ಸತ್ತು ವರ್ಷಗಳಾದರೂ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೋಸ್ಟ್ ಸೋಲ್ಜರ್..!

Baba Harbhajan SinghFeatured Image Source : Facebook

ಭವ್ಯ ಭಾರತವನ್ನು ಭಾರತೀಯ ಸೇನೆಸೇನೆಯಲ್ಲಿರುವ ಯೋಧರು ಕಣ್ಣಲ್ಲಿ ಕಣ್ಣಿಟ್ಟು ರಕ್ಷಿಸುತ್ತಿದ್ದಾರೆಭೂಸೇನೆನೌಕಾಸೇನೆವಾಯುಸೇನೆಯಲ್ಲಿರುವ ಅಸಂಖ್ಯಾತ ಯೋಧರು ಶತ್ರುಗಳ ದೇಶದೊಳಗೆ ನುಗ್ಗಿ ಬರದಂತೆ ಗಡಿಯಲ್ಲಿ ಕಾಯುತ್ತಿದ್ದಾರೆಧೀರರಂತೆ ಶತ್ರುಗಳ ಜತೆ ಹೋರಾಡುತ್ತಾರೆವೀರರಂತೆ ಹೋರಾಡಿ ಗುಂಡಿಗೆ ಎದೆಯೊಡ್ಡಿ ಹುತಾತ್ಮರಾಗುತ್ತಾರೆದೇಶ ಕಾಯುವ ಪ್ರತಿಯೊಬ್ಬ ಯೋಧನ ದೇಹದ ಕಣಕಣದಲ್ಲೂ ದೇಶಭಕ್ತಿಯೇ ಹರಿದಾಡುತ್ತಿರುತ್ತದೆಶತ್ರುಗಳನ್ನು ಹಿಮ್ಮೆಟ್ಟಿಸಬೇಕೆಂಬ ಛಲವಿರುತ್ತದೆಎಂಥಹಾ ಮಳೆಯಿರಲಿಚಳಿಯಿರಲಿಹಿಮವಿರಲಿ ಗಡಿ ಕಾಯುವುದೇ ಅವರ ಮೊದಲ ಕರ್ತವ್ಯ.

ಭಾರತದ ಎಲ್ಲಾ ಗಡಿಗಳಲ್ಲಿ ಭಾರತೀಯ ಯೋಧರು ತಮ್ಮ ಸಮವಸ್ತ್ರಗಳನ್ನು ಧರಿಸಿಶಸ್ತ್ರಾಸ್ತ್ರಗಳನ್ನು ಹಿಡಿದು ಶಿಸ್ತುಬದ್ಧವಾಗಿ ಗಡಿ ಕಾಯುವುದನ್ನು ನೋಡಬಹುದುಅದೇ ರೀತಿ ಸಿಕ್ಕಿಂನಲ್ಲೂ ಯೋಧನೊಬ್ಬ ಅವಿರತವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಆದರೆ ಅಚ್ಚರಿಪಡುವ ವಿಷಯವೆಂದರೆಹೀಗೆ ಗಡಿಯನ್ನು ಕಾಯುತ್ತಿರುವ ಯೋಧ ಹುತಾತ್ಮರಾಗಿ ವರ್ಷಗಳೇ ಕಳೆದಿವೆಅರೆಇದೇನು ಆಶ್ಚರ್ಯ ಅಂತೀರಾಇಲ್ಲಿದೆ ಹೆಚ್ಚಿನ ಮಾಹಿತಿ.

ಹೌದುಸಿಕ್ಕಿಂನಲ್ಲಿ ಗಡಿ ಕಾಯುತ್ತಿರುವುದು ವರ್ಷಗಳ ಹಿಂದೆ ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಯೋಧನ ಆತ್ಮಭಾರತೀಯ ಸೇನೆಯಲ್ಲಿ 1962ರ ಚೀನಾ-ಭಾರತ ಯುದ್ಧದಲ್ಲಿ ಮರಣ ಹೊಂದಿದ ಬಾಬಾ ಹರ್ಭಜನ್ ಸಿಂಗ್ ಅವರ ಆತ್ಮವು ಭಾರತದ ಪೂರ್ವ ಸಿಕ್ಕಿಂನ ನಾಥುಲಾ ಪಾಸ್ಟ್‍ ನಲ್ಲಿ ಇಂದಿಗೂ ಕರ್ತವ್ಯ ನಿರ್ವಹಿಸುತ್ತಿದೆಆತ್ಮದ ಓಡಾಟದ ಅನುಭವವಾಗಿದೆ ಅಂತಾರೆ ಇಲ್ಲಿನ ಜನರು.

Baba harbhajan singh Ghost SoldierImage Source : Bong Yatra

ಬಾಬಾ ಹರ್ಭಜನ್ ಸಿಂಗ್ ಭಾರತೀಯ ಸೇನೆಯಲ್ಲಿ ಸೈನಿಕರಾಗಿದ್ದರು. 1962ರ ಚೀನಾ-ಭಾರತ ಯುದ್ಧದ ಸಮಯದಲ್ಲಿ ಡೋಗ್ರಾ ರೆಜಿಮೆಂಟ್‌ನಲ್ಲಿ ಕೆಲಸ ಮಾಡಿದರು. ವೀರ ಸೈನಿಕ ಬಾಬಾ ಹರ್ಭಜನ್ ಸಿಂಗ್ ಕರ್ತವ್ಯದಲ್ಲಿದ್ದಾಗ ಭಾರತದ ಪೂರ್ವ ಸಿಕ್ಕಿಂನ ನಾಥುಲಾ ಪಾಸ್ ಬಳಿ ಮೃತಪಟ್ಟರು. ಹರ್ಭಜನ್ ಸಿಂಗ್ ಯುದ್ಧದ ಸಮಯದಲ್ಲಿ ಹಿಮನದಿಯಲ್ಲಿ ಮುಳುಗಿದ್ದುಮೂರು ದಿನಗಳ ನಂತರ ಅವರನ್ನು ಪತ್ತೆ ಹಚ್ಚಲಾಯಿತು ಮತ್ತು ಪೂರ್ಣ ಮಿಲಿಟರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು.

ಮೃತದೇಹಗಳನ್ನು ಹುಡುಕುತ್ತಿದ್ದ ರಕ್ಷಣಾತಂಡಕ್ಕೆ ಹರ್ಭಜನ್ ಸಿಂಗ್ ಕನಸಿನಲ್ಲಿ ಮೃತದೇಹ ಬಿದ್ದಿರುವ ಸ್ಥಳದ ಕುರಿತಾದ ಸೂಚನೆಯನ್ನು ನೀಡಿದ್ದರಂತೆಹೀಗಾಗಿಯೇ ದುರ್ಗಮವಾದ ದಾರಿಯಲ್ಲಿದ್ದ, ಕೊರೆಯುವ ಭಾರೀ ಹಿಮನದಿಯಿಂದ ಮೃತದೇಹವನ್ನು ಪತ್ತೆಹಚ್ಚಲು ಸಾಧ್ಯವಾಯಿತು ಎನ್ನುತ್ತಾರೆನಂತರ ಹರ್ಭಜನ್ ಸಿಂಗ್ಒಂದು ಕನಸಿನ ಮೂಲಕ ತಮ್ಮ ಸಹೋದ್ಯೋಗಿಯೊಬ್ಬರಿಗೆ ಬೆಟ್ಟದ ಮೇಲಿನ ಅವರ ಸಮಾಧಿಯ ಬಳಿ ದೇವಾಲಯ ನಿರ್ಮಿಸಲು ಸೂಚಿಸಿದರು. ಅಲ್ಲಿ ದೇವಾಲಯ ನಿರ್ಮಾಣಗೊಂಡ ನಂತರ ಸೈನಿಕನ ಆತ್ಮ ಅಲ್ಲೇ ಇದ್ದುಸುತ್ತಮುತ್ತಲಿನ ಪ್ರದೇಶವನ್ನು ರಕ್ಷಿಸುತ್ತದೆ ಎಂದು ನಂಬಲಾಗಿದೆ.

ನಾಥುಲಾ ಪಾಸ್‌ನಲ್ಲಿರುವ ಶಿಬಿರದಲ್ಲಿಪ್ರತಿದಿನ ಸೈನಿಕ ಬಾಬಾ ಹರ್ಭಜನ್ ಸಿಂಗ್ ಗೆ ಒಂದು ಹಾಸಿಗೆ ಸಿದ್ಧಪಡಿಸಲಾಗುತ್ತದೆ. ಪ್ರತಿ ರಾತ್ರಿ ಸಮವಸ್ತ್ರವನ್ನು ಸಿದ್ಧಪಡಿಸಲಾಗುತ್ತದೆ. ಮತ್ತು ಅವ ಬೂಟುಗಳನ್ನು ಪಾಲಿಶ್ ಮಾಡಿ ಮಾಡಲಾಗುತ್ತದೆಪ್ರತಿ ದಿನ ಬೆಳಗ್ಗೆ ನೋಡಿದಾಗ ಸಮವಸ್ತ್ರ ಸುಕ್ಕುಸುಕ್ಕಾಗಿರುತ್ತದೆಮತ್ತು ಬೂಟುಗಳಲ್ಲಿ ಕೆಸರು ಮೆತ್ತಿಕೊಂಡಿರುತ್ತದೆ ಎಂದು ಇಲ್ಲಿನ ಸೈನಿಕರು ಹೇಳುತ್ತಾರೆ. ಭಾರತ ಮತ್ತು ಚೀನಾ ನಡುವೆ ಯುದ್ಧ ಸಂಭವಿಸಿದಲ್ಲಿಬಾಬಾ ಭಾರತೀಯ ಮತ್ತು ಚೀನಾದ ಸೈನಿಕರಿಗೆ ಮೂರು ದಿನಗಳ ಮುಂಚಿತವಾಗಿ ಎಚ್ಚರಿಕೆ ನೀಡುತ್ತಾರೆ ಎಂದು ಐತಿಹ್ಯವಿದೆ. ನಾಥುಲಾ ಪೋಸ್ಟ್‌ನಲ್ಲಿ ಉಭಯ ರಾಷ್ಟ್ರಗಳ ನಡುವಿನ ಧ್ವಜ ಸಭೆಗಳಲ್ಲಿಚೀನೀ ಸೈನಿಕರು ಸಹ  ಸೈನಿಕನಿಗಾಗಿ ಒಂದು ಕುರ್ಚಿಯನ್ನು ನಿಗದಿಪಡಿಸುತ್ತಾರೆ.

Baba harbhajan singh mandirImage Source : Scoophike.com

ಪ್ರತಿ ವರ್ಷ ಸೆಪ್ಟೆಂಬರ್ 14ರಂದು ಜೀಪ್ ತನ್ನ ವೈಯಕ್ತಿಕ ಸಾಮಗ್ರಿಗಳೊಂದಿಗೆ ಹತ್ತಿರದ ರೈಲ್ವೆ ನಿಲ್ದಾಣವಾದ ನ್ಯೂ ಜಲ್ಪೈಗುರಿಗೆ ತೆರಳುತ್ತದೆಅಲ್ಲಿ ಅದನ್ನು ರೈಲಿನಲ್ಲಿ ಪಂಜಾಬ್‌ನ ಕಪುರ್ಥಾಲಾ ಜಿಲ್ಲೆಯ ಕುಕ ಎಂಬ ಹಳ್ಳಿಗೆ ಕಳುಹಿಸಲಾಗುತ್ತದೆ. ಹರ್ಭಜನ್ ಸಿಂಗ್ ತಾಯಿಗೆ ಪ್ರತಿ ತಿಂಗಳು ಒಂದು ಸಣ್ಣ ಮೊತ್ತವನ್ನು ಕಳುಹಿಸಲಾಗುತ್ತದೆ. ಸೈನ್ಯದ ವೇತನದಾರರ ಪಟ್ಟಿಯಲ್ಲಿ ಮೃತಪಟ್ಟ ಬಳಿಕವೂ ಹರ್ಭಜನ್ ಸಿಂಗ್ ಹೆಸರು ಇನ್ನೂ ಮುಂದುವರೆದಿದೆಅವರ ತಾಯಿ ಇನ್ನೂ ಅವರ ಸಂಬಳ ಚೆಕ್‌ಗಳನ್ನು ಪಡೆಯುತ್ತಿದ್ದಾರೆಇದು ವಿಲಕ್ಷಣವಾಗಿ ಕಾಣಿಸಿದರೂ ನಿಜ. ಮೃತಪಟ್ಟರೂ ಸೈನಿಕನ ಆತ್ಮ ಅಲ್ಲೇ ಇದೆ ಎಂಬುದಾಗಿ ಇತರ ಸೈನಿಕರು, ಸ್ಥಳೀಯರು ನಂಬುತ್ತಾರೆ.

ಹುತಾತ್ಮನಾದರೂ ಹರ್ಭಜನ್ ಸಿಂಗ್ ಗೆ ಪ್ರತಿವರ್ಷ ಎರಡು ತಿಂಗಳ ವಾರ್ಷಿಕ ರಜೆ ಸಿಗುತ್ತದೆರೈಲಿನಲ್ಲಿ ಅವರ ಹೆಸರಿನಲ್ಲಿ ಸೀಟು ಕಾಯ್ದಿರಿಸಲಾಗುತ್ತದೆ ಮತ್ತು ಅವರ ಭಾವಚಿತ್ರಸಮವಸ್ತ್ರ ಮತ್ತು ಇತರ ವಸ್ತುಗಳನ್ನು ಸೇನಾಧಿಕಾರಿಗಳು ಕಪುರ್ಥಾಲಾ ಜಿಲ್ಲೆಯಿಂದ ಅವರ ಗ್ರಾಮಕ್ಕೆ ಕಳುಹಿಸಿಕೊಡುತ್ತಾರೆ. ದಿವಂಗತ ಸೈನಿಕನ ಕುಟುಂಬವು ರೈಲ್ವೆ ನಿಲ್ದಾಣದಲ್ಲಿ ವಸ್ತುಗಳನ್ನು ಪಡೆದುಕೊಂಡು ತಮ್ಮ ಹಳ್ಳಿಗೆ ತೆರಳುತ್ತಾರೆ. ರಜೆ ಪೂರ್ಣಗೊಂಡ ನಂತರ ಸೇನಾ ಸಿಬ್ಬಂದಿಯ ಅದೇ ತಂಡವು ಸೈನಿಕ ಸಮವಸ್ತ್ರ ಇತರ ವಸ್ತುಗಳನ್ನು ಪಡೆದುಕೊಂಡು ನಾಥುಲಾ ಪ್ರದೇಶಕ್ಕೆ ಹಿಂತಿರುಗುತ್ತದೆ.

ಒಟ್ನಲ್ಲಿ ಹುತಾತ್ಮರಾಗಿ ವರ್ಷಗಳು ಕಳೆದ ಬಳಿಕವೂ ವೀರ ಸೈನಿಕ ಬಾಬಾ ಹರ್ಭಜನ್ ಸಿಂಗ್ ಆತ್ಮ ನಾಥುಲಾ ಪಾಸ್‌ ನ್ನು ರಕ್ಷಿಸುತ್ತಿದೆ ಎಂದು ಇಲ್ಲಿನ ಸೈನಿಕರು ಬಲವಾಗಿ ನಂಬುತ್ತಾರೆ. ಸಮಾಧಿಯ ಬಳಿ ತೆರಳಿ ಭಕ್ತಿಯಿಂದ ನಮನ ಸಲ್ಲಿಸುತ್ತಾರೆ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 ►Follow us on Facebook

https://www.facebook.com/Planettvkannada

 ►Follow us on Blogspot

https://planettvkannada.blogspot.com

 ►Follow us on Dailymotion

https://www.dailymotion.com/planettvkannada

 ►Follow us on Instagram

https://www.instagram.com/planettvkannada/

 ►Follow us on Pinterest

https://in.pinterest.com/Planettvkannada/

 ►Follow us on Koo App

https://www.kooapp.com/profile/planettvkannada

 ►Follow us on Twitter

https://twitter.com/Planettvkannada

 ►Follow us on Share Chat

https://sharechat.com/profile/planettvkannada

 ►Follow us on Tumgir

https://www.tumgir.com/planettvkannada

 ►Follow us on Tumbler

https://planettvkannada.tumblr.com/

 ►Follow us on Telegram

 

https://t.me/Planettvkannada

Enjoyed this article? Stay informed by joining our newsletter!

Comments

You must be logged in to post a comment.

About Author