ದೈವದ ಮೂಲ ಭಕ್ತಿ.

ನಾನೆಂದಿಗೂ ದೇವರನ್ನು ಗುಡಿ ಗೋಪುರಗಳ ಕಟ್ಟಡದಲ್ಲಿ, ಜನಜಂಗುಳಿಯ ಜಾತ್ರೆಗಳಲ್ಲಿ ,ಬ್ರಾಹ್ಮಣರ ವೇದಮಂತ್ರಗಳ ಪಠಣದಲ್ಲಿ ,ರಾಶಿ ರಾಶಿ ಹೂವಿನ ದಂಡೆಯ ಸಿಂಗಾರದ ಮಧ್ಯದಲ್ಲಿ, ವೈಭವಪೂರ್ಣ ಮೆರವಣಿಗೆಗಳಲ್ಲಿ, ನನಗೆಂದಿಗೂ ದೇವರು ಕಾಣಲೇ ಇಲ್ಲ.

 

ನಾ ಕಂಡ ದೇವರೇ ಬೇರೆ ,ಅದು ಕಣ್ಣಿಗೆ ಕಾಣುವುದಿಲ್ಲ. ಅನುಭವಿಸಿದ ಒಂದು ಸುಂದರ ಹಾಗೂ ಸಕಾರಾತ್ಮಕ ಅನುಭವ. ಸದಾ ನಮ್ಮನ್ನು ಕಾಯುವ ,ಸರಿಯಾದ ಪಥದಲ್ಲಿ ಮುನ್ನಡೆಸುವ ಒಂದು ಅಗೋಚರವಾದ ಶಕ್ತಿ. 

 

ನಾನು ದೇವರನ್ನು ತುಂಬಾ ಸಾರಿ ತುಂಬಾ ಸಂದರ್ಭಗಳಲ್ಲಿ ಕಂಡಿದ್ದೇನೆ. ನಾ ಮಾಡೋ ಪ್ರತಿ ಕೆಟ್ಟ ಕೆಲಸಕ್ಕೂ ನನ್ನನ್ನು ಮೊದಲೇ ಮುನ್ನೆಚ್ಚರಿಸುವ ಅಥವಾ ನಾ ಮಾಡುವ ಕೆಲಸ ತಪ್ಪೆಂದು ನನಗೆ ಚುಚ್ಚಿ ಹೇಳುವ ನನ್ನ ಅಂತರಾತ್ಮದಲ್ಲಿ ನಾ ದೇವರನ್ನ ಕಂಡಿದ್ದೇನೆ .

 

ಮುಂಜಾವ ವೇದಮಂತ್ರಗಳ ಪಠಣದಲ್ಲಿ, ಹಾಲು ,ಜೇನು, ಅರಿಶಿನ-ಕುಂಕುಮ ಇತ್ಯಾದಿ ಸುಗಂಧ ದ್ರವ್ಯಗಳ ಅಭಿಷೇಕ ದೊಳಗಿರುವ ಮೂರ್ತಿಯಲ್ಲಿ ನನಗೆಂದು ದೇವರು ಕಾಣಲೇ ಇಲ್ಲ .

ಹಸಿದ ಹೊಟ್ಟೆಗೆ ಅನ್ನ ನೀಡುವ ಕೈಗಳಲ್ಲಿ ದೇವರನ್ನು ಕಂಡಿದ್ದೇನೆ .ಬಡ ಮಕ್ಕಳಿಗೆ ಯಾವುದೇ ಫಲಾಪೇಕ್ಷೆಯಿಲ್ಲದೆ ವಿದ್ಯೆ ನೀಡುವ ಗುರುಗಳಲ್ಲಿ ದೇವರನ್ನು ಕಂಡಿದ್ದೇನೆ .ಹೆತ್ತ ಒಡಲಿನ ಕೂಸನ್ನು ಜೋಪಾನವಾಗಿ ಕಾಯೋ ಪ್ರತಿ ಅಮ್ಮಂದಿರಲ್ಲಿ ದೇವರನ್ನು ಕಂಡಿದ್ದೇನೆ .

ಜಡೆ ಬಿಟ್ಟು ,ಕಾವಿ ತೊಟ್ಟು ,ವಿಭೂತಿ ,ಅರಿಶಿನ-ಕುಂಕುಮ ರುದ್ರಾಕ್ಷಿ ,ಮಂತ್ರ ,ತಂತ್ರ ಎಲ್ಲವನ್ನೂ ಹಾಕಿದ್ದ ಸ್ವಾಮಿಗಳಲ್ಲಿ ನನಗೆ ದೇವರು ಕಾಣಲೇ ಇಲ್ಲ .

ಬೇವಿನ ಸೊಪ್ಪು ಹಿಡಿದು ಅವರದೇ ಸಂಗೀತದ ಲಯಕ್ಕೆ ಕುಣಿಯುವ ಜನರಲ್ಲಿ ನನಗೆಂದಿಗೂ ದೇವರು ಕಾಣಲೇ 

ಪರಿಸ್ಥಿತಿ ಒತ್ತಡಕ್ಕೆ ಸಿಲುಕಿ ಬದುಇಲ್ಲ .ಕಲ್ಲಿ ನೊಂದ ಎಷ್ಟೋ ಜನರಿಗೆ ಸಾಂತ್ವನ ನೀಡಿ ತನ್ನದೇ ಕಂಪನಿಯಲ್ಲಿ ಕೆಲಸ ನೀಡಿದ ಕಂಪನಿಯ ಮಾಲೀಕ ನಲ್ಲಿ ದೇವರನ್ನು ಕಂಡಿದ್ದೇನೆ.

ಕೆಲಸ ಮುಗಿಸಿ ಶಾಲೆಯಿಂದ ಮಗು ಕರೆದುಕೊಂಡು ತರಕಾರಿ ತೆಗೆದುಕೊಂಡು ಹೋಗುವ ಹೆಂಗಸನ್ನು ನೋಡಿ ಮರುಗಿ ಸಹಾಯಕ್ಕೆ ಬಂದ ಹುಡುಗನಲ್ಲಿ ದೇವರನ್ನು ಕಂಡಿದ್ದೇನೆ

ಗಿಜಿಗುಡುವ ಬಿಎಂಟಿಸಿ ಬಸ್ಗಳಲ್ಲಿ ಪುಟ್ಟ ಕಂದಮ್ಮಗಳನ್ನು ಹೊತ್ತು ಬರುವ ಹೆಂಗಸಿಗೆ ಎದ್ದುನಿಂತು ಜಾಗ ಬಿಡುವ ಜನರಲ್ಲಿ ದೇವರನ್ನು ಕಂಡಿದ್ದೇನೆ .

ಕತ್ತಲಾದ ಬಳಿಕ ಜೋಪಾನವಾಗಿ ಹೆಣ್ಣುಮಕ್ಕಳನ್ನು ಮನೆಗೆ ಬಿಡುವ ಆಟೋ ಡ್ರೈವರ್ ಕ್ಯಾಬ್ ಡ್ರೈವರ್ ಗಳಲ್ಲಿ ದೇವರನ್ನು ಕಂಡಿದ್ದೇನೆ .

ದೇವಸ್ಥಾನಗಳಲ್ಲಿ ಮಂತ್ರಿಸಿ ಕೊಡುವ ನಿಂಬೆಹಣ್ಣಿನಲ್ಲಿ ನನಗೆಂದಿಗೂ ದೇವರು ಕಾಣಲೇ ಇಲ್ಲ .

ಕೊರಳಿಗೆ ಕಟ್ಟುವ ತಾಯತ ಮಂತ್ರ ಯಂತ್ರಗಳಲ್ಲಿ ನನಗೆಂದಿಗೂ ದೇವರು ಕಾಣಲೇ ಇಲ್ಲ .

ಅರಿಶಿನ ಕುಂಕುಮ, ಹೂವು ,ಗಂಧದ ಕಡ್ಡಿ ,ಕರ್ಪೂರ, ಕಾಯಿ ,ಎಣ್ಣೆ ,ಬತ್ತಿ ಎಲೆ-ಅಡಿಕೆ ದಕ್ಷಿಣೆ ಇದೆಲ್ಲವನ್ನೂ ನನಗೆ ದೇವರು ಕಾಣಲೇ ಇಲ್ಲ ಪ್ರತಿ ಸಂಸಾರವನ್ನು ಜೋಪಾನ ಮಾಡು ತಂದೆಯಲ್ಲಿ ದೇವರನ್ನು ಕಂಡಿದ್ದೇನೆ

ದೇವರ ಎಂಬುದೇ ಒಂದು ಅಗಾಧ ಶಕ್ತಿ ಅದನ್ನು ನಮ್ಮೊಳಗೆ ಅನುಭವಿಸಬೇಕು ಯಾವುದೋ ಜ್ಯೋತಿಷಿ ಪೂಜಾರಿ ಗಳ ಮೂಲಕ ಹುಡುಕಬೇಡಿ .

ಮಾಡೋ ಪ್ರತಿ ಕೆಲಸದಲ್ಲೂ ಪ್ರಾಮಾಣಿಕತೆ ಇದ್ದಾಗ ದೇವರೇ ನಿಮ್ಮ ಕಣ್ಮುಂದೆ ಪ್ರತ್ಯಕ್ಷನಾಗುತ್ತಾನೆ. ಅದನ್ನು ಗುರುತಿಸುವ ಶಕ್ತಿ ನಮಗಿರಬೇಕು ಅಷ್ಟೇ. 

 

ಜಗತ್ತಿನ ಅಣು ರೇಣು ತೃಣ ಇದೆಲ್ಲದರ ಮಾಲೀಕನಾದ ಸರ್ವಶಕ್ತನಾದ ಶಿವನ ಕೈಯಲ್ಲಿ ಕಪಾಲ ಹಿಡಿದು ಭಿಕ್ಷೆಗೆ ಹೊರಟುನಿಂತ ಅಂದರೆ ಅದರಲ್ಲಿ ಅರ್ಥ ಮಾಡ್ಕೋಬೇಕು ದೇವರಿಗೆ ಬೇಕಾಗಿರುವುದು ಕೇವಲ ನಿರ್ಮಲವಾದ ಭಕ್ತಿ.

ಆಡಂಬರ ಗಳಲ್ಲ .

ವೈಕುಂಟದ ಅಧಿಪತಿ ಶ್ರೀವಿಷ್ಣುವಿಗೆ ದನ ಕಾಯೋ ಕಾಯಕ ಮಾಡಬೇಕಾದ ಅವಶ್ಯಕತೆ ಇರಲಿಲ್ಲ ಇವರಿಬ್ಬರೂ ಸಾರಿದ್ದು ಜೀವನದ ಸರಳತೆಯನ್ನು.

 

ಕೈಲಾಸವಾಸ ನಾದ ಶಿವನು ತನ್ನ ದೇಹದ  ಅರ್ಧ ಭಾಗವನ್ನು ತನ್ನ ಶ್ರೀಮತಿಗೆ ಕೊಟ್ಟ. ಜಗನ್ನಿಯಾಮಕನಾದ ಶ್ರೀ ವಿಷ್ಣು ತನ್ನ ಸತಿಗೆ ತನ್ನ ವಕ್ಷಸ್ಥಳದಲ್ಲಿ ಜಾಗ ಕೊಟ್ಟನೆಂ ದ ಮೇಲೆ ಇವರಿಬ್ಬರೂ ಸಾರಿದ್ದು ಸಮಾನತೆಯನ್ನು.

ಕೈಹಿಡಿದ ಹೆಂಡತಿಯನ್ನು ಹೀನಾಯವಾಗಿ ಕಂಡು ದೇವರ ಮುಂದೆ ಕೈ ಮುಗಿದು ನಿಂತರೆ ಪ್ರಯೋಜನವಿಲ್ಲ.

 

ಮಹಾಭಾರತದ ಸೂತ್ರ ದಾರಿಯಾದ ಶ್ರೀಕೃಷ್ಣ ಪರಮಾತ್ಮನಿಗೆ ಪಾಂಡವರಿಗೆ ಜಾಗ ಕೊಡಿಸುವುದು ಕಷ್ಟವಾಗಿರಲಿಲ್ಲ ಅಥವಾ ಕೌರವರಿಗೆ ಜೀವನದ ನಿಜವಾದ ಮೌಲ್ಯಗಳನ್ನು ಅರ್ಥ ಮಾಡಿಸುವುದು ಕಷ್ಟವಾಗಿರಲಿಲ್ಲ ಆದರೆ ಅದರ ಮೂಲಕ ಪರಮಾತ್ಮ ಮನುಕುಲಕ್ಕೆ ಹೇಳೋಕೆ ಹೊರಟಿದ್ದು ಏನು ಅನ್ನೋದು ನಾವು ಯೋಚನೆ ಮಾಡಬೇಕು ಅಷ್ಟೇ .ಪರರ ಅಂದರೆ ನಮ್ಮದಲ್ಲದ ಯಾವುದೇ ವಸ್ತು ,ಅದು ಹೆಣ್ಣಾಗಲಿ, ಮಣ್ಣಾಗಲಿ ಆಸೆ ಪಡುವುದು ತಪ್ಪು .ಇದರಿಂದ ಅವರ ನಾಶ ಖಂಡಿತ.

 

ಮಹಿಶಾಸುರನ ತಂಗಿ ಮಹಿಷಿ ಯನ್ನು ತಪಸ್ಸಿಗೆ ಕೂರಿಸಿ ಅವಳು" ಹರಿಹರರ ಸಮಾಗಮದಿಂದ ಹುಟ್ಟುವ ಮಗು ನಿಂದ ನನಗೆ ಸಾವು "ನನಗೆ ಸಾವು ಬರಬೇಕು ಎಂದು ವರ ಕೇಳುವಂತೆ ಮಾಡಿ "ಮುಂದೆ ಹರಿಹರ ಇಬ್ಬರೂ ಒಂದಾಗಿ ಅಯ್ಯಪ್ಪನಿಗೆ   ಜನ್ಮ ನೀಡಿ. ಅವಳ ಸಂಹಾರ ಮಾಡಿಸಿದ ದೇವರು ನಮಗೆ  ಹೇಳಹೊರಟಿದ್ದೆನು?

ಮನುಕುಲದ ಜೀವಿಗಳು ನಾವು ಶೈವರು,ವೈಷ್ಣವರು ಎಂದು ಕಿತ್ತಾಡದೆ,ಎಲ್ಲರೂ ಒಂದೇ ಜಾತಿ ಅದು ಮನುಷ್ಯ ಜಾತಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂಬುದು.

 

ಒಬ್ಬ ಒಳ್ಳೆಯ ಪಿತೃವಾಕ್ಯ ಪರಿಪಾಲಕ ನಾದ ಮಗನಾಗಿ ಶ್ರೀರಾಮನನ್ನು, ಆದರ್ಶ ಸತಿಯಾಗಿ ಸೀತೆಯನ್ನು, ವಿದೇಯ ತಮ್ಮನಾಗಿ ಲಕ್ಷ್ಮಣನನ್ನು ,ಪ್ರಾಮಾಣಿಕ ಸ್ನೇಹಿತನಾಗಿ ಆಂಜನೇಯನನ್ನು, ವಿದ್ಯೆ ಮತ್ತು ವಿನಯ ದ ಮೂಲವಾಗಿ ಸರಸ್ವತಿಯನ್ನು ,ಯೋಗ ಭೋಗಗಳ ಮೂಲವಾಗಿ ಲಕ್ಷ್ಮಿಯನ್ನು, ಅಗಾಧ ಶಕ್ತಿಯ ಭಂಡಾರವಾಗಿ ದುರ್ಗೆಯನ್ನು, ನಿಷ್ಪಕ್ಷಪಾತವಾದ ಕರ್ಮಫಲದಾತನಾಗಿ ಶನಿಯನ್ನು, ಹಗಲು ರಾತ್ರಿಗಳೆನ್ನದೆ ದುಡಿಯುವ ಶ್ರಮಜೀವಿಗಳಾಗಿ ಸೂರ್ಯ-ಚಂದ್ರ ಯಮನನ್ನು ಸೃಷ್ಟಿಸ ಬೇಕಿರಲಿಲ್ಲ ಇವೆಲ್ಲವೂ ಕೇವಲ ಪಾತ್ರಗಳಲ್ಲ ಮನುಕುಲದವರು ಹೇಗೆ  ನಡೆಯಬೇಕೆಂದು ಹೇಳಿಕೊಡುವ ಜೀವಂತ ಮ್ಯಾನ್ಯುಯಲ್ಗಳು.

 

ಹೀಗೆ ಇನ್ನೂ ಎಷ್ಟೋ ಹತ್ತು-ಹಲವು ಉದಾಹರಣೆಗಳಿದೆ  ಜೀವನದ ಸರಳ ಸೂತ್ರಗಳನ್ನು ತಿಳಿಯಲು ದಯವಿಟ್ಟು ಆಡಂಬರದ ಗೋಪುರಗಳಲ್ಲಿ , ವೈಭವಪೂರಿತ ಮೆರವಣಿಗೆಗಳಲ್ಲಿ ,ಸ್ವಾಮೀಜಿ ಶಾಸ್ತ್ರಗಳಲ್ಲಿ ,ಪೂಜಾರಿಯ ಪೂಜೆಗಳಲ್ಲಿ ಹುಡುಕಬೇಡಿ. ನೀವು ಮಾಡುವ ಕೆಲಸಗಳಲ್ಲಿ , ಆಡುವ ಪ್ರತಿ ಒಳ್ಳೆ ಮಾತುಗಳಲ್ಲಿ, ನಿಮ್ಮ ಪ್ರಾಮಾಣಿಕತೆಯ ಜೀವನಶೈಲಿಯಲ್ಲಿ ಖಂಡಿತ ನಿಮಗೆ ದೇವರು ಸಿಗುತ್ತಾನೆ.

Enjoyed this article? Stay informed by joining our newsletter!

Comments

You must be logged in to post a comment.

About Author