ಯಾರ ಋಣ ತೀರಿಸುವ ಅಗತ್ಯ ನನಗಿಲ್ಲ; ನಮ್ಮ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ದೇನೆ : ಜಿ.ಎಸ್.ಬಸವರಾಜು

ಯಾರ ಋಣ ತೀರಿಸುವ ಅಗತ್ಯ ನನಗಿಲ್ಲ; ನಮ್ಮ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ದೇನೆ ಎಂದು ತುಮಕೂರು ಬಿಜೆಪಿ ಸಂಸದ ಜಿ ಎಸ್ ಬಸವರಾಜು ವಿಧಾನಪರಿಷತ್ ಚುನಾವಣೆಯ ಹಿನ್ನಲೆಯಲ್ಲಿ ಮತ ಚಲಾಯಿಸಲು ಮಹಾನಗರ ಪಾಲಿಕೆ ಪೊಲೀಂಗ್ ಬೂತ್ ಬಳಿ ಬಂದಾಗ ಸುದ್ಧಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯವನ್ನು ಪ್ರಸ್ತಾಪ ಮಾಡಿದರು.

ಈಗ ಚುನಾಯಿತರಾಗಿರುವ ಪ್ರತಿನಿಧಿಗಳು ಮತದಾರರು ಸಾಕಷ್ಟು ವಿದ್ಯಾವಂತರಿದ್ದಾರೆ ಹಾಗಾಗಿ ಮತದಾರರು ಯಾರಿಗೆ ಮತ ಚಲಾವಣೆ ಮಾಡಬೇಕು ಎಂಬ ಅರಿವು ಮತದಾರರಲ್ಲಿ ಇರುವುದರಿಂದ ಇಲ್ಲಿ ಯಾರಿಗೆ ಯಾರ ಋಣ ತೀರಿಸುವ ಅಗತ್ಯವಿಲ್ಲವೆಂದು ತಮ್ಮ ಒಳ ಮರ್ಮವನ್ನು ಬಿಚ್ಚಿಟ್ಟರು.

ಇನ್ನು ಬಿಜೆಪಿ ಪಕ್ಷದ ಅಭ್ಯರ್ಥಿ ಈ ಬಾರಿಯ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತಾರೆ,  ಎಂಬ ವಿಶ್ವಾಸವನ್ನ ಸಂಸದ ಜಿ ಎಸ್ ಬಸವರಾಜು ವ್ಯಕ್ತಪಡಿಸಿದ್ದಾರೆ.

ಇನ್ನು ಮಧುಗಿರಿ ಶಾಸಕ ಕೆ ಎನ್ ರಾಜಣ್ಣ  ಮತ್ತು ನಾನು ಸರಿ ಸುಮಾರು 40ವರ್ಷದ ರಾಜಕಾರಣದಲ್ಲಿ ಸ್ನೇಹಿತರಾಗಿದ್ದೆವೆ ಹಾಗೆಂದ ಮಾತ್ರಕ್ಕೆ ನಾವು ಪಕ್ಷದ ಚಿನ್ಹೆಯ ಅಡಿಯಲ್ಲಿ ನಿಂತಿರುವ ಅಭ್ಯರ್ಥಿ ಬಿಟ್ಟು ಬೇರೆಯವರಿಗೆ ಮತದಾನ ಮಾಡಲು ಸಾಧ್ಯವಾ ಎಂದು ಪ್ರಶ್ನಿಸಿದರು.

ಇನ್ನು ಕಳೆದ ಒಂದು ವಾರದಿಂದ ನಾನು ಅನಾರೋಗ್ಯಕ್ಕೀಡಾಗಿದ್ದು ಪೂರ್ಣ ಪ್ರಮಾಣದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ ಹಾಗಾಗಿ ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಊಹಾಪೋಹಗಳು ಸಹಜ ಅಂತಹ ವುಹಾಪೋಹಗಳಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದರು.

ಇನ್ನು ಕೆಲವರ ಋಣ ನಮ್ಮ ಮೇಲಿದೆ ಎಂದು ಎಲ್ಲಾ ವಿಚಾರದಲ್ಲೂ ಎಲ್ಲರ ಋಣವನ್ನು ತೀರಿಸಲು ಸಾಧ್ಯವಿಲ್ಲ, ಪಕ್ಷದ ಚಿಹ್ನೆ ಹಾಗೂ ಪಕ್ಷದ ಅಭ್ಯರ್ಥಿ ಬಂದಾಗ ಅವರನ್ನು ಬಿಟ್ಟು ಬೇರೆಯವರಿಗೆ ಮತಚಲಾವಣೆ ಮಾಡಿದರೆ ಆತ ಮನುಷ್ಯನಾಗುವುದಿಲ್ಲ.

ಇನ್ನು ಮಾಜಿ ಶಾಸಕ ಕೆ ಎನ್ ರಾಜಣ್ಣ ನಾನು ಹಲವು ವರ್ಷದಿಂದ ಸ್ನೇಹಿತರಾಗಿದ್ದೇವೆ ಅವರು ಕೆಲವು ಬಾರಿ ನಮಗೆ ಸ್ಪಂದಿಸಿದ್ದಾರೆ ನಾವು ಕೂಡ ಕೆಲವು ಕೆಲಸಕಾರ್ಯಗಳಿಗೆ ನಾವು ಕೂಡ ಅವರಿಗೆ ಸ್ಪಂದಿಸಿದ್ದೇನೆ ಹಾಗೆಂದಮಾತ್ರಕ್ಕೆ ಚುನಾವಣೆಯಲ್ಲಿ ಅವರ ಅಭ್ಯರ್ಥಿಗೆ ಮತ ಹಾಕಲು ಸಾಧ್ಯವಾ ಎಂದು ಪ್ರತಿಕ್ರಿಯೆ ನೀಡಿದ್ದಾರೆ ಆದರೆ ಅವರ ಈ ಹೇಳಿಕೆ ಎಲ್ಲರಲ್ಲೂ ಆಶ್ಚರ್ಯ ಉಂಟುಮಾಡಿದೆ.

ಇನ್ನು ನಮ್ಮ ಪಕ್ಷದ ನೂರಾರು ಕಾರ್ಯಕರ್ತರು ಶ್ರೀಯುತ ಲೋಕೇಶ್ ಗೌಡ ರವರ ಗೆಲುವಿಗೆ ಹಗಲಿರುಳು ಶ್ರಮ ವಹಿಸಿ ಕೆಲಸ ಮಾಡಿರುತ್ತಾರೆ, ಅವರುಗಳಿಗೆ ನಾನು ದ್ರೋಹ ಬಗೆಯಲು ಸಾಧ್ಯವಾ? ಎಂದು ಹೇಳಿದರಲ್ಲದೇ, ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ತನಗೆ ಆರೋಗ್ಯ ಸಮಸ್ಯೆಯಿದ್ದರೂ ಸಹ ತೆರೆ-ಮರೆಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿ ಕೊಟ್ಟಿದ್ದೇನೆ, ಅಲ್ಲದೇ ನಮ್ಮ ಕಾರ್ಯಕರ್ತರಿಗೆ ನಮ್ಮ ಅಭ್ಯರ್ಥಿಯ ಗೆಲುವಿಗಾಗಿ ಮಾತ್ರ ಶ್ರಮ ವಹಿಸಲು ಸಕಲ ಮಾರ್ಗದರ್ಶನಗಳನ್ನು ನೀಡಿದ್ದೇನೆ ಎಂದು ಹೇಳುವುದರೊಂದಿಗೆ, ತಾನು ರಾಜಣ್ಣನವರಿಗೆ ಯಾವುದೇ ರೀತಿಯಾದ ಸಹಕಾರ ಮಾಡಿಲ್ಲವೆಂದು ನೇರವಾಗಿ ಹೇಳಿದರು.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author