ತಾವರೆ ಹೂವಿಗೆ ನಮ್ಮಲ್ಲಿ ಹತ್ತಾರು ಹೆಸರುಗಳಿವೆ

ತಾವರೆ ( ಕಮಲದ ಹೂವು - Lotus ) ಹಾಗೂ ನೈದಿಲೆ ( Water Lily ) ಹೂವುಗಳ ನಡುವಣ ವ್ಯತ್ಯಾಸ ಸಾಮಾನ್ಯವಾಗಿ ಯಾರಿಗೂ ಗೊತ್ತಾಗುವುದಿಲ್ಲ.ಅಂದರೆ ಗಮನಿಸುವುದಿಲ್ಲ ಕೆರೆಯಲ್ಲಿ ಎಲ್ಲಾ ಒಂದೇ ತರ ಕಾಣುತ್ತೆ. ಕೆಳಗಿನ ಚಿತ್ರ ನೋಡಿ. ತಾವರೆ ಅಥವ ಕಮಲದಲ್ಲಿ ಸುಮಾರು ಒಂದು ನೂರಕ್ಕೂ ಹೆಚ್ಚು ವಿಧಗಳಿದ್ದರೆ, ನೈದಿಲೆಯಲ್ಲಿ 58 ವಿವಿಧ ಪ್ರಬೇಧಗಳಿವೆ.
ತಾವರೆ ಹೂವಿಗೆ ನಮ್ಮಲ್ಲಿ ಹತ್ತಾರು ಹೆಸರುಗಳಿವೆ.
1. ತಾವರೆ / ಕಮಲದ ಹೂವುಗಳು ನಮ್ಮ ರಾಷ್ಟ್ರೀಯ ಪುಷ್ಪ . ನೀರಿನ ಮಟ್ಟದಿಂದ ಮೇಲೆ ಅರಳುತ್ತವೆ. ಅದರ ಪಕಳೆಗಳು ( petals ) ಅಗಲವಾಗಿದ್ದು, ಎಲೆಗಳು ಸಂಪೂರ್ಣ ವೃತ್ತಾಕಾರವಾಗಿರುತ್ತದೆ.
2. ಅದೇ ನೈದಿಲೆ ಪಕಳೆಗಳು ಸ್ವಲ್ಪ ನೀಳವಾಗಿದ್ದು ಅಗಲ ಕಮ್ಮಿ. ನೀರಿನ ಮಟ್ಟದಲ್ಲೇ ಹೂವು ಅರಳುವುದು ಹಾಗೂ ಎಲೆಗಳು ಪೂರ್ಣವಾಗಿ ವೃತ್ತಾಕಾರದಲ್ಲಿರದೆ, ಮದ್ಯೆ ತುಂಡಾಗಿರುತ್ತೆ, ಒಂದೆಲಗ ಎಲೆಯ ತರ.
ನಮ್ಮ ಪುರಾಣಗಳ ಪ್ರಕಾರ, ದೇವಿ ಹಾಗೂ ಇತರ ದೇವರ ಪೂಜೆಗೆ ಶ್ರೇಷ್ಠವಾದದ್ದು ತಾವರೆ ಹೂವು. ಅಂದರೆ ನೈದಿಲೆಯನ್ನು ಪೂಜೆಗೆ ಉಪಯೋಗಿಸಬಾರದು ಎಂದೇನೂ ಇಲ್ಲ.
ತಾವರೆ ಹೂವಿನ ಕಾಯಿ ( pod ), ಬೀಜ, ಬೇರುಗಳು ಮತ್ತು ಗೆಡ್ಡೆಗಳು ಅತ್ಯಂತ ಪೌಷ್ಠಿಕವಾದದ್ದು ಹಾಗೂ ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿದೆ. ಸೇವನೆಯಿಂದ ಆಮಶಂಕೆ ನಿವಾರಣೆ ಆಗುತ್ತೆ, ಜೀರ್ಣಶಕ್ತಿ ಹೆಚ್ಚುತ್ತೆ. ಹೃದಯದ ತೊಂದರೆಗಳು, ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆಯನ್ನು ನಿಯಂತ್ರಣದಲ್ಲಿರಿಸುತ್ತೆ.
ಅತ್ಯಧಿಕ ವಿಟಮಿನ್ ಗಳು ಇದೆ. ನಾರಿನಂಶ ಸಹ ಹೆಚ್ಚಿನ ಪ್ರಮಾಣದಲ್ಲಿ - 13 % - ಇರುವುದರಿಂದ ಮಲಬದ್ಧತೆ ನಿವಾರಣೆ ಆಗುತ್ತೆ. ಮೂಲವ್ಯಾದಿಗೆ ಪರಿಹಾರ.
ನೈಸರ್ಗಿಕ moisturizer ಆದ್ದರಿಂದ ಚರ್ಮ ಹಾಗು ಕೂದಲ ರಕ್ಷಣೆಗೆ ಒಳ್ಳೆಯದು. ಚರ್ಮ ಸದಾ ಆರೋಗ್ಯವಾಗಿದ್ದು ಸುಕ್ಕುಗಟ್ಟುವ ಪ್ರಕ್ರಿಯೆ ನಿದಾನವಾಗುತ್ತೆ. ಶೇಕಡ 73 % ವಿಟಮಿನ್ - C ಇದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
556 mg ನಷ್ಟು ಇರುವ Potassium ದೇಹದಲ್ಲಿ ಶೇಕರಣೆಯಾಗುವ ಹೆಚ್ಚಿನ Sodium ( ಉಪ್ಪಿನಂಶ ) ಹೀರಿಕೊಂಡು, ಮೂತ್ರ ವಿಸರ್ಜನೆ ಹೆಚ್ಚಿಸಿ, ದೇಹದ ನೀರಿನಂಶವನ್ನು ಸಮತೋಲನದಲ್ಲಿ ಇರಿಸುವುದು. ಹಾಗಾಗಿ ಪಾದಗಳು ಊತವಾಗುವ ತೊಂದರೆ ( edima ) ನಿವಾರಣೆಯಾಗುತ್ತೆ.
ತಾವರೆಯ / ನೈದಿಲೆಯ ಹಸಿ ಬೀಜಗಳನ್ನು ಬೇಯಿಸಿ ಅಥವಾ ಹಾಗೆಯೇ ತಿನ್ನಬಹುದು. Pop ಮಾಡಿದ ಒಣಬೀಜಗಳು ( ಪಾಪ್ ಕಾರ್ನ್ ತರ, ಅದಕ್ಕೆ ಮಖಾನ / ಮಖಾನ ಫೂಲ್ ಎಂದು ಹೆಸರು. ಎಲ್ಲಾ ಮಾಲ್ ಗಳಲ್ಲೂ ಸಿಗುತ್ತೆ - ಚಿತ್ರ ನೋಡಿ ) ಮಕ್ಕಳಿಗೆ ಉತ್ತಮವಾದ ಪೌಷ್ಟಿಕ ಆಹಾರ ಹಾಗೂ ಅವರ ಬುದ್ದಿಶಕ್ತಿ ಚುರುಕಾಗುತ್ತೆ.
ಬೆಳಿಗ್ಗೆ ಉಪಹಾರಕ್ಕೆ ಈ ಮಖಾನ ಸೇವನೆಯಿಂದ ಅಧಿಕ ತೂಕ ಕಮ್ಮಿಮಾಡಬಹುದು, ಸಕ್ಕರೆ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡ ಹತೋಟಿಗೆ ಬರುತ್ತದೆ. ಮೂಳೆಗಳ ಶಕ್ತಿಗೆ ಸಹಕಾರಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ನಿಯಂತ್ರಣದಲ್ಲಿರುತ್ತವೆ. ಮೂತ್ರ ಪಿಂಡಗಳ ( kidney ) ಆರೋಗ್ಯಕ್ಕೆ ಒಳ್ಳೆಯದು.
ಮಖಾನದಿಂದ ಪಲ್ಯ, ಸಾಂಬಾರ್, ಕರಿ ಮಾಡಬಹುದು ಅಥವಾ ಹುರಿದು ಪಾಪ್ ಕಾರ್ನ್ ತರ ಮಾಡಿ ತಿನ್ನಬಹುದು.
ತಾವರೆ ಬೇರು ಮತ್ತು ಗೆಡ್ಡೆಗಳಿಂದ ( rhizome ) ತರಾವರಿ ಅಡುಗೆಗಳನ್ನು ಮಾಡಬಹುದು. ಇದರ ಸೂಪ್ ಜಪಾನ್ ದೇಶದಲ್ಲಿ ತುಂಬಾ ಪ್ರಸಿದ್ದಿ. ಜಪಾನಿಯರು ಅನಾರೋಗ್ಯ ಪೀಡಿತರಾಗುವುದೇ ಅಪರೂಪ.
ತಾವರೆ ಎಲೆಯಿಂದ ಮಾಡಿದ ಟೀ ( ಕಷಾಯ ) ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ದೇಹದ ಬೊಜ್ಜು, ಅಧಿಕ ತೂಕ ,(obesity ) ನಿವಾರಣೆ ಆಗುತ್ತೆ.
ಒಣ ತಾವರೆಯ ಬೀಜದ ಸರ ( ರುದ್ರಾಕ್ಷಿ ಹಾರದ ತರ ) ಶಿವನಿಗೆ ಪ್ರಿಯ ಹಾಗೂ ಕುತ್ತಿಗೆಯಲ್ಲಿ ದರಿಸಿದಲ್ಲಿ ಸಕಲ ಕಾರ್ಯ ಸಿದ್ದಿ, ದುಷ್ಟ ಶಕ್ತಿ ನಿವಾರಣೆ, ಕೆಟ್ಟ ದೃಷ್ಟಿ ತಡೆ ಆಗುವುದಂತೆ.
ಔಷದೀಯ ಗುಣಗಳಲ್ಲಿ ತಾವರೆ ಮತ್ತು ನೈದಿಲೆಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ.
ಚಿತ್ರ ಹಾಗೂ ಲೇಖನ :- ಮಂಜುನಾಥ್ ಪ್ರಸಾದ್...

Enjoyed this article? Stay informed by joining our newsletter!

Comments

You must be logged in to post a comment.

About Author