ಅಭಿವೃದ್ಧಿ ಮೂಲಮಂತ್ರದ ಕೇಂದ್ರ ಬಜೆಟ್: ಸಚಿವ ಎಂಟಿಬಿ ನಾಗರಾಜು

*ಅಭಿವೃದ್ಧಿ ಮೂಲಮಂತ್ರದ ಕೇಂದ್ರ ಬಜೆಟ್: ಸಚಿವ ಎಂಟಿಬಿ ನಾಗರಾಜು*

*ಅಭಿವೃದ್ಧಿ ಮೂಲಮಂತ್ರದ ಕೇಂದ್ರ ಬಜೆಟ್: ಸಚಿವ ಎಂಟಿಬಿ ನಾಗರಾಜು

    ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಇಂದು ಮಂಡಿಸಿದ ಕೇಂದ್ರ ಬಜೆಟ್ ಮುಂದಿನ 25 ವರ್ಷಗಳ ಅಭಿವೃದ್ಧಿಯನ್ನು ಗುರಿಯಾಗಿರಿಸಿಕೊಂಡಿರುವ ಜನಪರ ಬಜೆಟ್ ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು ಬಣ್ಣಿಸಿದ್ದಾರೆ.

 

    ಕೋವಿಡ್ ನಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಕೃಷಿ, ನೀರಾವರಿ, ಮೂಲ ಸೌಕರ್ಯ,ಕೈಗಾರಿಕೆ,ಸಾರಿಗೆ ಸಂಪರ್ಕ -ಹೀಗೆ ಎಲ್ಲಾ ಕ್ಷೇತ್ರಗಳಿಗೂ ಆದ್ಯತೆ ನೀಡಿರುವುದು ಅಭಿನಂದನಿಯ ಎಂದು ಹೇಳಿದ್ದಾರೆ.

    ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೆ 130 ಲಕ್ಷಕ್ಕೂ ಅಧಿಕ ಹಣವನ್ನು ನಿಗದಿಪಡಿಸಿರುವುದು ಅತ್ಯಂತ ಸ್ವಾಗತಾರ್ಹ.ಇದರಿಂದ ಕೊರೊನಾ ಪೂರ್ವ ಸ್ಥಿತಿಗೆ ಅವು ಮರಳಲು ಸಹಕಾರಿಯಾಗಲಿದೆ ಎಂದು ಸಚಿವ ಎಂಟಿಬಿ ನಾಗರಾಜು ಅಭಿಪ್ರಾಯಪಟ್ಟಿದ್ದಾರೆ.

 

   ಕೊರೊನಾದ ಅಡ್ಡ ಪರಿಣಾಮಗಳ ನಡುವೆಯೂ ದೇಶದ ಆರ್ಥಿಕತೆ ಚೇತರಿಕೆಯಾಗಿರುವುದನ್ನು ಮತ್ತು ಕ್ಷಿಪ್ರವಾಗಿ ಪುಟಿದೆದ್ದಿರಿವುದನ್ನು ಇಂದಿನ ಬಜೆಟ್ ಬಿಂಬಿಸುತ್ತಿದೆ.ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ಅಭಿನಂದಿಸುತ್ತೇನೆ ಎಂದು ಸಚಿವ ಎಂಟಿಬಿ ನಾಗರಾಜು ತಿಳಿಸಿದ್ದಾರೆ.

Enjoyed this article? Stay informed by joining our newsletter!

Comments

You must be logged in to post a comment.

About Author

ನ್ಯೂಸ್