ಇಂಜಿನಿಯರ್ಸ್ಗೆ ಮಾತ್ರ

ಸುಮಾರು  1980-1990 ರ ಆಸುಪಾಸಿನ ಕಾಲಘಟ್ಟದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ  ಈ ಎರಡು ಕೋರ್ಸುಗಳು ಉತ್ತುಂಗದಲ್ಲಿದ್ದವು ಎಂದರೆ ತಪ್ಪಾಗಲಾರದು.ಹಾಗಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ತೇರ್ಗಡೆಯಾದ ಪ್ರತಿ ವಿದ್ಯಾರ್ಥಿಯ ತಂದೆ-ತಾಯಿಯ ಮುಂದಿದ್ದ ಎರಡೇ ಆಯ್ಕೆಗಳೆಂದರೆ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಮನೆಗೊಂದು ಟಿವಿ, ಫ್ರಿಡ್ಜ್ ಹೇಗೆ ಕಂಪಲ್ಸರಿನೋ ಅದೇ ರೀತಿ ಮನೆಗೊಬ್ಬ ಮಕ್ಕಳು ಇಂಜಿನಿಯರ್ ಅಥವಾ ಡಾಕ್ಟರ್ ಓದುವುದು ಕಂಪಲ್ಸರಿ ಯಾಗಿತ್ತು.

 

ತಪ್ಪು ಅವರದಲ್ಲ  ಯಾಕಂದ್ರೆ ಕಾಲಕ್ಕೆ ತಕ್ಕಂತೆ ಟ್ರೆಂಡನ್ನು ಫಾಲೋ ಮಾಡೋದು ನಮ್ಮೆಲ್ಲರ ಜನ್ಮಸಿದ್ಧ ಹಕ್ಕು ಅಲ್ವಾ. ಬಹುಶಃ ಟ್ರೆಂಡ್ ಫಾಲೋ ಮಾಡೋದಕ್ಕಿಂತ ಡ್ರೀಮ್ ಫಾಲೋ ಮಾಡಿದ್ದಿದ್ದರೆ ಚೆನ್ನಾಗಿರುತ್ತಿತ್ತು. ಅಂತೂ ಮಲ್ಲೇಶ್ವರಂನ ಸಿ ಇ ಟಿ ಸೆಲ್ನಲ್ಲಿ ಕೂತು ಮೊದಲು ಹೊಂಚು ಹಾಕಿದ್ದು ಮೆಡಿಕಲ್ ಸೀಟ್ ಗೆ ಆದ್ರೆ ಏನ್ ಮಾಡೋದು ಮೆಡಿಕಲ್ ಓದುವಷ್ಟು ಮಾರ್ಕ್ಸು ಅಥವಾ ಮನಿ ಎರಡು ನಮ್ಮತ್ರ ಇರಲಿಲ್ಲ ಕೌನ್ಸಿಲಿಂಗ್ನ ಎಲ್ಲ ರೌಂಡ್ ಮುಗಿಸಿ ಕೊನೆಗೆ ಸಮಾಧಾನಕರ ಬಹುಮಾನ ಅನ್ನೋ ಹಾಗೆ ಸಿಕ್ಕಿದ್ದು ಇಂಜಿನಿಯರಿಂಗ್ ಸೀಟ್. ಕಂಪ್ಯೂಟರ್ ಸೈನ್ಸ್ ಬ್ರಾಂಚ್ .

 

ಆದರೆ ಅವತ್ತಿಗೆ ಅದೇ ತುಂಬಾ ಖುಷಿಯ ವಿಷಯ ತಂದೆತಾಯಿಗಳಿಗೆ ಅಂತೂ ಎಂಎಲ್ಎ ಸೀಟ್ ಸಿಕ್ಕಷ್ಟೇ ಖುಷಿಯಾಗಿತ್ತು ಎಲ್ಲಾ ಕಡೆ ನಮ್ಮ ಮಕ್ಕಳು ಎಂಜಿನಿಯರಿಂಗ್ ಓದುತ್ತಿದ್ದಾರೆ ಅನ್ನೋದೇ ಹೆಮ್ಮೆಯ ವಿಷಯವಾಗಿತ್ತು ಅವರಿಗೆ.

 

ಇದೇ ರೀತಿ ಎಷ್ಟು ಜನ ಇಂಜಿನಿಯರಿಂಗ್ ಓದುದ್ವಿ ಅಂದ್ರೆ ಕೊನೆಗೊಂದು ದಿನ ಮಾರ್ಕೆಟ್ಟಲ್ಲಿ ಟಮೋಟೋ ರೇಟ್ ತುಂಬಾ ಚೆನ್ನಾಗಿದೆ ಅಂತ ಎಲ್ಲಾ ರೈತರು ಟಮೋಟೋ ನೆ ಬೆಳೆದು ಒಳ್ಳೆ ರೇಟ್ ಸಿಗದಿದ್ದಾಗ ಬೀದಿಗೆ ಬಿಸಾಕಿ ಹೋಗ್ತಿದ್ದರಂತೆ.ರಿಸೆಷನ್ ಬಂದಾಗ  ನಮ್ಮ ಇಂಜಿನಿಯರ್ಸ್ ಕಥೆನೂ  ಬೀದಿಗೆ ಬಿದ್ದ ಟೊಮೊಟೊ ತರ ಆಗಿತ್ತು.ಆದರೂ ನಾವು ಧೃತಿಗೆಡಲಿಲ್ಲ ನಾವು ಇಂಜಿನಿಯರ್ಸ ತುಂಬಾ ಫ್ಲೆಕ್ಸಿಬಲ್.ಟಮೊಟೋ‌ ಹೇಗೆ ಬರೀ ಟಮೊಟೋ ಸಾಂಬಾರು, ಟಮೊಟೋ ಬಾತ್ ,ಗೆ ಮೀಸಲಾಗದೆ ತನ್ನ ಅಸ್ತಿತ್ವ ವನ್ನ ಎಲ್ಲ ಅಡುಗೆಗಳಲ್ಲಿ ಕಂಡು ಕೊಂಡಿದ್ಯು ಅದೇ ತರ ನಾವು ಇಂಜಿನಿ ಯರ್ಸ್ ಕೂಡ ಎಲ್ಲ ಕ್ಷೇತ್ರದಲ್ಲಿ ನಮ್ಮ ಸ್ಥಾನ ಗಿಟ್ಟಿಸಿಕೊಂಡಿದಿವಿ.

 

ನಾನು ಇಂಜಿನಿಯರಿಂಗ್ ಮಾಡಿದ್ದೀನಿ ಬರೀ ಕೋಡಿಂಗ್ ಮಾತ್ರ ಮಾಡೋದು ಅಂತಾ ನಾವು ಕೈಕಟ್ಟಿ ಕೂತಿಲ್ಲ. ಆ್ಯಟಿಂಗ್  ಮಾಡ್ತಿವಿ ,ಲೆಕ್ಟರಿಂಗೂ ಓಕೆ ,ಸ್ಕೂಲ್ ಟೀಚರ್ ಗೂ ಸೈ. 

 

ಅದೂ ಸಿಗಲಿಲ್ವ ಮನೆ ಪಾಠ ಹೇಳಿಕೊಡಿತಿವಿ ಮಕ್ಕಳಿಗೆ . ಚೇತನ್ ಭಗತ್ ತರಹ ಸಾಹಿತಿ ಕೂಡ ಆಗಬಹುದು ಉದಾಹರಣೆಗೆ ನಮ್ಮ ಕನ್ನಡ ಸಿನಿಮಾದ  ಸುದೀಪ್,  ರಮೇಶ ಅರವಿಂದ್, ರಕ್ಷಿತ್ ಶೆಟ್ಟಿ, ದನ೦ಜಯ್ . ಕ್ರಿಕೆಟಿನ ಹೆಸರಾಂತ ಕ್ರಿಡಾ ಪಟು ಅನಿಲ್ ಕುಂಬ್ಳೆ ,ಶ್ರೀನಾಥ್ ಜಾವಗಲ್, ಅಶ್ವಿನ್ ಫೇಮಸ್  ಕಾಮೆಡಿಯನ್ ವಿಸ್ಟರ್ ಬಿನ್, ಫೇಮಸ್ ವಿಲನ್ ಸೋನು ಸೂದ್, ಆದ್ಭುತ ಗಾಯಕ ಶಂಕರ್ ಮಾದವನ್, ದೆಹಲಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ಹೀಗೆ ಹಲವು ಕ್ಷೇತ್ರಗಳಲ್ಲಿ ಇಂಜಿನಿಯರ್ಸ್ ಹೆಸರು ಮಾಡಿದ್ದಾರೆ. ಇನ್ನೂ ಈ ಬಿಲ್ ಗೆಟ್ಸ್ , ಇನ್ಪೋಸಿಸ್ ನಾರಾಯಣ ಮೂರ್ತಿ, ಅಜೀಜ್ ಪ್ರೇಮ್ಜಿ ಇವರೆಲ್ಲ ಬಹುಶ ನಮ್ಮ ಇಂಜಿನಿ ಯರ್ ವಂಶದ ಮನೆ ದೇವ್ರುಗಳು ಇದ್ದ ಹಾಗೆ, ಇನ್ನು ಕೆಲವು ಪ್ರತಿಬೆಗಳನ್ನ ಅಮೆರಿಕಾ, ಆಸ್ಟ್ರೇಲಿಯ, ಜಪಾನ್ ,ಲಂಡನ್ ಹೀಗೆ ನೆರೆಹೊರೆ ರಾಷ್ಟ್ರಗಳ ಉದ್ದಾರಕ್ಕಾಗಿ ಅಲ್ಲಿಗೆ ಎಕ್ಸ್ ಪೋರ್ಟ ಮಾಡಿದ್ದೇವಿ. 

 

ಆಡು ಮುಟ್ಟದ ಸೊಪ್ಪಿಲ್ಲ ಇಂಜಿನಿಯರ್ಸ್ ಟ್ರೈ ಮಾಡದ ಕ್ಷೇತ್ರಗಳು ಇಲ್ಲ. ಯಾಕಂದ್ರೆ ಈ  ಡಿಗ್ರಿ ಸರ್ಟಿಫಿಕೇಟ್ ಸಂಪಾದನೆ ಮಾಡೋಕೆ ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅಂತಹ ಸರ್ಟಿಫಿಕೇಟ್ ನ ಲ್ಯಾಮಿನೇಷನ್ ಮಾಡಿ ಕಪಾಟಿನಲ್ಲಿ ಸುಮ್ನೆ ಇಟ್ಟು ಬಿಡೋಕಾಗುತ್ತಾ,ಅದೂ ಯಾವುದೇ ಬ್ಯಾಕ್ಲೋಗ್ಸ್ ಇಲ್ದೆ. ಅಂತೂ ಅಪ್ಪನ ಆಸೆಗೂ ಅಥವಾ ನಮಗೆ ಬೇರೆ ಆಯ್ಕೆಗಳಿಲ್ಲದೆ ಇಂಜಿನಿಯರಿಂಗ್ ಸೇರಿದ್ದಾಯ್ತು ಮೊದಲನೇ ವರ್ಷ ಹೇಗೆ ಕಳಿತು ಅನ್ನೋದೇ ಗೊತ್ತಾಗಲ್ಲ ಮುಂದಿನ ಮೂರು ವರ್ಷ ಏನು ಆಗ್ತಿದೆ ಅಂತ ಗೊತ್ತಾಗಲ್ಲ ಅಸಲಿಗೆ ಇಂಜಿನಿಯರಿಂಗ್ ತನ್ನ ವರ್ಸೆ ತೋರ್ಸೋದೆ ಎರಡನೇ ವರ್ಷದಲ್ಲಿ ಕಂಪ್ಯೂಟರ್ ಸೈನ್ಸ್ ಅಲ್ಲಿ ಕೆಲವು ಸಬ್ಜೆಕ್ಟ್ ಗಳು ಹೀಗಿವೆ ಸಿ ,ಸಿ ಪ್ಲಸ್ ಪ್ಲಸ್, ಅಡಾ. ಊಪ್ಸ್ ,ಡಿಬಿಎಂಎಸ್ , ಮ್ಯೂಪಿ,ಜಾವ ,ಡಾಟ್ ನೆಟ್, ಯುನಿಕ್ಸ್, ಓಎಸ್, ವೆಬ್ ಇತ್ಯಾದಿ ಮೊದಲ ಬಾರಿಗೆ ಸಬ್ಜೆಕ್ಟ್ ಗಳ ಹೆಸರು ಕೇಳಿದಾಗ ಯಾವುದೋ  ಪರಭಾಷೆಯ ಬಯ್ಗುಳಗಳನ್ನು ಕೇಳಿದ ಹಾಗೆ ಅನಿಸಿತು. 

 

ಈ ಎಲ್ಲಾ ಪುಸ್ತಕದ ಒಳಹೊಕ್ಕು ಅವುಗಳ ಆಳ-ಅಗಲವನ್ನು ಅರಿತು, ಪುಸ್ತಕಗಳನ್ನು ಬಿಟ್ಟು ಬರಲೊಲ್ಲದ ಕಾನ್ಸೆಪ್ಟ್ ಗಳನ್ನು ಎಳೆದು ತಲೆಯಲ್ಲಿ ತುಂಬಿಸಿ ಎಕ್ಸಾಮ್ ಹಾಲ್ ವರೆಗೂ ತೆಗೆದುಕೊಂಡು ಹೋಗಿ ಆನ್ಸರ್ ಸೀಟಲ್ಲಿ ಬಟ್ಟಿ ಇಳಿಸುವುದರ ಕಷ್ಟ ಅನುಭವಿಸಿದವರ ಮಾತಲ್ಲೆ ಕೇಳಬೇಕು. ತಿಯರಿ ಎಕ್ಸಾಮ್ ಹೇಗೋ ಬರೆದುಬಿಡಬಹುದು ತಲೆಯಲ್ಲಿ ಉಳಿದಿದ್ದು, ನೆನಪಾಗಿದ್ದು , ನೆನಪಾಗದ್ದು, ಪಕ್ಕದವರ ಆನ್ಸರ್ ಸೀಟಲ್ಲಿ ಕಂಡ ಅಲ್ಪಸ್ವಲ್ಪ ಆನ್ಸರ್ ಗಳು .

 

ಏನು ತೋಚದಿದ್ದಾಗ ಕೊನೆಗುಳಿಯುವುದು ಒಂದೇ ನಮ್ಮೆಲ್ಲ ಸಂಕಷ್ಟಗಳನ್ನು ಸಂಕ್ಷಿಪ್ತವಾಗಿ ಮೌಲ್ಯಮಾಪಕರ ಮನಮುಟ್ಟುವಂತೆ ಮನವಿ ಪತ್ರ ಬರೆದು 35 ಅಂಕಗಳ ಬೇಡಿಕೆಯಿಟ್ಟು ಶರಣಾಗುವುದು, ಉಳಿದದ್ದೆಲ್ಲವೂ ಶಿವನಿಚ್ಚೆ. 

 

ಆದರೆ ಯೂನಿವರ್ಸಿಟಿಯ ಷಡ್ಯಂತರಗಳು ಇಲ್ಲಿಗೆ ಮುಗಿಯುವುದಿಲ್ಲ ಮತ್ತೊಂದಿದೆ ಚಕ್ರವ್ಯೂಹ ಭೇದಿಸಬೇಕಾದದ್ದು ಪ್ರಾಕ್ಟಿಕಲ್ ಎಕ್ಸಾಮ್.ನಾವು 10 ಲ್ಯಾಬ್ ಪ್ರೋಗ್ರಾಮ್ಸ್ ನಾ ಹೇಗೋ ಕಷ್ಟಪಟ್ಟು ಕಲಿತು ಹೋಗಿದ್ದರೆ ದೇವರು ನಮ್ಮ ಪಾಲಿಗೆ ತೆಗೆದಿಡುವುದು ಹನ್ನೊಂದನೆಯದು ನಾವು ಬರೆಯೋ ಪ್ರೋಗ್ರಾಮನ್ನು ಮನುಷ್ಯರಿಗೆ ಒಪ್ಪಿಸೋದು ಕಷ್ಟ ಇನ್ನ ಕಂಪ್ಯೂಟರ್ಗೆ ಒಪ್ಪಿಸಿ ಔಟ್ಪುಟ್ ತೆಗೆಯೋದು ಅಸಾಧ್ಯ.

 

ಬಹುಶಃ ಈ ವಿಷಯ ಎಲ್ಲರಿಗೂ ಗೊತ್ತಿದ್ಯೋ ಇಲ್ವೋ ನನಗ್ ಗೊತ್ತಿಲ್ಲ ಸಿ ಪ್ರೋಗ್ರಾಮ್ ನಲ್ಲಿ ಒಂದು,ಕಾಮ .ಪುಲಿ ಸ್ಟಾಪ್  ;ಸೇಮಿಕಾಲೋನ್ ಮಿಸ್ ಮಾಡಿದ್ರು ನಮಗೆ ರಿಸಲ್ಟ್ ಸಿಗೋದಿಲ್ಲ ಅಂದ್ರೆ ಲೆಕ್ಕಹಾಕಿ ನಾವು ಪ್ರೋಗ್ರಾಮ್ ನ ಯಾವ ರೇಂಜಿಗೆ ಕಲಿತಿರಬೇಕು ಅಂತ.ಅವೆಲ್ಲ ನಮ್ಮ ನೆನಪಿನ ಶಕ್ತಿಗೆ ಒಂದು ಸವಾಲ್.ಅಂತಹ ಟೈಮ್ನಲ್ಲಿ ನಮಗೆ ಆಪದ್ಬಾಂಧವ ರಂತೆಕಾಣುವವರು ಲ್ಯಾಬ್ ಇನ್ಸ್ಟ್ರಕ್ಟರ್ ಮಾತ್ರ.ನಮ್ಮ ಈ ನೋವು ಸಂಕಟ ಅವರಿಗೆ ಸುಲಭವಾಗಿ ಅರ್ಥವಾಗುತ್ತೆ ಯಾಕಂದ್ರೆ ಅವರು ಇದೇ ರೀತಿ ಒದ್ದಾಡಿ ಎಕ್ಸಾಮ್ನಲ್ಲಿ ಪಾಸಾಗಿ ನಂತರ ಕ್ಯಾಂಪಸ್ ಸೆಲೆಕ್ಷನ್ ಆಗಿ ಈ ವೃತ್ತಿಗೆ ಬಂದು ಸೇರಿರುತ್ತಾರೆ.

 

ಅಂತೂ ನಮ್ಮ ತಂದೆ-ತಾಯಿಗಳ ಎಷ್ಟೋ ದೇವರ ಅರಕೆಗಳ ಫಲವಾಗಿ ಲ್ಯಾಬ್ ಇನ್ಸ್ಟ್ರಕ್ಟರ್ ಗೆ ನಮ್ಮ ಅಂದಿನ ಕರುಣಾಜನಕ ಸ್ಥಿತಿಯ ಬಗ್ಗೆ ಸ್ವಲ್ಪವಾದರೂ ಕರುಣೆ ಬಂದರೆ ಮುಂದಿನದೆಲ್ಲ ಮ್ಯಾಜಿಕಲ್ ನಾವು ಎಕ್ಸಾಮ್ ಹೇಗೆ ಪಾಸಾದ್ವಿ ಅನ್ನೋ ಸುಳಿವು ನಮಗೂ ಸಿಗೋದಿಲ್ಲ . ಇಷ್ಟೆಲ್ಲಾ ಕಷ್ಟಪಟ್ಟು ಇಂಜಿನಿಯರಿಂಗ್ ಡಿಗ್ರಿ ಸಂಪಾದನೆ ಮಾಡಿ ಕೆಲಸದ ಇಂಟರ್ವ್ಯೂಗೆ ಅಂತ ಹೋದಾಗ ಮೊದಲನೆಯ ಸುತ್ತು ಆಪ್ಟಿಟ್ಯೂಡ್  ಅದರಲ್ಲಿ ಪ್ರಶ್ನೆ ಹೀಗಿರುತ್ತೆ. ರೋಹನ್ ಮತ್ತು ಅವನ ಮಗನ ವಯಸ್ಸಿನ ಅಂತರ 12 ಹಾಗಿದ್ದಲ್ಲಿ ನಾಲ್ಕು ವರ್ಷದ ಹಿಂದೆ ರೋಹನ್ ಮಗನ ವಯಸ್ಸು ಎಷ್ಟು? ಇಷ್ಟು ದಿನ ಟಮೋಟ ಬೆಳೆಯೋದು ಹೇಗೆ ಎಂದು ಹೇಳಿ ಕೊಟ್ಟು ಇವತ್ತು ಭಗವದ್ಗೀತೆಯ ಎರಡನೇ ಅಧ್ಯಾಯದ ಮೂರನೇ ಸಾಲಿನ ತಾತ್ಪರ್ಯವೇನು ಎಂದು ಕೇಳಿದಂತೆ ಇರುತ್ತದೆ ಒಂದಕ್ಕೊಂದು ಸಂಬಂಧವೇ ಇಲ್ಲ. ಅಂತೂ ಹೇಗೋ ಒಂದು ಕೆಲಸ ಸಂಪಾದನೆ ಮಾಡಿದ ಮೇಲೆ ಮೊದಲನೆಯ ದಿನ ಟೀಮ್ ಲೀಡರ್ ಬಂದು ಕೇಳ್ತಾರೆ ಡು ಯು ನೋ ಎಂ ಎಸ್ ವರ್ಡ್, ಎಂಎಸ್ ಎಕ್ಸ್ ಎಲ್? ಇಷ್ಟು ದಿನ ಬಿರಿಯಾನಿ ಕಬಾಬ್ ಮಾಡೋದನ್ನ ಹೇಳಿಕೊಟ್ಟು ಬೆಳ್ಳುಳ್ಳಿ ಸಿಪ್ಪೆ ಬಿಡಿಸೋಕೆ ಬರುತ್ತಾ ಅಂತ ಕೇಳಿದ ಹಾಗೆ ಇರುತ್ತೆ ಅವರ ಕ್ವೆಶ್ಚನ್? ಅದಕ್ಕೆ ಇಂಜಿನಿಯರ್ಸ ಸ್ವಕ್ಷೇತ್ರವನ್ನು ಬಿಟ್ಟು ಬೇರೆ ಕ್ಷೇತ್ರಗಳಿಗೆ ಮೊರೆಹೋಗುವುದು ಎಷ್ಟು ಅಂತ ತಡ್ಕೊಬೇಕು ಹೇಳಿ ಜೀವ? ಬಹುಶಃ ಹೆಣ್ಣು ಮಕ್ಕಳನ್ನು ಬಿಟ್ಟರೆ ಸಾಫ್ಟ್ ವೇರ್ ಇಂಜಿನಿಯರ್ ಅತಿ ಹೆಚ್ಚು ಶೋಷಣೆಗೆ ಒಳಗಾಗಿದ್ದು ಅನ್ಸುತ್ತೆ. ಹಾಗಾಗಿ ಇಂಜಿನಿಯರ್ಸ ನೀವು ಎಲ್ಲಿಗೆ ಕಳ್ಸಿ ಬೇಗ ಅಡಾಪ್ಟ್ ಆಗ್ಬಿಡ್ತೀವಿ ಚೆನ್ನೈ, ಹೈದರಾಬಾದ್, ಯುಕೆ ,ಯುಎಸ್ ,ಲಂಡನ್ ಎಲ್ಲಿಯಾದರೂ ಸರಿ ಯಾಕಂದ್ರೆ ಭಾಷೆ ನಮಗೆ ಯಾವತ್ತು ಆಗಿಲ್ಲ ಬ್ಯಾರಿಯರ್ ಆಗೋದಿಲ್ಲ ನಮ್ ಡಿಗ್ರಿಯಲ್ಲಿ ಭಾಷೆ ಕಲಿಯೋದು ಇಂಪಾರ್ಟೆಂಟ್ ಸಿ, ಸಿ ಪ್ಲಸ್ ಪ್ಲಸ್ ಜಾವಾ .ನೆಟ್ ಈ ರೀತಿಯ ಮಿಶಿನ್ ಭಾಷೆಗಳನ್ನೇ ಕಲಿತ ನಮಗೆ ಮನುಷ್ಯರ ಭಾಷೆ ಅಷ್ಟು ಕಷ್ಟ ಅನಿಸುವುದಿಲ್ಲ. ಕೊರೋನಾ ಬಂದ ಮೇಲಂತೂ ಜಾಗಗಳು ಕೂಡ ನಮಗೆ ಬ್ಯಾರಿಯರ್ ಆಗಿ ಉಳಿದಿಲ್ಲ ಮನೆಯ ಮೂಲೆ ಮೂಲೆಗಳಲ್ಲಿ ಕುಳಿತು ಕೆಲಸ ಮಾಡಿದ್ದೇವೆ. ಆಫೀಸ್ ಹಾಸ್ಪಿಟಲ್ ಫಂಕ್ಷನ್ ಹಾಲ್ ಎಲ್ಲಾದರೂ ಸರಿ ಕೈಯಲ್ಲಿ ಮೊಬೈಲ್ ಅಥವಾ ಲ್ಯಾಪ್ಟಾಪ್ ಇದ್ರೆ ಸಾಕು ಅಲ್ಲೇ ಶುರು. ಸಾಕು ಇನ್ನಾದರೂ ಸ್ವಲ್ಪ ಬ್ರೇಕ್ ತಗೋಳಿ ಕಂಪನಿ ನಾ ಉದ್ದಾರ ಮಾಡೋ ವಂಶೋದ್ಧಾರವೇ ಕಷ್ಟವಾಗ್ತಿದೆ.ಯೋಚನೆ ಮಾಡಿ ನೋಡಿ.

 

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author