ಬಿಜೆಪಿ ಅಭ್ಯರ್ಥಿ ಗೆಲುವು ನಿಚ್ಚಿತ. ಬಿಜೆಪಿ ಮುಖಂಡ ಅ.ನಾ.ಲಿಂಗಪ್ಪ ವಿಶ್ವಾಸ.

ಬಿಜೆಪಿ ಅಭ್ಯರ್ಥಿ ಗೆಲುವು ನಿಚ್ಚಿತ. ಬಿಜೆಪಿ ಮುಖಂಡ ಅ.ನಾ.ಲಿಂಗಪ್ಪ ವಿಶ್ವಾಸ.

 

ಗುಬ್ಬಿ_ ಸುಮಾರು 600 ಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಲೋಕೇಶ್ ಗೌಡ ಜಯಗಳಿಸುತ್ತಾರೆ ಎಂದು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅ.ನ. ಲಿಂಗಪ್ಪ ತಿಳಿಸಿದರು.

 

   ಗುಬ್ಬಿ ತಾಲ್ಲೂಕಿನ ಬೆಟ್ಟದಹಳ್ಳಿ ಸೋಮಲಾಪುರ,ಬಸವಾಪಟ್ಟಣ ಗ್ರಾಮಗಳಲ್ಲಿ ಗ್ರಾಮ ಪಂಚಾಯತಿ ಸದಸ್ಯರ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಲೋಕೇಶ್ ಗೌಡ ಪರವಾಗಿ ಬುಧವಾರ ಮತಯಾಚನೆ ಮಾಡಿ ಮಾತನಾಡಿದ ಅವರು ಗುಬ್ಬಿ ತಾಲ್ಲೂಕಿನಲ್ಲಿ ಸುಮಾರು 300 ನೂರಕ್ಕೂ ಹೆಚ್ಚು ಮತಗಳನ್ನು ಬಿಜೆಪಿ ಪಕ್ಷದ ಅಭ್ಯರ್ಥಿ ತಗೆದುಕೊಳ್ಳುವ ನಿರೀಕ್ಷೆಯಿದೆ ಇಡೀ ಜಿಲ್ಲೆಯ ಎಲ್ಲಾ ನಾಯಕರುಗಳು ಕೂಡ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ,

 

 ಈಗಾಗಲೇ ಸ್ಥಳೀಯ ಚುನಾವಣೆಯಲ್ಲಿ ಗೆದ್ದು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವಂತಹ ಲೋಕೇಶ್ ಗೌಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಇಲ್ಲಿಗೆ ಆಗಮಿಸಿದ್ದು ನಮ್ಮ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ಮತದಾರರು ನೀಡಬೇಕಾಗಿ ವಿನಂತಿಸಿದರು.

 

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಾಗರನಹಳ್ಳಿವಿಜಯಕುಮಾರ್ ಮಾತನಾಡಿ 20 ವರ್ಷಗಳಿಂದ ನಮ್ಮ ಅಭ್ಯರ್ಥಿ ಲೋಕೇಶ್ ಗೌಡ ಬಿಜೆಪಿಯ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಹೊರರಾಜ್ಯಗಳಲ್ಲಿ ಸಂಘಟನೆಯನ್ನು ಮಾಡಿ ಬಂದಿರುವಂತಹ ಲೋಕೇಶ್ ಗೌಡ ಬಿಬಿಎಂಪಿ ಸದಸ್ಯರಾಗಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ನೋಡಿದಾಗ ಇಂಥವರಿಗೆ ಮತವನ್ನು ನೀಡಿ. ಇದರಿಂದ ಖಂಡಿತವಾಗಿಯೂ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ.ಮೇಲ್ಮನೆಯು ಕೂಡ ರಾಜ್ಯದ ಅಭಿವೃದ್ಧಿಗೆ ಚಿಂತನೆ ಮಾಡುವ ವೇದಿಕೆಯಾಗಿರುವುದರಿಂದ ತುಮಕೂರು ಜಿಲ್ಲೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಲೋಕೇಶ್ ಗೌಡ ಸರಳ ಹಾಗೂ ಅಭಿವೃದ್ಧಿಯ ಬಗ್ಗೆ ಚಿಂತನೆ ಇಟ್ಟುಕೊಂಡಿರುವವರು ಆಗಿರುವುದರಿಂದ ಅವರಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ತುಮಕೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿಯ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಮನವಿ ಮಾಡಿದರು.

 

ಬಿಜೆಪಿ ಹಿರಿಯ ಮುಖಂಡ ನಂಜೇಗೌಡ ಮಾತನಾಡಿ ಮೇಲ್ಮನೆಯಲ್ಲಿ ಇನ್ನೂ 13 ಸ್ಥಾನಗಳು ಬಂದಲ್ಲಿ ಬಿಜೆಪಿಗೆ ಪರಿಪೂರ್ಣವಾದ ವಿಧಾನ ಪರಿಷತ್ ನಲ್ಲಿ ಬಹುಮತ ಪಡೆಯುವುದರಿಂದ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಸಹಕಾರಿಯಾಗುತ್ತದೆ. ರಾಜ್ಯದಲ್ಲಿ ಈ ಬಾರಿ ಸಾಕಷ್ಟು ನಮ್ಮ ಅಭ್ಯರ್ಥಿಗಳು ಗೆಲುವಿನ ದಡ ಸೇರುತ್ತಿದ್ದಾರೆ ತುಮಕೂರು ನಲ್ಲಿಯೂ ಸಹ ಬಿಜೆಪಿ ಪಕ್ಷದ ನಮ್ಮ ಅಭ್ಯರ್ಥಿ ಲೋಕೇಶ ಗೌಡ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ನಮ್ಮ ಪಕ್ಷ ಮಾಡಿರುವಂತಹ ಯೋಜನೆಗಳು, ಸಂಘಟನೆಯ ಬಲ, ಹಾಗೂ ಜಾತ್ಯಾತೀತವಾಗಿ ನಮ್ಮ ಪಕ್ಷಕ್ಕೆ ಈ ಬಾರಿ ಮತದಾರರು ಮತವನ್ನು ಚಲಾವಣೆ ಮಾಡುತ್ತಿದ್ದಾರೆ. ಹಾಗಾಗಿ ನಮ್ಮ ಪಕ್ಷ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.

 

ಇದೇ ಸಂದರ್ಭದಲ್ಲಿ ಬಿಜೆಪಿ ಹಿಂದೂಳಿದ ವರ್ಗದ ಮೋರ್ಚಾ ಅಧ್ಯಕ್ಷ ಎಂ ಎನ್ ಭೀಮಶೆಟ್ಟಿ , ಗ್ರಾಮ ಪಂಚಾಯಿತಿ ಸದಸ್ಯರಾದ ಮೆಡಿಕಲ್ ಸ್ವಾಮಿ,ವೇಣುಗೋಪಾಲ್ , ಯಮೂನಾ ರಮೇಶ್ , ಮಾಜಿ ತಾಲ್ಲೂಕ್ ಪಂಚಾಯಿತಿ ಸದಸ್ಯ ಪುಟ್ಟರಾಜು ,ಮುಖಂಡರಾದ ಸಿದ್ದಲಿಂಗಮೂರ್ತಿ ,ಸಿದ್ದರಾಮಣ್ಣ , ರಮೇಶ್ ,ಶಿವಕುಮಾರ್ ಇನ್ನಿತರರು ಹಾಜರಿದ್ದರು.

 

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author