ಎಲ್ಲಾ ಮನೆಮಠ ಮಾರಿಕೊಂಡ ವಿಶ್ವದ ಅತಿ ಶ್ರೀಮಂತ ವ್ಯಕ್ತಿ; ಕಾರಣ ಇದು

Tಇಲಾನ್ ಮಸ್ಕ್ (Elon Musk) ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ. ಇವರ ಬಗ್ಗೆ ಹೇಳುವ ವಿಚಾರಗಳು ಒಂದೇ ಎರಡೇ. ಬಹಳ ವಿಶಿಷ್ಟ ಸಾಧನೆಯ ವ್ಯಕ್ತಿ. ವಿಶೇಷ ಜೀವನ ಗುರಿ ಹೊಂದಿರುವ ವ್ಯಕ್ತಿ. ಹಣ ಬಂದಂತೆ ಜನರು ಮನೆ, ಜಮೀನು ಇತ್ಯಾದಿ ಆಸ್ತಿ ಖರೀದಿಸಿ ಇಟ್ಟುಕೊಳ್ಳುತ್ತಾರೆ. ಆದರೆ, ಈ ಮಹಾಶಯ ಇರೋ ಬರೋ ಭೌತಿಕ ಆಸ್ತಿಯನ್ನೆಲ್ಲಾ ಮಾರಿ ಕೂತಿದ್ದಾರೆ. ಆಸ್ತಿ ಮಾರುವಂಥ ಸಂದರ್ಭ ಏನು ಬಂದು ಎಂದು ಅಚ್ಚರಿ ಎನಿಸುತ್ತಿರಬಹುದು. ಅದಕ್ಕೆ ಬಲವಾದ ಕಾರಣ ಇದೆ.


ಎಲಾನ್ ಮಸ್ಕ್ ಮಂಗಳ ಗ್ರಹದಲ್ಲಿ ಮನುಷ್ಯರ ವಸಾಹತು (Human Colony in Mars Planet) ನಿರ್ಮಿಸಲು ಹೊರಟವರು. ಟೆಸ್ಲಾ (Tesla), ಸ್ಪೇಸ್ ಎಕ್ಸ್ (SpaceX), ನ್ಯೂರಾಲಿಂಕ್ (Neuralink) ಎಂಬ ಕಂಪನಿಗಳ ಸಂಸ್ಥಾಪಕ. ಇವರ ಆಸ್ತಿ ಮೌಲ್ಯ 2 ಲಕ್ಷ ಕೋಟಿ ರೂಪಾಯಿಗೂ ಅಧಿಕ. ಇದರಲ್ಲಿ ಶೇ. 1ರಷ್ಟು ಹಣದಲ್ಲಿ ಹತ್ತಾರು ಬಂಗಲೆ, ಸಾವಿರಾರು ಎಕರೆ ಜಮೀನು ಕೊಳ್ಳಬಹುದು. ಕುತೂಹಲ ಎಂದರೆ ಕೆಲ ವರ್ಷಗಳ ಹಿಂದೆ ಇಲಾನ್ ಮಸ್ಕ್ ಎಲ್ಲಾ ಸಿರಿವಂತರಂತೆ ಆಸ್ತಿ ಖರೀದಿಸುವ ಆಸಕ್ತಿ ಬಹಳ ಇತ್ತು. ಹಾಲಿವುಡ್ ಇರುವ ಲಾಸ್ ಏಂಜಲಿಸ್ ನಗರಿಯ ಸುತ್ತಮುತ್ತ 530 ಕೋಟಿ ರೂ ಮೌಲ್ಯದ ನಾಲ್ಕು ಆಸ್ತಿ ಅವರಿಗಿತ್ತು. ನೂರು ವರ್ಷಗಳಷ್ಟು ಹಳೆಯದಾದ 10 ಬೆಡ್ ರೂಮ್​ಗಳ ಭವ್ಯ ಬಂಗಲೆಯನ್ನೂ ಅವರು ಖರೀದಿಸಿದ್ದರು. ಈ ಬಂಗಲೆಯನ್ನ ಇತ್ತೀಚೆಗಷ್ಟೇ 227 ಕೋಟಿ ರೂಪಾಯಿಗೆ ಮಾರಿದ್ದಾರೆ.

 

Elon musk property
ಮಸ್ಕ್ ವಾಸಿಸುವುದೆಲ್ಲಿ?

ವಿಶ್ವದ ಕುಬೇರ ಇಲಾನ್ ಮಸ್ಕ್ ಅವರ ಬಳಿ ಈಗ ಯಾವ ಭೌತಿಕ ಆಸ್ತಿಯೂ ಇಲ್ಲ. ತಮ್ಮ ಕಂಪನಿಯಾದ SpaceX ಗೆ ಸೇರಿದ ಮನೆಯೊಂದರಲ್ಲಿ ಬಾಡಿಗೆಗೆ ವಾಸವಿದ್ಧಾರೆ. ಈ ಮನೆಯಲ್ಲಿ ವಿಶೇಷತೆ ಇದೆ. ಇದು ರೀಫಾಬ್ರಿಕೇಟ್ ಮಾಡಿದ ಮನೆ. ಅಂದರೆ ಮೊದಲೇ ಅಸೆಂಬಲ್ ಮಾಡಿದ ಮನೆ. ಇದನ್ನ ಮಡಚಿಡಬಹುದು. ಈ ಸ್ಪೆಷಲ್ ಮನೆಯ ಮೌಲ್ಯ ಒಂದು ಕೋಟಿಯೂ ಇಲ್ಲ. 37 ಕೋಟಿ ರೂಪಾಯಿ ಮಾತ್ರವಂತೆ. ತಮ್ಮ ಈ ಪುಟ್ಟ ಮನೆ ಇಲಾನ್ ಮಸ್ಕ್ ಅವರಿಗೆ ಬಹಳ ಪ್ರಿಯವಂತೆ.

ಮಸ್ಕ್ ಯಾಕೆ ಆಸ್ತಿ ಹೊಂದಿಲ್ಲ?

ಮೊದಲೇ ತಿಳಿಸಿದ ಹಾಗೆ ಎಲಾನ್ ಮಸ್ಕ್ ಅವರ ಜೀವನಗುರಿಯೇ ಬೇರೆ. ಅವರು ಅನ್ಯ ಗ್ರಹದಲ್ಲಿ ಮನುಷ್ಯರ ವಸಾಹತು ನಿರ್ಮಿಸುವ ಮಹದೋದ್ದೇಶ ಹೊಂದಿದ್ದಾರೆ. ಭೂಮಿಯಲ್ಲಿ ಆಸ್ತಿ ಮಾಡುವುದಕ್ಕಿಂತ ಮಂಗಳ ಗ್ರಹದಲ್ಲಿ ಆಸ್ತಿ ಮಾಡಿ ಮನುಷ್ಯರ ವಾಸಸ್ಥಳ ನಿರ್ಮಿಸುವ ಉಮೇದಿನಲ್ಲಿದ್ದಾರೆ. ಅದಕ್ಕಾಗಿಯೇ ಸ್ಪೇಸ್ ಎಕ್ಸ್ ಸಂಸ್ಥೆ ಕಾರ್ಯೋನ್ಮುಖವಾಗಿದೆ. ಮಂಗಳ ಗ್ರಹಕ್ಕೆ ಬೇಗ ತಲುಪಬಲ್ಲ ರಾಕೆಟ್​ಗಳ ಆವಿಷ್ಕಾರ ಸತತವಾಗಿ ನಡೆಯುತ್ತಿದೆ. ಇವರ ಕಂಪನಿಯ ರಾಕೆಟುಗಳನ್ನ ನಾಸಾದವರು ಬಳಸುತ್ತಿದ್ಧಾರೆ.


ಮಂಗಳ ಗ್ರಹದಲ್ಲಿ ಮನುಷ್ಯ ಹೇಗೆಲ್ಲಾ ವಾಸಿಸಬಹುದು ಎಂಬುದನ್ನೆಲ್ಲಾ ಇವರು ಅಧ್ಯಯನ ನಡೆಸುತ್ತಿದ್ದಾರೆ. ಇಂಥ ದೊಡ್ಡ ಗುರಿ ಕಣ್ಮುಂದೆ ಇದ್ದಾಗ ಮನೆ, ಮಠ, ಜಮೀನು ಇತ್ಯಾದಿ ‘ಕ್ಷುಲ್ಲಕ’ ಸಂಗತಿಗಳು ಗುರಿಗೆ ಅಡ್ಡಿ ಮಾಡಬಹುದು ಎಂಬ ಕಾರಣಕ್ಕೆ ಅವೆಲ್ಲವುಗಳಿಂದ ಮಸ್ಕ್ ದೂರವೇ ಇರುತ್ತಿದ್ದಾರೆ.


ಇಲಾನ್ ಮಸ್ಕ್ ಬಳಿ ಇರುವುದು ಅವರ ಕಂಪನಿಗಳ ಷೇರುಗಳ ಕೆಲ ಭಾಗ ಮಾತ್ರ. ಅದರಲ್ಲೇ ಅವರು ವಿಶ್ವದ ಕುಬೇರ ಎನಿಸಿದ್ದಾರೆ. ಷೇರು ಬಿಟ್ಟರೆ ಉಳಿದಂತೆ ವಿವಿಧೆಡೆ ಮಾಡಿರುವ ಹೂಡಿಕೆಗಳು, ಕ್ರಿಪ್ಟೋಕರೆನ್ಸಿ ಇತ್ಯಾದಿ ಚರಾಸ್ತಿ (Liquid Assets) ಮಾತ್ರ ಮಸ್ಕ್ ಬಳಿ ಇದೆ.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author

A passionate Creator