ಇಂದು ರಾಖಿ ಹಬ್ಬ, ಚೀನಾ ರಾಖಿಗಳನ್ನು ಖರೀದಿಸಬೇಡಿ

ಇಂದು ರಾಖಿ ಹಬ್ಬ, ಚೀನಾ ರಾಖಿಗಳನ್ನು ಖರೀದಿಸಬೇಡಿ 

 

Rakhi festival in china

Image source: indiatvnews.com

ಭಾರತೀಯರ ಪಾಲಿನ ಪವಿತ್ರ ಹಬ್ಬಗಳಲ್ಲಿ ರಕ್ಷಾ ಬಂಧನವೂ ಒಂದು. ಕೃಷ್ಣನಿಗೆ ದ್ರೌಪದಿ, ಇಂದ್ರನಿಗೆ ಇಂದ್ರಾಣಿ ರಕ್ಷೆ ಕಟ್ಟಿದ ಕಥೆಗಳು ನಮ್ಮ ಪುರಾಣಗಳಲ್ಲಿವೆ. ಶತಮಾನಗಳಿಂದ ಸಹೋದರ-ಸಹೋದರಿಯರ ಬಾಂಧವ್ಯವನ್ನು ಗಟ್ಟಿಯಾಗಿಸುತ್ತಾ ಬಂದಿರುವ ರಾಖಿ ಹಬ್ಬವು ತನ್ನದೇ ಆದ ಮಹತ್ವವನ್ನು ಹೊಂದಿದೆ. 

 

ನಮ್ಮ ಹಬ್ಬಗಳ ಮೇಲೂ ಚೀನಿಯರ ಕಣ್ಣು

 

ಹಿಂದೆಲ್ಲಾ ರಕ್ಷಾ ಬಂಧನದ ದಿನ ಕೇಸರಿ-ಕೆಂಪು-ಹಳದಿ ಬಣ್ಣಗಳಿಂದ ಕೂಡಿದ ರೇಷ್ಮೆಯ ನೂಲನ್ನು ರಾಖಿಯನ್ನಾಗಿ ಕಟ್ಟಿಕೊಳ್ಳುತ್ತಿದ್ದೆವು. ಇಂದಿಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಖಿ ವೈಶಿಷ್ಟ್ಯಪೂರ್ಣವಾದುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಚೀನಾದಲ್ಲಿ ತಯಾರಾದ ರಾಖಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಚೀನಾ ನಮ್ಮ ದೇಶದ ರಾಜತಾಂತ್ರಿಕ ವಿಚಾರಗಳಲ್ಲಿ ಮಾತ್ರವಲ್ಲದೆ, ನಮ್ಮ ಹಬ್ಬ-ಹರಿದಿನಗಳ ವಿಚಾರಗಳಲ್ಲೂ ತಲೆ ಹಾಕುತ್ತಿದ್ದು, ನಾವುಗಳು ಚೀನಿಯರ ಬಣ್ಣ ಬಣ್ಣದ, ಆಕರ್ಷಣೀಯ ವಸ್ತುಗಳಿಗೆ ಮಾರುಹೋಗುತ್ತಿದ್ದೇವೆ. ಇದು ದುಖಃಕರ, ಆತಂಕಕಾರಿ ಸಂಗತಿಯಲ್ಲದೆ ಬೇರೇನೂ ಅಲ್ಲ. 

 

ಬದಲಾಗಿದೆ ರಾಖಿಯ ಸ್ವರೂಪ 

ಯಾವಾಗ ಚೀನಾದ ರಾಖಿಗಳು ಮಾರುಕಟ್ಟೆಗೆ ಕಾಲಿಟ್ಟವು ಆಗ ರಾಖಿಯ ಸ್ವರೂಪವೇ ಬದಲಾಗಿ ಹೋಯಿತು. ಚಿನ್ನ, ಬೆಳ್ಳಿಯಿಂದ ಮಾಡಿದ ರಾಖಿಯಿಂದ ಹಿಡಿದು, ಕೆಂಪು-ಕಪ್ಪು-ಹಳದಿ ಮುಂತಾದ ದಾರಗಳಿಂದ ಕೂಡಿದ, ವಿವಿಧ ಪ್ಲಾಸ್ಟಿಕ್ ಮಣಿಯಿಂದ ಅಲಂಕರಿಸಲ್ಪಟ್ಟ ಚೀನಿ ರಾಖಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವು ನಮ್ಮ ಸಂಪ್ರದಾಯ, ಶಾಸ್ತ್ರ, ಆಚರಣೆಗಳಿಗೆ ವಿರುದ್ಧವಾಗಿದ್ದು, ನಮ್ಮತನವನ್ನು ಬಿಟ್ಟುಕೊಟ್ಟಂತಾಗುತ್ತಿದೆ. 

 

ಚೀನಾ ರಾಖಿಗಳನ್ನು ಬಹಿಷ್ಕರಿಸುವ ಸಮಯ 

 

boycott china rakhiImage source : sangeetas pen

ನಮ್ಮ ಸಂಪ್ರದಾಯಿಕ ರೂಪದಲ್ಲಿರದ ಚೀನಾ ರಾಖಿಗಳನ್ನು ಬಹಿಷ್ಕರಿಸುವ ಸಮಯ ಬಂದಿದೆ. ಚೀನಿ ರಾಖಿಗಳ ಸ್ಥಾನದಲ್ಲಿ ನಮ್ಮ ನೆಲದಲ್ಲೇ ತಯಾರಾದ, ನಮ್ಮದೇ ರಾಖಿ ಕಟ್ಟುವ ಅಭಿಯಾನ ಮುನ್ನೆಲೆಗೆ ಬರಬೇಕಾಗಿದೆ. ನಮ್ಮದೇ ರಕ್ಷೆಯ ಹಿಂದೆ ನಮ್ಮ ದೇಶದ ಸುರಕ್ಷತೆ ಅಡಗಿದೆ ಎಂಬುದನ್ನು ನಾವು ಮರೆಯಬಾರದು. ಹೀಗಾಗಿ, ಮನೆಯಲ್ಲೇ ತಯಾರಿಸಿದ ಇಲ್ಲವೇ ನಮ್ಮವರೇ ತಯಾರಿಸಿ ಮಾರಾಟಕ್ಕಿಟ್ಟ ರಾಖಿಗಳನ್ನು ಖರೀದಿಸಿ ಅವುಗಳನ್ನು ಸಹೋದರಿಯರು ತಮ್ಮ ಸಹೋದರರಿಗೆ ಕಟ್ಟಿದರೆ ಅದಕ್ಕಿಂತ ಖುಷಿ ಬೇರೊಂದಿರುವುದಿಲ್ಲ. 

 

ರಾಖಿಯನ್ನು ಸಹೋದರಿಯರು ಸಹೋದರರಿಗೆ ಮಾತ್ರ ಕಟ್ಟುವುದಿಲ್ಲ. ಭಾರತದ ಅನೇಕ ಕಡೆಗಳಲ್ಲಿ ಸಹೋದರಿಯರು ಪರಸ್ಪರ ರಾಖಿ ಕಟ್ಟಿಕೊಳ್ಳುವ ಸಂಪ್ರದಾಯವೂ ಇದೆ. ಇನ್ನೂ ಅನೇಕ ಸಂಬಂಧಗಳನ್ನು ಗಟ್ಟಿ ಮಾಡುವ ಸಂಕೇತವಾಗಿ ರಾಖಿ ಹಬ್ಬವನ್ನು ನಮ್ಮ ದೇಶದಲ್ಲಿ ಆಚರಿಸಲಾಗುತ್ತದೆ. ಭಾರತದ ಉದ್ದಗಲಕ್ಕೂ ರಾಖಿಯನ್ನು ಹಲವು ರೀತಿಗಳಲ್ಲಿ ಆಚರಿಸಲಾಗುತ್ತದೆ. ಸಿಹಿ ತಿಂಡಿಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಸಂಭ್ರಮಿಸಲಾಗುತ್ತದೆ.  

 

ಚೀನಾಕ್ಕೆ ಬಹಿಷ್ಕಾರ ರಾಖಿಯಿಂದಲೇ ಆರಂಭವಾಗಲಿ

ಕೇವಲ ರಾಖಿಯೊಂದೇ ಅಲ್ಲ, ದೀಪಾವಳಿ ಸೇರಿದಂತೆ ನಮ್ಮ ಅನೇಕ ಪ್ರಸಿದ್ಧ ಹಬ್ಬಗಳಲ್ಲಿ ಚೀನಾ ಅಲಂಕಾರಿಕ ವಸ್ತುಗಳನ್ನು, ಪಟಾಕಿಗಳನ್ನು ಬಳಸುತ್ತಿದ್ದೇವೆ. ಅವುಗಳನ್ನು ನಾವು ಬಹಿಷ್ಕರಿಸಬೇಕಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ನಾವು ಆತ್ಮನಿರ್ಭರವಾಗಬೇಕಿದೆ. ಸಣ್ಣ ರಾಖಿ, ಪಟಾಕಿ, ಪ್ಲಾಸ್ಟಿಕ್ಹಾರ ಇವುಗಳನ್ನು ಬಹಿಷ್ಕರಿಸಿದರೆ ಚೀನಾಕ್ಕೇನು ನಷ್ಟ ಎಂದು ಯೋಚಿಸಬಹುದು. ಆದರೆ ಪ್ರತಿಯೊಂದು ಮಹಾನ್ಕೆಲಸಕ್ಕೂ ಒಂದು ಸಣ್ಣ ಆರಂಭ ಬೇಕಿದೆ. ರಾಖಿ, ಪಟಾಕಿಯಿಂದ ಆರಂಭಗೊಂಡು ಭವಿಷ್ಯದಲ್ಲಿ ಚೀನಾದ ಯಾವುದೇ ವಸ್ತುಗಳನ್ನು ನಾವು ಬಳಸದೆ ಇರುವ ಹಂತಕ್ಕೆ ತಲುಪಲು ಸಾಧ್ಯವಿದೆ. ಭಾರತೀಯರು ಮನಸು ಮಾಡಬೇಕು ಅಷ್ಟೆ. 

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 ►Follow us on Facebook

https://www.facebook.com/Planettvkannada

 ►Follow us on Blogspot

https://planettvkannada.blogspot.com

 ►Follow us on Dailymotion

https://www.dailymotion.com/planettvkannada

 ►Follow us on Instagram

https://www.instagram.com/planettvkannada/

 ►Follow us on Pinterest

https://in.pinterest.com/Planettvkannada/

 ►Follow us on Koo App

https://www.kooapp.com/profile/planettvkannada

 ►Follow us on Twitter

https://twitter.com/Planettvkannada

 ►Follow us on Share Chat

https://sharechat.com/profile/planettvkannada

 ►Follow us on Tumgir

https://www.tumgir.com/planettvkannada

 ►Follow us on Tumbler

https://planettvkannada.tumblr.com/

 ►Follow us on Telegram

 

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author