ಸಿ. ಡಿ. ಎಸ್. ರಾವತ್ ನಿಧನಕ್ಕೆ ಹೆಲ್ಪ್ ಸೊಸೈಟಿ ಕಂಬನಿ

ಪಾವಗಡ : ಹೆಲಿಕಾಪ್ಟರ್ ದುರಂತದಲ್ಲಿ ಜ. ಬಿಪಿನ್. ರಾವತ್, ಅವರ ಪತ್ನಿ, ಸೇನಾ ಸಿಬ್ಬಂದಿ ಮೃತಪಟ್ಟಿರುವುದು ತೀವ್ರ ದುಃಖ್ಖ ತಂದಿದೆ. ರಾವತ್ ರವರು ದೇಶಕ್ಕಾಗಿ ಶೃದ್ದೆಯಿಂದ ಕರ್ತವ್ಯ ನಿರ್ವಹಿಸಿದ್ದರು. ಅವರ ಸೇವೆಯನ್ನು ಮರೆಯಲು ಸಾಧ್ಯವಿಲ್ಲ ಎಂದು  ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ತೀವ್ರ ದುಃಖ್ಖ ವನ್ನು ವ್ಯಕ್ತಪಡಿಸಿದರು.

ಪಟ್ಟಣದ ಬ್ರೈಟ್ ಫ್ಯೂಚರ್ ಸಭಾಂಗಣದಲ್ಲಿ ಹೆಲ್ಪ್ ಸೊಸೈಟಿ ವತಿಯಿಂದ ಹಮ್ಮಿಕೊಂಡಿದ್ದ ಶೃಂದ್ದಜಲಿ ಕಾರ್ಯಕ್ರಮದಲ್ಲಿ ತೀವ್ರ ಶೋಕವನ್ನು ವ್ಯಕ್ತಪಡಿಸಿದ ಮಾತನಾಡಿದರು.

ಸ್ಕೌಟ್ಸ್ ಅಂಡ್ ಗೈಡ್ ಮುಖ್ಯಸ್ಥ ಕಮಲ್ ಬಾಬು ಮಾತನಾಡುತ್ತ ರಾವತ್ ರವರು 1978 ರಲ್ಲಿ ಸೇನೆಗೆ ಸೇರ್ಪಡೆಯಾಗಿ ಹಲವು ಹಂತಗಳಲ್ಲಿ ಸೇವೆ ಸಲ್ಲಿಸಿ 2016 ರಲ್ಲಿ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿ ಈಶಾನ್ಯ ರಾಜ್ಯಗಳಲ್ಲಿ ಬಂಡು ಕೋರರು, ಉಗ್ರರ ಉಪಟಳಕ್ಕೆ ಕಡಿವಾಣ ಹಾಕುವಲ್ಲಿ ರಾವತ್ ಮಹತ್ವದ ಪತ್ರ ವಹಿಸಿದ್ದರು, ಸರ್ಜಿಕಲ್ ದಾಳಿ ಕಾರ್ಯಾಚರಣೆ ವೇಳೆ ಮಹತ್ವದ ಜವಾಬ್ದಾರಿ  ನಿರ್ವಹಿಸಿದ ರಾವತ್ ರವರ ಸಾವು ಪ್ರತಿಯೊಬ್ಬ ಭಾರತೀಯರಿಗೆ ನೋವುಂಟು ತಂದಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸನ್ ರೈಸ್ ವೈದ್ಯರು, ಹೆಲ್ಪ್ ಸೊಸೈಟಿ ಮಾರ್ಗದರ್ಶಕರಾದ ಶ್ರೀಕಾಂತ್ ಪುವ್ವಡಿ, ರೋಟರಿ ಅಧ್ಯಕ್ಷ ಶ್ರೀಧರ್ ಗುಪ್ತ, ಕಾರ್ಯದರ್ಶಿ ಸತ್ಯ ಲೋಕೇಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ, ಮುಂತಾದವರಿದ್ದರು

Enjoyed this article? Stay informed by joining our newsletter!

Comments

You must be logged in to post a comment.

About Author