ಬೈಕ ಕಾರು ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು

 

 

ಬೈಕ್ ಹಾಗೂ ಕಾರು ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು.

 

 

ತುಮಕೂರು ತಾಲೂಕಿನ ಮರಳೂರು ಕೆರೆ ಏರಿ ಬಳಿ ಮಂಗಳವಾರ ಸಂಜೆ 8 ಗಂಟೆ ವೇಳೆಯಲ್ಲಿ ತುಮಕೂರಿಂದ ಕುಣಿಗಲ್ ಕಡೆ ಚಲಿಸುತ್ತಿದ್ದ ತವೇರಾ ಕಾರು ಹಾಗೂ ಬೈಕ್ ನಡುವೆ ಅಪಘಾತ ನಡೆದಿದೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

 

 

ಮೃತಪಟ್ಟ ಬೈಕ್ ಸವಾರನ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಅಪಘಾತಕ್ಕೀಡಾಗಿರುವ ತವೇರ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು 20 ಅಡಿ ಆಳದ ಕಂದಕಕ್ಕೆ ಉರುಳಿಬಿದ್ದಿದೆ.

 

 

ತವೇರಾ ವಾಹನದಲ್ಲಿದ್ದ ಗಾಯಾಳುಗಳು ಅಪಘಾತ ನಡೆದ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾರೆ.

 

 

ಅಪಘಾತ ನಡೆದ ಕೂಡಲೇ ಮರಳೂರು ಕೆರೆ ಏರಿ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು ಘಟನೆ ನಡೆದ ಕೂಡಲೇ ತುಮಕೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

 

 

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

 

 

ವರದಿ ಮಾರುತಿ ಪ್ರಸಾದ್ ತುಮಕೂರು

Enjoyed this article? Stay informed by joining our newsletter!

Comments

You must be logged in to post a comment.

Related Articles
About Author