ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಗ್ರಾಮಸ್ಥರ ವಿರೋಧ.

ತುಮಕೂರು ಸುದ್ದಿ.

ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಗ್ರಾಮಸ್ಥರ ವಿರೋಧ.

 

ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿಗೆ ಕೆಂಚನಹಳ್ಳಿ ಗ್ರಾಮದಲ್ಲಿ ಸಿ.ಎಸ್. ಪುರ ಗ್ರಾಮ ಪಂಚಾಯಿತಿ ವತಿಯಿಂದ ಘನ ತ್ಯಾಜ್ಯ ವಿಲೇವಾರಿ ಘಟಕ ಮಾಡಲು ಮುಂದಾಗಿರುವುದನ್ನು ಖಂಡಿಸಿ ಕೆಂಚನಹಳ್ಳಿ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

 

ತುಮಕೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು

ಕೆಂಚನಹಳ್ಳಿ ಗ್ರಾಮದ ಸ.ನಂ.80.ಮತ್ತು 81 ರಲ್ಲಿ ಸರ್ಕಾರಿ ಜಾಗವಿದ್ದು ಈ ಜಾಗದಲ್ಲಿ ಕಳೆದ 40 ವರ್ಷಗಳಿಂದ ಹಲವು ಕುಟುಂಬದ ವರು ಜಮೀನು ಉಳುಮೆ ಮಾಡಿಕೊಂಡಿದ್ದು ಅನುಭವ ದಾರರು ಜಮೀನು ಮಂಜೂರಾತಿ ಮಾಡುವಂತೆ ಅರ್ಜಿ ಸಲ್ಲಿಸಿದರು ಸಹ ಯಾವುದಕ್ಕೂ ಮನ್ನಣೆ ನೀಡದೆ ಏಕ ಏಕಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಆಡಳಿತ ವರ್ಗ ಉಳುಮೆ ಮಾಡುತ್ತಿರುವ ರೈತ ಕುಟುಂಬಕ್ಕೆ ಯಾವುದೇ ನೋಟಿಸ್ ನೀಡದೆ.ಜಾಗ ತೆರವು ಮಾಡುವಂತೆ ರೈತರಿಗೆ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಕರೆದುಕೊಂಡು ಬಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಅಧಿಕಾರಿಗಳ ನಡೆ ವಿರುದ್ಧ ಬೇಸರ ವ್ಯಕ್ತಪಡಿಸಿದರು.

 

ಈ ಘಟಕವು ಕೆಂಚನಹಳ್ಳಿ ಗ್ರಾಮಕ್ಕೆ 50 ರಿಂದ 60 ಮೀಟರ್ ದೂರವಿದ್ದು ಇಲ್ಲಿ ಘಟಕ ಸ್ಥಾಪನೆ ಮಾಡಿದರೆ ಗ್ರಾಮದಲ್ಲಿ ವಾಸಿಸುತ್ತಿರುವ ಜನತೆಯು ರೋಗ ರುಜಿನಗಳಿಗೆ ತುತ್ತಾಗುವ ಅತಂಕ ಒಂದೆಡೆಯಾದರೆ ಘನ ತ್ಯಾಜ್ಯ ದ ದುರ್ವಾಸನೆಯಿಂದ ಗ್ರಾಮಸ್ಥರು ಸಾಯುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಲು ಹೋರಟಿರುವುದು ಖಂಡನೀಯ 

 

ಗ್ರಾಮ ಪಂಚಾಯಿತಿ ಆಡಳಿತ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಪಂಚಾಯತಿ ವ್ಯಾಪ್ತಿಯಲ್ಲಿ ಸ ನಂ62 ರ ಪೈಕಿ ಬೇರೆಡೆ ಸಾಕಷ್ಟು ಜಾಗವಿದ್ದು ಉದ್ದೇಶ ಪೂರ್ವಕವಾಗಿ ಈ ಜಾಗದಲ್ಲಿ ಘಟಕ ನಿರ್ಮಾಣ ಕ್ಕೆ ಮುಂದಾಗಿರುವುದು ಸರಿಯಲ್ಲ ದಯವಿಟ್ಟು ಸಂಬಂಧ ಪಟ್ಟ ಜಿಲ್ಲಾ ಧಿಕಾರಿಯವರು.ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಕ್ತ ಕ್ರಮವಹಿಸುವ ಮೂಲಕ ರೈತರ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

 

 ಪತ್ರಿಕಾ ಗೋಷ್ಠಿಯಲ್ಲಿ ಲಕ್ಷೀನಾರಯಣ್ .ಸಮಾಜ ಸೇವಕ .ರಂಗೆಗೌಡ ಮರಿಯಣ್ಣ .ವೆಂಕಟೇಶ್ . ಗೋವಿಂದಯ್ಯ .ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author