ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ

ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ಯವರ ಅಧಿಸೂಚನೆಯಂತೆ ಕಾಂಗ್ರೆಸ್ ಪಕ್ಷದ ಬೃಹತ್ ಸದಸ್ಯತ್ವ ನೊಂದಣಿ ಅಭಿಯಾನವು ರಾಷ್ಟ್ರಾದ್ಯಂತ ಚಾಲನೆಗೊಂಡಿದೆ.

 

ಈ ಹಿನ್ನೆಲೆ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್ ರವರ ಮಾರ್ಗದರ್ಶನದಂತೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಸದಸ್ಯತ್ವ ನೊಂದಣಿ ಆರಂಭಿಸಲಾಗಿದೆ.

 

    ತುಮಕೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ-೧ ರ ವ್ಯಾಪ್ತಿಯಲ್ಲಿನ ಮತದಾರರಾದ ಮಾಜಿ ಶಾಸಕರಾದ ಡಾ.ಷಫಿ ಅಹ್ಮದ್ ರವರಿಗೆ ತುಮಕೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ-೧ ರ ಅಧ್ಯಕ್ಷರಾದ ಸೈಯದ್ ಮಹಬೂಬ್ ಪಾಷ ನೊಂದಣಿ ಪುಸ್ತಕ ನೀಡಿದರು.

 

ಹಾಗೂ ತುಮಕೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ-೨ ರ ವ್ಯಾಪ್ತಿಯಲ್ಲಿನ ಮತದಾರರಾದ ಮಾಜಿ ಶಾಸಕರಾದ ಡಾ.ರಫೀಕ್ ಅಹ್ಮದ್ ರವರಿಗೆ ತುಮಕೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ-೨ ರ ಅಧ್ಯಕ್ಷರಾದ ಜಿ.ರಾಜು ನೊಂದಣಿ ಪುಸ್ತಕ ನೀಡಿದರು.

 

ಈ ವೇಳೆ ಡಾ.ರಫೀಕ್ ಅಹ್ಮದ್ ಮಾತನಾಡಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ s ನೊಂದಣಿ ಮಾಡುವ ಮೂಲಕ ಈ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author