66 ನೇ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆ ದಿನಾಚರಣೆ

2500 ವರ್ಷಗಳ ಸುದೀರ್ಘ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ.ಕನ್ನಡ ನೆಲದಲ್ಲಿ ಕನ್ನಡಿಗನೇ ಸಾರ್ವಭೌಮನಾಗಬೇಕೆಂದು ನಿಕಟ ಪೂರ್ವ ಕಸಾಪ ಅಧ್ಯಕ್ಷ ಗೊರಳ್ಳಿ ಜಗದೀಶ್ ತಿಳಿಸಿದರು.

ಬೆಟ್ಟದಪುರ ಶಾಂತವೀರಮ್ಮ ಬೀದಿ ಬದಿ ಚಾಟ್ಸ್ ವ್ಯಾಪಾರಿಗಳ ಸಂಘದ ವತಿಯಿಂದ ನಡೆದ 66 ನೇ ಕನ್ನಡ ರಾಜ್ಯೋತ್ಸವ ಮತ್ತು ಪುನೀತ್ ರಾಜ್ ಕುಮಾರ್ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದ ಅವರು ದಾಸರು,ಶರಣರು ಕವಿಗಳು,ಕಟ್ಟಿ ಬೆಳೆಸಿದ ಕನ್ನಡ ಸಾಹಿತ್ಯವು ವಿಶ್ವದಲ್ಲಿಯೇ ಅಗ್ರಗಣ್ಯ ಸ್ಥಾನಮಾನ ಹೊಂದಿದ್ದ್ದು,ಪಂಪ,ರನ್ನ ,ಕುಮಾರವ್ಯಾಸ,ಬಸವೇಶ್ವರ,ಕನಕದಾಸರು,ಕುವೆಂಪು,ಬೇಂದ್ರೆ,ಮಾಸ್ತಿ ಮುಂತಾದ ಮಹಾನ್ ಮೇರು ಸಾಹಿತಿಗಳು ಕನ್ನಡ ಸಾಹಿತ್ಯದ ಆಧಾರ ಸ್ಥಂಭಗಳಾಗಿದ್ದಾರೆ.ಕನ್ನಡ ಸಾಹಿತ್ಯದಲ್ಲಿರುವಷ್ಟು ಮಹಾಕವಿಗಳು,ಮಹಾಕಾವ್ಯಗಳು ವಿಶ್ವದ ಬೇರಾವ ಭಾಷೆಯಲ್ಲಿಯೂ ಕಾಣ ಸಿಗುವುದಿಲ್ಲ ಎಂದರು.ಕಾರ್ಯಕ್ರಮದಲ್ಲಿ ಯೋಧರಾದ ವಾಸು ನಾಯಕ್,ಶ್ರೀಮತಿ ವಾಸುನಾಯಕ್,ನಾರಾಯಣಗೌಡ, ವೆೃದ್ಯಾಧಿಕಾರಿ ರಚನ್ ರಾಜ್ ಮುಂತಾದವರನ್ನು ಸನ್ಮಾನಿಸಲಾಯಿತು.


ಶಾಂತವೀರಮ್ಮ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಡಿ.ಜಿ.ಮಹದೇವ್,ಕಸಾಪ ಬೆಟ್ಟದಪುರ ಹೋಬಳಿ ಘಟಕದ ಅಧ್ಯಕ್ಷ ಆಲನಹಳ್ಳಿ ಕೆಂಪರಾಜು,ಮಲ್ಲೇಶ್,ಮಹೇಶ್,ಸಂಘದ ಪದಾಧಿಕಾರಿಗಳು,ಗ್ರಾಮಸ್ಥರು,ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author