ಬೆಂಡೆಕಾಯಿ ಸೇವನೆಯಿಂದ ಆಗುವ ಪ್ರಯೋಜನಗಳು.

 

ಬೆಂಡೆಕಾಯಿಯಿಂದ ನಾನಾ ರೀತಿಯ ಅಡುಗೆ ತಯಾರಿಸಬಹುದು. ಭಾರತದ ಬೇರೆ ಬೇರೆ ಭಾಗಗಳಲ್ಲಿ ಪಾಕವಿಧಾನ ಭಿನ್ನವಾಗಿದೆ.
ಬೆಂಡೆಕಾಯಿ ರುಚಿಗೆ ಮಾತ್ರವಲ್ಲದೆ ಆರೋಗ್ಯಕ್ಕೂ ಬೆಂಡೆಕಾಯಿ ಬಹಳ ಒಳ್ಳೆಯದು. ಚಳಿಗಾಲದಲ್ಲಿ ಬೆಂಡೆಕಾಯಿ ಸೇವನೆಯಿಂದ ಅನೇಕ ಪ್ರಯೋಜನಗಳಿವೆ. ಬೆಂಡೆಕಾಯಿಯಲ್ಲಿ ಹುಣ್ಣು ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಗುಣವಿದೆ. ಇದು ಅನೇಕ ರೋಗಗಳಿಂದ ದೇಹವನ್ನು ರಕ್ಷಿಸುತ್ತದೆ. ಬೆಂಡೆಕಾಯಿಯಲ್ಲಿ ಕಂಡುಬರುವ ಕ್ಯಾಲೊರಿ ಪ್ರಮಾಣ ತುಂಬಾ ಕಡಿಮೆ. ಇದು ತೂಕವನ್ನು ಇಳಿಸಲು ನೆರವಾಗುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೆಂಡೆಕಾಯಿಯಲ್ಲಿ ವಿಟಮಿನ್ ಎ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್‌ಗಳು, ಫೈಬರ್ ಮತ್ತು ಬೀಟಾ ಕ್ಯಾರೋಟಿನ್ ಕೂಡ ಸಮೃದ್ಧವಾಗಿದೆ. ನಿಯಮಿತವಾಗಿ ಬೆಂಡೆಕಾಯಿ ಸೇವನೆಯಿಂದ ತೂಕವನ್ನು ಬೇಗ ಇಳಿಸಬಹುದು.
ಬೆಂಡೆಕಾಯಿ ಸೇವನೆಯಿಂದ ಆಗುವ ಪ್ರಯೋಜನಗಳು.
1. ಸ್ಥೂಲಕಾಯ - ಒಮ್ಮೆ ಏರಿದ ತೂಕವನ್ನು ಇಳಿಸುವುದು ಸುಲಭವಲ್ಲ. ಪ್ರತಿದಿನ ವ್ಯಾಯಾಮ,ಜಿಮ್,ವಾಕಿಂಗ್ ಹೀಗೆ ನಾನಾ ವಿಧದಲ್ಲಿ ದೇಹವನ್ನು ದಣಿಸಿ ಬೆವರಿಳಿಸಿದರೂ ತೂಕ ಇಳಿಯುವುದು ಕಷ್ಟ. ವ್ಯಾಯಾಮದ ಜೊತೆ ಆಹಾರದಲ್ಲಿ ನಿಯಂತ್ರಣ ಮುಖ್ಯ. ತೂಕ ಇಳಿಸಿಕೊಳ್ಳಲು ಬಯಸಿದರೆ ಬೆಂಡೆಕಾಯಿ ಉತ್ತಮ ಆಯ್ಕೆ. ಇದ್ರಲ್ಲಿ ಕ್ಯಾಲೊರಿ ಕಡಿಮೆ ಇರುವಯ ಕಾರಣ ತೂಕ ಇಳಿಸಲು ಇದು ನೆರವಾಗುತ್ತದೆ.
2. ರೋಗನಿರೋಧಕ ಶಕ್ತಿ ಬೆಂಡೆಕಾಯಿಯಲ್ಲಿ ವಿಟಮಿನ್ ಎ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್, ಫೈಬರ್ ಕಂಡುಬರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಬಲವಾದ ರೋಗನಿರೋಧಕ ಶಕ್ತಿಯು ದೇಹವನ್ನು ಅನೇಕ ವೈರಲ್ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
3. ಮಧುಮೇಹ ಬೆಂಡೆಕಾಯಿ ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ. ಬೆಂಡೆಕಾಯಿಯಲ್ಲಿ ಫೈಬರ್‌ ಸಮೃದ್ಧವಾಗಿದೆ. ಮಧುಮೇಹ ವಿರೋಧಿ ಗುಣಲಕ್ಷಣಗಳು ಸಹ ಇದರಲ್ಲಿ ಕಂಡುಬರುತ್ತವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ.
4. ಮೂಳೆಗಳಿಗೆ ಬಲ : ಮೂಳೆಗಳು ಗಟ್ಟಿಯಾಗಲು ಕ್ಯಾಲ್ಸಿಯಂ ಇರುವ ಆಹಾರಗಳನ್ನು ಸೇವಿಸುವುದು ಅಗತ್ಯ. ಇತ್ತೀಚಿನ ದಿನಗಳಲ್ಲಿ ಅನೇಕರು ಮೂಳೆ ಸವೆತ ಸೇರಿದಂತೆ ಮೂಳೆಗೆ ಸಂಬಂಧಿಸಿದ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಕಾಲ್ಸಿಯಂಗಾಗಿ ಮಾತ್ರೆಗಳನ್ನು ಸೇವಿಸುವವರಿದ್ದಾರೆ. ಕ್ಯಾಲ್ಸಿಯಂ ಕಡಿಮೆಯಿದ್ದವರು ಮಾತ್ರೆ ಬದಲು ಆಹಾರದಲ್ಲಿಯೇ ಬದಲಾವಣೆ ಮಾಡಬಹುದು. ಬೆಂಡೆಕಾಯಿಯಲ್ಲಿ ಕ್ಯಾಲ್ಸಿಯಂ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹಾಗಾಗಿ ಬೆಂಡೆಕಾಯಿಯನ್ನು ನಿಯಮಿತವಾಗಿ ಸೇವನೆ ಮಾಡಬೇಕು.
5. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದರೆ ಬೆಂಡೆಕಾಯಿ ಸೇವನೆಯು ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತಾಗಿದೆ.ಬೆಂಡೆಕಾಯಿಯಲ್ಲಿರುವ ಫೈಬರ್, ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ.
6. ಹೃದಯಕ್ಕೆ ಒಳ್ಳೆಯದು : ಬೆಂಡೆಕಾಯಿ ಸೇವನೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಅಧಿಕ ಕೊಲೆಸ್ಟ್ರಾಲ್ ನಿಯಂತ್ರಿಸಲು ಭಿಂಡಿ ಅತ್ಯುತ್ತಮ ಮಾರ್ಗವಾಗಿದೆ. ಇದರಲ್ಲಿರುವ ಪೆಕ್ಟಿನ್ ಎಂಬ ಅಂಶವು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಇದರಲ್ಲಿರುವ ಕರಗುವ ಫೈಬರ್ ರಕ್ತದಲ್ಲಿನ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.

7. ಕ್ಯಾನ್ಸರ್ ನಿಂದ ರಕ್ಷಣೆ : ಕ್ಯಾನ್ಸರ್ ನಿಮ್ಮಿಂದ ದೂರವಿರಬೇಕೆಂದರೆ ನೀವು ಬೆಂಡೆಕಾಯಿ ಸೇವನೆ ಶುರು ಮಾಡಿ. ಕರುಳಿನ ಕ್ಯಾನ್ಸರ್ ರಕ್ಷಣೆಗೆ ಇದು ನೆರವಾಗುತ್ತದೆ.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author