ಸಕಾಮ ಮತ್ತು ನಿಷ್ಕಾಮ ಪ್ರಾರ್ಥನೆ

ಸಕಾಮ ಪ್ರಾರ್ಥನೆ
ಅರ್ಥ: ತನ್ನ ಇಚ್ಛೆಗಳ ಪೂರ್ತಿಗಾಗಿ, ಐಹಿಕ ಸುಖ ಇತ್ಯಾದಿಗಳಿಗಾಗಿ ಮಾಡಿದ ಪ್ರಾರ್ಥನೆ.
ಉದಾಹರಣೆ:
೧.‘ಹೇ ದೇವರೇ, ನನಗೆ ಯಥೇಚ್ಛ ಹಣ ಸಿಗಲಿ’, ನನಗೆ ಒಳ್ಳೆಯ ಕೆಲಸ ಸಿಗಲಿ,
೨.ಹೇ ದೇವರೇ, ‘ನನ್ನ ಹೊಟ್ಟೆನೋವು ದೂರವಾಗಲಿ’, ಇತ್ಯಾದಿ.

ನಿಷ್ಕಾಮ ಪ್ರಾರ್ಥನೆ
ಅರ್ಥ: ಯಾವುದೇ ಲೌಕಿಕ ಬೇಡಿಕೆಗಳು ಇಲ್ಲದಿರುವ ಪ್ರಾರ್ಥನೆ. ನಿಷ್ಕಾಮ ಪ್ರಾರ್ಥನೆಯಲ್ಲಿ ಯಾವುದೇ ಲೌಕಿಕ ಉದ್ದೇಶ, ಇಚ್ಛೆ ಅಥವಾ ಅಪೇಕ್ಷೆಗಳಿರುವುದಿಲ್ಲ. ಇಂತಹ ಪ್ರಾರ್ಥನೆಯಲ್ಲಿ ಭಗವಂತನಲ್ಲಿ ಆತ್ಮಸಮರ್ಪಣೆ ಇರುತ್ತದೆ. ಇಂತಹ ಪ್ರಾರ್ಥನೆಯಿಂದ ಅಹಂಕಾರ ಮತ್ತು ವಾಸನೆಗಳು ಇಲ್ಲವಾಗಿ ಆಧ್ಯಾತ್ಮಿಕ ಉನ್ನತಿಯಾಗುತ್ತದೆ.
ಆಧ್ಯಾತ್ಮಿಕ ಉನ್ನತಿ ಅಥವಾ ಗುರುಕಾರ್ಯದ ಸಂದರ್ಭ ದಲ್ಲಿನ ಪ್ರಾರ್ಥನೆಗಳು ನಿಷ್ಕಾಮ ಪ್ರಾರ್ಥನೆಗಳೇ ಆಗಿರುತ್ತವೆ.
ಆ.ಉದಾಹರಣೆ: ‘ಹೇ ದೇವರೇ, ನಿನಗೆ ಅಪೇಕ್ಷಿತವಿರುವ ಧರ್ಮಕಾರ್ಯವನ್ನು ನನ್ನಿಂದ ಮಾಡಿಸಿಕೋ.’

ಸಕಾಮ ಉಪಾಸಕನು ಸಕಾಮ ಪ್ರಾರ್ಥನೆ ಮತ್ತು ನಿಷ್ಕಾಮ ಉಪಾಸಕನು ನಿಷ್ಕಾಮ ಪ್ರಾರ್ಥನೆಯನ್ನು ಮಾಡುತ್ತಾನೆ. ಸಕಾಮ ಪ್ರಾರ್ಥನೆಯನ್ನು ಮಾಡುವವನು ಮಾಯೆಯಲ್ಲಿ ಸಿಲುಕುತ್ತಾನೆ ಮತ್ತು ನಿಷ್ಕಾಮ ಪ್ರಾರ್ಥನೆಯನ್ನು ಮಾಡುವವನು ಮಾಯೆಯನ್ನು ತ್ಯಜಿಸಿ ಈಶ್ವರಪ್ರಾಪ್ತಿಯ ದಿಕ್ಕಿನಲ್ಲಿ ಮಾರ್ಗಕ್ರಮಣ ಮಾಡುತ್ತಾನೆ; ಹಾಗಾಗಿ ಈಶ್ವರಪ್ರಾಪ್ತಿಗಾಗಿ ಸಾಧನೆ ಮಾಡುವವನು ನಿಷ್ಕಾಮ ಪ್ರಾರ್ಥನೆ ಮಾಡಬೇಕು.


ವ್ಯಷ್ಟಿ ಮತ್ತು ಸಮಷ್ಟಿ ಪ್ರಾರ್ಥನೆ

೧. ವ್ಯಷ್ಟಿ ಪ್ರಾರ್ಥನೆ: ವೈಯಕ್ತಿಕ ಲಾಭ, ದುಃಖ ಅಥವಾ ಸಂಕಟಗಳ ನಿವಾರಣೆ, ಆಧ್ಯಾತ್ಮಿಕ ಉನ್ನತಿ ಇತ್ಯಾದಿಗಳಿಗಾಗಿ ಮಾಡಿದ ಪ್ರಾರ್ಥನೆ ಎಂದರೆ ‘ವ್ಯಷ್ಟಿ ಪ್ರಾರ್ಥನೆ’.

೨. ಸಮಷ್ಟಿ ಪ್ರಾರ್ಥನೆ: ತಮ್ಮ ಕುಟುಂಬ, ಜಾತಿ ಬಾಂಧವರು, ಸಮಾಜ, ಊರು, ರಾಷ್ಟ್ರ ಮುಂತಾದವುಗಳಿಗೆ ಲಾಭವಾಗಬೇಕು ಮತ್ತು ಅವರ ದುಃಖ ನಿವಾರಣೆಯಾಗಬೇಕು, ಅವರ ಆಧ್ಯಾತ್ಮಿಕ ಉನ್ನತಿಯಾಗಬೇಕು ಎಂಬುದಕ್ಕಾಗಿ ಮಾಡಿದ ಪ್ರಾರ್ಥನೆಯೆಂದರೆ ‘ಸಮಷ್ಟಿ ಪ್ರಾರ್ಥನೆ’.

ಈಶ್ವರಪ್ರಾಪ್ತಿಗಾಗಿ ಸಾಧನೆಯನ್ನು ಮಾಡುವವನಲ್ಲಿ ಪ್ರಾಥಮಿಕ ಹಂತದಲ್ಲಿ ‘ನಾನು ಮತ್ತು ನನ್ನ ಸಾಧನೆ’ ಎಂಬ ಸಂಕುಚಿತ ದೃಷ್ಟಿಕೋನವಿರುತ್ತದೆ. ಈಶ್ವರಪ್ರಾಪ್ತಿಗಾಗಿ ‘ವಸುಧೈವ ಕುಟುಂಬಕಮ್|’ ಎಂಬ ಭಾವ ನಿರ್ಮಾಣವಾಗುವುದು ಅವಶ್ಯಕ ವಾಗಿದೆ. ಇದಕ್ಕೆ ಸಮಷ್ಟಿ ಪ್ರಾರ್ಥನೆ ಉಪಯುಕ್ತವಾಗಿದೆ. ಏಕೆಂದರೆ ಸಮಷ್ಟಿ ಪ್ರಾರ್ಥನೆಯನ್ನು ಮಾಡುವುದರಿಂದ ಬೇಗನೇ ವ್ಯಾಪಕತ್ವ ಬರುತ್ತದೆ ಮತ್ತು ಇತರರ ಬಗ್ಗೆ ಪ್ರೇಮ ನಿರ್ಮಾಣವಾಗುತ್ತದೆ.


ಪ್ರಾರ್ಥನೆಯ ಜೊತೆಗೆ ಸರ್ವತೋಮುಖ ಸಾಧನೆಯನ್ನು ಮಾಡಿರಿ, ಆಗಲೇ ಜೀವನದಲ್ಲಿ ಸತತವಾಗಿ ಆನಂದ ಸಿಗುವುದು

ಪ್ರಾರ್ಥನೆ ಎಂದರೆ ಈಶ್ವರನ ಚರಣಗಳಲ್ಲಿ ಶರಣಾಗತಿ. ಶರಣಾಗತಿಯಿಂದ ಅಹಂ ಕಡಿಮೆಯಾಗಿ ಈಶ್ವರನ ಕೃಪೆಯಾಗು ತ್ತದೆ ಮತ್ತು ಈಶ್ವರನ ಕೃಪೆಯಿಂದಲೇ ಜೀವನದಲ್ಲಿ ನಿಜವಾದ ಕಲ್ಯಾಣವಾಗುತ್ತದೆ ಹಾಗೂ ನಿಜವಾದ ಆನಂದ ಸಿಗುತ್ತದೆ. ಜೀವನದಲ್ಲಿ ಸತತವಾಗಿ ಆನಂದವನ್ನು ಪಡೆಯಲು ಸತತವಾಗಿ ಮಾಡುವ ಸಾಧನೆಯೊಂದೇ ಉಪಾಯವಾಗಿದೆ. ಪ್ರಾರ್ಥನೆಯು ಸಾಧನೆಯ ಒಂದು ಅಂಗವಾಗಿದ್ದರೂ ಜೀವನದಲ್ಲಿ ಸತತವಾಗಿ ಆನಂದ ಸಿಗಲು ಪ್ರಾರ್ಥನೆಯ ಜೊತೆಗೆ ಸಾಧನೆಯನ್ನು ಸರ್ವತೋಮುಖವಾಗಿ ಮತ್ತು ಸತತವಾಗಿ ಮಾಡಬೇಕಾಗುತ್ತದೆ. ಇದಕ್ಕಾಗಿ ಪ್ರತಿದಿನ ಕುಲದೇವರ ನಾಮಜಪವನ್ನು ಕಡಿಮೆಪಕ್ಷ ೧ ಗಂಟೆಯಾದರೂ ಮತ್ತು ಹೆಚ್ಚೆಂದರೆ ಸತತವಾಗಿ ಮಾಡಬೇಕು. ಹಾಗೆಯೇ ಪೂರ್ವಜರ ಅತೃಪ್ತ ಲಿಂಗದೇಹಗಳ ತೊಂದರೆಗಳಿಂದ ರಕ್ಷಣೆಯನ್ನು ಪಡೆಯಲು ‘ಶ್ರೀ ಗುರುದೇವ ದತ್ತ’ ಎಂಬ ನಾಮಜಪವನ್ನು ತೊಂದರೆಯ ತೀವ್ರತೆಗನುಸಾರ ಪ್ರತಿದಿನ ೨ರಿಂದ ೬ ಗಂಟೆ ಮಾಡಬೇಕು. ಸಮಾಜದಲ್ಲಿ ಅಧ್ಯಾತ್ಮದ ಪ್ರಚಾರವಾಗಲು ಸನಾತನ ಸಂಸ್ಥೆಯಂತಹ ಆಧ್ಯಾತ್ಮಿಕ ಸಂಸ್ಥೆಗಳಲ್ಲಿ ಸೇರಿಕೊಂಡು ಸತ್ಸೇವೆಯನ್ನು ಮಾಡಬೇಕು. ಇಂತಹ ವಿವಿಧ ಪ್ರಯತ್ನಗಳಿಂದ ಸಾಧನೆಯನ್ನು ಮಾಡಬೇಕು. (ಈ ವಿಷಯದಲ್ಲಿ ಹೆಚ್ಚಿನ ಮಾಹಿತಿಗಾಗಿ ಸನಾತನದ ಗ್ರಂಥಸಂಪತ್ತು ಹಾಗೂ ಸನಾತನದ ಸತ್ಸಂಗಗಳ ಲಾಭವನ್ನು ಪಡೆಯಿರಿ.)

ವಿಜ್ಞಾನಿಗಳು ಮಾಡಿದ ಆಧ್ಯಾತ್ಮಿಕ ಸಂಶೋಧನೆ!

ನಾಮಜಪ ಮತ್ತು ಪ್ರಾರ್ಥನೆಯಿಂದ ಸಾತ್ತ್ವಿಕ ಶಕ್ತಿಯು ಹೆಚ್ಚಾಗುವುದರಿಂದ ವ್ಯಕ್ತಿಯ ಪ್ರಭಾಮಂಡಲವೂ (ಪ್ರಭಾವಳಿ) ಹೆಚ್ಚಾಗುವುದು

ನಮ್ಮ ಶರೀರದ ಸುತ್ತಲಿರುವ ಅನೇಕ ವಲಯಗಳಿಂದ ಪ್ರಭಾಮಂಡಲ ತಯಾರಾಗುತ್ತದೆ. ವೈಜ್ಞಾನಿಕ ಉಪಕರಣಗಳ ಆಧಾರದಲ್ಲಿ ನಾವು ಈ ಪ್ರಭಾಮಂಡಲವನ್ನು ಅಳೆಯಬಹುದು. ಒಬ್ಬ ವ್ಯಕ್ತಿಯ ಪ್ರಭಾಮಂಡಲವನ್ನು ಅಳತೆ ಮಾಡಿದ ನಂತರ ಅದರ ತ್ರಿಜ್ಯ (ರೇಡಿಯಸ್) ಒಂದು ಅಡಿಯಷ್ಟಿತ್ತು. ಅನಂತರ ಆ ವ್ಯಕ್ತಿಗೆ ಕೆಲವು ನಿಮಿಷ ನಾಮಜಪ ಮತ್ತು ಪ್ರಾರ್ಥನೆ ಮಾಡಲು ಹೇಳಲಾಯಿತು. ಅನಂತರ ಪುನಃ ಪ್ರಭಾಮಂಡಲವನ್ನು ಅಳತೆ ಮಾಡಿದಾಗ, ಅವನ ತ್ರಿಜ್ಯದಲ್ಲಿ ಒಂದು ಅಡಿಯಷ್ಟು ಹೆಚ್ಚಾಗಿ ಅದು ಎರಡು ಅಡಿಗಳಷ್ಟಾಗಿತ್ತು. ಇದರಿಂದ ಪ್ರಾರ್ಥನೆ ಮತ್ತು ನಾಮಜಪದಿಂದ ಸಾತ್ತ್ವಿಕ ಶಕ್ತಿಯು ಹೆಚ್ಚಾಗುತ್ತದೆ, ಎಂಬುದು ಸಿದ್ಧವಾಗುತ್ತದೆ.

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಕಿರುಗ್ರಂಥ ‘ಪ್ರಾರ್ಥನೆಯ ಮಹತ್ವ ಮತ್ತು ಉದಾಹರಣೆಗಳು’)

ಜಾಲತಾಣ : sanatanshop.com/
                                                                                   ಸಂಗ್ರಹ - ಶ್ರೀ. ವಿನೋದ ಕಾಮತ
ವಕ್ತಾರರು, ಸನಾತನ ಸಂಸ್ಥೆ
ಸಂಪರ್ಕ : 93425 99299

Enjoyed this article? Stay informed by joining our newsletter!

Comments

You must be logged in to post a comment.

About Author