ಬೆಳ್ಳಿ ಲೋಕೇಶ್ ರವರು ಪಡೆದಿರುವ ಪ್ರಶಸ್ತಿ ಅಸಲಿಯೋ? ನಕಲಿಯೋ? : ಕೆ.ಎನ್.ಮಂಜುನಾಥ್ ಗೌಡ

ತುಮಕೂರು: ಮಹಾತ್ಮ ಜ್ಯೋತಿ ಬಾಫುಲೆ ಪ್ರಶಸ್ತಿ 2011ನ್ನು ನಕಲು ಮಾಡಿರುವ ಬಗ್ಗೆ ಕೆ ಎನ್ ಮಂಜುನಾಥ್ ಗೌಡರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀಯುತ ಬೆಳ್ಳಿಲೋಕೇಶ್ ಮೇಲೆ  ಅಸಮಾಧಾನ ಹೊರ ಹಾಕಿರುವ ಮಂಜುನಾಥ್ ರವರು ಬೆಳ್ಳಿ ಲೋಕೇಶ್ ರವರ ಪ್ರಣಾಳಿಕೆಯಲ್ಲಿ ಪ್ರಕಟಿಸಿರುವುದಕ್ಕೆ ಬೇಸರ ಹೊರ ಹಾಕಿದ್ದಾರೆ.

ಈ ಸಂಬಂಧ ನಗರದಲ್ಲಿ‌ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಂಜಯನಾಥ್, ಬೆಳ್ಳಿ ಲೋಕೇಶ್ ರವರು ಮಹಾತ್ಮ ಜ್ಯೋತಿ ಬಾಫುಲೆ ಪ್ರಶಸ್ತಿಯನ್ನು ನಕಲು ಮಾಡಿ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದಾರೆ. ಸಮಾಜದಲ್ಲಿ ಅತ್ಯಂತ ಹಿಂದುಳಿದವರ ಸೇವೆಯನ್ನು ಪರಿಗಣಿಸಿ ನೀಡುವ ಮೌಲ್ಯಾಧಾರಿತ ಪ್ರಶಸ್ತಿ ಇದಾಗಿದೆ. ದೆಹಲಿಯ ದಲಿತ ಸಾಹಿತ್ಯ ಅಕಾಡೆಮಿ ಯ ಜ್ಯೋತಿ ಬಾಫುಲೆ ರಾಷ್ಟ್ರೀಯ ಫೆಲೋಷಿಪ್ ಪ್ರಶಸ್ತಿಯಾಗಿದ್ದು, ಮಂಜುನಾಥ್ ಗೌಡ ಆದ ನನಗೆ 2011 ರಲ್ಲಿ ನಡೆದ 27ನೇ ರಾಷ್ಟ್ರೀಯ ವಿಶೇಷ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಲಭಿಸಿತ್ತು. ಈ ಪ್ರಶಸ್ತಿ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಆ ಸಮಾರಂಭದಲ್ಲಿ ತೆಗೆದಿರುವ ಭಾವಚಿತ್ರಗಳು ಹಾಗೂ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ನನ್ನ ಬಳಿ ಇವೆ. ಈ ಪ್ರಶಸ್ತಿಯನ್ನು ಬೆಳ್ಳಿ ಲೋಕೇಶ್ ನಕಲು ಮಾಡಿರುವ ಕಾರಣ ಬೆಳ್ಳಿ ಲೋಕೇಶ್ ಒಬ್ಬ ನಕಲಿ ಫೆಲೋಶಿಪ್ ಆಗಿದ್ದು, ಒಕ್ಕಲಿಗರ ಚುನಾವಣೆಯಲ್ಲಿ ಬೆಳ್ಳಿಲೋಕೇಶ್ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆ ತುರ್ತಾಗಿ ಬೆಳ್ಳಿ ಲೋಕೇಶ್ ಅವರ ವಿರುದ್ಧ ಅವರು ಪಡೆದಿರುವ ಪ್ರಶಸ್ತಿಗಳ ವಿರುದ್ಧ ತನಿಖೆ ಮಾಡಿಸಬೇಕೆಂದು ಎಂದು ಒತ್ತಾಯಿಸಿದ್ದಾರೆ.

ಇದೇ ವೇಳೆ ಒಕ್ಕಲಿಗ ಸಮಾಜದ ಮತ್ತೊಬ್ಬ ಮುಖಂಡ ಜಯರಾಮೇಗೌಡ ಮಾತನಾಡಿ, ಬೆಳ್ಳಿ ಲೋಕೇಶ್ ರವರು ನಮ್ಮದೇ ಸಮುದಾಯದ ಚುನಾವಣೆಯಲ್ಲಿ ಸ್ಪರ್ಧಿಸಲು ಇಲ್ಲಸಲ್ಲದ ಸಾಧನೆಗಳನ್ನು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಬಿಂಬಿಸುವ ಬದಲು ತಾನು ಒಬ್ಬ ಸಮಾಜಸೇವಕನಿದ್ದೇನೆ. ನಮ್ಮ ಸಮುದಾಯದವರು ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ಕಲ್ಪಿಸಿಕೊಡಿ ಎಂದು ಕೈಮುಗಿದರೆ ಸಾಕಿತ್ತು. ಈ ರೀತಿ ದಲಿತ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಪ್ರಶಸ್ತಿಯನ್ನು ನಕಲು ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುವುದು ಬೇಕಿರಲಿಲ್ಲ ಎಂದಿದ್ದಾರೆ. ಅಲ್ಲದೇ ಅವರ ಚುನಾವಣಾ ಪ್ರಣಾಳಿಕೆಯಲ್ಲಿ ನಮೂದಿಸಿರುವ ಅಂಶಗಳು ಕಾರ್ಯರೂಪಕ್ಕೆ ಬರಬೇಕಾದರೇ ಅತೀ ಸುಲಭದ ಮಾತಲ್ಲ, ಅವರು ಪೊಳ್ಳು ಭರವಸೆಗಳನ್ನು ನೀಡಿ, ಜನರಿಗೆ ಮೋಸ ಮಾಡಲು ಯತ್ನಿಸುತ್ತಿದ್ದಾರೆಂದು ಗಂಭೀರವಾಗಿ ಆರೋಪಿಸಿದರು.

ಯಾವುದೇ ಏನೇ ಇರಲಿ, ಬೆಳ್ಳಿ ಲೋಕೇಶ್ ರವರು ತುಮಕೂರು ನಗರದಲ್ಲಿ ಅತ್ಯಂತ ಹೆಸರುವಾಸಿಯಾಗಿದ್ದರೂ ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರೂ ಸಹ ಇದುವರೆವಿಗೂ ಹಲವಾರು ಕಾರ್ಯಕ್ರಮಗಳನ್ನು ನಡೆಸಿ, ಯಶಸ್ವಿಯಾಗಿರುತ್ತಾರೆ, ಆದರೆ ಚುನಾವಣಾ ಸಂದರ್ಭದಲ್ಲಿ ಅವರ ಮೇಲೆಯೇ ಬಂದಿರುವ ಆರೋಪವನ್ನು ಹೇಗೆ ನಿಭಾಯಿಸುತ್ತಾರೆಂದು ಕಾದು ನೋಡಬೇಕಿದೆ.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author