ನನ್ನಮ್ಮ ಸೂಪರ್‌ಸ್ಟಾರ್‌ ಬಾಲಕಿ ಸಮನ್ವಿ ದಾರುಣ ಸಾವು, ಅಮ್ಮನಿಗೂ ಪೆಟ್ಟು

Nanna Amma Superstar Reality Show Samanvi

 

ನನ್ನಮ್ಮ ಸೂಪರ್‌ಸ್ಟಾರ್‌ ಬಾಲಕಿ ಸಮನ್ವಿ ದಾರುಣ ಸಾವು, ಅಮ್ಮನಿಗೂ ಪೆಟ್ಟು

 

ಭೀಕರ ರಸ್ತೆ ಅಪಘಾತದಲ್ಲಿ(Road Accident)  ನನ್ನಮ್ಮ ಸೂಪರ್ ಸ್ಟಾರ್ (Nanna Amma Superstar) ರಿಯಾಲಿಟಿ ಶೋದಲ್ಲಿ ( Reality Show) ಕಾಣಿಸಿಕೊಳ್ಳುತ್ತಿದ್ದ ಪುಟಾಣಿ ದಾರುಣ ಸಾವು ಕಂಡಿದ್ದಾಳೆ. ಅತಿ ವೇಗದಿಂದ ಬಂದು ಸ್ಕೂಟರ್ ಗೆ ಟಿಪ್ಪರ್ ಡಿಕ್ಕಿಯಾಗಿದೆ  ತಾಯಿ (Mother) ಜೊತೆ ಸ್ಕೂಟರ್ ನ ಹಿಂಬದಿ  ಕುಳಿತಿದ್ದ ಆರು ವರ್ಷದ ಬಾಲಕಿ ಸಮನ್ವಿ(6) ಸಾವು ಕಂಡಿದ್ದಾಳೆ. ಕೋಣನಕುಂಟೆ ರಸ್ತೆಯಿಂದ ವಾಜರಹಳ್ಳಿ ಕಡೆಗೆ ತೆರಳ್ತಿದ್ದಾಗ ಸಂಜೆ 4.30 ರ ವೇಳೆ ಘೋರ ಅಪಘಾತವಾಗಿದೆ.

ತಾಯಿ ಅಮೃತಾ ನಾಯ್ಡುಗೆ ಅಪಘಾತ ವೇಳೆ ಗಾಯವಾಗಿದೆ ಮರಣೋತ್ತರ ಪರೀಕ್ಷೆಗೆ ಬಾಲಕಿ ಮೃತದೇಹ ಕಿಮ್ಸ್ ಗೆ ಕಳುಹಿಸಿಕೊಡಲಾಗಿದೆ.. ಆರೋಪಿ ಟಿಪ್ಪರ್ ಲಾರಿ ಚಾಲಕನನ್ನು ವಶಕ್ಕೆ ಪಡೆದ ಕೆ.ಎಸ್.ಲೇಔಟ್ ಸಂಚಾರಿ ಪೊಲೀಸರು. ಕೇಸು ದಾಖಲಿಸಿಕೊಂಡಿದ್ದಾರೆ.

ಶಾಪಿಂಗ್ ಮುಗಿಸಿಕೊಂಡು ಮಗುವನ್ನ ಬೈಕ್ ಹಿಂಬದಿ ಕುರಿಸಿಕೊಂಡು ತಾಯಿ ಹೋಗುತ್ತಿದ್ದರು ಕನಕಪುರ ರಸ್ತೆಯಲ್ಲಿರುವ ಮನೆಗೆ ಹೋಗ್ತಿದ್ದ ತಾಯಿ, ಮಗಳಿಗೆ ಯಮನಾಗಿ ಟಿಪ್ಪರ್ ಬಂದಿದೆ. ಈ ವೇಳೆ ಹಿಂಬದಿಯಿಂದ ಬೈಕ್ ಗೆ ಟಿಪ್ಪರ್ ಡಿಕ್ಕಿಯಾಗಿದ್ದು ವೇಳೆ ಸಮನ್ವಿ ಲಾರಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವು ಕಂಡಿದ್ದಾಳೆ.

ಅಮೃತ ನಾಯ್ಡು ಖ್ಯಾತ ಹರಿಕಥಾ ವಿದ್ವಾಂಸ ಗುರುರಾಜುಲು ನಾಯ್ಡು ಮೊಮ್ಮಗಳು. ಅಮೃತ ತಾಯಿ ಸಹ ಶೋಭಾ ಗುರುರಾಜುಲು ನಾಯ್ಡು ಹರಿಕಥಾ ವಿದ್ವಾಂಸರು. ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಅಮೃತಾಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. 

 

News Source : kannada.asianetnews.com

Enjoyed this article? Stay informed by joining our newsletter!

Comments

You must be logged in to post a comment.

About Author