ವಾರಣಾಸಿಯಲ್ಲಿದೆ ಭಾರತಾಂಬೆಯನ್ನು ಪೂಜಿಸುವ ಭಾರತ್ ಮಾತಾ ಮಂದಿರ

Bharat Mata Mandir in varanasi

Featured Image Source : Patrika 

ಭಾರತ ಅಂದ್ರೆ ವೈವಿಧ್ಯತೆಯಲ್ಲಿ ಏಕತೆ ಇರೋ ದೇಶ. ವಿವಿಧ ಭಾಷೆ, ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯಗಳು ಭಾರತದ ವಿಶೇಷ. ಜತೆಗೇ ಭಿನ್ನ-ವಿಭಿನ್ನ ದೇವಾಲಯಗಳೂ ಇಲ್ಲಿವೆ. ಆಯಾ ಪ್ರದೇಶದ ನಂಬಿಕೆಗೆ ತಕ್ಕಂತೆ ವಿಶಿಷ್ಟವಾದ ದೇವಾಲಯಗಳು ರೂಪುಗೊಳ್ಳುತ್ತವೆ. ಅಲ್ಲಿ ನಡೆದ ಯಾವುದೋ ಘಟನೆಗೆ ಸಂಬಂಧಿಸಿದಂತೆ ಜನರಲ್ಲಿಯೂ ನಂಬಿಕೆ ಬೆಳೆದಿರುತ್ತದೆ. ಇದಕ್ಕೆ ಅನುಸಾರವಾಗಿ ದೇವರಿಗೆ ಮಾತ್ರವಲ್ಲದೆ, ವ್ಯಕ್ತಿಗೆ, ವಸ್ತುವಿಗೆ ದೇಶದ ಹಲವೆಡೆ ದೇವಾಲಯವನ್ನು.ಕಟ್ಟಿರುವುದನ್ನು ನೋಡಿರಬಹುದು. 

ದೇಶದ ಹಲವೆಡೆ ಶಿವ, ವಿಷ್ಣು, ಕೃಷ್ಣ, ಗಣೇಶ, ಸುಬ್ರಹ್ಮಣ್ಯ, ದೇವಿ, ದೇವಿಯ ಹಲವು ಅವತಾರಗಳ ದೇವಾಲಯಗಳನ್ನು ನಾವು ನೋಡಿದ್ದೇವೆ. ಅದಲ್ಲದೆ ದೇಶದಲ್ಲಿ ವಿಚಿತ್ರವೆನಿಸುವ, ವಿಚಿತ್ರ ಆಚರಣೆಯನ್ನು ಪಾಲಿಸಿಕೊಂಡು ಬಂದಿರುವ, ವಸ್ತು ಅಥವಾ ಪ್ರಾಣಿಗಳನ್ನು ಪೂಜಿಸುವ ಹಲವು ದೇವಸ್ಥಾನಗಳಿವೆ. ಅಷ್ಟೇ ಅಲ್ಲ ದೇವರನ್ನು ಮಾತ್ರವಲ್ಲ ಮನುಷ್ಯರನ್ನೂ ದೇಶದ ಹಲವೆಡೆ ಆರಾಧಿಸುತ್ತಾರೆ. ಮಾರಿಯಮ್ಮ ದೇವಾಲಯ, ಕೊರೋನಾ ದೇವಾಲಯ, ಬುಲೆಟ್ ಬಾಬಾ ದೇವಾಲಯ ಹೀಗೆ ಹಲವು ಮಂದಿರಗಳು ದೇಶದಲ್ಲಿವೆ

ತೆಲಂಗಾಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ, ಕೋಲ್ಕತ್ತಾದಲ್ಲಿ ಬಾಲಿವುಡ್‍ನ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್‍ ಗೆ ದೇವಾಲಯ ನಿರ್ಮಾಣವಾಗಿರುವ ಬಗ್ಗೆ ನಾವು ಈ ಹಿಂದೆ ಕೇಳಿ ತಿಳಿದಿದ್ದೇವೆ. ಅದೇ ರೀತಿ ಉತ್ತರಪ್ರದೇಶದ ವಾರಣಾಸಿಯಲ್ಲಿ ಇದೇ ರೀತಿ ವಿಶಿಷ್ಟ ದೇವಾಲಯ ನಿರ್ಮಾಣವಾಗಿದೆ. ಆದರೆ, ಇಲ್ಲಿರುವ ದೇವಾಲಯ ನಿರ್ಮಾಣವಾಗಿರುವುದು ಯಾವುದೇ ರಾಜಕಾರಣಿ ಅಥವಾ ಸೆಲಬ್ರಿಟಿಗಳಲ್ಲ. ಮತ್ಯಾರಿಗೆ. ಅಲ್ಲಿನ ವಿಶೇಷತೆಗಳೇನು ತಿಳಿಯೋಣ ಬನ್ನಿ..

ಭಾರತಾಂಬೆಯನ್ನು ಪೂಜಿಸುವ ದೇವಾಲಯ ಎಲ್ಲಿದೆ..?

bharat mata temple india map

Image Source : Times of India

ಉತ್ತರ ಭಾರತದಲ್ಲಿ ಧಾರ್ಮಿಕ ಯಾತ್ರಾರ್ಥಿಗಳ ನೆಚ್ಚಿನ ಸ್ಥಳವಾಗಿರುವ ವಾರಣಾಸಿಯಲ್ಲಿ ಈ ದೇವಾಲಯ ಕಂಡು ಬರುತ್ತದೆಇಲ್ಲಿರುವ ದೇವಾಲಯದಲ್ಲಿ ಪೂಜಿಸುತ್ತಿರುವುದು ದೇವರನ್ನಲ್ಲ. ಬದಲಾಗಿ ದೇವರಿಗೆ ಸರಿ ಸಮಾನವಾದ ಭಾರತ ಮಾತೆಯನ್ನು. ಭವ್ಯ ಬಾರತದ ಹೆಮ್ಮೆಯ ಭಾರತಾಂಬೆಗೆ ಈ ದೇವಾಲಯವನ್ನು ಮುಡಿಪಾಗಿಡಲಾಗಿದೆ. ಭಾರತ್ ಮಾತಾ ಮಂದಿರ ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠ ಕ್ಯಾಂಪಸ್‌ನಲ್ಲಿದೆ. ಪ್ರತಿನಿತ್ಯ ಸಾವಿರಾರು ಮಂದಿ ಈ ದೇವಾಲಯಕ್ಕೆ ಆಗಮಿಸಿ ದೇಗುಲ, ನಿರ್ಮಾಣ, ಇಲ್ಲಿನ ನಕ್ಷೆ, ರೂಪುರೇಷೆಗಳನ್ನು ನೋಡಿ ಅಚ್ಚರಿ ವ್ಯಕ್ತಪಡಿಸುತ್ತಾರೆ.

ಭಾರತ್ ಮಾತಾ ದೇವಾಲಯ ನಿರ್ಮಿಸಿದ್ದು ಯಾರು..? ಈ ದೇವಾಲಯ ನಿರ್ಮಾಣದ ಉದ್ದೇಶವೇನು..? ದೇವಾಲಯದೊಳಗೆ ಏನೇನಿದೆ ಎಂಬುದರ ಕುರಿತಾಗಿ ತಿಳಿಯೋಣ..

ದೇವಾಲಯ ನಿರ್ಮಿಸಿದ್ದು ಯಾರು..?

Mahatma Gandhi inagurated Bharath Mata temple

Image Source : The Wire

ಬ್ರಿಟಿಷ್ ವಸಾಹತುಶಾಹಿ ಆಡಳಿತಗಾರರಿಂದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಚಳವಳಿಯ ಉಸ್ತುವಾರಿ ವಹಿಸಿಕೊಂಡಿದ್ದ ಸಮಯದಲ್ಲಿ ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಬಾಬು ಶಿವ ಪ್ರಸಾದ್ ಗುಪ್ತಾ ಅವರು ಈ ದೇವಾಲಯವನ್ನು ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆಪ್ರತಿನಿತ್ಯ ಈ ದೇವಾಲಯಕ್ಕೆ ಜನರು ಆಗಮಿಸಿ, ದೇವಾಲಯದ ರೂಪು ರೇಷೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಾರೆ. ಗುಪ್ತಾ ಕುಟುಂಬವು ಇನ್ನೂ ಸಹ ಈ ದೇವಾಲಯವನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದೆ.

ಭಾರತ್ ಮಾತಾ ಮಂದಿರದ ನಿರ್ಮಾಣ ಕಾರ್ಯವು 1918ರಲ್ಲಿ ಪ್ರಾರಂಭವಾಯಿತು ಮತ್ತು 1924ರಲ್ಲಿ ಪೂರ್ಣಗೊಂಡಿತು. ಮಹಾತ್ಮ ಗಾಂಧಿ 1936 ರ ಅಕ್ಟೋಬರ್ 25 ರಂದು ವಾರಣಾಸಿಯಲ್ಲಿ ಭಾರತ್ ಮಾತಾ ಮಂದಿರವನ್ನು ಉದ್ಘಾಟಿಸಿದರು. ಇಪ್ಪತ್ತನೇ ಶತಮಾನದ ಹಿಂದಿ ಕವಿ, ರಾಷ್ಟ್ರ ಕವಿ ಮೈಥಿಲಿ ಶರಣ್ ಗುಪ್ತ್ ಈ ಭಾರತ್‍ ಮಾತಾ ಮಂದಿರ ಉದ್ಘಾಟನೆಯ ಕುರಿತು ಒಂದು ಕವನವನ್ನು ರಚಿಸಿದ್ದರು. ಅದನ್ನು ದೇವಾಲಯದ ಕಟ್ಟಡದಲ್ಲಿ ಬೋರ್ಡ್ ಮೇಲೆ ಇಡಲಾಗಿದೆ.

ಭರತ್ ಮಾತಾ ಮಂದಿರ ಕಟ್ಟಡದ ಮಧ್ಯದಲ್ಲಿ ಅವಿಭಜಿತ ಭಾರತದ ನಕ್ಷೆಯನ್ನು ರೂಪಿಸಲಾಗಿದೆ. ಅಫ್ಘಾನಿಸ್ತಾನ, ಬಲೂಚಿಸ್ತಾನ್, ಬಾಂಗ್ಲಾದೇಶ ಸೇರಿದಂತೆ ಮ್ಯಾನ್ಮಾರ್, ಬರ್ಮಾದ ಮ್ಯಾನ್ಮಾರ್ ಮತ್ತು ಶ್ರೀಲಂಕಾವನ್ನು ಅಮೃತಶಿಲೆಯಲ್ಲಿ ಚಿತ್ರಿಸಲಾಗಿದೆ. ನಕ್ಷೆಯಲ್ಲಿ 450 ಪರ್ವತ ಶ್ರೇಣಿಗಳು ಮತ್ತು ಶಿಖರಗಳು, ವಿಶಾಲ ಬಯಲು ಪ್ರದೇಶಗಳು, ಜಲಮೂಲಗಳು, ನದಿಗಳು, ಸಾಗರಗಳು ಮತ್ತು ಪ್ರಸ್ಥಭೂಮಿಗಳ ವಿವರವಾದ ವಿನ್ಯಾಸವಿದೆ. ನಕ್ಷೆಯು ಅದರಲ್ಲಿ ಉಲ್ಲೇಖಿಸಲಾದ ಭೌಗೋಳಿಕ ಘಟಕಗಳ ಪ್ರಮಾಣ ಮತ್ತು ಆಳವನ್ನು ಸಹ ತೋರಿಸುತ್ತದೆ.

ಭಾರತ್ ಮಾತಾ ಮಂದಿರದೊಳಗಿನ ನಕ್ಷೆಯಲ್ಲಿನ ಹೆಗ್ಗುರುತುಗಳೆಂದರೆ ಮೌಂಟ್ ಎವರೆಸ್ಟ್ ಮತ್ತು ಕೆ 2 ಶಿಖರಗಳು ಮತ್ತು ಚೀನಾದ ಗ್ರೇಟ್ ವಾಲ್. ಉಪ-ಖಂಡದ ಸುತ್ತಲಿನ ಸಾಗರಗಳಲ್ಲಿನ ಸಣ್ಣ ಪೆಕ್‌ಗಳು ಸಣ್ಣ ದ್ವೀಪಗಳನ್ನು ಸಹ ರೂಪಿಸುತ್ತವೆ, ಇದನ್ನು ಲೇಸರ್ ಟಾರ್ಚ್ ಸಹಾಯದಿಂದ ನೋಡಬಹುದು. ನಕ್ಷೆಯಲ್ಲಿ ಚಿತ್ರಿಸಲಾದ ಜಲಮೂಲಗಳು ನೀರಿನಿಂದ ತುಂಬಿರುತ್ತವೆ ಮತ್ತು ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನದಂದು ಭೂ ಪ್ರದೇಶಗಳನ್ನು ಹೂವುಗಳಿಂದ ಅಲಂಕರಿಸಲಾಗುತ್ತದೆ.

ನಕ್ಷೆಯಲ್ಲಿನ ಒಂದು ಇಂಚು ಪ್ರದೇಶವು 6.40 ಮೈಲುಗಳಷ್ಟು ಭೂಮಿಯನ್ನು ಒಳಗೊಳ್ಳುತ್ತದೆ ಮತ್ತು ನೆಲಮಾಳಿಗೆಯಲ್ಲಿ ನೆಲ ಮಟ್ಟದಲ್ಲಿ ಸ್ಥಾಪಿಸಲಾದ ಕಿಟಕಿಯಿಂದ, ವಿವಿಧ ಶಿಖರಗಳ ಎತ್ತರಗಳ ನಡುವಿನ ವ್ಯತ್ಯಾಸವು ಸ್ಪಷ್ಟವಾಗಿ ತೋರಿಸುತ್ತದೆ. ದುರ್ಗಾ ಪ್ರಸಾದ್ ಖತ್ರಿ ಅವರ ಮಾರ್ಗದರ್ಶನದಲ್ಲಿ ಭಾರತ್ ಮಾತಾ ಮಂದಿರವನ್ನು ನಿರ್ಮಿಸಲಾಯಿತು. ಇದು ದೇವಾಲಯದ ನಿರ್ಮಾಣದಲ್ಲಿ ನಿರತರಾಗಿದ್ದ 30 ಕಾರ್ಮಿಕರು ಮತ್ತು 25 ಮೇಸನ್‌ಗಳ ಹೆಸರನ್ನು ಹೊಂದಿದೆ. ಕಟ್ಟಡದ ಒಂದು ಮೂಲೆಯಲ್ಲಿರುವ ಫಲಕದಲ್ಲಿ ಅವರ ಹೆಸರುಗಳನ್ನು ಸಹ ಉಲ್ಲೇಖಿಸಲಾಗಿದೆ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 ►Follow us on Facebook

https://www.facebook.com/Planettvkannada

 ►Follow us on Blogspot

https://planettvkannada.blogspot.com

 ►Follow us on Dailymotion

https://www.dailymotion.com/planettvkannada

 ►Follow us on Instagram

https://www.instagram.com/planettvkannada/

 ►Follow us on Pinterest

https://in.pinterest.com/Planettvkannada/

 ►Follow us on Koo App

https://www.kooapp.com/profile/planettvkannada

 ►Follow us on Twitter

https://twitter.com/Planettvkannada

 ►Follow us on Share Chat

https://sharechat.com/profile/planettvkannada

 ►Follow us on Tumgir

https://www.tumgir.com/planettvkannada

 ►Follow us on Tumbler

https://planettvkannada.tumblr.com/

 ►Follow us on Telegram

https://t.me/Planettvkannada

Enjoyed this article? Stay informed by joining our newsletter!

Comments

You must be logged in to post a comment.

About Author