ತೆರೆಗೆ ಅಪ್ಪಳಿಸಲು ಶಿವಣ್ಣ ಭಜರಂಗಿ-2 ರೆಡಿ

ಅಕ್ಟೋಬರ್ 29ಕ್ಕೆ ರಾಜ್ಯಾದ್ಯಂತ  ಸಿನಿಮಾ ರಿಲೀಸ್ 

Bajarangi 2 movie release date

Image Credits : bookmyshow

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬಹು ನಿರೀಕ್ಷಿತ ಭಜರಂಗಿ-2 ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ಸಿನಿಮಾ ತಯಾರಕರು ಅಕ್ಟೋಬರ್ 29ರಂದು ಸಿನಿಮಾ ಬಿಡುಗಡೆ ಆಗುವುದಾಗಿ ಘೋಷಿಸಿದ್ದಾರೆ. ರಾಜ್ಯಾದ್ಯಂತ 500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣಲಿದೆ.

ಚಿತ್ರದ ಟ್ರೈಲರ್ ಈಗಾಗಲೇ ಯೂಟ್ಯೂಬ್‍ನಲ್ಲಿ ಬಿಡುಗಡೆ ಆಗಿದ್ದು, ಕೇವಲ 4-5 ದಿನಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಚಿತ್ರ ಥಿಯೇಟರ್‍ನಲ್ಲಿ ರಿಲೀಸ್ ಆಗಲು ಶಿವಣ್ಣ ಅಭಿಮಾನಿಗಳು ಕಾಯುತ್ತಿದ್ದಾರೆ. 

ಹರ್ಷ ನಿರ್ದೇಶನದ ಸಿನಿಮಾವನ್ನು ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ. 2013ರಲ್ಲಿ ತೆರೆ ಕಂಡಿದ್ದ ಭಜರಂಗಿ ಸಿನಿಮಾದ ಮುಂದುವರಿದ ಭಾಗವಿದು.

ಈ ಸಿನಿಮಾದಲ್ಲಿ ಭವನಾ ಮೆನನ್ ಹೀರೋಯಿನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಹಿರಿಯ ನಟಿ ಶೃತಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಭಜರಂಗಿ ಲೋಕಿ ಎಂದೇ ಫೇಮಸ್ ಆಗಿರುವ ಸೌರವ್ ಲೋಕೇಶ್ ಸಹ ಸಿನಿಮಾದಲ್ಲಿದ್ದಾರೆ. 

ಶಿವಣ್ಣ ಭಜರಂಗಿ-2 ಪೋಸ್ಟರ್‍ಗಳು ಸಹ ಸೂಪರ್ ಹಿಟ್ ಆಗಿವೆ. ಶಿವಣ್ಣ ಅವರ ಮಾಸ್ ಲುಕ್‍ಗಳಿಗೆ ಅಭಿಮಾನಿಗಳು ಮನಸೋತಿದ್ದು, ಥಿಯೇಟರ್‍ಗೆ ಹೋಗಿ ಸಿನಿಮಾ ನೋಡಲು ಕಾಯುತ್ತಿದ್ದಾರೆ. 

 

ಯಶ್ ಮಾಡಬೇಕಿದ್ದ ಸಿನಿಮಾ ಇದು?

 

2017ರಲ್ಲಿ ಯಶ್ ಅವರನ್ನು ಹೀರೋ ಮಾಡಿಕೊಂಡು ರಾಣಾ ಎನ್ನುವ ಸಿನಿಮಾ ತೆಗೆಯುವುದಾಗಿ ನಿರ್ದೇಶಕ ಹರ್ಷ ಘೋಷಿಸಿದ್ದರು. ಯಶ್‍ಗೆ ಸಿನಿಮಾದ ಸ್ಕ್ರಿಪ್ಟ್ ಕೊಟ್ಟಾಗ ಅವರಿಗೆ ಸಮಾಧಾನ ಆಗಲಿಲ್ವಂತೆ. ನಿರ್ದೇಶಕ ಹರ್ಷಗೆ ಸ್ಕ್ರಿಪ್ಟ್‍ನಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡು ಬನ್ನಿ ಎಂದು ಯಶ್ ಹೇಳಿದರಂತೆ. 

ಆ ಬಳಿಕ ಯಶ್ ಆಪ್ತರು ರಾಣಾ ಸಿನಿಮಾ ನಿಮ್ಮ ನಟನೆಗೆ ಸರಿಹೊಂದಲ್ಲ. ಸದ್ಯಕ್ಕೆ ನೀವು ಆ ಚಿತ್ರವನ್ನು ಕೈಬಿಡುವುದು ಒಳ್ಳೆಯದು ಎಂದು ಸಲಹೆ ನೀಡಿದರಂತೆ ಎಂದು ಸ್ಯಾಂಡಲ್‍ವುಡ್ ಅಂಗಳದಲ್ಲಿ ಗುಸು ಗುಸು ಸುದ್ದಿಯಾಗಿತ್ತು. 

ಹರ್ಷ ಯಶ್ ಬದಲಿಗೆ ಶಿವರಾಜ್ ಕುಮಾರ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿ ರಾಣಾ ಎನ್ನುವ ಹೆಸರಿನ ಬದಲಿಗೆ ಭಜರಂಗಿ-2 ಎಂದು ಹೆಸರಿಟ್ಟಿದ್ದಾರೆ ಎನ್ನಲಾಗುತ್ತಿದೆ. 

Featured Image Source : patrika

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 ►Follow us on Facebook

https://www.facebook.com/Planettvkannada

 ►Follow us on Blogspot

https://planettvkannada.blogspot.com

 ►Follow us on Dailymotion

https://www.dailymotion.com/planettvkannada

 ►Follow us on Instagram

https://www.instagram.com/planettvkannada/

 ►Follow us on Pinterest

https://in.pinterest.com/Planettvkannada/

 ►Follow us on Koo App

https://www.kooapp.com/profile/planettvkannada

 ►Follow us on Twitter

https://twitter.com/Planettvkannada

 ►Follow us on Share Chat

https://sharechat.com/profile/planettvkannada

 ►Follow us on Tumgir

https://www.tumgir.com/planettvkannada

 ►Follow us on Tumbler

https://planettvkannada.tumblr.com/

 ►Follow us on Telegram

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author