ತಮಿಳುನಾಡಿನಲ್ಲಿದೆ ಶಿವನ ಅದ್ಭುತ ದೇಗುಲ, ಗಂಗೈಕೊಂಡ ಚೋಳಪುರಂ ದೇವಾಲಯ

ತಮಿಳುನಾಡಿನಲ್ಲಿದೆ ಶಿವನ ಅದ್ಭುತ ದೇಗುಲ, ಗಂಗೈಕೊಂಡ ಚೋಳಪುರಂ ದೇವಾಲಯ

Gangaikonda cholapuram temple

Featured Image Credits : DTnext.in

ಭಾರತ ದೇಶದ ಹಲವು ರಾಜ್ಯಗಳಲ್ಲಿ ಪುರಾತನವಾದ ಅದೆಷ್ಟೋ ದೇವಾಲಯಗಳಿವೆ. ಸಾಂಪ್ರದಾಯಿಕವಾಗಿ , ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಪ್ರಸಿದ್ಧಿ ಪಡೆದುಕೊಂಡಿವೆ. ರಾಜರ ಕಾಲದ ಹಲವು ದೇವಸ್ಥಾನಗಳು ಇಂದಿಗೂ ಶತ ಶತಮಾನದ ಪರಂಪರೆಯನ್ನು ನೆನಪಿಸುತ್ತಾ ಭವ್ಯವಾಗಿ ತಲೆಯೆತ್ತಿ ನಿಂತಿವೆ. ಅಂದಿನ ಕಲೆ, ಕೆತ್ತನೆ, ಕುಸುರಿಯನ್ನು ಭವ್ಯವಾಗಿ ನಿರೂಪಿಸುತ್ತಿವೆ. ಅದರಲ್ಲೂ ತಮಿಳುನಾಡು ದೇವಾಲಯಗಳ ತವರೂರೆಂದೇ ಹೇಳಬಹುದು. ಭಾರತೀಯ ಸಂಸ್ಕೃತಿಯ ಪ್ರತೀಕವಾದ ಅದೆಷ್ಟೋ ಪ್ರಾಚೀನ ದೇವಾಲಯಗಳು ಇಲ್ಲಿವೆ. ವಾಸ್ತುಶಿಲ್ಪ, ಶಿಲ್ಪಕಲೆ, ಅದ್ಭುತ ರಚನೆಯಿಂದಲೇ ಎಲ್ಲೆಡೆ ಹೆಸರುವಾಸಿಯಾಗಿವೆ.

ದಕ್ಷಿಣ ಭಾರತವನ್ನು ಅತಿ ದೀರ್ಘ ಕಾಲದವರೆಗೆ ಆಳಿದ ಸಾಮ್ರಾಜ್ಯದಲ್ಲಿ ಒಂದಾಗಿದೆ, ಚೋಳ ಸಾಮ್ರಾಜ್ಯ. ಇವರು ಸುಮಾರು 250 ವರ್ಷಗಳ ಕಾಲ ರಾಜ್ಯಭಾರ ಮಾಡಿದವರು. ಚೋಳ ಅರಸರ ಆಳ್ವಿಕೆಯಲ್ಲಿ ನಿರ್ಮಾಣವಾದ ಹಲವು ದೇವಾಲಯಗಳು ತಮಿಳುನಾಡಿನಲ್ಲಿವೆ. ಚೋಳ ಅರಸರ ಕಾಲದಲ್ಲಿ ನಿರ್ಮಾಣಗೊಂಡ ತಂಜಾವೂರಿನ ಬೃಹದೀಶ್ವರ ದೇವಾಲಯ, ಚೋಳಪುರಂ‍ನ ಗಂಗೈಕೊಂಡ ಚೋಳೀಶ್ವರ ದೇವಾಲಯ ಮತ್ತು ದಾರಾಸುರಂನ ಐರಾವತೇಶ್ವರ ದೇವಾಲಯಗಳು ಒಟ್ಟಾಗಿ ಮಹಾ ಚೋಳ ದೇವಾಲಯಗಳೆನಿಸಿವೆ.

ತುಂಗಭದ್ರಾ ನದಿಯ ಕೆಳಗಿನಿಂದ ಹಿಡಿದು ಸಂಪೂರ್ಣ ಕೇರಳ, ತಮಿಳುನಾಡು, ಶ್ರೀಲಂಕಾ, ಅಂಡಮನ್, ಕಾಂಬೋಡಿಯಾ, ಮಲೇಶಿಯಾ ಹೀಗೆ ಬಹು ದೊಡ್ಡ ಸಾಮ್ರಾಜ್ಯವನ್ನು ಆಳಿದವರು ಚೋಳರು. ಹೀಗಾಗಿ ಇವರ ಕಾಲಾವಧಿಯಲ್ಲಿ ಅತ್ಯುದ್ಭುತ ದೇವಾಲಯಗಳ ನಿರ್ಮಾಣವಾದವು. ಚೋಳರು ಮೂಲತಃ ವೀರ ಯೋಧರಾಗಿದ್ದರೂ ಸಹ ಅತ್ಯುನ್ನತ ನಿರ್ಮಾಣಗಳ ನಿರ್ಮಾತೃಗಳು. ಶಿವನನ್ನು ಮುಖ್ಯವಾಗಿ ಆರಾಧಿಸುತ್ತಿದ್ದ ಇವರು ತಮ್ಮ ಗುರುತಿನ ಅಂಗವಾಗಿ ತಮ್ಮದೇ ಆದ ವಿಶಿಷ್ಟ ವಾಸ್ತುಶೈಲಿಯ ಶಿಲ್ಪ ಕಲೆಗಳಿಗಾಗಿ ಪ್ರಖ್ಯಾತರಾದವರು. ಇಂದಿಗೂ ಕರ್ನಾಟಕ, ಕೇರಳ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲೂ ಚೋಳರ ಕಾಲದಲ್ಲಿ ನಿರ್ಮಾಣವಾದ ದೇವಾಲಯ, ದೇಗುಲಗಳನ್ನು ಕಾಣಬಹುದು.

ಇದನ್ನು ಓದಿ : ಸಂಗೀತದ ಸ್ವರಗಳನ್ನು ಹಾಡುವ ಕನ್ಯಾಕುಮಾರಿಯ ತನುಮಲಯನ್ ದೇವಾಲಯ

ಚೋಳರ ರಾಜಧಾನಿ ಗಂಗೈಕೊಂಡ

gangaikonda cholapuram temple timings

Image Credits : The New Minute

ಚೋಳರು ಕಾವೇರಿ ನದಿ ತಟದಲ್ಲಿ ನೆಲೆಸಿದ್ದ ಒಂದು ಫಲವತ್ತಾದ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಚೋಳಪುರಂನ್ನು ಇವರು ತಮ್ಮ ರಾಜಧಾನಿಯನ್ನಾಗಿಸಿಕೊಂಡಿದ್ದರು. ಕರ್ನಾಟಕದ ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯದ ವೈಭವ ಇರುವಂತೆಯೇ ಚೋಳರು ವೈಭದ ಸಾಮ್ರಾಜ್ಯ ನಡೆಸಿದರು ಎಂದು ಹೇಳಲಾಗುತ್ತದೆ. ಆ ತಾಣವೇ ಗಂಗೈಕೊಂಡ ಚೋಳಪುರಂ.

ಗಂಗೈಕೊಂಡ ಚೋಳಪುರಂ ಚೋಳರ ರಾಜಧಾನಿಯಾಗಿತ್ತು. ಸುಮಾರು ಕ್ರಿ.ಪೂ. 1025 ರಿಂದ 250 ವರ್ಷಗಳ ವರೆಗೆ ಚೋಳಪುರಂ ಚೋಳರ ರಾಜಧಾನಿಯಾಗಿ ಪರಿಗಣಿಸ್ಪಟ್ಟಿತ್ತು. 11ನೇ ಶತಮಾನದ ಆರಂಭದಲ್ಲಿ ದಕ್ಷಿಣ ಭಾರತದಲ್ಲಿ ದೊಡ್ಡ ಪ್ರದೇಶವನ್ನು ವಶಪಡಿಸಿಕೊಂಡ ರಾಜರಾಜ ಚೋಳನ ಮಗ ಮತ್ತು ಉತ್ತರಾಧಿಕಾರಿ ರಾಜೇಂದ್ರ ಚೋಳ ಇದನ್ನು ನಿರ್ಮಿಸಿದನು. ಗಂಗೈಕೊಂಡ ಚೋಳಪುರಂ ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ಸ್ಥಳವಾಗಿದೆ. ಈ ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣ 'ಗ್ರೇಟ್ ಲಿವಿಂಗ್ ಚೋಳ ಟೆಂಪಲ್ಸ್' ನ ಭಾಗವಾಗಿದೆ.

 

ಚೋಳರ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿ ಇಲ್ಲಿ ಮಹಾ ಚೋಳ ದೇವಾಲಯಗಳನ್ನು ಕಾಣಬಹುದು. ಇಲ್ಲಿನ ಶಿವ ದೇವಾಲಯವನ್ನು ಕಟ್ಟಲು ಬರೋಬ್ಬರಿ 9 ವರ್ಷಗಳು ಬೇಕಾಯಿತು ಎಂದು ಇತಿಹಾಸದಲ್ಲಿ ಹೇಳಲಾಗಿದೆ..ನಾಲ್ಕು ಅಡಿ ಎತ್ತರದ ದೇವಾಲಯದ ಪೀಠದ ಮೇಲೆ ಶಿವಲಿಂಗವಿದೆ. ದೇವಾಲಯದಲ್ಲಿನ ತಾಮ್ರ ಶಾಸನಗಳು ಚೋಳರ ಕಾಲದ ಇತಿಹಾಸವನ್ನು ಹೇಳುತ್ತವೆ. 984 ವರ್ಷಗಳ ಪುರಾತನ ದೇವಾಲಯವು ತನ್ನ ಸುಂದರ ಕೆತ್ತನೆ ಮತ್ತು ವಾಸ್ತು ಶಿಲ್ಪಗಳಿಂದ ಪ್ರವಾಸಿಗರನ್ನು ಸೆಳೆಯುತ್ತದೆ.

ಇದನ್ನು ಓದಿ :ತಮಿಳುನಾಡಿನಲ್ಲಿದೆ ಮಾನವ ದೇಹದ ಆಕಾರದ ಚಿದಂಬರಂ ನಟರಾಜ ದೇವಾಲಯ

ಗಂಗೈಕೊಂಡ ಚೋಳಪುರಂ ದೇವಾಲಯ

gangaikonda cholapuram temple was built by

Image Credits : Navrang India

ಗಂಗೈಕೊಂಡ ಚೋಳಪುರಂ ಶಿವನ ದೇಗುಲ, ಅದ್ಭುತ ದೇವಾಲಯವಾಗಿದ್ದು, ಎಲ್ಲೆಡೆ ಹೆಸರುವಾಸಿಯಾಗಿದೆ. ಮೂರಂತಸ್ತಿನ ಈ ದೇವಾಲಯವು ತಾಂತ್ರಿಕವಾಗಿ ಹಾಗೂ ಶಿಲ್ಪಕಲೆಯ ದೃಷ್ಟಿಯಿಂದ ಅತ್ಯಂತ ಉತ್ಕೃಷ್ಟವಾಗಿದ್ದು ಅಂತಾರಾಷ್ಟ್ರೀಯ ಮಟ್ಟದ ವಾಸ್ತುಶಿಲ್ಪಗಾರರನ್ನೂ ಸಹ ಆಕರ್ಷಿಸುತ್ತದೆ. ತಂಜಾವೂರಿನ ಬೃಹದೇಶ್ವರ ದೇವಾಲಯ ಗೋಪುರದ ಎತ್ತರಕ್ಕಿಂತ ಕೇವಲ ಮೂರು ಮೀ. ಗಳಷ್ಟು ಮಾತ್ರವೇ ಈ ಗೋಪುರ ಚಿಕ್ಕದಾಗಿದೆ. ತಜ್ಞರು ಹೇಳುವ ಪ್ರಕಾರ, ತಂದೆ ಹಾಗೂ ಮಗನ ಸ್ಥಾನಮಾನವನ್ನು ಸೂಚಿಸುವುದರ ಸಂಕೇತವಾಗಿ ಈ ಗೋಪುರದ ಎತ್ತರವನ್ನು ಏರಿಸಲಾಗಿಲ್ಲ ಎನ್ನಲಾಗುತ್ತದೆ.

ಅಲ್ಲದೆ ತಂಜಾವೂರಿನ ದೇವಾಲಯ ಗಂಡು ಹಾಗೂ ಈ ದೇವಾಲಯ ಹೆಣ್ಣುತನವನ್ನು ಅಭಿವ್ಯಕ್ತಿಪಡಿಸುವಂತೆ ನಿರ್ಮಿಸಲಾಗಿದೆ. ವಿವಿಧ ದೇವ ದೇವತೆಯರ ಅದ್ಭುತ ಶಿಲ್ಪ ಕಲೆಗಳನ್ನು ಬಲು ಸೂಕ್ಷ್ಮವಾಗಿ ಕೆತ್ತಲಾಗಿದ್ದು ಅಂದಿನ ಕುಶಲಕರ್ಮಿಗಳ ಜಾಣ್ಮೆ ಹಾಗೂ ನಿಪುಣತೆಯನ್ನು ಎತ್ತಿ ತೋರಿಸುತ್ತವೆ.

ಗರ್ಭಗುಡಿಯಲ್ಲಿ 13 ಅಡಿಗಳಷ್ಟು ಎತ್ತರದ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದ್ದು, ಇದು ಯಾವುದೇ ಶಿವ ದೇವಾಲಯದಲ್ಲಿ ಕಂಡುಬರುವ ಶಿವಲಿಂಗಕ್ಕಿಂತ ದೊಡ್ಡದೆನ್ನಲಾಗುತ್ತದೆ. ಅಲ್ಲದೆ, ಗರ್ಭಗುಡಿಯಲ್ಲಿ ವಿಶಿಷ್ಟ ಗುಣಶಕ್ತಿಯ ಚಂದ್ರಕಾಂತಾ ಎಂಬ ಶಿಲೆಯನ್ನು ಬಳಸಲಾಗಿದೆ. ಗರ್ಭಗುಡಿಯ ಎದುರಿಗೆ ಸುಮಾರು ಅರ್ಧ ಕಿ.ಮೀ ಗಿಂತಲೂ ದೂರದಲ್ಲಿ ಬೃಹತ್ ನಂದಿಯ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಈ ಪ್ರತಿಮೆಯನ್ನು ಸೂರ್ಯ ರಶ್ಮಿಯು ಪ್ರತಿಫಲಿಸಿ ಶಿವಲಿಂಗದ ಮೇಲೆ ಬಿಳುವ ಹಾಗೆ ವಿನ್ಯಾಸಗೊಳಿಸಲಾಗಿದೆ.

1ನೇ ರಾಜೇಂದ್ರ ಚೋಳ ಉತ್ತರ ಭಾರತದಲ್ಲಿನ ಮಹಾನ್ ವಿಜಯದ ನಂತರ ಈ ದೇವಾಲಯವನ್ನು ಸ್ಥಾಪಿಸಿದ್ದಾರೆ. ಅವರನ್ನು ಮೂಲತಃ ಮಧುರಾಂತಕನ್ ಎಂದು ಕರೆಯಲಾಗುತ್ತಿತ್ತು. ರಾಜೇಂದ್ರ ಚೋಳನು ತನ್ನ ತಂದೆಯೊಂದಿಗೆ ಆಳ್ವಿಕೆ ಮುಂದುವರೆಸಿದನು. ಗಂಗೈ ಕೊಂಡ ಚೋಳಪುರಂ ಅನ್ನು ರಾಜೇಂದ್ರ ಚೋಳರ ತಂದೆ ರಾಜರಾಜ ಚೋಳ ನಿರ್ಮಿಸಿದ ಬೃಹದೀಶ್ವರ ದೇವಸ್ಥಾನದ ಪುನನಿರ್ಮಾಣ ಎನ್ನಲಾಗುತ್ತದೆ. ಈ ದೇವಸ್ಥಾನವು ಭಾರತದ ದಕ್ಷಿಣ ಭಾಗದ ಅತಿ ದೊಡ್ಡ ಶಿವಲಿಂಗವನ್ನು ಹೊಂದಿದೆ.

ಇದನ್ನು ಓದಿ : 12 ಭವ್ಯ ಗೋಪುರಗಳ ಮಧುರೈನ ಮೀನಾಕ್ಷಿ ಅಮ್ಮನವರ ದೇವಸ್ಥಾನ

ದೇವಾಲಯದ ಮುಖ್ಯ ದೇವತೆ ಶಿವ. ರಾಜಮನೆತನದವರಿಗೆ ಖಾಸಗಿ ಪೂಜಾ ಸ್ಥಳವನ್ನು ಒದಗಿಸಲು, ಗರ್ಭಗುಡಿಯು ಎರಡು ಗೋಡೆಗಳಿಂದ ಆವೃತವಾಗಿದೆ. ಗರ್ಭಗುಡಿಯ ಪ್ರವೇಶದ್ವಾರವು ಸರಸ್ವತಿಯ ದೇವತೆಯ ಸುಂದರವಾದ ಚಿತ್ರಣದಿಂದ ಅಲಂಕರಿಸಿದೆ. ಸೂರ್ಯ ಪೂಜೆ ಮತ್ತು ನವಗ್ರಹಗಳ ಉಪಸ್ಥಿತಿಯನ್ನು ಸೂಚಿಸುವ ಸೂರ್ಯ ಪೀಠವು ಚಾಲುಕ್ಯರ ಪ್ರಭಾವವನ್ನು ತಿಳಿಸುತ್ತದೆ.

ಗಂಗೆಯನ್ನು ವಶಪಡಿಸಿಕೊಂಡ ಚೋಳರ ಪಟ್ಟಣ ಎಂಬರ್ಥ ನೀಡುವ ಗಂಗೈಕೊಂಡ ಚೋಳಪುರಂ ಅನ್ನು ಒಂದನೇಯ ರಾಜೇಂದ್ರ ಚೋಳ ಉತ್ತರ ಭಾರತದಲ್ಲಿ ಗಂಗಾ ನದಿ ತಟದ ರಾಜ್ಯವೊಂದನ್ನು ಗೆದ್ದ ತರುವಾಯ ಇದನ್ನು ನಿರ್ಮಿಸಿ ಆ ರೀತಿ ಹೆಸರಿಸಿದನು. ಪಾಲ ಸಾಮ್ರಾಜ್ಯವನ್ನು ಬಗ್ಗು ಬಡಿದ ರಾಜೇಂದ್ರ ಚೋಳನು ತನ್ನ ಗೆಲುವಿನ ನೆನಪಿನ ಗುರುತಾಗಿ ಈ ಅದ್ಭುತ ಸಾಮ್ರಾಜ್ಯವನ್ನು ಸ್ಥಾಪಿಸಿದನು ಎಂದು ಹೇಳಲಾಗುತ್ತದೆ.

ಈ ವಿಜಯದಿಂದ ರಾಜೆಂದ್ರ ಚೋಳನು ಗಂಗೈಕೊಂಡ ಚೋಳನ್ ಎಂಬ ಬಿರುದನ್ನು ಪಡೆದನು ಹಾಗೂ ಅದರಿಂದ ಸಂತಸಗೊಂಡು ಈ ರಾಜ್ಯಕ್ಕೆ ಗಂಗೈಕೊಂಡ ಚೋಳಪುರಂ ಎಂಬ ಹೆಸರನ್ನಿಟ್ಟನು. ಈ ಅದ್ಭುತ ಸಾಮ್ರಾಜ್ಯವಾದ ಗಂಗೈಕೊಂಡ ಚೋಳಪುರಂ ಇಂದು ತಮಿಳುನಾಡಿನ ಅರಿಯಲೂರು ಜಿಲ್ಲೆಯಲ್ಲಿ ಬರುತ್ತದೆ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author