ಆರೋಗ್ಯಕ್ಕೆ ಖರ್ಜೂರದ ಸೇವನೆಯಿಂದ ಸಿಗುವ ಪ್ರಯೋಜನಗಳೇನು

ಆರೋಗ್ಯಕ್ಕೆ ಖರ್ಜೂರದ ಸೇವನೆಯಿಂದ ಸಿಗುವ ಪ್ರಯೋಜನಗಳೇನು

dates nutrition

Featured Image Credits : Chicago Sun-Times

ಆರೋಗ್ಯದ ಆಹಾರದ ವಿಷಯಕ್ಕೆ ಬಂದಾಗ ಖರ್ಜೂರಕ್ಕೆ ಅದರಲ್ಲಿ ಮುಖ್ಯವಾದ ಸ್ಥಾನವಿದೆ. ಅದು ಹಸಿ ಖರ್ಜೂರವಾದರೂ ಸರಿ, ಒಣ ಖರ್ಜೂರವಾದರೂ ಸರಿ, ಖರ್ಜೂರ ಸೇವನೆ ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗಿದೆ. ವೈದ್ಯರು ದೇಹಕ್ಕೆ ಉತ್ತಮ ಪೋಷಕಾಂಶ, ಖನಿಜಾಂಶಗಳು ದೊರಕಲು ಡ್ರೈಫ್ರೂಟ್ಸ್ ಸೇವನೆ ಉತ್ತಮ ಎಂದು ಹೇಳುತ್ತಾರೆ. ಹೀಗಾಗಿ ಗೋಡಂಬಿ, ದ್ರಾಕ್ಷಿ, ಬಾದಾಮಿ, ಖರ್ಜೂರಗಳನ್ನು ಹೆಚ್ಚಾಗಿ ಸೇವಿಸುವಂತೆ ಸಲಹೆ ನೀಡುತ್ತಾರೆ. ಅದರಲ್ಲೂ ಖರ್ಜೂರದಲ್ಲಿ ಆರೋಗ್ಯಕ್ಕೆ ಬೇಕಾದ ಹಲವು ಉತ್ತಮ ಅಂಶಗಳಿವೆ. ಹಾಗಾದ್ರೆ, ಖರ್ಜೂರದಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.

ತಜ್ಞರ ಪ್ರಕಾರ, ಎಲ್ಲಾ ರೀತಿಯ ಖರ್ಜೂರವು ಮಾನವನ ದೇಹಕ್ಕೆ ಬಹಳ ಪ್ರಯೋಜನಕಾರಿ. ಖರ್ಜೂರದಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿ ಕಂಡುಬರುತ್ತದೆ. ಹೀಗಾಗಿ ರಕ್ತಹೀನತೆಯನ್ನು ಹೋಗಲಾಡಿಸಲು ಇದು ನೆರವಾಗುತ್ತದೆ ಎಂದು ಹೇಳುತ್ತಾರೆ. ರಕ್ತಹೀನತೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ರಾತ್ರಿ ಖರ್ಜೂರವನ್ನು ನೆನೆಸಿಟ್ಟು, ಬೆಳಿಗ್ಗೆ ಹಾಲು ಅಥವಾ ತುಪ್ಪದೊಂದಿಗೆ ತಿನ್ನುವುದು ಪ್ರಯೋಜನಕಾರಿಯಾಗಿದೆ.

ಇದನ್ನು ಓದಿ : ಹಾಲಿನ ಜತೆ ಈ ಆಹಾರಗಳನ್ನು ಸೇವಿಸಲೇಬಾರದು..!

ಇದಲ್ಲದೆ, 3-4 ಖರ್ಜೂರಗಳನ್ನು ಬಿಸಿ ನೀರಿನಲ್ಲಿ ತೊಳೆದು ಹಸುವಿನ ಹಾಲಿನೊಂದಿಗೆ ಕುದಿಸಿ, ಬೆಳಿಗ್ಗೆ ಮತ್ತು ಸಂಜೆ ಕುಡಿಯುವುದರಿಂದ ಕಡಿಮೆ ರಕ್ತದೊತ್ತಡದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಪ್ರತಿದಿನ ಸೇವಿಸುವ ಎರಡು ಖರ್ಜೂರಗಳಿಂದ 20-25mg ನಷ್ಟು ಮೆಗ್ನೀಶಿಯಂ ದೊರಕುವುದರಿಂದ ಅಧಿಕ ರಕ್ತದೊತ್ತಡ ಸಹ ಕಡಿಮೆಯಾಗುತ್ತದೆ.

dates in kannada

Image Credits : tezzbuzz

ಸುಸ್ತು, ಅಸ್ವಸ್ಥತೆಯಿಂದ ಬಳಲುತ್ತಿರುವವರು ಖರ್ಜೂರ ಸೇವಿಸುವುದು ಉತ್ತಮ.ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಖರ್ಜೂ ಸೇವನೆ ಒಳ್ಳೆಯ ಮಾರ್ಗವೆಂದು ಹೇಳುತ್ತಾರೆ. ಒಂದು ಲೋಟ ಹಾಲಿಗೆ ಖರ್ಜೂರದ ಪೇಸ್ಟ್ ಸೇರಿಸಿಕೊಂಡು ಕುಡಿಯುವುದರಿಂದ ಕ್ರಮೇಣ ತೂಕ ಹೆಚ್ಚಾಗುತ್ತದೆ. ಹಸಿವಾಗದೆ ಇರುವ ಸಮಸ್ಯೆಯಿದ್ದರೆ , ಹಸಿವನ್ನು ಹೆಚ್ಚಿಸಲು ಖರ್ಜೂರದ ತಿರುಳನ್ನು ತೆಗೆದು ಹಾಲಿನಲ್ಲಿ ಬೇಯಿಸಬೇಕು. ಇದರ ನಂತರ, ಅದನ್ನು ತಣ್ಣಗಾಗಿಸಿ ಮತ್ತು ಪುಡಿಮಾಡಿ. ಹಾಲಿನಲ್ಲಿ ಹಾಕಿ ಕುಡಿಯುವುದರಿಂದ ಹಸಿವು ಹೆಚ್ಚಾಗುತ್ತದೆ. ಹಾಗೆಯೇ ಜೀರ್ಣಕ್ರಿಯೆ ಕೂಡಾ ಉತ್ತಮಗೊಳ್ಳುತ್ತದೆ. ಮೊಸರಿನಲ್ಲಿರುವಂತೆಯೇ ಖರ್ಜೂರದಲ್ಲಿಯೂ ಹೊಟ್ಟೆಯಲ್ಲಿರುವ ಜೀರ್ಣಾಂಗ ಸ್ನೇಹಿ ಬ್ಯಾಕ್ಟೀರಿಯಾಗಳಿಗೆ ಪೂರಕವಾದ ಪೋಷಕಾಂಶಗಳಿರುವ ಕಾರಣ, ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಆಮಶಂಕೆ ಸಮಸ್ಯೆ ಇಲ್ಲವಾಗುತ್ತವೆ.

ದೇಹದಲ್ಲಿ ಶಕ್ತಿ ತುಂಬಲು ಸಹ ಖರ್ಜೂರ ಸೇವನೆ ಸಹಾಯಕಾರಿಯಾಗಿದೆ. ದಿನಕ್ಕೆ ಎರಡಾದರೂ ಖರ್ಜೂರವನ್ನು ಸೇವಿಸುವುದು ಆರೋಗ್ಯಕ್ಕೆ ಹಿತಕರ. ಮಕ್ಕಳು ಸದೃಢವಾಗಿ ಬೆಳೆಯಲು ಖರ್ಜೂರ ಸೇವನೆ ಉತ್ತಮ. ಹಾಲಿನೊಂದಿಗೆ ಖರ್ಜೂರದ ಪೇಸ್ಟ್ ಅನ್ನು ಮಿಶ್ರಣ ಮಾಡಿ ಮಕ್ಕಳಿಗೆ ಕುಡಿಸಿದರೆ ದಷ್ಟಪುಷ್ಟವಾಗಿ ಬೆಳೆಯಲು ಸಹಾಯವಾಗುತ್ತದೆ.

ಇದನ್ನು ಓದಿ : ಸಿಕ್ಕಾಪಟ್ಟೆ ಟೀ, ಕಾಫಿ ಕುಡಿಯೋ ಅಭ್ಯಾಸ ಇದೆಯಾ..? ಹಾಗಾದರೆ ಬೆಚ್ಚಿಬೀಳಿಸುವ ಈ ವಿಚಾರವನ್ನು ತಿಳಿದುಕೊಳ್ಳಿ..!

ಚಳಿಗಾಲದಲ್ಲಿ ಮತ್ತು ಮಳೆಗಾಲದಲ್ಲಿ ಖರ್ಜೂರವನ್ನು ತಿನ್ನಬೇಕು. ಇದರಿಂದ ದೇಹವು ಬೆಚ್ಚಗಿರುತ್ತದೆ. ಚಳಿಗಾಲದಲ್ಲಿ ಮತ್ತು ಮಳೆಗಾಲದಲ್ಲಿ ಶೀತ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇಂಥಹಾ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಖರ್ಜೂರ ಸೇವಿಸಬೇಕು. ಶೀತವಿದ್ದಾಗ, ಒಂದು ಗ್ಲಾಸ್ ಹಾಲಿನಲ್ಲಿ 5-6 ಖರ್ಜೂರ ಸೇರಿಸಿ, ಐದು ಕರಿಮೆಣಸು, ಒಂದು ಏಲಕ್ಕಿ ಮತ್ತು ಒಂದು ಚಮಚ ತುಪ್ಪ ಸೇರಿಸಿ ಮತ್ತು ಅದನ್ನು ಕುದಿಸಿ. ರಾತ್ರಿಯಲ್ಲಿ ಮಲಗುವ ಮುನ್ನ ಕುಡಿಯುವುದರಿಂದ ಶೀತ ಮತ್ತು ನೆಗಡಿಗೆ ಪರಿಹಾರ ಸಿಗುತ್ತದೆ.

benefits of eating dates

Image Credits : Health Lifestyle Singapore

ಚಳಿಗಾಲದಲ್ಲಿ ಸಂಧಿವಾತದ ನೋವು ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಖರ್ಜೂರದ ಸೇವನೆ ಈ ನೋವಿನಿಂದ ಪರಿಹಾರವನ್ನು ನೀಡುತ್ತದೆ. ಇದಲ್ಲದೆ, ಪಾರ್ಶ್ವವಾಯು ಮತ್ತು ಎದೆ ನೋವಿನ ಸಮಸ್ಯೆಗಳನ್ನು ನಿವಾರಿಸಲು ಖರ್ಜೂರ ಸಹಕಾರಿಯಾಗಿದೆ. ಖರ್ಜೂರದಲ್ಲಿ ಸಾಕಷ್ಟು ಪ್ರೋಟೀನ್ ಮತ್ತು ಫೈಬರ್ ಅಂಶಗಳಿವೆ. ಹೀಗಾಗಿ ಇದು ಮಲಬದ್ಧತೆಯ ಸಮಸ್ಯೆಗಳನ್ನು ದೂರ ಮಾಡುತ್ತದೆ. ರಾತ್ರಿಯಲ್ಲಿ ಮಲಗುವ ಮುನ್ನ ಕೆಲವು ಖರ್ಜೂರಗಳನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ತಿನ್ನಿರಿ. ಇದರಿಂದ ಮಲಬದ್ಧತೆ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ.

ಹೃದಯದ ಕ್ಷಮತೆ ಉತ್ತಮಗೊಳ್ಳಲು ಎರಡು ಖರ್ಜೂರಗಳನ್ನು ರಾತ್ರಿಯಿಡೀ ತಣ್ಣೀರಿನಲ್ಲಿ ನೆನೆಸಿಟ್ಟು ಮರುದಿನ ಈ ಖರ್ಜೂರಗಳನ್ನು ಬೀಜ ನಿವಾರಿಸಿ ನೀರಿನೊಂದಿಗೇ ಕುಡಿಯಬೇಕು. ಎರಡು ಖರ್ಜೂರಗಳನ್ನು ಒಂದು ಲೋಟ ಹಾಲಿನಲ್ಲಿ ನೆನೆಸಿಟ್ಟು ಇದಕ್ಕೆ ಒಂದು ಚಮಚ ಜೇನು ಬೆರೆಸಿ ಕುದಿಸಿ ಕುಡಿಯುವುದರಿಂದ ಮೂಲಕ ಲೈಂಗಿಕ ಶಕ್ತಿ ಹೆಚ್ಚುತ್ತದೆ.

ಇದನ್ನು ಓದಿ : ದೇಹದಲ್ಲಿನ ನೀರಿನ ಕೊರತೆಯನ್ನು ನೀಗಿಸಲು ಇವುಗಳನ್ನು ಸೇವಿಸಿ

ಬರೀ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಖರ್ಜೂರ ಸೇವನೆ ಉಪಕಾರಿ. ನಿರಂತರವಾಗಿ ಖರ್ಜೂರ ಸೇವಿಸುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಯಾರಿಗೆ ಮುಖದ ಭಾಗದಲ್ಲಿ ಸುಕ್ಕುಗಳು, ಮೊಡವೆಗಳು ಮತ್ತು ಇನ್ನಿತರ ಚರ್ಮದ ಸಮಸ್ಯೆಗಳು ಕಂಡು ಬರುತ್ತವೆಯೋ ಅವರು ಖರ್ಜೂರವನ್ನು ಮತ್ತು ಹಾಲನ್ನು ಮಿಶ್ರಣ ಮಾಡಿ ಪ್ರತಿ ದಿನ ಸೇವನೆ ಮಾಡುತ್ತಾ ಬಂದರೆ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಖರ್ಜೂರ ಮಿಶ್ರಿತ ಹಾಲು ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚು ಮಾಡುತ್ತದೆ. ಇದರಿಂದ ದೇಹದ ಎಲ್ಲಾ ಭಾಗಗಳಿಗೆ ರಕ್ತ ಸಂಚಾರ ಸರಾಗವಾಗಿ ಆಗುವುದರಿಂದ ಮೂಲಕ ಸುಕ್ಕುಗಳ ನಿವಾರಣೆ ಆಗುತ್ತದೆ. ಇದರ ಜೊತೆಗೆ ಹೊಳಪಿನ ಚರ್ಮ ಕೂಡಾ ನಿಮ್ಮದಾಗುತ್ತದ...

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada 

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author