ದೈನಂದಿನ ಜೀವನದಲ್ಲಿ ಸಂಭವಿಸುವ ಅಗ್ನಿಆಕಸ್ಮಿಕದ ಸಮಯದಲ್ಲಿ ಅದನ್ನು ಹೇಗೆ ಎದುರಿಸುವುದು ?

ಎತ್ತರದ ಕಟ್ಟಡಕ್ಕೆ ಬೆಂಕಿ ತಗಲಿದರೆ

೧. ಗೊಂದಲಕ್ಕೆ ಒಳಗಾಗದೇ ಮೆಟ್ಟಿಲುಗಳ ಒಂದೇ ಬದಿಯನ್ನು ಉಪಯೋಗಿಸಿ ಶಿಸ್ತಿನಿಂದ ಕೆಳಗಿಳಿಯಿರಿ.

೨. ಬೆಂಕಿಯಿಂದಾಗಿ ಕೆಳಗೆ ಬರಲು ಸಾಧ್ಯವಾಗದಿದ್ದರೆ ಎಲ್ಲರೂ ಒಟ್ಟಿಗೆ ಸೇರಿರಿ, ಇದರಿಂದ ಅಗ್ನಿಶಾಮಕ ದಳಕ್ಕೆ ನಿಮ್ಮನ್ನು ಬಿಡುಗಡೆಗೊಳಿಸಲು ಸುಲಭವಾಗುವುದು.

೩. ರೋಗಿಗಳು, ವೃದ್ಧರು ಮತ್ತುಸ್ತ್ರೀಯರನ್ನು ಮೊದಲು ಬಿಡುಗಡೆಗೊಳಿಸಿ, ಹಾಗೆಯೇ ಅಕ್ಕಪಕ್ಕದವರಿಗೆ ಸಹಾಯ ಮಾಡಿರಿ.

೪. ಹೆದರಿ ಎತ್ತರದಿಂದ ಕೆಳಗೆ ಜಿಗಿಯಬೇಡಿ.

೫. ಲಿಫ್ಟನ್ನು ಸುತಾರಾಂ ಉಪಯೋಗಿಸಬೇಡಿ ಮತ್ತು ಇತರರಿಗೂ ಉಪಯೋಗಿಸಲು ಬಿಡಬೇಡಿ. ಸಾಧ್ಯವಿದ್ದರೆ ಲಿಫ್ಟನ್ನು ಕೆಳಗಿನ ಮಹಡಿಗೆ ತಂದು ಅದರ ವಿದ್ಯುತ್‌ಪೂರೈಕೆಯನ್ನು ನಿಲ್ಲಿಸಿರಿ.

೬. ಬೆಂಕಿ ತಗಲಿದ ಮಹಡಿಗಳ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿರಿ.


ಅಡುಗೆಕೋಣೆಯ ಬೆಂಕಿಯನ್ನು ತಡೆಯಲು ಪ್ರತಿಬಂಧಕಾತ್ಮಕ ಉಪಾಯಗಳು

೧. ಅಡುಗೆ ಕೋಣೆಯ ಮಂಡಣೆಯನ್ನು ಸುರಕ್ಷತೆಯ ದೃಷ್ಟಿಯಿಂದ ಯೋಗ್ಯ ರೀತಿಯಲ್ಲಿ ಮಾಡಬೇಕು.

೨. ಅಡುಗೆ ಮಾಡುವಾಗ ಬಟ್ಟೆಗಳನ್ನು ಸಡಿಲ ಮತ್ತು ಅವ್ಯವಸ್ಥಿತವಾಗಿ ಧರಿಸಬೇಡಿ, ಸೀರೆಯ ಸೆರಗನ್ನು ಸರಿಯಾಗಿ ಎಳೆದು ಸಿಕ್ಕಿಸಿಕೊಳ್ಳಿರಿ.

೩. ಸ್ಟವ್‌ನ ಮೇಲಿನಿಂದ ಬಿಸಿ ಮಾಡಿದ ಪಾತ್ರೆಗಳನ್ನು ಇಳಿಸುವಾಗ ಯಾವಾಗಲೂ ಇಕ್ಕಳವನ್ನು ಉಪಯೋಗಿಸಿರಿ. ಇದಕ್ಕಾಗಿ ಟವೆಲ್, ಬಟ್ಟೆಯ ತುಂಡು ಅಥವಾ ಸೀರೆಯ ಸೆರಗನ್ನು ಉಪಯೋಗಿಸುವುದು ಅತ್ಯಂತ ಅಪಾಯಕಾರಿಯಾಗಿದೆ.

೪. ಅಡುಗೆ ಅನಿಲದ ಒಲೆ (ಗ್ಯಾಸ್), ಸ್ಟವ್ ಅಥವಾ ಓವೆನ್ ಕಾರ್ಯನಿರತವಿರುವಾಗ ಮನೆ ಬಿಟ್ಟು ಹೊರಗೆ ಹೋಗಬೇಡಿ.

೫. ಮನೆಯಲ್ಲಿ ಯಾರೂ ಇಲ್ಲದಾಗ ಅಥವಾ ಮಲಗುವಾಗ ಮೇಣದ ಬತ್ತಿ ಮತ್ತು ಎಣ್ಣೆಯ ದೀಪಗಳನ್ನು ಆರಿಸಿರಿ.

೬. ಅಡುಗೆ ಅನಿಲದ ಒಲೆ/ಸ್ಟವ್‌ನ್ನು ಯಾವಾಗಲೂಎತ್ತರದಲ್ಲಿಡಿ. ಎಂದಿಗೂ ನೆಲದ ಮೇಲಿಡಬೇಡಿ.

೭. ಒಲೆಯ ಮೇಲೆ ಹಿಡಿಕೆಯಿರುವ ಪಾತ್ರೆಗಳನ್ನಿಡುವಾಗ ಹಿಡಿಕೆಯು ಒಳಭಾಗಕ್ಕೆ ಬರುವಂತೆ ಇಡಿ.

೮. ಮರದ ಕಪಾಟು, ಹಲಗೆ, ಪರದೆ, ಬಟ್ಟೆ ಮುಂತಾದ ದಹನಶೀಲ ವಸ್ತುಗಳನ್ನು ಒಲೆ/ಸ್ಟವ್‌ನಿಂದ ದೂರವಿಡಿ.

೯. ಚಿಕ್ಕ ಮಕ್ಕಳಿಗೆ ಅಡುಗೆ ಕೋಣೆಯಲ್ಲಿ ಆಡಲು ಬಿಡಬೇಡಿರಿ.

೧೦. ಮೈಕ್ರೋವೇವ್ ಓವೆನ್ ಉಪಯೋಗಿಸುವಾಗ ಕಾಳಜಿ ವಹಿಸಿ. ಅದು ಹೊರಗಿನಿಂದ ತಣ್ಣಗಿದ್ದರೂ ಒಳಗಿನ ಪದಾರ್ಥಗಳ ತಾಪಮಾನವು ಬಹಳ ಹೆಚ್ಚಿರಬಹುದು. ಓವೆನ್‌ನಲ್ಲಿನ ಪದಾರ್ಥಕ್ಕೆ ಬೆಂಕಿ ಹತ್ತಿಕೊಂಡರೆ ವಿದ್ಯುತ್ ಪೂರೈಕೆಯನ್ನು ಕೂಡಲೇ ನಿಲ್ಲಿಸಿ ಮತ್ತು ಬೆಂಕಿ ಆರುವವರೆಗೆ ಓವನ್‌ನ ಬಾಗಿಲನ್ನು ತೆರೆಯಬೇಡಿ.

೧೧. ಬೆಂಕಿಪೆಟ್ಟಿಗೆಯಿಂದ ಬೆಂಕಿಯನ್ನು ಉರಿಸುವಾಗ ಅದನ್ನು ಶರೀರದಿಂದ ದೂರ ಹಿಡಿಯಿರಿ. ಸುಡುವ ಕಡ್ಡಿಯನ್ನು ಎಸೆಯುವ ಮೊದಲು ಅದು ಸಂಪೂರ್ಣವಾಗಿ ಆರಿರುವುದನ್ನು ಖಚಿತಪಡಿಸಿಕೊಳ್ಳಿರಿ.

೧೨. ಸ್ವಚ್ಛತೆಯು ಬೆಂಕಿಯನ್ನು ತಪ್ಪಿಸುವ ಪರಿಹಾರೋಪಾಯದ ಅಡಿಪಾಯವಾಗಿದೆ.

ಸ್ಟವ್ ಉರಿದೆದ್ದರೆ ಅಥವಾ ಬಾಣಲೆಯ ಎಣ್ಣೆಗೆ ಬೆಂಕಿ ತಾಗಿದರೆ ಏನು ಮಾಡಬೇಕು

೧. ದ್ರವರೂಪ ಅನಿಲ, ಸ್ಟವ್ ಅಥವಾ ಒಲೆಯನ್ನು ಆರಿಸಿ ಬಾಣಲೆಗೆ ಕೆಳಗಿನಿಂದ ಸಿಗುವ ಉಷ್ಣತೆಯನ್ನು ನಿಲ್ಲಿಸಿರಿ.

೨. ಬಾಣಲೆಗೆ ಹಿಡಿಯಲು ಕಿವಿಗಳಿಲ್ಲದಿದ್ದರೆ ಬಾಣಲೆಯನ್ನು ಪರಾತದಿಂದ (ದೊಡ್ಡ ಅಗಲವಾದ ತಟ್ಟೆ) ಅಥವಾ ತಟ್ಟೆಯಿಂದ ಮುಚ್ಚಿ.

೩. ಅಥವಾ ಅಸ್‌ಬೆಸ್ಟಾಸ್ ಬಟ್ಟೆಯಿಂದ ಬಾಣಲೆಯನ್ನು ಸಂಪೂರ್ಣ ಮುಚ್ಚಿರಿ. ಅಸ್‌ಬೆಸ್ಟಾಸ್ ಬಟ್ಟೆಯಿಲ್ಲದಿದ್ದರೆ ತಾಡಪತ್ರ (ಟರ್ಪಾಲಿನ್) ಅಥವಾ ದಪ್ಪ ಜಮಖಾನೆ ಅಥವಾ ತೂತಿರದ ಕಂಬಳಿಯನ್ನು ಉಪಯೋಗಿಸಿರಿ. ಆಮ್ಲಜನಕದ ಅಭಾವದಿಂದ ಬೆಂಕಿ ಆರಿಹೋಗುತ್ತದೆ.

೪. ಸ್ಟವ್ ಉರಿದೆದ್ದರೆ ಸ್ಟವ್‌ನ ಟ್ಯಾಂಕಿಯಲ್ಲಿನ ಗಾಳಿಯನ್ನು ಹೊರಗೆ ಬಿಡಿ. ಇದರಿಂದ ಇಂಧನ ಪೂರೈಕೆ ನಿಂತುಹೋಗಿ ಹೊರಗೆ ಬಿದ್ದಿರುವ ಸೀಮೆಎಣ್ಣೆ (ಕೆರೊಸಿನ್) ಮುಗಿದ ನಂತರ ಬೆಂಕಿ ಆರಿಹೋಗುತ್ತದೆ. ಯಾವುದೇ ಕಾರಣಕ್ಕೂ ಸ್ಟವ್‌ನ ಮೇಲೆ ನೀರು ಹಾಕಬೇಡಿ. ಸ್ಟವ್‌ನ ಜ್ವಾಲೆಗಳಿಂದ ಸುತ್ತಮುತ್ತಲಿನ ಕಟ್ಟಿಗೆ, ಕಾಗದ, ಬಟ್ಟೆಗಳಂತಹ ವಸ್ತುಗಳು ಉರಿದುಕೊಂಡರೆ ಅವುಗಳಿಗೆ ತಗಲಿದ ಬೆಂಕಿಯನ್ನು ನೀರಿನಿಂದ ಆರಿಸಬಹುದು; ಆದರೆ ನೀರು ಹಾಕುವಾಗ ಅದು ಉರಿಯುವ ಸ್ಟವ್ ಮೇಲೆ ಬೀಳದಂತೆ ಎಚ್ಚರ ವಹಿಸಬೇಕು.
 
(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ನಿರ್ಮಿಸಿದ ಗ್ರಂಥ 'ಅಗ್ನಿಶಮನ ತರಬೇತಿ’)
ಜಾಲತಾಣ : sanatanshop.com/
                                                                                   ಸಂಗ್ರಹ - ಶ್ರೀ. ವಿನೋದ ಕಾಮತ
ವಕ್ತಾರರು, ಸನಾತನ ಸಂಸ್ಥೆ
ಸಂಪರ್ಕ : 93425 99299

Enjoyed this article? Stay informed by joining our newsletter!

Comments

You must be logged in to post a comment.

About Author