ದುಬಾರಿಯಾಗಲಿದೆ ATMನಿಂದ ಹಣ ತೆಗೆಯುವ ಪ್ರಕ್ರಿಯೆ: ಹೊಸ ದರದ ಮಾಹಿತಿ ಇಲ್ಲಿದೆ

ಸದ್ಯ ಡಿಜಿಟಲ್ ಪೇಮಂಟ್ (Digital Payment) ಸೌಲಭ್ಯಗಳಿದ್ರೂ, ಗ್ರಾಮೀಣ ಮಟ್ಟದಲ್ಲಿ ಹಣದ (Money) ಬಳಕೆಗೆ ಮೊದಲ ಆದ್ಯತೆ ನೀಡುತ್ತಾರೆ. ಪೇಟಿಎಂ(Paytm), ಗೂಗಲ್ ಪೇ (Google Pay) ಇಂತಹ ವ್ಯವಸ್ಥೆಗಳಿದ್ರೂ, ಗ್ರಾಮೀಣ ಭಾಗದ ಜನರು ಬಳಸಲ್ಲ. ಪರ್ಯಾಯ ಯಾವುದೇ ವ್ಯವಸ್ಥೆಗಳು ಇರದಿದ್ರೆ, ಡಿಜಿಟಲ್ ವ್ಯವಸ್ಥೆಯನ್ನು ಅವಲಂಬಿಸುತ್ತಾರೆ. ಎಟಿಎಂ(ATM- Automated teller machine)ನಿಂದ ಹಣ ಡ್ರಾ ಮಾಡೋದು ಜನವರಿಯಿಂದ ಮತ್ತಷ್ಟು ದುಬಾರಿಯಾಗಲಿದೆ. 2022 ರಿಂದ ಎಟಿಎಂಗಳಿಂದ ನಗದು ಹಿಂಪಡೆಯುವುದು ಹೆಚ್ಚು ದುಬಾರಿಯಾಗಲಿದೆ. ಮುಂದಿನ ತಿಂಗಳಿನಿಂದ ಎಟಿಎಂ ಬಳಕೆದಾರರು ಉಚಿತ ಎಟಿಎಂ ವಹಿವಾಟಿನ (Free Transaction) ಮಿತಿಯನ್ನು ಮೀರಿದರೆ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ರಿಸರ್ವ್ ಬ್ಯಾಂಕ್ (ಆರ್‌ಬಿಐ RBI) ಮಾರ್ಗಸೂಚಿಗಳ ಪ್ರಕಾರ, ಆಕ್ಸಿಸ್ ಬ್ಯಾಂಕ್ ಅಥವಾ ಇತರ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಉಚಿತ ಮಿತಿಗಿಂತ ಹೆಚ್ಚಿನ ಹಣಕಾಸು ವಹಿವಾಟುಗಳಿಗೆ ಶುಲ್ಕ 21 ರೂ ಮತ್ತು ಜಿಎಸ್‌ಟಿ ಸೇರ್ಪಡೆಯಾಗಲಿದೆ ಎಂದು ಆಕ್ಸಿಸ್ ಬ್ಯಾಂಕ್ ಹೇಳಿದೆ. ಈ ಪರಿಷ್ಕೃತ ದರಗಳು ಜನವರಿ 1, 2022 ರಿಂದ ಜಾರಿಗೆ ಬರುತ್ತವೆ.

ಪ್ರತಿ ಹೆಚ್ಚಿನ ವಹಿವಾಟಿಗೆ 21 ರೂ. ಶುಲ್ಕ ಪ್ಲಸ್ ಜಿಎಸ್‌ಟಿ

ಇಲ್ಲಿಯವರೆಗೆ, ಉಚಿತ ವಹಿವಾಟಿನ ಮಾಸಿಕ ಮಿತಿಯನ್ನು ದಾಟಲು ಗ್ರಾಹಕರು ರೂ 20 ಶುಲ್ಕವನ್ನು ಪಾವತಿಸಬೇಕಾಗಿತ್ತು. ಅದೇ ಸಮಯದಲ್ಲಿ, ಮುಂದಿನ ತಿಂಗಳಿನಿಂದ, ಪ್ರತಿ ವಹಿವಾಟಿಗೆ 21 ರೂ. ಜೊತೆಗೆ GST ಪಾವತಿಸಬೇಕಾಗುತ್ತದೆ. ಆರ್‌ಬಿಐ ಸುತ್ತೋಲೆಯ ಅಡಿಯಲ್ಲಿ ಬ್ಯಾಂಕುಗಳಿಗೆ ಹೆಚ್ಚಿನ ವಿನಿಮಯ ಶುಲ್ಕವನ್ನು ಸರಿದೂಗಿಸಲು ವೆಚ್ಚದಲ್ಲಿ ಸಾಮಾನ್ಯ ಹೆಚ್ಚಳ ಮಾಡಿದೆ. ಹಾಗಾಗಿ ಪ್ರತಿ ವಹಿವಾಟಿಗೆ ಶುಲ್ಕವನ್ನು 21 ರೂ.ಗೆ ಹೆಚ್ಚಿಸಲು ಬ್ಯಾಂಕ್‌ಗಳಿಗೆ ಅವಕಾಶ ನೀಡಲಾಗಿದೆ.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author

A passionate Creator