'ಫ್ಲೈಯಿಂಗ್ ಸಿಖ್' ಖ್ಯಾತಿಯ ದಿಗ್ಗಜ, ಪದ್ಮಶ್ರೀ ಪುರಸ್ಕೃತ ಅಥ್ಲೀಟ್ ಮಿಲ್ಖಾ ಸಿಂಗ್ ಇನ್ನಿಲ್ಲ; 46.6 ಸೆಕೆಂಡ್‌ಗಳಲ್ಲಿ ಗುರಿಮುಟ್ಟಿದ್ದ ಮಿಲ್ಖಾ

'ಫ್ಲೈಯಿಂಗ್ ಸಿಖ್' ಖ್ಯಾತಿಯ ದಿಗ್ಗಜ, ಪದ್ಮಶ್ರೀ ಪುರಸ್ಕೃತ ಅಥ್ಲೀಟ್ ಮಿಲ್ಖಾ ಸಿಂಗ್ ಇನ್ನಿಲ್ಲ; 46.6 ಸೆಕೆಂಡ್‌ಗಳಲ್ಲಿ ಗುರಿಮುಟ್ಟಿದ್ದ ಮಿಲ್ಖಾ

Milka singh  is also know as flying sikh

Featured Image credits : DNA India

ಫ್ಲೈಯಿಂಗ್ ಸಿಖ್ ಎಂದೇ ಖ್ಯಾತರಾಗಿದ್ದ ಅಥ್ಲೀಟ್ ಪಟು ಮಿಲ್ಖಾ ಸಿಂಗ್ ನಿನ್ನೆ ಮಧ್ಯರಾತ್ರಿ ನಿಧನರಾಗಿದ್ದಾರೆ. ಕೋವಿಡ್‌ ಸೋಂಕಿನಿಂದ ಅಸ್ವಸ್ಥರಾಗಿದ್ದ ಮಿಲ್ಖಾ ಸಿಂಗ್ ಅವರನ್ನು ಮೊಹಾಲಿಯ ಖಾಸಗಿ ಆಸ್ಪತ್ರೆಗೆ ಮೇ.24ರಂದು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮಿಲ್ಖಾ ಅವರ ಮಗ ಜೀವ್ ಮಿಲ್ಖಾ ಸಿಂಗ್ ತಮ್ಮ ತಂದೆಯ ನಿಧನದ ಸುದ್ದಿಯನ್ನು ದೃಢಪಡಿಸಿದ್ದಾರೆ. ಮಿಲ್ಖಾ ಸಿಂಗ್ ಪತ್ನಿ ನಿರ್ಮಲ್ ಕೌರ್ ಐದು ದಿನಗಳ ಹಿಂದಷ್ಟೇ ಮೃತಪಟ್ಟಿದ್ದರು.

 

ಮಿಲ್ಖಾ ಅವರ ಕೋವಿಡ್-19 ಟೆಸ್ಟ್ ವರದಿ ಈ ವಾರದ ಆರಂಭದಲ್ಲಿ ನೆಗೆಟಿವ್ ಬಂದಿತ್ತು. ಅನಂತರ ಅವರನ್ನು ಚಂಡೀಗಡದ ವೈದ್ಯಕೀಯ ಮಹಾವಿದ್ಯಾಲಯದ ಕೋವಿಡ್ ಐಸಿಯು ವಾರ್ಡ್‌ನಿಂದ ಸಾಮಾನ್ಯ ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಆದರೆ ದಿನದಿಂದ ದಿನಕ್ಕೆ ಅವರ ಆರೋಗ್ಯ ಪರಿಸ್ಥಿತಿ ಬಿಗಡಾಯಿಸುತ್ತಲೇ ಹೋಗಿದ್ದು, ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.

 

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದ ಮಿಲ್ಖಾ ಸಿಂಗ್‍

How milka singh became a home atheletics to India

Image Credits : Sports Keeda

ಮಿಲ್ಖಾ ಸಿಂಗ್‌ ನ.20, 1928ರಲ್ಲಿ ಈಗಿನ ಪಾಕಿಸ್ತಾನದ ಗೋಬಿಂದ್‌ಪುರದಲ್ಲಿ ಜನಿಸಿದ್ದರು. ದೇಶ ಇಬ್ಭಾಗವಾದ ಸಮಯದಲ್ಲಿ ಮಿಲ್ಖಾ, ಭಾರತಕ್ಕೆ ಬಂದು ನೆಲೆಸಿದ್ದರು. ಕಾಮನ್‌ವೆಲ್ತ್‌ ಗೇಮ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನ್ನುವ ದಾಖಲೆಯನ್ನು 1958ರ ಕಾರ್ಡಿಫ್‌ ಗೇಮ್ಸ್‌ನಲ್ಲಿ ಮಿಲ್ಖಾ ಬರೆದಿದ್ದರು. ಒಬ್ಬ ಅಥ್ಲೀಟ್‌ ಆಗಿ ಮಿಲ್ಖಾ ಸಿಂಗ್‌ರ ಪಾಲಿಗೆ 1958ರಿಂದ 1960ರ ತನಕದ ಅವಧಿಯು ಸ್ವರ್ಣಯುಗ ಎನ್ನಬಹುದು. 1958ರಲ್ಲಿ ಟೋಕಿಯೋದಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ ಮಿಲ್ಖಾ ಸಿಂಗ್‌, 200 ಮೀಟರ್‌ ಮತ್ತು 400 ಮೀಟರ್‌ ಓಟ ಸ್ಪರ್ಧೆ ಗಳಲ್ಲಿ ಕ್ರಮವಾಗಿ 21.6 ಸೆಕೆಂಡ್‌ಗಳು ಹಾಗೂ 47 ಸೆಕೆಂಡ್‌ಗಳಲ್ಲಿ ಓಡಿ, ಸ್ವರ್ಣ ಪದಕ ಗಳಿಸಿದರು

 

46.6 ಸೆಕೆಂಡ್‌ಗಳಲ್ಲಿ ಗುರಿಮುಟ್ಟಿದ್ದ ಮಿಲ್ಖಾ

milka singh record

Image Credits : DNA India

1958ರಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಅಥ್ಲೀಟ್ ಎನಿಸಿದರು. ಅವರ ದಾಖಲೆ 50 ವರ್ಷಕ್ಕೂ ಹೆಚ್ಚು ಕಾಲ ಉಳಿಯಿತು, 2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕೃಷ್ಣ ಪೂಂಜಾ ಡಿಸ್ಕಸ್‌ ಥ್ರೋಗಾಗಿ ಚಿನ್ನದ ಪಡೆಯುವ ವರೆಗೂ ಮಿಲ್ಖಾ ಏಕಮಾತ್ರ ಸ್ವರ್ಣ ಪದಕ ವಿಜೇತ ಎನಿಸಿದ್ದರು. 46.6 ಸೆಕೆಂಡ್‌ಗಳಲ್ಲಿ ಗುರಿಮುಟ್ಟಿದ್ದ ಮಿಲ್ಖಾ ದಕ್ಷಿಣ ಆಫ್ರಿಕಾದ ಖ್ಯಾತ ಓಟಗಾರ ಮಾಲ್ಕೊಮ್ ಸ್ಪೆನ್ಸ್‌ ಅವರನ್ನು ಸೋಲಿಸಿದ್ದರು.

 

ಹತ್ತಾರು ದಾಖಲೆಗಳ ವೀರ ಮಿಲ್ಖಾ ಸಿಂಗ್

Milka Singh won the first Gold Medal to India in Common Wealth games

Image Credits : Inext Live

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಿಲ್ಖಾ ಸಿಂಗ್‌ ಅಥ್ಲೆಟಿಕ್ಸ್‌ನ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನೂ ಪಡೆದರು. ಏಷ್ಯನ್‌ ಹಾಗೂ ಕಾಮನ್‌ವೆಲ್ತ್‌ ಗೇಮ್ಸ್‌ನ 400 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಏಕೈಕ ಅಥ್ಲೀಟ್‌ ಎನ್ನುವ ಹಿರಿಮೆ ಮಿಲ್ಖಾರದ್ದು. 1958, 1962 ಏಷ್ಯನ್‌ ಗೇಮ್ಸ್‌ಗಳಲ್ಲೂ ಮಿಲ್ಖಾ ಚಿನ್ನದ ಪದಕಗಳನ್ನು ಗೆದ್ದಿದ್ದರು.

 

ಫ್ಲೈಯಿಂಗ್ ಸಿಖ್ ಎಂದೇ ಖ್ಯಾತಿ ಪಡೆದಿದ್ದರು

Flying Sikh of india is milka singh

Image Credits : Roma 1960

1958ರಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ 200 ಮೀಟರ್ ಮತ್ತು 400 ಮೀಟರ್ ವಿಭಾಗದಲ್ಲಿ ಮಿಲ್ಖಾ ಸಿಂಗ್ ಚಿನ್ನದ ಪದಕ ಗೆದ್ದಿದ್ದರು. 1962ರ ಏಷ್ಯನ್ ಗೇಮ್ಸ್‌ನಲ್ಲಿ 400 ಮೀಟರ್ ಮತ್ತು 4ಘಿ400 ರಿಲೇ ವಿಭಾಗದಲ್ಲಿಯೂ ಇಂಥದ್ದೇ ಸಾಧನೆಯನ್ನು ಮೆರೆದಿದ್ದರು. 1960ರ ರೋಮ್ ಒಲಿಂಪಿಕ್ಸ್‌ನಲ್ಲಿ 400 ಮೀಟರ್‌ ಅಂತರವನ್ನು 45.6 ಸೆಕೆಂಡ್‌ಗಳಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದರು. ಮಿಲ್ಖಾ ಸಿಂಗ್‌ರ ಈ ರಾಷ್ಟ್ರೀಯ ದಾಖಲೆಯನ್ನು 1998ರ ಒಲಿಂಪಿಕ್ಸ್‌ನಲ್ಲಿ ಪರಮ್‌ಜೀತ್ ಸಿಂಗ್‌ ಮುರಿದರು.  ಟ್ರ್ಯಾಕ್ ಮತ್ತು ಫೀಲ್ಡ್ ನಲ್ಲಿ ಅನೇಕ ದಾಖಲೆಗಳನ್ನು ಮಾಡಿದ ಈ ಅನುಭವಿ ಓಟಗಾರ ಫ್ಲೈಯಿಂಗ್ ಸಿಖ್ ಅಂತಲೆ ಖ್ಯಾತರಾಗಿದ್ದರು. ಓಟದ ಸ್ಪರ್ಧೆಯಲ್ಲಿ ಅಂದಿನ ಪ್ರಬಲ ಕ್ರೀಡಾಪಟು ಅಬ್ದುಲ್ ಖಲೀಕ್ ಅವರನ್ನು ಸೋಲಿಸಿದ ನಂತರ 1960 ರಲ್ಲಿ ಪಾಕಿಸ್ತಾನದ ಸರ್ವಾಧಿಕಾರಿ ಆಡಳಿತಗಾರ ಜನರಲ್ ಅಯೂಬ್ ಖಾನ್ ಅವರಿಗೆ ಈ ಹೆಸರನ್ನು ನೀಡಿದ್ದರು.

 

1958ರ ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್, ನಾಲ್ಕು ಬಾರಿ ಏಷ್ಯನ್ ಗೇಮ್ಸ್‌ ಚಾಂಪಿಯನ್ ಆಗಿದ್ದ ಮಿಲ್ಖಾ ಸಿಂಗ್,  1960ರ ರೋಮ್‌ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆದರೆ 1/100 ಸೆಕೆಂಡ್‌ಗಳ ಅಂತರದಲ್ಲಿ ಕಂಚಿನ ಪದಕ ವಂಚಿತರಾಗಿ 4ನೇ ಸ್ಥಾನ ಪಡೆದಿದ್ದರು.

 

ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಗೌರವ

milka singh got award from indian govt

Image Credits : The Bridge

ನಿವೃತ್ತಿಯ ನಂತರ ಮಿಲ್ಖಾ ಸಿಂಗ್‌ ಪಂಜಾಬ್‌ ರಾಜ್ಯದಲ್ಲಿ ಕ್ರೀಡಾ ಇಲಾಖೆಯ ನಿರ್ದೇಶಕರ ಹುದ್ದೆ ನಿರ್ವಹಿಸುತ್ತಿದ್ದರು.  ಮಿಲ್ಖಾ, ಭಾರತ ವಾಲಿಬಾಲ್‌ ತಂಡದ ಮಾಜಿ ನಾಯಕಿ ನಿರ್ಮಲ್‌ ಕೌರ್‌ರನ್ನು ವಿವಾಹವಾಗಿದ್ದರು. ದಂಪತಿಗೆ ಮೂರು ಹೆಣ್ಣು ಸೇರಿ ನಾಲ್ಕು ಜನ ಮಕ್ಕಳಿದ್ದಾರೆ. ಮಿಲ್ಖಾ ಹಾಗೂ ನಿರ್ಮಲ್‌ರ ಪುತ್ರ ಜೀವ್‌, 14 ಅಂತಾರಾಷ್ಟ್ರೀಯ ಗಾಲ್ಫ್ ಟೂರ್ನಿಗಳಲ್ಲಿ ಗೆಲುವು ಸಾಧಿಸಿದ್ದಾರೆ.  ಭಾರತ ಸರ್ಕಾರ ಮಿಲ್ಖಾ ಸಿಂಗ್ ಅವರಿಗೆ 1959ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. 2019ರಲ್ಲಿ ಮಿಲ್ಖಾಸಿಂಗ್ ತಮ್ಮ 90ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಬಾಲಿವುಡ್‌ನಲ್ಲಿ ಮಿಲ್ಖಾ ಸಿಂಗ್ ಜೀವನ ಆಧರಿಸಿದ ಬಯೋಪಿಕ್ ಭಾಗ್ ಮಿಲ್ಕಾ ಭಾಗ್ 2013ರಲ್ಲಿ ತೆರೆಕಂಡಿದ್ದು, ಬ್ಲಾಕ್‌ಬಸ್ಟರ್‌ ಹಿಟ್‌ ಆಯಿತು.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author