ಸಬ್ಸಿಗೆ ಸೊಪ್ಪು ಇದೊಂದು ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿರುವ ಅಪರೂಪದ ಸಸ್ಯ

ಇದು ನಾವು ಸಾಮಾನ್ಯವಾಗಿ ಕರೆಯುವ, ಎಲ್ಲಾ ಕಡೆ ಸಿಗುವ ಸಬ್ಬಸ್ಸಿಗೆ / ಸಬ್ಸಿಗೆ ಸೊಪ್ಪು ( ಇತರ ಪ್ರಾದೇಶಿಕ ಹೆಸರುಗಳೂ ಇವೆ ). ಇಂಗ್ಲಿಷ್ ನಲ್ಲಿ Dill ಎಂದು ಕರೆಯಲ್ಪಡುವ ಇದರ ಸಸ್ಯ ಶಾಸ್ತ್ರೀಯ ಹೆಸರು Anethum graveolens ( ಯೂರೋಪ್ ತಳಿ ) ಹಾಗೂ Anethum sowa ( ಭಾರತೀಯ ತಳಿ ) Apiaceae ಕುಟುಂಬ.
ಇದರ ಸುವಾಸನೆಯನ್ನು ವಿವರಿಸಲು ಸ್ವಲ್ಪ ಕಷ್ಟಕರ. ಸ್ವಲ್ಪ ಘಾಟು, ಸ್ವಲ್ಪ ಕಹಿ, ಒಗಚು, ಹುಳಿ ಮಿಶ್ರಿತ. ಇದೇ ಸುವಾಸನೆಗಾಗಿ ಬಹಳಷ್ಟು ಜನರಿಗೆ ಇಷ್ಟವಾದ ಅಡುಗೆ ಸೊಪ್ಪು ಆದರೆ ಸಮ ಪ್ರಮಾಣದಲ್ಲಿ ಇಷ್ಟಪಡದವರೂ ಇದ್ದಾರೆ. ಈ ಸುವಾಸನೆಗೆ ಕಾರಣ ಸಬ್ಬಸಿಗೆಯಲ್ಲಿರುವ ತೈಲದಲ್ಲಿರುವ Apiole ಮತ್ತು Dillapiole ಎಂಬ ರಾಸಾಯನಿಕ ಅಂಶ.
ಇದೊಂದು ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿರುವ ಅಪರೂಪದ ಸಸ್ಯ.
ಇದರಲ್ಲಿರುವ Calcium ( ಸುಣ್ಣ ) ಅಂಶ Phosphorus ಅಂಶದ ಜೊತೆ ಸೇರಿ ಮೂಳೆಗಳನ್ನು ಸದೃಡಗೊಳಿಸುವುದು.
Vitamin - A ಕಣ್ಣುಗಳು, ಶ್ವಾಷಕೋಶ ( lungs ) ಹಾಗೂ ಮೂತ್ರಪಿಂಡಗಳ ( kidney ) ಆರೋಗ್ಯವನ್ನು ಕಾಪಾಡಿದರೆ, Niacin ಎಲ್ಲಾ ಹೃದಯ ಸಂಬಂಧಿ ತೊಂದರೆಗಳು ಬಾರದಂತೆ ತಡೆಯುತ್ತದೆ. ರಕ್ತದೊತ್ತಡ ಸಹ ನಿಯಂತ್ರಣಕ್ಕೆ ಬರುತ್ತೆ.
ಸಬ್ಬಸಿಗೆಯ ನಿಯಮಿತ ಸೇವನೆಯಿಂದ :-
ಮನಸ್ಸಿನ ಆತಂಕ, ದುಗುಡ ನಿವಾರಣೆ ಆಗಿ ಮನಸ್ಸು ಪ್ರಸನ್ನವಾಗುತ್ತೆ ( anxiety and depression ).
ದೇಹದಲ್ಲಿ ದಿನನಿತ್ಯ ಶೇಕರಣೆಯಾಗುವ ವಿಷಕಾರಿ ಅಂಶಗಳು ( toxins ) ಮಲ ಮತ್ತು ಮೂತ್ರದಲ್ಲಿ ಕೊಚ್ಚಿಹೋಗಿ ಆರೋಗ್ಯ ಸುಸ್ಥಿತಿಯಲ್ಲಿ ಇರುವುದು.
ದೇಹವನ್ನು ಸೇರುವ ಹಾನಿಕಾರಕ ಬ್ಯಾಕ್ಟೀರಿಯಾ ಹಾಗೂ ವೈರಾಣುಗಳು ಕೂಡಲೇ ಸಾಕಷ್ಟು ನಿರ್ಮೂಲನೆ ಆಗುತ್ತೆ.
ಮೂರ್ಛೆರೋಗ ( fits / epilepsy ) ಬಾರದಂತೆ ತಡೆಯುವುದಲ್ಲದೆ, ಇದ್ದರೆ ತೊಂದರೆಗಳು ಕಡಿಮೆಯಾಗುತ್ತದೆ.
ದೇಹದಲ್ಲಿ ಕೊಬ್ಬಿನಾಂಶ ( Cholesterol ) ಹೆಚ್ಚಾಗದಂತೆ ತಡೆದು, ಹೃದಯಾಘಾತ ಆಗುವ ಸಾಧ್ಯತೆ ಸಾಕಷ್ಟು ಕಡಿಮೆಯಾಗುತ್ತದೆ.
ಜೀರ್ಣಾಂಗ ಗಳು ಸುಸ್ಥಿತಿಯಲ್ಲಿ ಇರುವಂತೆ ಸಹಾಯ ಮಾಡುವುದಲ್ಲದೆ, ಜೀರ್ಣ ಕ್ರಿಯೆ ಸರಿಯಾಗಿ ಆಗುವಂತೆ ಮಾಡಿ ಆಮ್ಲಿಯತೆ ( acidity / gastric ) ಹಾಗೂ ಹೊಟ್ಟೆಯ ಹುಣ್ಣು ( Ulsers ) ಆಗದಂತೆ ತಡೆಯುತ್ತದೆ.
ಸಬ್ಬಸ್ಸಿಗೆ ಸೊಪ್ಪನ್ನು ನುಣ್ಣಗೆ ಅರೆದು ಲೇಪಿಸಿಕೊಂಡರೆ ಗಾಯಗಳು ಬೇಗ ವಾಸಿಯಾಗುತ್ತದೆ ಅಲ್ಲದೆ ಚರ್ಮದ ಅಲರ್ಜಿಗೆ ಉತಮ.
ಸಕ್ಕರೆ ಖಾಯಿಲೆ ಇರುವವರಿಗೆ ಅವಶ್ಯವಾಗಿ ಸೇವಿಸಬೇಕಾದ ಸೊಪ್ಪು. ಹಾಗೆಯೇ ಮದ್ಯಪಾನ ಅಥವ ಇತರ ಕಾರಣಕ್ಕೆ ಆಗಿರುವ ಮತ್ತು ಆಗುವ fatty liver ಸಮಸ್ಯೆ ಸಹಾ ನಿವಾರಣೆಯಾಗುತ್ತೆ.
ಸಬ್ಬಸ್ಸಿಗೆ ಸೊಪ್ಪಿನ ರಸದ ಸೇವನೆ ಅಥವ ಬೀಜಗಳ ಸೇವನೆಯಿಂದ ಅಜೀರ್ಣದ ಹೊಟ್ಟೆ ನೋವು ವಾಸಿಯಾಗುತ್ತದೆ.
ಬಾಣಂತಿಯರು ಸೊಪ್ಪನ್ನು ಸೇವಿಸುವುದರಿಂದ ತಾಯಿಯಹಾಲು ಜಾಸ್ತಿ ಆಗುವುದು, ಅಲ್ಲದೆ ಮಗುವಿನ ಮಲ, ಮೂತ್ರ ವಿಸರ್ಜನೆ ಸರಿಯಾಗಿ ಆಗುವುದು, ಮಗು ಸಹಾ ಆರೋಗ್ಯವಾಗಿ ಬೇಳೆಯುವುದು. ಮಕ್ಕಳು ನಿಯಮಿತವಾಗಿ ಸೇವಿಸುವುದರಿಂದ ಅವರ ಜ್ಞಾಪಕ ಶಕ್ತಿ ಹಾಗೂ ಬುದ್ದಿ ಶಕ್ತಿ ಸಹ ಹೆಚ್ಚುವುದು.
ಸಬ್ಬಸ್ಸಿಗೆಯಲ್ಲಿ ವಿಟಮಿನ್ B1, B2, B5, B6, B9 ಮತ್ತು B12 ಇದೆ. ಜೊತೆಗೆ ಆರೋಗ್ಯವಂತ ದೇಹಕ್ಕೆ ಅತ್ಯಂತ ಅವಶ್ಯವಾದ Calcium, Iron, Magnesium, Phosphorus, Potassium, Sodium, Zinc, Copper ಮುಂತಾದ 18 ಖನಿಜಾಂಶ ಗಳು ಇದೆ. ವಿವರಗಳಿಗಾಗಿ ಒಂದು ಚಾರ್ಟ್ ಹಾಕಿದ್ದೇನೆ ನೋಡಿ.
ಸಬ್ಬಸಿಗೆ ಸಸ್ಯದ ಬೀಜಗಳಿಂದ ತೆಗೆದ ಎಣ್ಣೆ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಎಣ್ಣೆಯನ್ನು ಮೇಲೆತಿಳಿಸಿದ ಕಾರಣಕ್ಕೆ ಅಲ್ಲದೆ ಪರಿಮಳ ದ್ರವ್ಯಗಳನ್ನು ಹಾಗೂ ಇತರ ಔಷದಿಗಳನ್ನು ತಯಾರಿಸಲು ಬಳಸಲಾಗುತ್ತಿದೆ. ( ಮಕ್ಕಳಿಗೆ ಕೊಡುವ Gripe Water ನೆನಪಿದೆಯೇ....? ). ಸಬ್ಬಸ್ಸಿಗೆ ಬೀಜ ನಾಲ್ಕಾರು ಕಾಳು ಬಾಯಿಯಲ್ಲಿ ಹಾಕಿ ಮೆಲ್ಲಗೆ ಜಗಿಯುತ್ತಿದ್ದರೆ ಹಲ್ಲಿನ ಸಮಸ್ಯೆ ನಿವಾರಣೆ ಆಗುತ್ತೆ.
ಮೇಲೆ ನಾನು ತಿಳಿಸಿದ ಪ್ರಯೋಜನಗಳು ಸಸ್ಯದ ಕಾಲು ಭಾಗ ಸಹ ಅಲ್ಲ. ಜಾಗದ ಕೊರತೆಯಿಂದ ಹೇಳದೆ ಬಿಟ್ಟಿರುವುದು ಬಹಳಷ್ಟು. ಒಟ್ಟಿನಲ್ಲಿ ಪ್ರತೀಯೊಬ್ಬರು ಸುಲಭವಾಗಿ ಸಿಗುವ ಸಬಸ್ಸಿಗೆಯನ್ನು ಉಪಯೋಗಿಸಿ ಎಲ್ಲಾ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಗಮನಿಸಿ :- ಸೊಪ್ಪನ್ನು ಕೊಳ್ಳುವಾಗ ಹಳದಿಯಾದ ಅಥವಾ ಆಗುತ್ತಿರುವ ಸೊಪ್ಪನ್ನು ತೆಗೆದುಕೊಳ್ಳಬೇಡಿ. ಆದಷ್ಟು ಹಸಿರಾಗಿ, ಎಳೆಯದಾಗಿ ಇರಲಿ. ಬೆರಳಲ್ಲಿ ಅದುಮಿದಾಗ ಸಾಕಷ್ಟು ಸುವಾಸನೆ ಭರಿತ ರಸ ಬರಬೇಕು.
ಚಿತ್ರ, ಲೇಖನ :- ಮಂಜುನಾಥ್ ಪ್ರಸಾದ್.
 
Main Image Source : Newerapost

Enjoyed this article? Stay informed by joining our newsletter!

Comments

You must be logged in to post a comment.

About Author