ಗಾಂಧಿನಗರದಲ್ಲಿ ಜೈ ಕಿಸಾನ್ ಅನಧಿಕೃತ ಖಾಸಗಿ ತರಕಾರಿ ಮಾರುಕಟ್ಟೆ ರದ್ದು ಮಾಡುವಂತೆ ರೈತರ ಆಗ್ರಹ.!

ಗಾಂಧಿನಗರದಲ್ಲಿ ಜೈ ಕಿಸಾನ್ ಅನಧಿಕೃತ ಖಾಸಗಿ ತರಕಾರಿ ಮಾರುಕಟ್ಟೆ ರದ್ದು ಮಾಡುವಂತೆ ರೈತರ ಆಗ್ರಹ.!  

ಬೆಳಗಾವಿ : ಇಲ್ಲಿನ ಗಾಂಧಿನಗರದಲ್ಲಿ ಜೈ ಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆಯನ್ನು ಅನಧಿಕೃತವಾಗಿ ಸ್ಥಳೀಯ ರಾಜ್ಯಕೀಯ ಮುಖಂಡರು ಸೇರಿ ಮಾಡಿದ್ದಾರೆ. ಇದರಿಂದಾಗಿ ಇಗೀರುವ ಎಪಿಎಂಸಿ ಸರಕಾರಿ ಮಾರುಕಟ್ಟೆಯಲ್ಲಿನ ರೈತರಿಗೆ ಹಾಗೂ ವ್ಯಾಪಾತಿಗಳಿಗೆ ಸಾಕಷ್ಟು ತೊಂದರೆ ಯಾಗುತ್ತಿರುವುದನ್ನು ಖಂಡಿಸಿ ಭಾರತೀಯ ಕೃಷಿಕ ಜೈ ಜವಾನ್ ಜೈ ಕಿಸಾನ್ ಸಂಘಟನೆಯ ರೈತ ಕಾರ್ಯಕರ್ತರು ನಗರದ ಸರ್ಕಿಟ್ ಹೌಸ್ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಬಳಿಕ ಜೈ ಕಿಸಾನ್ ಸಂಘಟನೆಯ ರಾಜ್ಯಾಧ್ಯಕ್ಷ ಸಿದ್ದಗೌಡ ಮೋದಗಿ ಮಾತನಾಡಿ ಈಗಾಗಲೇ ಎಂಪಿಎಂಸಿ ಮಾರುಕಟ್ಟೆ ಇದೆ ಇದರಿಂದ ರೈತರು ನಾವು ಬೆಳೆದ ಎಲ್ಲ ಬೆಳೆಗಳನ್ನ ಇಲ್ಲಿಯೇ ತಂದು ಮಾರಾಟ ಮಾಡುತ್ತಿದ್ದಾರೆ. ಒಂದೇ ಕಡೆ ಮಾರುಕಟ್ಟೆ ಇರುವುದರಿಂದ ರೈತರಿಗೆ ಮತ್ತು ವ್ಯಾಪಾರಸ್ಥರಿಗೆ ಅನುಕೂಲ ವಾಗಿ ರೈತರ ಬೆಳೆಗೆ ಉತ್ತಮವಾದ ಬೆಲೆಯು ಸಿಗುತ್ತಿದೆ. ಇದರ ಮಂದೆದಲ್ಲಿ ಬೆಳಗಾವಿಯ ಸ್ಥಳೀಯ ರಾಜ್ಯಕೀಯ ಮುಂಡರು ತಮ್ಮ ಸ್ವಾರ್ಥಕ್ಕಾಗಿ ಗಾಂಧಿನಗರದ ಎನ್ ಎಚ್-04 ನಲ್ಲಿ ಖಾಸಗಿ ಮಾರುಕಟ್ಟೆಯನ್ನು ಮಾಡಿ ರೈತರ ಹಾಗೂ ವ್ಯಾಪಾರಸ್ಥರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಈ ವಿಚಾರವಾಗಿ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಚರ್ಚೆಮಾಡಿ ಖಾಸಗಿ ಮಾರುಕಟ್ಟೆ ರದ್ದು ಮಾಡುವಂತೆ ತಿಮಾರ್ಣಿಸಲಾಗಿತ್ತು, ಎಂದು ಆಕ್ರೋಶವನ್ನು ವ್ಯಕ್ತ ಪಡಿಸಿದರು. ೨೦ ದಿನಗಳು ಕಳೆದರು ಯಾವುದೇ ಮಾಹಿತಿಯು ಇಲ್ಲದಿರುವುದರಿಂದ ರೈತ ಸಮೂಹವು ಜಿಲ್ಲಾಡಳಿತದ ವಿರುದ್ದ ಹಾಗೂ ಸ್ಥಳೀಯ ರಾಜ್ಯಕೀಯ ಮುಖಂಡರುಗಳ ವಿರುದ್ದ ಆಕ್ರೋಶ್ ವನ್ನು ಹೊರ ಹಾಕುತ್ತಿದ್ದಾರೆ. ಇವನ್ನೆಲ್ಲಾ ಅರಿತು ಕೂಡಲೇ ರಾಜ್ಯಮಟ್ಟದ ಅಧಿಕಾತಿಗಳು ಹಾಗೂ ಜಿಲ್ಲಾಡಳಿತ ಖಾಸಗಿ ತರಕಾರಿ ಮಾರುಕಟ್ಟೆಯನ್ನು ರದ್ದು ಗೊಳಿಸಬೇಕೆಂದು ಆಗ್ರಹಿಸಿದರು. ಈ ಸಂಧರ್ಭದಲ್ಲಿ ಭಾರತೀಯ ಕೃಷಿ ಸಮಾಜ ಸಂಘಟನೆಯ ರಾಜ್ಯಾಧ್ಯಕ್ಷ ಸಿದ್ದಗೌಡ ಮೋದಗಿ, ಅಧ್ಯಕ್ಷ ಎಸ್ ಆರ್ ಹಿರೇಮಠ, ರವಿಕಿರಣ್, ಬಿ ಯಶವಂತ, ಮತ್ತಿತರರು ರೈತ ಸೇನೆ ಮುಖಂಡ ಪಾಲ್ಗೊಂಡಿದ್ದರು.

Enjoyed this article? Stay informed by joining our newsletter!

Comments

You must be logged in to post a comment.

About Author

ನ್ಯೂಸ್