ಮತ್ತೆ ಸ್ಟಾರ್ಟ್ ಆಗಲಿದೆ ಬಿಗ್‍ಬಾಸ್‍ ಕನ್ನಡ ಸೀಸನ್ 8: ಎರಡನೇ ಇನ್ನಿಂಗ್ಸ್ ನಲ್ಲಿ ದೊಡ್ಮನೆಯಲ್ಲಿ ಯಾರ್ಯಾರು ಇರ್ತಾರೆ..?

ಮತ್ತೆ ಸ್ಟಾರ್ಟ್ ಆಗಲಿದೆ ಬಿಗ್‍ಬಾಸ್‍ ಕನ್ನಡ ಸೀಸನ್ 8: ಎರಡನೇ ಇನ್ನಿಂಗ್ಸ್ ನಲ್ಲಿ ದೊಡ್ಮನೆಯಲ್ಲಿ ಯಾರ್ಯಾರು ಇರ್ತಾರೆ..?

 

ದೊಡ್ಡ ಮನೆ, ಹಾಲ್, ರೂಮ್‍ಗಳು, ಸ್ಟೈಲಿಶ್ ಕಿಚನ್, ಸ್ವಿಮ್ಮಿಂಗ್ ಪೂಲ್, ಅಲ್ಲಲ್ಲಿ ಕ್ಯಾಮರಾಗಳು ಇಷ್ಟೆಲ್ಲಾ ಹೇಳಿದ ತಕ್ಷಣ ನೆನಪಾಗೋದೆ ಬಿಗ್‍ ಬಾಸ್‍..ಹೌದು ನಗು, ಅಳು, ಫ್ರೆಂಡ್‍ಶಿಪ್, ಜಗಳ, ಕಿತ್ತಾಟ, ಸ್ಪರ್ಧೆ, ಗೆಲುವು, ಸೋಲಿನ ಕೂಡುವಿಕೆಯೇ ಬಿಗ್ ಬಾಸ್ ಮನೆ. ವಿವಿಧ ಕ್ಷೇತ್ರಗಳಿಂದ ಬಂದ ಜನರು ಈ ದೊಡ್ಮನೆಯಲ್ಲಿ ಒಂದೆಡೆ ಸೇರುತ್ತಾರೆ. ಸೆಲಬ್ರಿಟಿ ಎನ್ನುವ ಅಹಂ ಬಿಟ್ಟು ಎಲ್ಲರೂ ಈ ಮನೆಯಲ್ಲಿ ಸಮಾನರು. ಇಲ್ಲಿ ನಡೆಯುವ ವಿವಿಧ ಸ್ಪರ್ಧೆಗಳು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತವೆ. ಆದರೆ, ಕೋವಿಡ್ ಕಾರಣದಿಂದ ಈ ಬಾರಿ ಬಿಗ್‍ಬಾಸ್‍ ಕನ್ನಡ ಸೀಸನ್ 8 ಅರ್ಧದಲ್ಲೇ ಸ್ಥಗಿತಗೊಂಡಿತ್ತು.

 

ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ನೂರು ದಿನವಾಗದೆ ಮನೆಗೆ ಬೀಗ ಹಾಕಲಾಗಿತ್ತು. ಕೋವಿಡ್ ಕಾರಣದಿಂದ ಮನೆಯಲ್ಲಿ ಹತ್ತು ಮಂದಿ ಸ್ಪರ್ಧಿಗಳಿರುವಂತೆ ಶೋವನ್ನು ಸ್ಥಗಿತ ಮಾಡಲಾಗಿತ್ತು. ಇದೀಗ ಮತ್ತೆ ಈ ರಿಯಾಲಿಟಿ ಶೋ ಆರಂಭಿಸಲಾಗುತ್ತಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

 

ಬಿಗ್ ಬಾಸ್ ಸೀಸನ್‍-8 ಮತ್ತೆ ಆರಂಭ

ಬಿಗ್ ಬಾಸ್ ಸೀಸನ್‍-8 ಮತ್ತೆ ಆರಂಭ Bigboss season 8Image Source : The market mall

ಹೌದು, ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಆರಂಭವಾಗಲಿದೆ. ಕೋವಿಡ್ ಕಾರಣದಿಂದ ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ ರಿಯಾಲಿಟಿ ಶೋ ಮತ್ತೆ ಮುಂದುವರಿಯಲಿದೆ ಎಂದು ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಪರಮೇಶ್ವರ್ ಗುಂಡ್ಕಲ್, ಊರು ಸೇರಿದಾಗಲೇ ದಾರಿ ಮುಗಿಯುವುದು. ಮನೆ ಸೇರಿದಾಗಲೇ ಹಾದಿಯಲ್ಲಿ ಕಷ್ಟಪಟ್ಟಿದ್ದು ಸಾರ್ಥಕ ಅನಿಸೋದು. ಅರ್ಧದಲ್ಲಿಯೇ ನಿಲ್ಲಿಸಿದ್ದ ಪ್ರಯಾಣವನ್ನು ಈಗ ಪುನಃ ಅದೇ ಹನ್ನೆರಡು ಜನರೊಂದಿಗೆ ಶುರು ಮಾಡುವ ಸಮಯ ಎಂದು ಹೇಳಿಕೊಂಡಿದ್ದಾರೆ.

 

ಕನ್ನಡದ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಕೊನೆಗೊಳ್ಳಲು 29 ದಿನಗಳು ಬಾಕಿ ಇತ್ತು. ಆಗಲೇ ಕಾರ್ಯಕ್ರಮ ಅರ್ಧಕ್ಕೆ ಕೊನೆಗೊಳ್ಳಲಿದೆ ಅನ್ನೋ ಸುದ್ದಿ ಹೊರ ಬಿದ್ದಿತ್ತು. ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿದ್ದ ಕಾರ್ಯಕ್ರಮ ಕೊರೋನಾ ಕಾರಣದಿಂದ ರದ್ದಾಗಿತ್ತು. ಈಗ ಇದೇ ಕಾರ್ಯಕ್ರಮವನ್ನು ಕಲರ್ಸ್ ಕನ್ನಡ ವಾಹಿನಿ 12 ಮಂದಿ ಸ್ಪರ್ಧಿಗಳೊಂದಿಗೆ ಮತ್ತೆ ಮುಂದುವರೆಸುವ ನಿರ್ಧಾರಕ್ಕೆ ಬಂದಿದೆ. ಆದರೆ ಮತ್ತೆ ಶುರುವಾಗುವ ಬಿಗ್ ಬಾಸ್ ಸೀಸನ್‍ 8ರಲ್ಲಿ ದೊಡ್ಮನೆಗೆ ಯಾರ್ಯಾರು ಬರ್ತಾರೆ ಅನ್ನೋ ಕುತೂಹಲ ಮೂಡಿದೆ.

 

ಮತ್ತೆ ದೊಡ್ಮನೆಗೆ ಯಾರ್ಯಾರು ಬರ್ತಾರೆ..?

big boss kannada season 8Image Credits : Facebook ( @Parameshwar gundkal )

ಕಲರ್ಸ್ ವಾಹಿನಿಯು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫೋಟೊವನ್ನು ಅಪ್ಲೋಡ್ ಮಾಡಿದ್ದು, ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. 12 ಸೂಟ್ ಕೇಸ್ ಗಳಿರುವ ಫೋಟೋವೊಂದನ್ನು ಪೋಸ್ಟ್ ಮಾಡಲಾಗಿದೆ. ಬಿಗ್ ಬಾಸ್ ಸೀಸನ್ 8 ಸ್ಥಗಿತವಾದಾಗ ಮನೆಯಲ್ಲಿ 10 ಮಂದಿ ಇದ್ದರು. ದಿವ್ಯ ಉರುಡುಗ ಅವರು ಅನಾರೋಗ್ಯದಿಂದ ಮನೆಯಿಂದ ಹೊರಹೋಗಿದ್ದರು. ಇದೀಗ ಮತ್ತೊಂದು ಹೆಚ್ಚುವರಿ ಸೂಟ್ ಕೇಸ್ ಇದ್ದು, ಯಾರಾದರೂ ಹೊಸ ಸ್ಪರ್ಧಿ ಮನೆಗೆ ಎಂಟ್ರಿ ಕೊಡಲಿದ್ದಾರೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

 

ಬಿಗ್ ಬಾಸ್ ಕೊನೆಗೊಳ್ಳುವ ಮುಂಚಿನ ಸಂಚಿಕೆಗಳಿಗೆ ಸುದೀಪ್ ಸಹ ಗೈರಾಗಿದ್ದರು. ಅನಾರೋಗ್ಯದ ಕಾರಣದಿಂದ ಅವರು ಮತ್ತೆ ಬಿಗ್ ಬಾಸ್ ವೇದಿಕೆ ಮೇಲೆ ಕಾಣಿಸಿಕೊಳ್ಳಲೇ ಇಲ್ಲ. ಸುದೀಪ್ ಅವರನ್ನು ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೂ ನಿರಾಸೆಯಾಗಿತ್ತು. ನಂತರ ಒಂದು ಹೊಸ ಪ್ರೋಮೋ ಪೋಸ್ಟ್ ಮಾಡಿದ್ದ ಬಿಗ್ ಬಾಸ್ ತಂಡ, ಇದರಲ್ಲಿ ಬಿಗ್ ಬಾಸ್ ಸೀಸನ್ 8ರ ಫಿನಾಲೆ ಎಪಿಸೋಡ್‍ಗಳ ಪ್ರಸಾರ ಯಾವಾಗ ಎಂದು ತಿಳಿಸಿತ್ತು. ಅದರಂತೆಯೇ ಕೊನೆಯ ಎಪಿಸೋಡ್ ಗಳು ಪ್ರಸಾರವಾಗಿತ್ತು.

 

ಸೀಸನ್ 8ರ ಬಿಗ್ ಬಾಸ್ ಮನೆಗೆ 16 ಸ್ಪರ್ಧಿಗಳು ಒಳಗೆ ಹೋಗಿದ್ದರು. ಅದರಲ್ಲಿ ಚಂದ್ರಕಲಾ, ಧನುಶ್ರೀ, ಗೀತಾ, ನಿರ್ಮಲಾ, ರಾಜೀವ್, ಶಂಕರ್ ಅಶ್ವಥ್, ವಿಶ್ವನಾಥ್ ಹಾವೇರಿ ಎಲಿಮಿನೇಟ್ ಆಗಿ ಹೊರಬಂದಿದ್ದರು. ಆ ಬಳಿಕ ವೈಷ್ಣವಿ, ರಘು, ಅರವಿಂದ್, ಮಂಜು ಪಾವಗಡ, ಶುಭಾ ಪೂಂಜಾ, ದಿವ್ಯಾ ಸುರೇಶ್, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ, ಶಮಂತ್ ಮನೆಯೊಳಗಿದ್ದರು. ನಂತರ ಪ್ರಿಯಾಂಕಾ ಮತ್ತು ಚಕ್ರವರ್ತಿ ಚಂದ್ರಚೂಡ್ ವೈಲ್ಡ್ ಕಾರ್ಡ್ ಮೂಲಕ ಉಳಿದ ಸ್ಪರ್ಧಿಗಳ ಜೊತೆಗೆ ಸೇರಿದ್ದರು. ದಿವ್ಯಾ ಉರುಡುಗ ಅನಾರೋಗ್ಯದ ಕಾರಣದಿಂದ ಕಾರ್ಯಕ್ರಮ ಕೊನೆಗೊಳ್ಳುವ ಕೆಲ ದಿನಗಳು ಮಂಚಿತವಾಗಿಯೇ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದರು. ಈಗ ಮತ್ತೆ ಕಾರ್ಯಕ್ರಮ ಆರಂಭವಾದರೆ ದಿವ್ಯಾ ಉರುಡುಗ ಇರುತ್ತಾರೋ ಅಥವಾ ಇಲ್ಲವೋ ಎಂಬೆಲ್ಲ ಪ್ರಶ್ನೆಗಳು ವೀಕ್ಷಕರನ್ನು ಕಾಡುತ್ತಿವೆ.

 

ಜೂನ್ 20ರಿಂದ ಬಿಗ್‍ಬಾಸ್ ಶುರುವಾಗುತ್ತಾ..?

ಜೂನ್ 20ರಿಂದ ಬಿಗ್‍ಬಾಸ್ ಶುರುವಾಗುತ್ತಾ..? BBK8 second innings

Image Credits : Facebook ( @Parameshwar gundkal )

ಒಟ್ಟು ನೂರು ದಿನಗಳು ನಡೆಯುವ ಕಾರ್ಯಕ್ರಮ 72 ದಿನಕ್ಕೆ ಅಂತ್ಯಗೊಂಡಿತ್ತು. ಜೂನ್ 20ರಿಂದ ಮತ್ತೆ ಬಿಗ್ ಬಾಸ್ ಸೀಸನ್ 8 ಮತ್ತೆ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಕಲರ್ಸ್ ವಾಹಿನಿ ಕಡೆಯಿಂದ ಈ ಶೋ ಆರಂಭವಾಗಲಿರುವ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಮತ್ತೆ ಆರಂಭವಾಗಲಿರುವ ಶೋನಲ್ಲಿ ಸಾಕಷ್ಟು ಹೊಸತನ ಹಾಗೂ ಬದಲಾವಣೆಗಳನ್ನು ಕಾಣಬಹುದಾಗಿದೆ ಎಂದೂ ಹೇಳಲಾಗುತ್ತಿದೆ.

 

ಕಾರ್ಯಕ್ರಮ ಜೂನ್ ತಿಂಗಳಿನಲ್ಲೇ ಆರಂಭವಾಗಲಿದ್ದು, ದಿನಾಂಕ ಇನ್ನೂ ನಿಗದಿಯಾಗಿಲ್ಲ. ಈಗಾಗಲೇ ಹೊರ ಬಂದಿರುವ ಸ್ಪರ್ಧಿಗಳು ವ್ಯಾಕ್ಸಿನ್‍ನ ಮೊದಲ ಡೋಸ್ ತೆಗೆದುಕೊಂಡಿದ್ದಾರೆ. ಇನ್ನು ಕಾರ್ಯಕ್ರಮ ಆರಂಭವಾಗುವ ಮೊದಲು ಮತ್ತೆ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಅದೇನೆ ಇರ್ಲಿ, ಬಿಗ್ ಬಾಸ್ ಮತ್ತೆ ಶುರುವಾಗುತ್ತೆ ಅನ್ನೋ ವಿಷಯ ತಿಳಿದು ಅಭಿಮಾನಿಗಳು ಫುಲ್ ಖುಷಿಯಾಗಿರೋದಂತೂ ನಿಜ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author