತಿಗೆ ಸಿಲುಕಿದ್ದು ಗೆಲುವು ಸಾಧಿಸಿದರೆ ಮೈಸೂರು ಮತ್ತು ಚಾಮರಾಜನಗರವನ್ನು ಯಾರಿಗಾದರೂ ಮಾರಾಟ ಮಾಡಲು ಹೇಸುವುದಿಲ್ಲ, ನಮ್ಮ ಅಭ್ಯರ್ಥಿ ರಘು ಕೌಟಿಲ್ಯ ಅವರು ಈ ಹಿಂದೆ ವಿಧಾನಪರಿಷತ್ ಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು ಎದೆಗುಂದದೆ ಪಕ್ಷ ಸಂಘಟನೆಯಲ್ಲಿ ತೊಡಗಿ ಗ್ರಾಮ ಪಂಚಾಯಿತಿ ಸದಸ್ಯರ ಸಂಪರ್ಕದಲ್ಲಿರುವುದು ನಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಅಭ್ಯರ್ಥಿ ರಘು ಕೌಟಿಲ್ಯ ಮಾತನಾಡಿ ಸಾಮಾನ್ಯ ಕಾರ್ಯಕರ್ತನಾದ ನನಗೆ ಮತ್ತೊಮ್ಮೆ ಅವಕಾಶ ನೀಡಿರುವ ಪಕ್ಷಕ್ಕೆ ಮತ್ತು ನನ್ನನ್ನು ಗೆಲ್ಲಿಸಿದರೆ ಗ್ರಾ.ಪಂ. ಸದಸ್ಯರಿಗೆ ದ್ರೋಹ ಬಗೆಯದೆ ಗ್ರಾಮ ಪಂಚಾಯಿತಿಗಳಿಗೆ ಶಕ್ತಿ ತುಂಬುವ ಕೆಲಸ ಮಾಡಲಿದ್ದೇನೆ, ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿಯೂ ನಡೆಯುವ ಗ್ರಾಮ ಸಭೆಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುವೆ ಎಂದರು.
ಮಾಜಿ ಸಂಸದ ಸಿ.ಎಚ್ ವಿಜಯ್ ಶಂಕರ್ ಮಾತನಾಡಿ ಸರಳ ಸಜ್ಜನಿಕೆ ಮತ್ತು ಪ್ರಾಮಾಣಿಕತೆಗೆ ಹೆಸರಾದ ರಘು ಕೌಟಿಲ್ಯ ಅವರನ್ನು ಪಕ್ಷದ ವತಿಯಿಂದ ಅಭ್ಯರ್ಥಿ ಮಾಡಲಾಗಿದ್ದು ಅವರ ಗೆಲುವಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದರು.
ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೃಷ್ಣಪ್ಪಗೌಡ, ಮಾಜಿ ಶಾಸಕ ಎಚ್.ಸಿ ಬಸವರಾಜು, ಜಿಲ್ಲಾ ವಕ್ತಾರ ವಸಂತ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಅಣ್ಣಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಎಂ.ಎಂ ರಾಜೇಗೌಡ, ಯುವ ಮೋರ್ಚಾ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಕೆಡಬ್ಲ್ಯುಎಸ್ಎಸ್ ಬಿ ನಿರ್ದೇಶಕ ಆರ್.ಟಿ ಸತೀಶ್, ಪುರಸಭಾ ಸದಸ್ಯರಾದ ನಳಿನಿ, ಶಿವರಾಮೇಗೌಡ, ಗ್ರಾ.ಪಂ ಉಪಾಧ್ಯಕ್ಷ ಶಿವಕುಮಾರ್,  ಮುಖಂಡರಾದ ಕೆ.ಎನ್ ಸೋಮಶೇಖರ್, ಪಿ.ಜೆ ರವಿ, ಡಾ.ಶಿವರಾಂ, ವೀರಭದ್ರ, ಚಂದ್ರು, ಸುನೀಲ್, ಬಿ.ಎಸ್ ಮಹದೇವ್, ಅರುಣ್ ರಾಜೆಅರಸ್, ಮಲ್ಲೇಶ್, ಮೈಲಾರಿ ಮತ್ತು ಪಕ್ಷದ ಕಾರ್ಯಕರ್ತರು ಹಾಜರಿದ್ದರು.


Enjoyed this article? Stay informed by joining our newsletter!

Comments

You must be logged in to post a comment.

Related Articles
About Author