3000 ಅಡಿ ಎತ್ತರದ ಬೆಟ್ಟದ ಮೇಲಿದೆ ಧೋಲ್ಕಲ್ ಪ್ರಾಚೀನ ಗಣೇಶ ದೇವಾಲಯ

dholkal ganeshaFeature Image Source : Times Of India

ಗಣೇಶನನ್ನು ಮಹಾಕಾಯ, ವಿನಾಯಕ, ವಿಘ್ನೇಶ, ಏಕದಂತ, ವಕ್ರತುಂಡ, ಗಜಾನನ, ಮೂಷಿಕವಾಹನ ಹೀಗೆ ಗಣಪತಿ ನಾನಾ ಹೆಸರುಗಳಿಂದ ಕರೆಯುತ್ತಾರೆ. ಎಲ್ಲಾ ಕಾರ್ಯದಲ್ಲೂ ವಿಘ್ನ ವಿನಾಯಕ ಗಣಪನಿಗೆ ಪ್ರಪ್ರಥಮ ಪೂಜೆ ಸಲ್ಲುತ್ತದೆ. ಗಣೇಶನನ್ನು ಮೊದಲು ಪೂಜಿಸಿ ಯಾವುದೇ ಕೆಲಸವನ್ನು ಆರಂಭಿಸಿದರೂ ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತದೆ ಅನ್ನೋ ನಂಬಿಕೆಯಿದೆ. ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚೌತಿಯ ದಿನ, ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಮಾತ್ರವಲ್ಲದೆ, ಇತರ ದೇಶಗಳಲ್ಲೂ ಗಣೇಶನನ್ನು ಪೂಜಿಸಲಾಗುತ್ತದೆ. 

ಗಣಪತಿ ಎಲ್ಲಾ ದೇವರಿಗಿಂತಲೂ ಹೆಚ್ಚು ಜನಪ್ರಿಯವಾಗಿ ಪೂಜೆಯಲ್ಲಿ ಅಗ್ರಸ್ಥಾನ ಪಡೆದ ದೇವರು. ವಿದ್ಯಾಭ್ಯಾಸ, ವಿವಾಹ, ಉಪನಯನ, ಗೃಹಪ್ರವೇಶ, ಹೀಗೆ ಜನಜೀವನದ ಎಲ್ಲಾ ಶುಭಕಾರ್ಯಗಳಲ್ಲೂ ಗಣೇಶನಿಗೆ ಮೊದಲ ಪ್ರಾಧ್ಯಾನತೆಯಿದೆ. ಯಾವ ದೇವತಾ ಕಾರ್ಯಗಳನ್ನು ಮಾಡುವಾಗಲೂ ನಿರ್ವಿಘ್ನತಾ ಸಿದ್ಧಿಗಾಗಿ ಮೊದಲ ಪೂಜೆ ಗಣಪತಿಗೇ ಮೀಸಲಿಡಲಾಗುತ್ತದೆ. ಋಗ್ವೇದದಲ್ಲಿ ಗಣಾನಾಂ ತ್ವಾ ಗಣಪತಿಂ ಹವಾಮಹೇ ಎಂಬ ಮಾತಿದ್ದು, ಇದು ಗಣಪತಿಯ ಪೂಜೆಯ ಮುಖ್ಯಮಂತ್ರವಾಗಿ ಇಂದಿಗೂ ಪುರಸ್ಕೃತವಾಗಿದೆ.

 

ಇದನ್ನು ಓದಿ : ರಾಮನೂ, ರಾವಣನೂ ಇಬ್ಬರೂ ಸಹ ಮಹಾನ್‍ ಶಿವಭಕ್ತರಾಗಿದ್ದರು..!

ದೇಶದ ವಿವಿಧ ರಾಜ್ಯಗಳಲ್ಲಿ ಗಣೇಶನಿಗೆ ಅರ್ಪಿತವಾಗಿರುವ ಹಲವು ದೇವಾಲಯಗಳನ್ನು ನಾವು ನೋಡಬಹುದು. ಗಣೇಶನ ವಿವಿಧ ಹೆಸರಿಂದ ಪ್ರಸಿದ್ಧಿ ಹೊಂದಿರುವ ದೇವಾಲಯಗಳು ಹಲವೆಡೆ ಇವೆ. ಬಲಮುರಿ, ಎಡಮುರಿ ಎಂದು ವಿವಿಧ ಆಕಾರದ ಗಣಪತಿಯನ್ನು ಪೂಜಿಸಲಾಗುತ್ತದೆ. ಇನ್ನು ಗಣೇಶನ ಹಬ್ಬದ ಸಂದರ್ಭದಲ್ಲಿ ವಿಘ್ನ ವಿನಾಯಕನ ಭಿನ್ನ-ವಿಭಿನ್ನ ಮೂರ್ತಿಗಳನ್ನು ತಯಾರಿಸಿ ಪೂಜಿಸಲಾಗುತ್ತದೆ. ಅನಾದಿ ಕಾಲದಿಂದಲೂ ಜನರು ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸಿಕೊಂಡೇ ಬರುತ್ತಿದ್ದಾರೆ. ದೇಶದ ಹಲವೆಡೆ ಗಣಪನ ಪುರಾತನ ದೇವಾಲಯಗಳಿವೆ. ಅದರಲ್ಲೊಂದು ಛತ್ತೀಸ್ ಘಡ್‍ನ ಧೋಲ್ಕಲ್ ನಲ್ಲಿರುವ ಪ್ರಾಚೀನ ಗಣೇಶನ ದೇವಾಲಯ.

3000 ಅಡಿ ಎತ್ತರದ ಬೆಟ್ಟದ ಮೇಲಿದೆ ದೇವಾಲಯ

Dolkal ganesh temple dantewada

ಛತ್ತೀಸ್ ಘಡ್‍ನ ಧೋಲ್ಕಲ್‍ ನಲ್ಲಿರುವ ಗಣೇಶ ದೇವಾಲಯವು ಅತ್ಯಂತ ಪ್ರಾಚೀನ ದೇವಾಲಯವೆಂದು ಕರೆಸಿಕೊಂಡಿದೆ. ರಾಯ್‍ಪುರ್ ನಿಂದ 350 ಕಿ.ಮೀ ದೂರದಲ್ಲಿ ದಂತೇವಾಡ ಜಿಲ್ಲೆಯ ಧೋಲ್ಕರ್ ಎಂಬಲ್ಲಿ ದಟ್ಟಾರಣ್ಯದ ಮಧ್ಯೆ ನಿಗೂಢ ಸ್ಥಳದಲ್ಲಿ ಈ ದೇವಸ್ಥಾನವಿದೆ. ದಟ್ಟ ಕಾಡಿನ ಮಧ್ಯೆ ಎತ್ತರದಲ್ಲಿ ದೊಡ್ಡ ಗಣೇಶನ ವಿಗ್ರಹವಿದೆ. ಇದು ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿದೆ, 2012ರಲ್ಲಿ ಇದನ್ನು ಪುರಾತತ್ವ ಶಾಸ್ತ್ರಜ್ಞರು ಪರಿಶೋಧಿಸುವವರೆಗೂ ಈ ದೇವಸ್ಥಾನವಿರುವುದು ಯಾರಿಗೂ ತಿಳಿದಿರಲ್ಲಿಲ್ಲ. ಹಲವು ಶತಮಾನಗಳಿಂದ ಈ ದೇವಾಲಯ ಯಾರಿಗೂ ಗೋಚರಿಸಿರಲ್ಲಿಲ್ಲ.

ಬೆಟ್ಟದ ಮೇಲೆ ನಡೆದಿತ್ತು ಗಣೇಶ-ಪರಶುರಾಮನ ಯುದ್ಧ

ganesha and parashuramaImage Source : Quora

ಸ್ಥಳೀಯರ ನಂಬಿಕೆಯ ಪ್ರಕಾರ, ಧೋಲ್ಕಲ್ ಬೆಟ್ಟದ ಮೇಲೆ ಗಣೇಶ ಮತ್ತು ಪರಶುರಾಮನಡುವೆ ವರುಷಗಳ ಹಿಂದೆ ಘೋರವಾದ ಯುದ್ಧ ನಡೆದಿತ್ತು. ಈ ಸಂದರ್ಭದಲ್ಲಿ ಪರಶುರಾಮನು ಗಣೇಶನ ಮೇಲೆ ತನ್ನ ಫಾರ್ಸಾ ಅಥವಾ ಕೊಡಲಿಯಿಂದ ದಾಳಿ ಮಾಡಿದನು. ಹೀಗಾಗಿ ಬೆಟ್ಟದ ಬುಡದಲ್ಲಿರುವ ಗ್ರಾಮವನ್ನು ಫರ್ಸಪಾಲ್ ಎಂದು ಕರೆಯಲಾಯಿತು. ಗಣೇಶ ಮತ್ತು ಪರಶುರಾಮನ ನಡುವಿನ ಯುದ್ಧದಲ್ಲಿ ಯಾರು ಗೆದ್ದರು ಎಂಬುದು ಮಾತ್ರ ಇನ್ನೂ ನಿಗೂವಾಗಿಯೇ ಉಳಿದಿದೆ.

ಪರಶುರಾಮ ಮತ್ತು ಗಣೇಶನ ನಡುವಿನ ಯುದ್ಧದ ನೆನಪಿಗಾಗಿ, ಚಿಂದಕ್ ನಾಗವಂಶಿ ರಾಜವಂಶದ ರಾಜರು 11 ನೇ ಶತಮಾನದಲ್ಲಿ ಬೆಟ್ಟದ ತುದಿಯಲ್ಲಿ ಗಣೇಶನ ಕಲ್ಲಿನ ವಿಗ್ರಹವನ್ನು ಸ್ಥಾಪಿಸಿದರು. ಈ ವಿಗ್ರಹ 2.5ರಿಂದ 3 ಅಡಿ ಎತ್ತರವಿದೆ.

ಬೆಟ್ಟದ ಮೇಲಿರುವ ಈ ಗಣೇಶನ ವಿಗ್ರಹವನ್ನು ಶಾಸ್ತ್ರೀಯ ಸಂಗೀತದಲ್ಲಿ ಸಾಮಾನ್ಯವಾಗಿ ಬಳಸುವ ಸಂಗೀತ ವಾದ್ಯವಾದ ಧೋಲಾಕ್ ಆಕಾರದಲ್ಲಿ ಕೆತ್ತಲಾಗಿದೆ. ಆದ್ದರಿಂದ, ಬೆಟ್ಟಕ್ಕೆ ಧೋಲ್ಕಲ್ ಎಂದು ಹೆಸರಿಲಾಗಿದೆ. ಇಲ್ಲಿರುವ ಗಣೇಶನ ವಿಗ್ರಹವು ವಿಶಿಷ್ಟವಾದ ಲಲಿತಾಸನ ಭಂಗಿಯಲ್ಲಿ ಚಿತ್ರಿಸಲಾಗಿದೆ. ಇಲ್ಲಿನ ಸ್ಥಳೀಯ ನಿವಾಸಿಗಳು ವರ್ಷಪೂರ್ತಿ ಗಣೇಶನ ವಿಗ್ರಹವನ್ನು ಪೂಜಿಸುತ್ತಾರೆ, ಮತ್ತು ಜನವರಿ-ಫೆಬ್ರವರಿ ನಡುವೆ ಮಾಘ ತಿಂಗಳಲ್ಲಿ ಈ ಸ್ಥಳದಲ್ಲಿ ವಿಶೇಷ ಜಾತ್ರೆ ನಡೆಯುತ್ತದೆ. ಸಮೀಪದ ಹಲವು ಊರುಗಳಿಂದ ಜನರು ಬಂದು ಇಲ್ಲಿ ಸೇರುತ್ತಾರೆ.

ಇದನ್ನು ಓದಿ : ಕೊಡಚಾದ್ರಿ ಬೆಟ್ಟದ ತಪ್ಪಲಿನಲ್ಲಿದೆ ಕೊಲ್ಲೂರು ಮೂಕಾಂಬಿಕ ದೇವಸ್ಥಾನ

ಧೋಲ್ಕರ್ ಗಣೇಶ ವಿಗ್ರಹವಿರುವ ಸ್ಥಳಕ್ಕೆ ಕೇವಲ ಭಕ್ತಾಧಿಗಳು ಮಾತ್ರವಲ್ಲ ಚಾರಣಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಫರ್ಸಪಾಲ್ ಗ್ರಾಮ ಧೋಲ್ಕರ್ ಗಣೇಶ ಚಾರಣಕ್ಕೆ ಒಂದು ರೀತಿಯ ಮೂಲ ಬಿಂದುವಾಗಿದೆ. ಚಾರಣಿಗರು ಫರ್ಸಪಾಲ್ ಗ್ರಾಮವನ್ನು ತಲುಪಲು 2 ಗಂಟೆ ಬೇಕಾಗುತ್ತದೆ. ಇಲ್ಲಿಂದ ಚಾರಣವನ್ನು ಮುಗಿಸಲು 16 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ದಟ್ಟವಾದ ಕೋನಿಫರ್ ಕಾಡುಗಳ ಮೂಲಕ ಸಾಗಿ ಧೋಲ್ಕಲ್‍ ನಲ್ಲಿರುವ ಗಣೇಶ ದೇವಾಲಯವನ್ನು ತಲುಪಬಹುದು.

ಬೆಟ್ಟದ ಮೇಲಿರುವ ಗಣೇಶ ದೇವಾಲಯವು ಅತ್ಯಂತ ಸುಂದರವಾದ ತಾಣವಾಗಿದ್ದು, ಬೈಲಾಡಿಲಾದ ದಟ್ಟವಾದ ಅರಣ್ಯ ಶ್ರೇಣಿಗಳಲ್ಲಿ 5 ಕಿ.ಮೀ.ನ ಒಂದು ಮಾರ್ಗದ ಚಾರಣದ ನಂತರ ಇಲ್ಲಿಗೆ ತಲುಪಬಹುದು. ಬೆಟ್ಟವನ್ನೇರುವ ದಾರಿ ಕಠಿಣವಾಗಿದ್ದರೂ ಕೊನೆಗೆ ದೇವಾಲಯ ತಲುಪಿದಾಗ ಆ ಶ್ರಮ ಅಲ್ಲಿನ ಸೊಬಗಿಗೆ ಸಾರ್ಥಕಗೊಳುತ್ತವೆ .ಇದು ದಂತೇವಾಡದ ಅತ್ಯಂತ ಸುಂದರವಾದ ಸೂರ್ಯಾಸ್ತದ ಸ್ಥಳಗಳಲ್ಲಿ ಒಂದಾಗಿದೆ. ಅದೇನೆ ಇರ್ಲಿ, ಬೆಟ್ಟದ ಮೇಲಿರುವ ಈ ಪ್ರಾಚೀನ ದೇವಾಲಯ ಭಕ್ತಾಧಿಗಳ ಮನಸೂರೆಗೊಳಿಸುತ್ತಿದೆ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author