ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಬಾರದು

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಬಾರದು

 

ಯಾವ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ, ಯಾವುದನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದರ ಕುರಿತು ಹಲವರಿಗೆ ತಿಳಿದಿದೆ. ಯಾವುದೆಲ್ಲಾ ಪದಾರ್ಥಗಳಲ್ಲಿ ಪೋಷಕಾಂಶಗಳಿರುತ್ತವೆ. ವಿಟಮಿನ್ ಗಳಿರುತ್ತವೆ ಎನ್ನುವುದರ ಬಗ್ಗೆಯೂ ತಿಳಿದಿರುತ್ತದೆ. ಹೇರಳವಾಗಿ ವಿಟಮಿನ್‌ಗಳನ್ನು ಹೊಂದಿದ್ದು ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುವಂತಹವು ಕೆಲವೊಂದು ತಿನಿಸುಗಳನ್ನು ಹಲವರು ಸೇವಿಸುತ್ತಾರೆ. ಹಾಗಂತ ಇದನ್ನು ದಿನಪೂರ್ತಿ ತಿನ್ನುವಂತಿಲ್ಲ. ಯಾವುದೇ ಆಹಾರದಲ್ಲಿಯೂ ಎಷ್ಟು ಪ್ರಮಾಣದಲ್ಲಿ ಪೋಷಕಾಂಶವಿದ್ದರೂ ಅದನ್ನು ತಿನ್ನುವ ಸರಿಯಾದ ಸಮಯದಲ್ಲಷ್ಟೇ ಸಿಕ್ಕರೆ, ಆರೋಗ್ಯಕ್ಕೆ ಉತ್ತಮ.

 

ಅಸಮಯದಲ್ಲಿ ನಿರ್ಧಿಷ್ಟ ಆಹಾರಗಳ ಸೇವನೆ ಆರೋಗ್ಯಕ್ಕೆ ಹಾನಿಯನ್ನೂ ಉಂಟು ಮಾಡಬಹುದು. ಹೀಗಾಗಿ ಬೆಳಗ್ಗೆ, ಸಂಜೆ, ರಾತ್ರಿಯ ಸಮಯದಲ್ಲಿ ಯಾವ ಆಹಾರ ಸೇವಿಸುವುದು ಒಳ್ಳೆಯದು, ಯಾವ ಆಹಾರ ಸೇವಿಸುವುದು ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಬೆಳಗ್ಗೆ ಎದ್ದ ಕೂಡಲೇ, ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ತಿನ್ನುವುದು, ಕುಡಿಯುವುದು ಒಳ್ಳೆಯದಲ್ಲ ಎನ್ನುತ್ತಾರೆ ಆಹಾರತಜ್ಞರು. ಆ ಪಟ್ಟಿಯಲ್ಲಿರುವ ಆಹಾರ ಪದಾರ್ಥಗಳು ಯಾವುವು..ಬನ್ನಿ ತಿಳಿಯೋಣ..

 

ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದ ಆಹಾರಗಳ ಪಟ್ಟಿ

Dont eat on empty stomachFeatured Image Credits : The Jakarta Post

ಸಾಮಾನ್ಯವಾಗಿ ಜನರು ಕೆಲವೊಂದು ಕೆಟ್ಟ ಹವ್ಯಾಸಗಳಿಂದ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ಮಾಹಿತಿಯ ಕೊರತೆಯಿಂದ ತಪ್ಪು ಆಹಾರಾಭ್ಯಾಸವನ್ನು ಅಳವಡಿಸಿಕೊಂಡಿರುತ್ತಾರೆ. ಕೆಲ ವ್ಯಕ್ತಿಗಳು ಖಾಲಿ ಹೊಟ್ಟೆಯಲ್ಲಿಯೇ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದರಿಂದಲೇ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಯಾವ ಆಹಾರ ಪದಾರ್ಥಗಳನ್ನು ಖಾಲಿಹೊಟ್ಟೆಯಲ್ಲಿ ಸೇವಿಸಬಾರದು ಎಂಬುವುದನ್ನು ಮೊದಲು ತಿಳಿದುಕೊಳ್ಳಬೇಕು.

 

ಉತ್ತಮ ಆರೋಗ್ಯಕ್ಕಾಗಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕಾದ ಹಲವು ಆಹಾರಗಳು ಇದ್ದರೂ, ಕೆಲವು ಆಹಾರಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ನೀವು ಏನು ತಿನ್ನುತ್ತಿದ್ದೀರಿ ಮತ್ತು ತಿನ್ನಲು ಹೆಚ್ಚು ಮುಖ್ಯವಾದವುಗಳು ಯಾವುದೆಂದು ಮೊದಲು ತಿಳಿದುಕೊಳ್ಳಬೇಕು. ಬೆಳಗ್ಗೆ ಎದ್ದ ಕೂಡಲೇ ಕಾಫಿಯನ್ನು ಕುಡಿಯಬಾರದು, ಮಸಾಲೆಯುಕ್ತ ಆಹಾರಗಳನ್ನು ಸೇವಿಸಬಾರದು, ಹಸಿ ತರಕಾರಿ ತಿನ್ನಬಾರದು, ಹಣ್ಣಿನ ಜ್ಯೂಸ್‍ಗಳನ್ನು ಕುಡಿಯಬಾರದು, ಬಾಳೆಹಣ್ಣು, ಸಿಟ್ರಸ್ ಹಣ್ಣುಗಳನ್ನು ತಿನ್ನಬಾರದು, ಕುಡಿಯಬಾರದು ಎಂದು ಹೇಳುತ್ತಾರೆ.

 

ಬೆಳಗ್ಗೆದ್ದ ಕೂಡಲೇ ಕಾಫಿ ಕುಡಿಯಬಾರದು

Dont drink coffee on empty stomatchImage credits : in-24.com

ಬಹಳಷ್ಟು ಮಂದಿಯ ದಿನ ಆರಂಭವಾಗುವುದು ಬಿಸಿಬಿಸಿಯಾದ ಕಾಫಿ ಕುಡಿಯುವುದರಿಂದ. ಹೆಚ್ಚಿನ ಜನರು ತಮ್ಮ ದಿನವನ್ನು ಒಂದು ಕಪ್ ಕಾಫಿಯಿಂದ ಪ್ರಾರಂಭಿಸುತ್ತಾರೆ. ಆದರೆ ಬೆಳಗ್ಗೆ ಎದ್ದಕೂಡಲೆ ಕಾಫಿ ಕುಡಿಯುವುದು ಒಳ್ಳೆಯದಲ್ಲ ಎನ್ನುತ್ತಾರೆ ಆಹಾರತಜ್ಞರು.ನೀವು ಆರೋಗ್ಯವಾಗಿರಲು ಬಯಸಿದರೆ, ಖಾಲಿ ಹೊಟ್ಟೆಯಲ್ಲಿ ಕಾಫಿಯನ್ನು ಕುಡಿಯಬೇಡಿ. ದಿನವನ್ನು ರಿಫ್ರೆಶ್ ಮಾಡಲು ಇದು ನಿಮಗೆ ಸಹಾಯ ಮಾಡಬಹುದು. ಆದರೆ ಬೆಳಗ್ಗಿನ ಕಾಫಿ ಸೇವನೆ, ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಇದು ಜಠರ ಉರಿತವನ್ನು ಹೆಚ್ಚಿಸುತ್ತದೆ. ಏಕೆಂದರೆ ಇದು ಹೈಡ್ರೋಕ್ಲೋರಿಕ್ ಆಮ್ಲದ ಸ್ರವಿಸುವಿಕೆಯನ್ನು ಪ್ರಚೋದಿಸುತ್ತದೆ.

 

ಮಸಾಲೆಯುಕ್ತ ಆಹಾರ ಸೇವಿಸುವುದನ್ನು ತಪ್ಪಿಸಿ

masala food itemsImage Credits : wikipedia

ದಿನನಿತ್ಯದ ಆಹಾರದಲ್ಲಿ ಮಸಾಲೆಯುಕ್ತ ಆಹಾರ ಕಡಿಮೆ ಸೇವಿಸಬೇಕು. ಅದರಲ್ಲೂ ಬೆಳಗ್ಗಿನ ಹೊತ್ತಂತೂ ಮಸಾಲೆಯುಕ್ತ ಆಹಾರಗಳನ್ನು ಸೇವಿಸಲೇಬಾರದು. ಖಾರ ಹೆಚ್ಚಾಗಿರುವ ಆಹಾರವನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಗ್ಯಾಸ್ಟ್ರಿಕ್ ಸಮಸ್ಯೆಗಳು ಉತ್ಪನ್ನವಾಗುತ್ತವೆ. ಮೆಣಸಿನಕಾಯಿ, ಮೆಣಸು, ಲವಂಗ ಮೊದಲಾದ ಮಸಾಲಾ ತಿನಿಸುಗಳು ಸಹ ಖಾಲಿ ಹೊಟ್ಟೆ ಸೇರುವುದು ಒಳ್ಳೆಯದಲ್ಲ. ಖಾಲಿ ಹೊಟ್ಟೆಯಲ್ಲಿ ಮಸಾಲೆಯುಕ್ತ ಆಹಾರವನ್ನು ಸೇವಿಸಿದಾಗ, ಅದು ನೇರವಾಗಿ ಹೊಟ್ಟೆಯ ಒಳಪದರವನ್ನು ಕೆರಳಿಸುತ್ತದೆ. ಇದರಿಂದಾಗಿ ಹೊಟ್ಟೆನೋವು ಮೊದಲಾದ ಸಮಸ್ಯೆ ಉಂಟಾಗುತ್ತದೆ.

 

ಹಸಿ ತರಕಾರಿಗಳನ್ನು ತಿನ್ನುವುದು ಒಳ್ಳೆಯದಲ್ಲ

pure vegetablesImage Credits : Swiggy

ಹಸಿ ತರಕಾರಿಗಳು ದಿನದ ಯಾವುದೇ ಸಮಯದಲ್ಲಿ ಸೇವಿಸಬಹುದು ಆರೋಗ್ಯಕ್ಕೆ ಉತ್ತಮ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ಹಸಿ ತರಕಾರಿ ಸೇವಿಸುವುದು ಸೂಕ್ತವಲ್ಲ. ದಿನದ ಆರಂಭದಲ್ಲಿ ನೀವು ಹಸಿ ತರಕಾರಿಗಳನ್ನು ಸೇವಿಸಿದರೆ, ಜೀರ್ಣಕ್ರಿಯೆ ಕಠಿಣವಾಗಿರುತ್ತದೆ. ಇದು ಬಳಿಕ ಹೊಟ್ಟೆ ನೋವಿಗೆ ಕಾರಣವಾಗುತ್ತದೆ. ಎಲೆಹಸಿರಿನ, ಹಸಿ ಸೊಪ್ಪುಗಳು ದೇಹಕ್ಕೆ ಸಾಕಷ್ಟು ಒಳಿತು ಮಾಡುತ್ತವೆ. ಆದರೆ ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ತಿನ್ನುವುದು ಮಾತ್ರ ಮಾಡಬಾರದು. ಆ ರೀತಿ ಮಾಡಿದರೆ ಸ್ಟಮಕ್ ಲೈನಿಂಗ್ ಹಾಳಾಗುತ್ತದೆ

 

ಬೆಳಗ್ಗೆ ಹಣ್ಣಿನ ಜ್ಯೂಸ್‌ಗಳನ್ನು ಕುಡಿಯಬೇಡಿ

fresh fruit juicesImage credits : News Medical

ಹಣ್ಣನ್ನು ತಿನ್ನುವುದು ಆರೋಗ್ಯಕ್ಕೆ ಉತ್ತಮ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ, ಬೆಳಗ್ಗೆ ಹಣ್ಣಿನ ಜ್ಯೂಸ್ ನ್ನು ಕುಡಿಯುವುದು ಒಳ್ಳೆಯದಲ್ಲ. ಹಣ್ಣಿನ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಇದು, ಲಿವರ್ ಮತ್ತು ಮೇದೋಜ್ಜೀರಕ ಗ್ರಂಥಿಯ ಮೇಲೆ ಒತ್ತಡವನ್ನುಂಟು ಮಾಡುವ ಫ್ರಕ್ಟೋಸ್‌‌ ಹೊಂದಿದೆ. ಇದು ವಿಶ್ರಾಂತಿ ಸಮಯದ ನಂತರವೂ ಕಾರ್ಯನಿರ್ವಹಿಸುತ್ತದೆ. ಬೆಳಗ್ಗೆದ್ದು ಸಾಫ್ಟ್‍ ಡ್ರಿಂಕ್ಸ್‍ ಕುಡಿಯುವುದು ಸಹ ಒಳ್ಳೆಯದಲ್ಲ. ಇವು ಸಹ ಅಸಿಡಿಟಿಯನ್ನು ಉಂಟು ಮಾಡುತ್ತವೆ. ದೇಹದಲ್ಲಿರುವ ಉದರದ ಆಮ್ಲಗಳೊಂದಿಗೆ ಸಾಫ್ಟ್ ಡ್ರಿಂಕ್ಸ್ ಸೇರಿ ಸ್ನಾಯು ಸೆಳೆತ, ಬಾಡಿ ಪೆಯಿನ್ಸ್ ಕಾಣಿಸಿಕೊಳ್ಳಬಹುದು.

 

ಬಾಳೆಹಣ್ಣು ತಿನ್ನುವುದನ್ನು ತಪ್ಪಿಸಿ

dont eat banana in empty stomachImage Credits : Food & Nutrition Magzine

ಬಾಳೆಹಣ್ಣುಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ತಪ್ಪು ಆಯ್ಕೆಯಾಗಿದೆ. ಏಕೆಂದರೆ ಬಾಳೆಹಣ್ಣುಗಳಲ್ಲಿ ಮೆಗ್ನೀಸಿಯಮ್ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಇದು ರಕ್ತದ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಹೃದಯದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದರೆ ಚೆನ್ನಾಗಿ ಕಳಿತ ಬಾಳೆಹಣ್ಣನ್ನು ಬೆಳಗ್ಗೆ ತಿನ್ನಬಹುದು. ಇದು ಯಾವುದೇ ರೀತಿಯಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಿಲ್ಲ.

 

 ಸಿಟ್ರಸ್ ಹಣ್ಣುಗಳನ್ನು ತಿನ್ನಬೇಡಿ

avoid citrus fruits in empty stomachImage Credits : NDTV.com

ಖಾಲಿ ಹೊಟ್ಟೆಯಲ್ಲಿ ಸಿಟ್ರಸ್ ಹಣ್ಣುಗಳು, ಪೇರಲ ಮತ್ತು ಕಿತ್ತಳೆ ಹಣ್ಣಿನಂತಹ ಹೆಚ್ಚಿನ ಫೈಬರ್ ಹಣ್ಣುಗಳನ್ನು ತಿನ್ನುವುದನ್ನು ಕಡಿಮೆ ಮಾಡಬೇಕು. ನಿಂಬೆ, ಆರೇಂಜ್, ಹುಳಿಯಾಗಿರುವ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ಇವುಗಳ ರಸವನ್ನೂ ಸಹ ಕುಡಿಯಬಾರದು. ಇವುಗಳಿಂದ ಅಸಿಡಿಟಿ ಉಂಟಾಗುತ್ತದೆ. ಗ್ಯಾಸ್ಟ್ರಿಕ್, ಹೊಟ್ಟೆಹುಣ್ಣಿಗೂ ದಾರಿಯಾಗುತ್ತದೆ ಇದರಲ್ಲಿರುವ ಫ್ರಕ್ಟೋಸ್ ಮತ್ತು ಫೈಬರ್‌ ನ ಹೆಚ್ಚಿನ ಅಂಶವು ನಿಮ್ಮ ಚಯಾಪಚಯ ಕ್ರಿಯೆಯನ್ನು ಅಡ್ಡಿಪಡಿಸುತ್ತದೆ.

 

ಸಿಹಿ, ಕ್ಯಾಂಡಿಗಳನ್ನು ತಿನ್ನಬೇಡಿ

sweet and condimentsImage Credits : DNA  India

ಸಕ್ಕರೆ ಪ್ರಮಾಣ ಅಧಿಕವಾಗಿರುವ ಸಿಹಿ, ಕ್ಯಾಂಡಿಗಳನ್ನು ತಿನ್ನುವುದರಿಂದ ಇದು ನೇರವಾಗಿ ಲಿವರ್ ಮೇಲೆ ಪ್ರಭಾವ ಬೀಳುತ್ತದೆ. ನಿತ್ಯ ಬೆಳಗ್ಗೆ ಸಿಹಿ ತಿಂಡಿಗಳನ್ನು ತಿನ್ನುವುದರಿಂದ ಅಂಗಾಂಗಳು ಸಾಮರ್ಥ್ಯ ಕುಂಠಿತವಾಗುತ್ತದೆ. ಇದರಿಂದ ಕೆಲವು ರೀತಿಯ ಕಾಯಿಲೆಗಳು ಬರುವ ಸಾಧ್ಯತೆಗಳೂ ಇವೆ.

 

ಬೆಳಗ್ಗೆ ಅಲ್ಕೋಹಾಲ್ ಸೇವನೆ ತಪ್ಪಿಸಿ

alcohol drinksImage Credits : cone health

ಅಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಅನ್ನೋದು ಎಲ್ಲರಿಗೂ ಗೊತ್ತಿದೆ. ಅದರಲ್ಲೂ ಬೆಳಗ್ಗಿನ ಹೊತ್ತು ಅಲ್ಕೋಹಾಲ್ ಸೇವನೆ 80 ಶೇಕಡಾದಷ್ಟು ಕೆಟ್ಟ ಪರಿಣಾಮ ಬೀರುತ್ತದೆ. ಬೆಳಗ್ಗೆ ಎದ್ದಕೂಡಲೇ ಅಲ್ಕೋಹಾಲ್ ತೆಗೆದುಕೊಂಡರೆ ಅದರ ಪ್ರಭಾವ ತುಂಬಾ ಜಾಸ್ತಿ ಇರುತ್ತದೆ. ಬೆಳಗ್ಗೆಯಾದ ಕಾರಣ ರಕ್ತನಾಳಗಳನ್ನು ಪ್ರಭಾವಿಸುತ್ತಾ,ಇದು ಮಿದುಳನ್ನು ಸಹ ಬಹಳ ಶೀಘ್ರವಾಗಿ ಪ್ರಭಾವಗೊಳಿಸುತ್ತದೆ ಅಲ್ಕೋಹಾಲ್. ಹೃದಯ ಸೇರಿದಂತೆ ದೇಹದಲ್ಲಿನ ಅನೇಕ ಅಂಗಾಂಗಳನ್ನು ಘಾಸಿಗೊಳಿಸುತ್ತದೆ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author