ಸೇಬು ಹಣ್ಣಿನ ಪ್ರಯೋಜನಗಳು

ದಿನಕ್ಕೆ ಒಂದು ಸೇಬು ತಿನ್ನಿ, ವೈದ್ಯರಿಂದ ದೂರ ಇರಿ' ಎಂಬ ಇಂಗ್ಲೀಷ್​​​ ಗಾದೆ ಮಾತನ್ನು ನಾವು-ನೀವೆಲ್ಲಾ ಕೇಳಿರುತ್ತೀವಿ. ಇದು ನಿಜವಾದರೂ ಇದನ್ನು ಪಾಲಿಸಿಕೊಂಡು ಹೋಗುವವರು ತುಂಬಾ ವಿರಳ. ಸೇಬಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇದ್ದು, ಅವು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಮತ್ತು ಇದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
 
ಮಧ್ಯಮ ಗಾತ್ರದ ಸೇಬಿನಲ್ಲಿ ಸರಿಸುಮಾರು 25 ಗ್ರಾಂ ಕಾರ್ಬೋಹೈಡ್ರೇಟ್‌ಗಳು, 1 ಗ್ರಾಂ ಪ್ರೋಟೀನ್ ಮತ್ತು ಯಾವುದೇ ಕೊಬ್ಬು ಇರುವುದಿಲ್ಲ. ಅಲ್ಲದೇ ಸೇಬು ಉತ್ತಮ ರೋಗನಿರೋಧಕ ಶಕ್ತಿ ಮತ್ತು ಆರೋಗ್ಯವನ್ನು ಹೊಂದಿದೆ. ಸೇಬಿನಲ್ಲಿ ಅಧಿಕ ಪ್ರಮಾಣದ ಆಂಟಿಆಕ್ಸಿಡೆಂಟುಗಳು, ಫ್ಲೇವನಾಯ್ಡುಗಳು ಹಾಗೂ ಪೋಷಕಾಂಶಗಳಿದ್ದು, ಕ್ಯಾನ್ಸರ್ ಅಭಿವೃದ್ದಿಕೊಳ್ಳುವ, ಹೃದಯದ ಕಾಯಿಲೆ ಹಾಗೂ ಮಧುಮೇಹ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಸೇಬು ಹಣ್ಣಿನ ಪ್ರಯೋಜನಗಳು:
1. ಸೇಬು ಹಣ್ಣಿನಲ್ಲಿ ಹೆಚ್ಚು ಆಂಟಿಆಕ್ಸಿಡೆಂಟುಗಳು ಇದ್ದು, ಇದು ನಿಮ್ಮ ಚರ್ಮಕ್ಕೆ ಕಾಂತಿಯುತ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ. ಅಲ್ಲದೇ ಸ್ತನ ಕ್ಯಾನ್ಸರ್, ಬಾಯಿಯ ಹುಣ್ಣ ಮತ್ತು ಅನ್ನನಾಳ ಸೇರಿದಂತೆ ಕ್ಯಾನ್ಸರ್ ಬರುವ ಅಪಾಯವನ್ನು ತಡೆಯುತ್ತದೆ.
 
2. ಸೇಬು ಉತ್ತಮ ಇಮ್ಯುನಿಟಿ ಬೂಸ್ಟರ್ ಆಗಿದೆ. ಸೇಬಿನಲ್ಲಿ ಶೇ.14ರಷ್ಟು ವಿಟಮಿನ್ ಸಿ ಇದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್ ಆಗಿದೆ. ಇದಲ್ಲದೆ, ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸೇಬುಗಳು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತವೆ, ಇದು ಅಗತ್ಯ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
 
3. ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಸೇಬು ಹಣ್ಣಿನ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯದ ಕಡಿಮೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಸೇಬಿನಲ್ಲಿರುವ ಫೈಬರ್ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆಯುತ್ತದೆ.
 
4. ಸೇಬುಗಳು ಫ್ಲೇವನಾಯ್ಡ್‌ಗಳನ್ನು ಹೊಂದಿದ್ದು, ಅದು ಆಲ್ಝೈಮರ್ ಕಾಯಿಲೆ ಬರದಂತೆ ತಡೆಯುತ್ತದೆ. ಫ್ಲೇವನಾಯ್ಡ್ ಹೊಂದಿರುವ ಆಹಾರವು ರೋಗವನ್ನು 2 ರಿಂದ 4 ಬಾರಿ ವಿಳಂಬಗೊಳಿಸಲು ಸಹಾಯ ಮಾಡುತ್ತದೆ.
 
5. ಒಂದು ಸೇಬಿನಲ್ಲಿ 13 ಗ್ರಾಂ ನೈಸರ್ಗಿಕವಾಗಿ ಸಕ್ಕರೆ ಅಂಶ ಇರುತ್ತದೆ. ಸಕ್ಕರೆ ಅಂಶದಿಂದಾಗಿ, ಒಂದು ಕಪ್ ಕಾಫಿಗಿಂತ ಸೇಬು ನಿಮ್ಮಗೆ ಹೆಚ್ಚು ಪರಿಣಾಮಕಾರಿಯಾಗಿದೆ. ಸೇಬಿನಲ್ಲಿರುವ ಸಕ್ಕರೆ ಮತ್ತು ವಿಟಮಿನ್‌ಗಳು ನಿಧಾನವಾಗಿ ದೇಹಕ್ಕೆ ಬಿಡುಗಡೆಯಾಗುತ್ತವೆ, ಇದರಿಂದಾಗಿ ನೀವು ಹೆಚ್ಚು ಕಾಲ ಎಚ್ಚರವಾಗಿರುತ್ತೀರಿ.
 
6. ಅತಿಸಾರದಿಂದ ಬಳಲುವ ಮಗುವಿಗೆ ಸೇಬು ಹುಣ್ಣು ತುರಿದು ಹಾಲಿನೊಂದಿಗೆ ಸೇರಿಸಿ ಕುಡಿಸಿದರೆ ಬೇಗನೆ ಗುಣವಾಗುತ್ತದೆ.
 
7. ಊಟದೊಂದಿಗೆ ಸೇಬು ತಿಂದರೆ ಅದರಿಂದ ಜೀರ್ಣಕ್ರಿಯೆಯು ನಿಧಾನವಾಗುವುದು ಮತ್ತು ಆಹಾರವು ಹೊಟ್ಟೆಯಲ್ಲಿ ದೀರ್ಘಕಾಲ ಉಳಿಯುವುದು.
 
8. ಸೇಬು ತಿಂದರೆ ಟೈಪ್ 2 ಮಧುಮೇಹದ ಅಪಾಯ ಕಡಿಮೆ ಆಗುವುದು ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ.
 
9. ಸೇಬಿನಲ್ಲಿ ಸಸ್ಯಜನ್ಯವಾಗಿರುವಂತಹ ನಾರಿನಾಂಶವಿದೆ ಮತ್ತು ತುಂಬಾ ಕಡಿಮೆ ಪ್ರಮಾಣದ ಕ್ಯಾಲರಿ ಇದೆ. ಇದರಿಂದ ತೂಕ ಕಳೆದುಕೊಳ್ಳಲು ಇದು ತುಂಬಾ ಸಹಕಾರಿ ಆಗಿರುವುದು.
 
10. ಸೇಬಿನಲ್ಲಿ ಆಂಟಿ ಆಕ್ಸಿಡೆಂಟುಗಳು ಸಮೃದ್ದವಾಗಿದ್ದು ಅಸ್ತಮಾ ಕಡಿಮೆಗೊಳಿಸುವಲ್ಲಿ ತಮ್ಮ ನೆರವನ್ನು ನೀಡುತ್ತವೆ.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author