ಆರೋಗ್ಯಕ್ಕೆ ಉಪಕಾರಿಯಾಗಿರುವ ಒಣಕೊಬ್ಬರಿ

benefits of dry coconut

Featured Image Credits : Amazon.in 

ಅಡುಗೆಯಲ್ಲಿ ಹಸಿ ತೆಂಗಿನಕಾಯಿ ಬಳಕೆ ಅತ್ಯುತ್ತಮ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ಹಸಿ ತೆಂಗಿನಕಾಯಿಯಲ್ಲಿ ಹಲವು ಔಷಧೀಯ ಗುಣಗಳಿರುವುದರಿಂದ ಇದರ ಬಳಕೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ. ಆದರೆ ನಿಮಗೆ ಗೊತ್ತಾ ಒಣ ಕೊಬ್ಬರಿಯಲ್ಲೂ ಆರೋಗ್ಯಕ್ಕೆ ಬೇಕಾಗುವ ಹಲವು ಅಂಶಗಳಿವೆ. ಹೆಚ್ಚಾಗಿ ಹಸಿ ತೆಂಗಿನಕಾಯಿ ಅಥವಾ ಒಣಕೊಬ್ಬರಿಯನ್ನು ಬೆಲ್ಲದ ಜತೆ ತಿನ್ನುವ ಅಭ್ಯಾಸ ಹಲವೆಡೆ ರೂಢಿಯಲ್ಲಿದೆ. ಮನೆಯಲ್ಲಿ ಹಿರಿಯರು ಇದ್ದರೆ ಅವರು ಕೂಡಾ ಮಕ್ಕಳಿಗೆ ಒಣ ಕೊಬ್ಬರಿಯನ್ನು ತಿನ್ನಲು ಸಲಹೆ ಮಾಡುತ್ತಾರೆ. ಯಾಕೆಂದರೆ ಅವರು ಒಣಕೊಬ್ಬರಿಯಲ್ಲಿರುವ ಉತ್ತಮ ಅಂಶಗಳ ಬಗ್ಗೆ ತಿಳಿದಿದ್ದಾರೆ.

ಒಣಕೊಬ್ಬರಿ ಪ್ರತಿನಿತ್ಯ ಸೇವಿಸುವುದರಿಂದ ಸಿಗುವ ಲಾಭಗಳೇನು ಹಾಗೂ ಯಾವ ರೀತಿಯ ರೋಗಗಳಿಗೆ ಒಣಕೊಬ್ಬರಿ ಸೇವನೆ ಒಳ್ಳೆಯದು ಎಂಬುದನ್ನು ನೋಡೋಣ..

ಒಣಕೊಬ್ಬರಿ ಸೇವಿಸುವುದರಿಂದ ನಮ್ಮ ದೇಹದ ಮೂಳೆಗಳು ಬಲಶಾಲಿಯಾಗುತ್ತವೆ. ಕೊಬ್ಬರಿ ಸೇವನೆ ನಮ್ಮ ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಮೂಳೆಗಳ ಅಂಗಾಂಶಗಳಲ್ಲಿ ಕಣಜ ಅಂಶಗಳು ಹೆಚ್ಚಾಗಿ ಇರುತ್ತದೆ. ಇದು ದೇಹದಲ್ಲಿ ಕಡಿಮೆಯಾದರೆ ದೇಹದ ಯಾವುದೇ ಭಾಗಕ್ಕೂ ತೊಂದರೆಯಾಗಬಹುದು. ಕೊಬ್ಬರಿ ಸೇವನೆ ಮಾಡುವುದರಿಂದ ಇಂಥಹಾ ಸಮಸ್ಯೆ ಎದುರಾಗುವುದಿಲ್ಲ. ‌ಒಣ ಕೊಬ್ಬರಿಯ ಸೇವನೆಯಿಂದ ಮೂಳೆಗಳಲ್ಲಿನ ಖನಿಜಾಂಶ ಹೆಚ್ಚಾಗುತ್ತದೆ. ಒಣ ಕೊಬ್ಬರಿಯಿಂದ ದೊರೆಯುವ ಈ ಮಿನರಲ್ ದೇಹಕ್ಕೆ ಬೇಗನೆ ಸೇರಿಬಿಡುತ್ತದೆ. ಇದರಿಂದಾಗಿ ಆರ್ಥರೈಟಿಸ್ ನಂತಹ ತೊಂದರೆಯಿಂದ ಪಾರಾಗಬಹುದು.

 

ಇದನ್ನು ಓದಿ : ಈ ಕೆಲವು ಪದಾರ್ಥಗಳನ್ನು ಫ್ರಿಡ್ಜ್‍ನಲ್ಲಿ ಶೇಖರಿಸಿಟ್ಟು ತಿನ್ನಲೇಬಾರದು..!

ಕೆಲವರಲ್ಲಿ ಲೂಬ್ರಿಕೇನ್ಟ್ ನ ಕೊರತೆಯಿಂದ ಮೂಳೆಗಳಲ್ಲಿ ನೋವು, ಓಡಾಡುವಾಗ ತೊಂದರೆ ಕಾಣಿಸಿಕೊಳ್ಳುತ್ತದೆ. ಇಂಥವರು ಒಣಕೊಬ್ಬರಿಯ ಸೇವನೆ ಮಾಡಬೇಕು. ಒಣಕೊಬ್ಬರಿಯಲ್ಲಿ ನೈಸರ್ಗಿಕವಾದ ಎಣ್ಣೆ ಹಾಗೂ ಖನಿಜ ಇರುವುದರಿಂದ ಇದು ಮೂಳೆಗಳನ್ನು ಬಲಶಾಲಿಯಾಗಿಸುತ್ತದೆ. ಮಂಡಿ ನೋವು, ಸೊಂಟ ನೋವು ಮೊದಲಾದ ಸಮಸ್ಯೆಗಳು ಬರುವುದಿಲ್ಲ.ಒಣ ಕೊಬ್ಬರಿ ಸೇವನೆಯಿಂದ  ಮೆದುಳು ಚುರುಕಾಗುತ್ತದೆ. ಇದರಿಂದ ಮೆದುಳಿನ ಫಂಕ್ಷನ್ ಇಂಪ್ರೂವ್ ಆಗುತ್ತದೆ. ನಿಮಗೆ ಜ್ಞಾಪಕ ಶಕ್ತಿ ಹೆಚ್ಚಾಗಬೇಕು ಹಾಗೂ ಮೆದುಳು ಚುರುಕಾಗಿ ಇರಬೇಕು ಅಂದರೆ ತಪ್ಪದೇ ನೀವು ಒಣ ಕೊಬ್ಬರಿಯನ್ನು ಸೇವಿಸಲೇಬೇಕು.

health benefits of dry coconutImage Credits : Amazon.in

ಪೈಲ್ಸ್ ಅಥವಾ ಮೂಲವ್ಯಾಧಿ ಸಮಸ್ಯೆಗೆ ಕೂಡಾ ಒಣಕೊಬ್ಬರಿ ಒಳ್ಳೆಯ ಔಷಧಿ. ಇದನ್ನು ಮೂಲವ್ಯಾಧಿ ಇರುವವರು ಸೇವಿಸುವುದರಿಂದ ಮೂಲವ್ಯಾಧಿ ಸಮಸ್ಯೆ ಸರಿಹೋಗುತ್ತದೆ. ಒಣ ಕೊಬ್ಬರಿಯಲ್ಲಿ ಹೇರಳವಾದ ನಾರಿನ ಅಂಶವಿರುವುದರಿಂದ ಇದು ಮಲಬದ್ಧತೆಯ ಸಮಸ್ಯೆಯನ್ನು ಕೂಡಾ ಸರಿಪಡಿಸುತ್ತದೆ.ಪದೇ ಪದೇ ತಲೆನೋವು ಅಥವಾ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದರೆ, ತುರಿದ ಕೊಬ್ಬರಿ 20ರಿಂದ 25 ಗ್ರಾಂ, 20ರಿಂದ 25 ಗ್ರಾಂನಷ್ಟು ಕಲ್ಲು ಸಕ್ಕರೆ. ಜಗಿದು ಜಗಿದು ಸೇವಿಸಬೇಕು. ಈ ರೀತಿ ಮಾಡುವುದರಿಂದ ಕ್ರಮೇಣ ಮೈಗ್ರೇನ್ ಸಮಸ್ಯೆ ಕಡಿಮೆಯಾಗುತ್ತದೆ.

ರಕ್ತಹೀನತೆಯ ಸಮಸ್ಯೆಗೆ ಒಣ ಕೊಬ್ಬರಿ ರಾಮಬಾಣ. ಮಹಿಳೆಯರಲ್ಲಿ ಸಾಮಾನ್ಯವಾಗಿ ರಕ್ತಹೀನತೆಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ರಕ್ತಹೀನತೆಯ ಸಮಸ್ಯೆ ಹೆಚ್ಚಾದರೆ ಶರೀರದಲ್ಲಿ ಶಕ್ತಿಯಿರುವುದಿಲ್ಲ, ತಲೆಸುತ್ತು, ಮೊದಲಾದ ತೊಂದರೆ ಎದುರಾಗುತ್ತದೆ. ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಒಣಕೊಬ್ಬರಿಯ ಸೇವನೆ ಮಾಡುವುದು ತುಂಬಾನೇ ಒಳ್ಳೆಯದು. ಏಕೆಂದರೆ ಒಣ ಕೊಬ್ಬರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣ ಅಂಶವಿದೆ. ಇದು ಶರೀರದಲ್ಲಿ ರಕ್ತವನ್ನು ಹೆಚ್ಚು ಮಾಡುತ್ತದೆ.

ಇದನ್ನು ಓದಿ : ಮನೆಯಿಂದ ಹೊರ ಹೋಗುವಾಗ ಮೊಸರು, ಸಕ್ಕರೆ ತಿನ್ನಿಸುವುದು ಯಾಕೆ..?

ಥೈರಾಯ್ಡ್‍ ಸಮಸ್ಯೆ ಇರುವವರು ಒಣಕೊಬ್ಬರಿ ಸೇವನೆ ಮಾಡುವುದು ತುಂಬಾನೇ ಒಳ್ಳೆಯದು. ಥೈರಾಯ್ಡ್ ಸಮಸ್ಯೆ ದೇಹದಲ್ಲಿ ಸೆಲೇನಿಯಂ ಕೊರತೆಯಿಂದ ಉಂಟಾಗುತ್ತದೆ. ಒಣ ಕೊಬ್ಬರಿಯಲ್ಲಿ ಸೆಲೇನಿಯಂ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಹೈಪರ್ ಥೈರಾಯ್ಡ್ ಇರಲಿ ಅಥವಾ ಹೈಪೋ ಥೈರಾಯ್ಡ್ ಇರಲಿ ತಪ್ಪದೇ ಒಣಕೊಬ್ಬರಿ ಸೇವಿಸಿ. ಇದು ನಿಮ್ಮ ಥೈರಾಯ್ಡ್ ಹಾರ್ಮೋನನ್ನು ಸರಿಯಾಗಿ ಇಡುತ್ತದೆ.

dry coconut for healthImage Source: vijayakarnataka

ಒಣಕೊಬ್ಬರಿ ಹೃದಯದ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಇದರಲ್ಲಿರುವ ಫೈಬರ್ ಹೃದಯವನ್ನು ಆರೋಗ್ಯವಾಗಿಡುತ್ತದೆ. ಒಣಕೊಬ್ಬರಿಯ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆಯನ್ನು ನಿವಾರಿಸುತ್ತದೆ. ಇದರಿಂದಾಗಿ ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿ ನಿತ್ಯವೂ ತಪ್ಪದೆ ಒಣಕೊಬ್ಬರಿಯನ್ನು ಸೇವನೆ ಮಾಡುವುದು ಉತ್ತಮ.

ಇದನ್ನು ಓದಿ : ಹಾಲಿನ ಜತೆ ಈ ಆಹಾರಗಳನ್ನು ಸೇವಿಸಲೇಬಾರದು..!

‌‌ನಿದ್ರಾಹೀನತೆಯ ಸಮಸ್ಯೆಯನ್ನು ಸರಿಪಡಿಸುವ ಶಕ್ತಿ ಒಣಕೊಬ್ಬರಿಗಿದೆ. ನಿದ್ರಾಹೀನತೆಯಿಂದ ಬಳಲುತ್ತಿರುವವರು ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್ ಬಿಸಿ ಹಾಲಿಗೆ ಎರಡು ಚಮಚ ತುರಿದ ಒಣ ಕೊಬ್ಬರಿಯನ್ನು ಹಾಕಿ ಕುಡಿಯುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ. ಒಣಕೊಬ್ಬರಿಯನ್ನು ಸೇವಿಸುವುದರಿಂದ ಅಜೀರ್ಣತೆಯ ಸಮಸ್ಯೆಯೂ ಕೂಡ ಸರಿ ಹೋಗುತ್ತದೆ. ಇನ್ನು, ಒಣ ಕೊಬ್ಬರಿಯನ್ನು ಮಧುಮೇಹಿಗಳು ಕೂಡ ಸೇವನೆ ಮಾಡಬಹುದು. ಇದು ರಕ್ತದಲ್ಲಿ ಅಧಿಕ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಕೊಬ್ಬರಿಯ ಸೇವನೆಯಿಂದ ಕೂದಲು ಉದುರುವ ಸಮಸ್ಯೆಯೂ ಬೇಗನೆ ಕಡಿಮೆಯಾಗುತ್ತದೆ.

ಒಣ ಕೊಬ್ಬರಿ ಕಣ್ಣುಗಳ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಒಣ ಕೊಬ್ಬರಿಯಲ್ಲಿ ಒಳ್ಳೆಯ ಕೊಲೆಸ್ಟ್ರಾಲ್, ನಾರಿನಾಂಶ, ಕಾಪರ್, ಸೆಲೇನಿಯಂ ಎನ್ನುವ ಪೋಷಕಾಂಶಗಳಿವೆ. ಇದು ಆರೋಗ್ಯ ವರ್ಧನೆಗೆ ನೆರವಾಗುತ್ತದೆ. ದಿನವೊಂದಕ್ಕೆ 20ರಿಂದ 25 ಗ್ರಾಂನಷ್ಟು ಕೊಬ್ಬರಿಯನ್ನು ಚಿಕ್ಕ ತುಂಡುಗಳನ್ನಾಗಿ ಜಗಿದು ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಯಾವುದೇ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ. ಒಣಕೊಬ್ಬರಿ ಆಂಟಿ ಯೋಟಿಕ್‍ ತರ ಕೆಲಸ ಮಾಡುತ್ತದೆ. ಇದರಿಂದಾಗಿ ಯಾವುದೇ ರೀತಿಯ ಅಲರ್ಜಿ ಅಥವಾ ಯಾವುದೇ ರೋಗಗಳು ನಮ್ಮ ದೇಹವನ್ನು ಸುಲಭವಾಗಿ ಸೇರಲು ಸಾಧ್ಯವಾಗುವುದಿಲ್ಲ .

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author