ಮನೆಯ ಸೊಸೆ
ರೋಹಿಣಿ ತನ್ನೆಲ್ಲ ಕೆಲಸಗಳನ್ನು ಸರಸರನೆ ಮುಗಿಸಿ ,ಬಚ್ಚಲು ಮನೆಗೆ ಹೋಗಿ ,ತಲೆ ಸ್ನಾನ ಮುಗಿಸಿಕೊಂಡು ಆಚೆಬಂದಳು.ತಲೆಗೆ ಕಟ್ಟಿದ ಟಾವೆಲನ್ನು ಬಿಚ್ಚಿ ಮತ್ತೊಮ್ಮೆ ತನ್ನ ನೀಳ ಕೇಶವನ್ನು ಒಂದೆರಡು ಬಾರಿ ಒರೆಸಿಕೊಂಡು
ಕೂದಲಿಗೆ ಕ್ಲಿಪ್ ಹಾಕಿ ,ಹಣೆಗೆ ಕುಂಕುಮದ ಬೊಟ್ಟು ಇಟ್ಟುಕೊಂಡಳು .ರೋಹಿಣಿಯನ್ನೆ ನೋಡುತ್ತ ಕುಳಿತ ಅವಳತ್ತೆ " ಸ್ನಾನ ಆಯಿತೇನಮ್ಮ " ಎಂದರು." ಹಾಂ ಅತ್ತೆ " ಎಂದು ಚುಟುಕಾಗಿ ಉತ್ತರಿಸಿ ದೇವರ ಮನೆಗೆ ಹೋಗಿ ನಮಸ್ಕರಿಸಿ ಅಡುಗೆಗೆ ನಿಂತಳು.ಆಗಲೇ ವೇಳೆ ಎಂಟುವರೆ.
ಮಹೇಶ ಅಡುಗೆ ಮನೆಗೆ ಬಂದಾಗ ," ರೀ ಬಚ್ಚಲು ಖಾಲಿ ಇದೆ ಬೇಗ ಸ್ನಾನ ಮುಗಿಸಿಕೊಂಡು ಬನ್ನಿ.ದೇವರ ಪೂಜೆಗೆ
ಎಲ್ಲ ತಯಾರಿ ಮಾಡಿದ್ದೆನೆ .ನೀವು ದೇವರ ಪೂಜೆ ಮುಗಿಸುವದರೊಳಗೆ ನಾನು ನೈವೇದ್ಯದ ತಯಾರಿ ಮಾಡುತ್ತೇನೆ.
ಒಂದು ವೇಳೆ ನೀವು ಸ್ನಾನ ಪೂಜೆ ನೈವೇದ್ಯ ಎಂದು ತಡಮಾಡಿದರೆ,ನಾನು ಅತ್ತೆಗೆ ಊಟ ಬಡಿಸಿ ಬಿಡುವೆ.
ಅವರಿಗೆ ಹನ್ನೊಂದುವರೆಗೆಲ್ಲ ಊಟ ಬೇಕೆನ್ನುವುದು ನಿಮಗೆ ಗೊತ್ತಿದೆ ತಾನೆ " .ಎಂದು ಗಂಡನನ್ನು ನೋಡಿದಳು
" ಸರಿ ,ಈಗ ಸ್ನಾನಕ್ಕೆ ಹೊರಡುವೆ .ಅಮ್ಮನಿಗೆ ಹಸಿವಿರುತ್ತೋ ಇಲ್ಲವೋ ನಿನಗೆ ಮಾತ್ರ ಅವಳ ಊಟ ಉಪಚಾರದ
ಕಾಳಜಿ ಬಹಳಾ " ಎನ್ನುತ್ತ ಅವಳ ಕೆನ್ನೆ ತಟ್ಟಿದ ಮಹೇಶ.
ಹೌದು ರೋಹಿಣಿ ಎಂಭತ್ತೆಂಟು ವರ್ಷದ ತನ್ನತ್ತೆಯನ್ನು ತುಂಬಾ ಚನ್ನಾಗಿಯೇ ನೋಡಿಕೊಳ್ಳುತ್ತಾಳೆ.ಅವರಿಗೆ
ಹೊತ್ತುಹೊತ್ತಿಗೆ ಊಟ ಉಪಚಾರ ಮಾಡುತ್ತಾಳೆ.ಹಬ್ಬಹರಿದಿನಗಳಲ್ಲಿ ಅತ್ತೆಗೆ ಊಟ ತಡವಾದೀತೆಂದು ಬೇಗನೆ
ಎದ್ದು ಅಡುಗೆ ಪೂರೈಸುತ್ತಾಳೆ.ದೇವರ ಪೂಜೆ ಮಾಡಲು ಗಂಡ,ಮತ್ತು ಮಕ್ಕಳು ಹಿಂದೇಟು ಹಾಕಿದಾಗ ,ಇಲ್ಲದ
ದೇವರಿಗೋಸ್ಕರ ಎಷ್ಟೊತ್ತು ಕಾಯುವುದು.ಹಸಿದುಕೊಂಡ ಜೀವಕ್ಕೆ ತುತ್ತು ಅನ್ನ ಹಾಕಬೇಕು ಎಂದು ದೇವರ
ನೈವೇದ್ಯವನ್ನು ಲೆಕ್ಕಿಸದೆ ಅತ್ತೆಗೆ ಊಟ ಬಡಿಸುತ್ತಾಳೆ.
ಇದು ಹದಿನೈದು ವರ್ಷಗಳಿಂದ ನಡೆದುಕೊಂಡು ಬಂದಿದೆ.ರೋಹಿಣಿಯಂತಹ ಸೊಸೆ ರಮಾ ಅವರಿಗೆ ಸಿಕ್ಕಿದ್ದು
ಪುಣ್ಯವೆ.ರಮಾದೇವಿ ತಮ್ಮ ಆಡಿಳಾತಾವಧಿಯಲ್ಲಿ ಸೊಸೆಗೆ ಸಾಕಷ್ಟು ಗೋಳುಹೊಯ್ದುಕೊಂಡಿದ್ದಾರೆ.ಎಲ್ಲ
ವನ್ನು ರೋಹಿಣಿ ಸಹಿಸಿಕೊಂಡು ಬಂದಿದ್ದಾಳೆ.ಅತ್ತೆ,ಮಾವ ನಾದಿನೆಂದ್ರು ಹೀಗೆ ಮನೆ ತುಂಬ ಜನ.ಅತ್ತೆಗೆ ವಿಪ
ರೀತ ಮಡಿ .ಸೊಸೆ ಬಡತನದ ಮನೆಯಿಂದ ಬಂದವಳೆಂದು ಅಸಡ್ಡೆ. ಮಾವ ಮಾತ್ರ ತುಂಬ ದೊಡ್ಡ ಹೃದಯದ
ವ್ಯಕ್ತಿ ಸೊಸೆಯನ್ನು ಮಗಳಿಗಿಂತ ಹೆಚ್ಚಾಗಿ ಕಂಡವರು.ಪತ್ನಿಯ ಈ ಧೋರಣೆ ಅವರು ಸಹಿಸುತ್ತಿರಲಿಲ್ಲ .ಅವರಿ
ದ್ದಾಗ ಅತ್ತೆ ಮನೆಯ ಎಲ್ಲ ಅಡುಗೆಯ ಜವಾಬ್ದಾರಿ ವಹಿಸಿಕೊಂಡಿದ್ದರು.ರೋಹಿಣಿ ಮೇಲಿನ ಕೆಲಸ ಮಾಡ್ತಾ
ಮನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಳು.ಆದರೆ ಮಾವ ತೀರಿಕೊಂಡ ಮೇಲೆ ಅತ್ತೆ ಅಡುಗೆಯ ಮನೆಯ
ಹತ್ತಿರ ಬರಲಿಲ್ಲ.ಮುಂದೆ ಬರ್ತಾ ಬರ್ತಾ ವಯಸ್ಸಾದಂತೆಲ್ಲ ಕೆಲಸ ಒಂದೊಂದಾಗಿ ಕಡಿಮೆಯಾದವು ಕುಳಿತಲ್ಲೆ ಕುಳಿತರು.ಹಾಗಂತ ನಡೆದಾಡುವದಿಲ್ಲ ಎಂದಲ್ಲ .ನಡೆದಾಡುತ್ತಾರೆ .ತಮಗೆ ಬೇಕಾದ ಕೆಲಸಗಳನ್ನು ಮಾಡಿಕೊಂಡು.
ಈಗ ಎರಡು ವರ್ಷದಿಂದ ಊಟವು ಕಡಿಮೆ ಮಾಡಿದ್ದಾರೆ.ಮುಂಜಾನೆ ಹನ್ನೊಂದುವರೆಗೆಲ್ಲ ಬಿಸಿ ಊಟ
ಬಡಿಸುತ್ತಾಳೆ ರೋಹಿಣಿ.ನಾಲ್ಕು ಗಂಟೆಗೆ ಹಣ್ಣು ಮತ್ತು ಅವಲಕ್ಕಿ ಕೊಡುತ್ತಾಳೆ.ರಾತ್ರಿಗೆ ಅವರಿಗಾಗಿ ಅನ್ನ ಅಥವಾ ಉಪ್ಪಿಟ್ಟು ,ಗಂಜಿಯನ್ನು ಮಾಡಿಕೊಡುತ್ತಾಳೆ.
ರಮಾದೇವಿಗೆ ಇನ್ನೊಬ್ಬ ಮಗನಿದ್ದರೂ ಅವರು ಅಲ್ಲಿ ಹೋಗುವುದಿಲ್ಲ.ಹೆಣ್ಣು ಮಕ್ಕಳ ಮನೆಗೂ ಅಪರೂಪಕ್ಕೆ
ಹೋಗುತ್ತಾರೆ.ಅತ್ತೆಯನ್ನು ನಾಲ್ಕು ದಿನ ಬಿಟ್ಟು ರೋಹಿಣಿ ಎಲ್ಲಿಗಾದರೂ ಹೋದರು ...ಬಿಟ್ಟು ಹೋದೆನಲ್ಲ
ಅಲ್ಲಿ ಹೇಗೋ ಏನೋ ಎಂದು ಚಡಪಡಿಸುತ್ತಾಳೆ.ಮತ್ತೆ ಅವರನ್ನು ಕರೆದುಕೊಂಡು ಬಂದು ತನ್ನ ಹತ್ತಿರವಿಟ್ಟು
ಕೊಂಡು ಚನ್ನಾಗಿ ನೋಡಿಕೊಳ್ಳುತ್ತಾಳೆ.ಇಂತಹ ಸೊಸೆಯನ್ನು ಪಡೆದ ರಮಾದೇವಿ ಅದೃಷ್ಟವಂತರಲ್ಲವೆ !?
ಲೇಖಕಿ.ಗೀತಾ. ವಸಂತ. ಜೋಶಿ.
You must be logged in to post a comment.